»   » ಪ್ರಥಮ್ ಗೆ ಹುಚ್ಚ ವೆಂಕಟ್ ಪಂಚ್: ಮನೆ ಸದಸ್ಯರಿಗೂ ಪ್ರಥಮ್ ಟಾರ್ಗೆಟ್

ಪ್ರಥಮ್ ಗೆ ಹುಚ್ಚ ವೆಂಕಟ್ ಪಂಚ್: ಮನೆ ಸದಸ್ಯರಿಗೂ ಪ್ರಥಮ್ ಟಾರ್ಗೆಟ್

Posted By:
Subscribe to Filmibeat Kannada

ಒಳ್ಳೆ ಹುಡುಗ ಪ್ರಥಮ್ ಗೆ, ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಹೊಡೆದು, ಬಾರಿ ವಿವಾದವನ್ನೇ ಹುಟ್ಟುಹಾಕಿದ್ದಾರೆ. ಈ ಘಟನೆಗೆ ಎಲ್ಲ ಕಡೆ ವಿರೋಧ ವ್ಯಕ್ತವಾಗುತ್ತಿದೆ. ಆದ್ರೆ, ಬಿಗ್ ಬಾಸ್ ಮನೆಯಲ್ಲಿ ಮಾತ್ರ ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ.

ಹುಚ್ಚ ವೆಂಕಟ್, ಪ್ರಥಮ್ ಗೆ ಹೊಡೆದಿದ್ದನ್ನ ಮನೆಯ ಸದಸ್ಯರು ನೋಡಿದ್ದರು, ನೋಡೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾರೆ. ಮತ್ತೆ ಕೆಲವರು ವೆಂಕಟ್ ಹೊಡೆದಿದ್ದು ಸರಿ, ಪ್ರಥಮ್ ಪ್ರಚೋದನೆ ಕೊಟ್ಟಿದ್ದಕ್ಕೆ ಹೊಡೆದಿದ್ದು ಎಂಬಂತೆ ಸಮರ್ಥಿಸಿಕೊಂಡಿದ್ದಾರೆ.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಅಷ್ಟಕ್ಕೂ, ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಬಂದ ದಿನ ಅಲ್ಲಿ ನಡೆದಿದ್ದೇನು? ಹುಚ್ಚ ವೆಂಕಟ್ ಪ್ರಥಮ್ ಗೆ ಪಂಚ್ ಕೊಟ್ಟಿದ್ದು ಯಾಕೆ? ಅಲ್ಲಿ ಆದ ಘಟನೆ ಏನು ಅಂತ ಕಾರ್ಯಕ್ರಮ ನೋಡಿದ ವೀಕ್ಷರಿಗೆ ಗೊತ್ತಿದೆ. ಆದ್ರೆ, ಮನೆಯ ಸದಸ್ಯರು ಈ ಘಟನೆ ಬಗ್ಗೆ ಏನಂದ್ರು ಅಂತ ಮುಂದೆ ಓದಿ.....

ಪ್ರಥಮ್ ಗೆ ಹೊಡೆದ ಹುಚ್ಚವೆಂಕಟ್

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 37ನೇ ದಿನ 'ಧೈರ್ಯಂ ಸರ್ವತ್ರ ಸಾಧನಂ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಅನುಸಾರ 'ಅತ್ತಿತ್ತ ತಿರುಗಿ ನೋಡದಿರು' ಎಂಬ ಮೊದಲನೇ ಚಟುವಟಿಕೆ ಚಾಲ್ತಿಯಲ್ಲಿತ್ತು. ಈ ವೇಳೆ 'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿ ಆಗಿ ಆಗಮಿಸಿದ ಹುಚ್ಚ ವೆಂಕಟ್ ಪ್ರಥಮ್ ಗೆ ಹೊಡೆದು ವಿವಾದ ಹುಟ್ಟುಹಾಕಿದ್ದಾರೆ.[ಹುಚ್ಚ ವೆಂಕಟ್ 'ಕಿರಿಕ್': ಕೆರಳಿದ 'ಹೆಬ್ಬುಲಿ' ಕಿಚ್ಚ ಸುದೀಪ್.!]

ಕಿರಿಕ್ ಕೀರ್ತಿ ಹೇಳಿದ್ದೇನು?

''ಇಷ್ಟು ಜನ ಗಾರ್ಡ್ಸ್ ನ ಕಳುಹಿಸಿದ್ದಾರೆ ಅಂದ್ರೆ, ಹುಚ್ಚ ವೆಂಕಟ್ ಗೆ ಬಿಗ್ ಬಾಸ್ ಎಷ್ಟು ಕಂಡಿಷನ್ಸ್ ಹಾಕಿರುತ್ತಾರೆ. ಗಲಾಟೆ ಮಾಡಬಾರದು, ಯಾರ ಮೇಲೂ ರೇಗಾಡಬಾರದು ಅಂತಾ. ಆದ್ರೂ ಇಲ್ಲೊಬ್ಬನಿಗೆ ಹೊಡೆದು ಹೋಗ್ತಾನೆ ಅಂದ್ರೆ, ಇಲ್ಲಿ ಪ್ರಚೋದನೆ ಆಗಿದೆ ಅಂತಾನೇ ಅರ್ಥ. ನಾನು ಹೊಡಿತಿದ್ದೇ ಅಂತಾನೇ ಅಲ್ವಾ ಪ್ರಥಮ್, ಇವನಿಗೆ ಗಾಂಚಲಿನೇ''- ಕಿರಿಕ್ ಕೀರ್ತಿ[ದುರುದ್ದೇಶ ಇಟ್ಕೊಂಡೇ 'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಹೋಗಿದ್ದು.! ]

ಮಾಳವಿಕಾ ಮಾತು

'' ಹುಚ್ಚ ವೆಂಕಟ್ ಒಳಗೆ ಬಂದಿದ್ದೇ ಅದಕ್ಕೆ ಅನ್ಸುತ್ತೆ. ಪ್ರಥಮ್ ನ ನೋಡಿದಾಕ್ಷಣ ಏನೋ ಆಗುತ್ತೆ ಅಂತ ಎಕ್ಸ್ ಪೆಕ್ಟ್ ಮಾಡದೆ. ಹಾಗೇ ಆಯ್ತು. ''-ಮಾಳವಿಕಾ

ನಿರಂಜನ್

''ಪ್ರಥಮ್ ಪ್ರಚೋದನೆ ಮಾಡಿದ್ದಕ್ಕೆ, ವೆಂಕಟ್ ಹೊಡೆದಿದ್ದು. ನಾನು ಹೊಡಿತಿದ್ದೇ ಅಂತಾನೆ ಪ್ರಥಮ್, ವೆಂಕಟ್ ಎಡಗೈಯಲ್ಲಿ ಬಿಸಾಕುತ್ತಾನೆ ಅಷ್ಟೇ''- ನಿರಂಜನ್ ದೇಶಪಾಂಡೆ

ಓಂ ಪ್ರಕಾಶ್ ರಾವ್

''ಪ್ರಥಮ್ ಜೊತೆ ಹುಚ್ಚ ವೆಂಕಟ್ ಜಗಳ ಆಡಿದ್ದು ತುಂಬಾ ಬೇಜಾರು ಆಯ್ತು''- ಓಂ ಪ್ರಕಾಶ್ ರಾವ್

English summary
Bigg Boss Kannada 4, Week 6 : Day 37 - Youtube Star Huccha Venkat made guest entry and assaulted Kannada Director Pratham. Here is the detailed report on Bigg Boss Kannada 4 Contestants Reaction after this Incident.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada