twitter
    For Quick Alerts
    ALLOW NOTIFICATIONS  
    For Daily Alerts

    ಬುದ್ಧನ ಸಿದ್ಧಾಂತಗಳನ್ನುಅಧ್ಯಯನ ಮಾಡಲು ಬ್ಯಾಂಕಾಕ್‌ನಲ್ಲಿ ದೀಕ್ಷೆ ಪಡೆದ ಭಾರತದ ನಟ ಗಗನ್ ಮಲಿಕ್

    |

    ಕುಂಕುಮ್, ಶಾಕುಂತಲಾ, ರಾಮಾಯಣ, ಸಂಕಟಮೋಚನ್ ಮಹಾಬಲಿ ಹನುಮಾನ್ ಅಂತಹ ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟ ಗಗನ್ ಮಲಿಕ್. 2013ರಲ್ಲಿ ಸಿಂಹಳೀಯ ಚಲನ ಚಿತ್ರ 'ಶ್ರೀಸಿದ್ಧಾರ್ಥ ಗೌತಮ' ಚಿತ್ರದಲ್ಲಿ ನಟಿಸಿದ್ದರು. ಇದೇ ನಟ ಈಗ ಆಧ್ಯಾತ್ಮಿಕ ಜ್ಞಾನೋದಯ ಮತ್ತು ಶಾಂತಿಯನ್ನು ಕಂಡುಕೊಳ್ಳಲು ಬ್ಯಾಂಕಾಕ್‌ನ ವ್ಯಾಟ್ ದಟ್ ಥಾಂಗ್‌ನಲ್ಲಿ ದೀಕ್ಷೆ ಪಡೆದಿದ್ದಾರೆ.

    ಭಗವಾನ್ ಬುದ್ಧನ ಬೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಲು ಗಗನ್ ಮಲಿಕ್ ಬ್ಯಾಂಕಾಕ್‌ನಲ್ಲಿ ದೀಕ್ಷೆ ಪಡೆದಿದ್ದಾರೆ. 2013 ರ ಸಿಂಹಳೀಯ ಚಲನಚಿತ್ರ 'ಶ್ರೀ ಸಿದ್ಧಾರ್ಥ ಗೌತಮ' ಚಿತ್ರದಲ್ಲಿ ಭಗವಾನ್ ಬುದ್ಧನ ಪಾತ್ರದಲ್ಲಿ ನಟಿಸಿದ್ದರು. ವಿಶ್ವಸಂಸ್ಥೆಯು ಆಯೋಜಿಸಿದ್ದ ವಿಶ್ವ ಬೌದ್ಧ ಚಲನಚಿತ್ರೋತ್ಸವದಲ್ಲಿ ಗಗನ್ ಮಲಿಕ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಪಡೆದಿದ್ದರು. ಇದೇ ನಟ ಈಗ ದೀಕ್ಷೆ ಪಡೆದು ಸುದ್ದಿಯಲ್ಲಿದ್ದಾರೆ.

    ಬೌದ್ಧ ದೇವಾಲಯದಲ್ಲಿ ದೀಕ್ಷೆ ಪಡೆದ ಭಾರತೀಯ ನಟ

    ಭಾರತದ ನಟ ಗಗನ್ ಮಲ್ಲಿಕ್ ನಿನ್ನೆ( ಫೆ.10) ರ ಬೆಳಿಗ್ಗೆ 10 ಗಂಟೆಗೆ ತನ್ನ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಬ್ಯಾಂಕಾಕ್‌ನ ಬುದ್ಧನ ದೇವಾಯಲದಲ್ಲಿ ದೀಕ್ಷೆ ಸ್ವೀಕರಿಸಿದ್ದಾರೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ. ಗಗನ್ ಮಲ್ಲಿಕ್ ಫೆಬ್ರವರಿ 24 ರವರೆಗೆ 15 ದಿನಗಳ ಕಾಲ ಸನ್ಯಾಸಿಯಾಗಿದ್ದುಕೊಂಡು ಬುದ್ಧನ ಬೋಧನೆಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಮೂಲಕ ಬೌದ್ಧ ಧರ್ಮದ ಚಿಂತನೆಗಳನ್ನು ಜನರಿಗೆ ತಿಳಿಸಲು ನಿರ್ಧರಿಸಿದ್ದಾರೆ.

    Indian actor Gagan Malik has been ordained at Wat That Thong in Bangkok to study Lord Buddha

    ಥಾಯ್ ಭೌದ್ಧ ದೇವಾಲಯದಲ್ಲಿ ಗಗನ್ ಮಲಿಕ್ ದೀಕ್ಷೆ ಪಡೆಯುವುದಕ್ಕೂ ಮುನ್ನ ತಾವೇ ಸ್ಥಾಪಿಸಿದ ಟ್ರೈ ರತ್ತನಾಫಮ್ ಕ್ಲಬ್‌ ಸದಸ್ಯರಿಗೆ ದೀಕ್ಷೆ ಪಡೆಯುವುದರ ಉದ್ದೇಶವೇನು ಎಂಬುದನ್ನು ತಿಳಿಸಿದ್ದಾರೆ. ಭೌದ್ಧ ಧರ್ಮ ಗುರುಗಳ ಅಭ್ಯಾಸ ಹಾಗೂ ಬೋಧನೆಗಳನ್ನು ಅಧ್ಯಯನ ಅಧ್ಯಯನ ಮಾಡಲು ಹಾಗೂ ಭಾರತದಲ್ಲಿ ಭೌದ್ಧ ಧರ್ಮದ ವಿಚಾರಗಳನ್ನು ಹರಡಲು ಬಯಸುವುದಾಗಿ ತಿಳಿಸಿದ್ದರು.

    ಭಾರತದಲ್ಲಿ ಬೌದ್ಧ ಧರ್ಮದ ಪ್ರಚಾರ

    ಬೌದ್ಧಧರ್ಮವು ಭಾರತದಲ್ಲೇ ಜನಿಸಿದ್ದರು, ಬೌದ್ಧರು ದೇಶದ ಜನಸಂಖ್ಯೆಯ ಕೇವಲ 1-2% ರಷ್ಟಿದೆ. ಹೀಗಾಗಿ ಭಾರತದಲ್ಲಿ ಮತ್ತೆ ಭೌದ್ಧ ಧರ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. ದೀಕ್ಷೆ ಪಡೆದು ಭಾರತಕ್ಕೆ ಮರಳಿದ ಬಳಿಕ ಬುದ್ಧನ ಆಧ್ಯಾತ್ಮಕ ಚಿಂತನೆಗಳನ್ನು ದೇಶದ ಜನರಿಗೆ ತಿಳಿಸಲು ನಿರ್ಧರಿಸಿದ್ದಾರೆ. ಗಗನ್ ಮಲಿಕ್‌ಗೆ ಬೌದ್ಧ ಧರ್ಮದ ದೃಷ್ಟಿಕೋನದಲ್ಲಿ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಭೌದ್ಧ ಧರ್ಮದ ಬಗ್ಗೆ ಅಧ್ಯಯನ ಮಾಡಲು ದೀಕ್ಷೆ ತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    "ನಟನಾಗಿ ನನ್ನ ವೃತ್ತಿ ಜೀವನದೊಂದಿಗೆ ಬುದ್ಧನ ಹೆಜ್ಜೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ. ಭಾರತೀಯರಿಗೆ ಮಾದರಿಯಾಗಿ, ಭೌದ್ಧ ಧರ್ಮದ ತತ್ವಗಳನ್ನು ತಿಳಿಸಲು ಸಹಕಾರಿಯಾಗಬಹುದು. ಭಾರತೀಯರಿಗೆ ಬೌದ್ಧರಾಗುವ ನಿಜವಾದ ಮಾರ್ಗವನ್ನು ಕಲಿಸಲು ಬಯಸುತ್ತೇನೆ ಮತ್ತು ಬೌದ್ಧಧರ್ಮವನ್ನು ಪ್ರಚಾರ ಮಾಡಲು ಬಯಸುತ್ತೇನೆ. ಬುದ್ಧನ ಸಿದ್ಧಾಂತಗಳನ್ನು, ಬುದ್ಧ ಕಂಡುಕೊಂಡ ಸತ್ಯಗಳನ್ನು ಬುದ್ಧ ಜನಿಸಿದ ದೇಶಕ್ಕೆ ಮರಳಿ ತರಲು ಬಯಸುತ್ತೇನೆ. " ಎಂದು ಗಗನ್ ಮಲಿಕ್ ಬ್ಯಾಂಕಾಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    2017ರಲ್ಲಿ ವಿಶ್ವ ಬೌದ್ಧ ಚಲನಚಿತ್ರೋತ್ಸವದಲ್ಲಿ ಶ್ರೀ ಸಿದ್ಧಾರ್ಥ ಗೌತಮ ಪಾತ್ರಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಗಗನ್ ಗಳಿಸಿದ್ದರು. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಜಾಗತಿಕ ಶಾಂತಿ ಮತ್ತು ನೈತಿಕತೆ ಪಸರಿಸಿದ ಹಿನ್ನೆಲೆಯಲ್ಲಿ 'ಡಾಕ್ಟರೇಟ್' ಪದವಿಯನ್ನು ಪಡೆದಿದ್ದಾರೆ.

    English summary
    Indian actor Gagan Malik has been ordained at Wat That Thong in Bangkok to study Lord Buddha. Malik pocketed the Best Actor Award at the World Buddhist Film Festival organised by the United Nations in 2013
    Friday, February 11, 2022, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X