»   » ಹುಚ್ಚ ವೆಂಕಟ್ ಬಾಯಲ್ಲಿ ಇನ್ಮುಂದೆ 'ಎಕ್ಕಡ' ಬರಲ್ಲ.!

ಹುಚ್ಚ ವೆಂಕಟ್ ಬಾಯಲ್ಲಿ ಇನ್ಮುಂದೆ 'ಎಕ್ಕಡ' ಬರಲ್ಲ.!

Posted By:
Subscribe to Filmibeat Kannada

''ನನ್ ಮಗಂದ್...ನನ್ ಎಕ್ಕಡ...ಬೆಂಡೆತ್ಬಿಡ್ತೀನಿ...ಅರ್ಥ ಆಯ್ತಾ...'' - ಹುಚ್ಚ ವೆಂಕಟ್ ರವರ ಈ ಸೆನ್ಸೇಷನಲ್ ಡೈಲಾಗ್ ನಲ್ಲಿ ಇನ್ಮುಂದೆ 'ಎಕ್ಕಡ' ಕಟ್.!

ಮಾತ್ ಎತ್ತಿದ್ರೆ 'ನನ್ ಎಕ್ಕಡ' ಅಂತಿದ್ದ ಹುಚ್ಚ ವೆಂಕಟ್ ಇನ್ಮುಂದೆ 'ಎಕ್ಕಡ' ಅಂತ ಅನ್ನಲ್ಲ. ಹಾಗಂತ ಟಿವಿ9 ಸುದ್ದಿ ವಾಹಿನಿ ಸ್ಟುಡಿಯೋದಲ್ಲಿ ಹುಚ್ಚ ವೆಂಕಟ್ ಪ್ರಮಾಣ ಮಾಡಿದ್ದಾರೆ. [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

huccha-venkat

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಂದ ಮೇಲೆ ಟಿವಿ9 ಸುದ್ದಿ ವಾಹಿನಿಗೆ ಹುಚ್ಚ ವೆಂಕಟ್ ಸಂದರ್ಶನ ನೀಡಿದರು. ಈ ಹಿಂದೆ ವಾಹಿನಿಗೆ ಕರೆ ಮಾಡಿ ಮಾತನಾಡಿದ್ದ ಸಾವಿತ್ರಮ್ಮ ಅವರ ಬಗ್ಗೆ ಪ್ರಸ್ಥಾಪಿಸುತ್ತಾ ಕಾರ್ಯಕ್ರಮದ ನಿರೂಪಕರು ಹುಚ್ಚ ವೆಂಕಟ್ ಗೆ ಒಂದ್ ಪ್ರಶ್ನೆ ಕೇಳಿದರು. ['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]

''ನಿಮ್ಮ ಬಗ್ಗೆ ಈ ಹಿಂದೆ ಮಾಡಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಸಾವಿತ್ರಮ್ಮ ಅಂತ ಒಬ್ಬರು ಫೋನ್ ಮಾಡಿದ್ರು. ನಿಮ್ಮನ್ನ ಅವರ ಮಗ ಅನುಕರಣೆ ಮಾಡುತ್ತಾ ಫೋನ್ ನಲ್ಲಿ ಅವರ ಅಪ್ಪನಿಗೆ 'ನನ್ ಎಕ್ಕಡ' ಅಂತ ಹೇಳಿದ್ದ. ನಿಮ್ಮ ಮಾತುಗಳನ್ನ ಮಕ್ಕಳು ಅನುಕರಿಸುತ್ತಿದ್ದಾರೆ. ಅದರಿಂದ ಅವರ ಮನೆಯಲ್ಲಿ ಕೇಬಲ್ ಕಟ್ ಮಾಡಿಸಿದ್ದಾರಂತೆ'' ಅಂತ ಟಿವಿ 9 ನಿರೂಪಕರು ಹುಚ್ಚ ವೆಂಕಟ್ ರನ್ನ ಕೇಳಿದರು.

ಇದರಿಂದ ಪಶ್ಚಾತ್ತಾಪ ಪಟ್ಟ ಹುಚ್ಚ ವೆಂಕಟ್, ''ಹೌದು, ನನ್ನಿಂದ ತಪ್ಪಾಗಿದೆ. ಇನ್ಮುಂದೆ ನಾನು ಮೀಡಿಯಾ, ಪ್ರೆಸ್ ಮುಂದೆ 'ಎಕ್ಕಡ' ಅನ್ನುವ ಪದ ಉಪಯೋಗಿಸೋಲ್ಲ. ಇದರಲ್ಲಿ ನಾನು ಬದಲಾಗುತ್ತೇನೆ'' ಅಂತ ಹೇಳಿಬಿಟ್ಟರು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ತಮಾಷೆ ಅಂದ್ರೆ ಇದನ್ನ ಮರುಕ್ಷಣವೇ ಮರೆತ ಹುಚ್ಚ ವೆಂಕಟ್ ನಂತರ ಕರೆ ಮಾಡಿದ ವೀಕ್ಷಕರಿಗೆ 'ಎಕ್ಕಡ' ಪದ ಮೂಲಕವೇ ಮಂಗಳಾರತಿ ಮಾಡಿದರು. ಅದೇನೋ ಗಾದೆ ಮಾತಿದ್ಯಲ್ಲ ಹಾಗಾಯ್ತು ಹುಚ್ಚ ವೆಂಕಟ್ ಕಥೆ.!!!

English summary
After getting evicted from Bigg Boss Kannada 3, Huccha Venkat promised that he will not use the word 'Ekkada' here after during an interview to TV9 Kannada news channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada