For Quick Alerts
  ALLOW NOTIFICATIONS  
  For Daily Alerts

  ಇಂಡಿಯನ್ ಐಡಲ್ 12: ಇಪ್ಪತ್ತೈದು ಲಕ್ಷ ಗೆದ್ದ ಪವನ್‌ದೀಪ್ ರಾಜನ್

  |

  ಹಿಂದಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ 12 ನಿನ್ನೆ ಮುಕ್ತಾಯವಾಗಿದೆ. ನಿನ್ನೆ ನಡೆದ ಫಿನಾಲೆಯಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಗಾಯಕರು ಪ್ರಶಸ್ತಿಗಾಗಿ ಸೆಣೆಸಾಡಿದರು, ಅಂತಿಮವಾಗಿ ಪ್ರಶಸ್ತಿಯು ಪವನ್‌ದೀಪ್ ಪಾಲಾಗಿದೆ.

  ಸತತವಾಗಿ 12 ಗಂಟೆಗಳ ಕಾಲ ನಡೆದ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಪ್ರಶಸ್ತಿಗಾಗಿ ಗಾಯನದ ಮೂಲಕ ಸೆಣಸಾಡಿದರು. ಪವನ್‌ದೀಪ್ ರಾಜನ್, ಅರುಣಿತಾ ಕಂಜಿಲಾಲ್, ಎಂಡಿ ಧನಿಶ್, ನಿಹಾಲ್ ಟುರೊ, ಶಣ್ಮುಕಪ್ರಿಯ, ಸೈಲ್ ಕಾಂಬ್ಳೆ ಅವರುಗಳು ಫಿನಾಲೆ ವೇದಿಕೆ ಮೇಲೆ ಗಾನ ಸುಧೆ ಹರಿಸಿದರು.

  ಅಂತಿಮವಾಗಿ ಪವನ್‌ದೀಪ್ ರಾಜನ್ ಅನ್ನು ವಿನ್ನರ್ ಆಗಿ ಘೋಷಿಸಲಾಯ್ತು. ಅರುಣಿತಾ ಕಂಜಿಲಾಲ್ ಮೊದಲ ರನರ್‌ಅಪ್, ಸೈಲ್ ಕಾಂಬ್ಳೆ ಅನ್ನು ಎರಡನೇ ರನ್ನರ್ ಅಪ್ ಆಗಿ ಘೋಷಿಸಲಾಯ್ತು. ಶೋ ವಿಜೇತ ಪವನ್‌ದೀಪ್‌ಗೆ 25 ರ ಮೊತ್ತದ ಚೆಕ್ ಹಾಗೂ ಟ್ರೋಫಿಯನ್ನು ನೀಡಲಾಯ್ತು.

  ಶೋ ಅನ್ನು ಜಡ್ಜ್ ಮಾಡಿದ ಅನು ಮಲ್ಲಿಕ್, ಹಿಮೇಶ್ ರೆಶಮಿಯಾ, ಸೋನು ಕಕ್ಕರ್ ಅವರುಗಳು ಎಲ್ಲ ಸ್ಪರ್ಧಿಗಳು ಚೆನ್ನಾಗಿ ಹಾಡಿದರೆಂದು ಹುರಿದುಂಬಿಸಿದರು. ಆದರೆ ಪವನ್‌ದೀಪ್ ರಾಜನ್ ಪ್ರದರ್ಶನ ಅತ್ಯದ್ಭುತವಾಗಿತ್ತೆಂದು ಕೊಂಡಾಡಿದರು.

  ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಪವನ್‌ದೀಪ್ ರಾಜನ್, ''ಇಂಡಿಯನ್‌ ಐಡಲ್‌ನಲ್ಲಿ ಭಾಗವಹಿಸಿದ್ದೇ ಕನಸು ನನಸಾದಂಥಹಾ ಅನುಭವ. ಫಿನಾಲೆವರೆಗೆ ಬಂದಿದ್ದು ಇನ್ನೂ ಅದ್ಭುತ ಅನುಭವ. ಶೋನ ವಿಜೇತ ನಾನಾಗಿದ್ದೇನೆ ಎಂಬುದನ್ನು ಇನ್ನೂ ನನಗೆ ನಂಬಲಾಗುತ್ತಿಲ್ಲ. ಇದೊಂದು ದೊಡ್ಡ ಗೌರವ ನನಗೆ. ನನಗೆ ಮತ ಹಾಕಿ ನಾನು ಗೆಲ್ಲುವಂತೆ ಮಾಡಿದ ಎಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತನೆ. ಇಂಡಿಯನ್ ಐಡಲ್‌ ವರೆಗೆ ನನ್ನ ಪಯಣದಲ್ಲಿ ಜೊತೆಯಾಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಇಂಡಿಯನ್‌ ಐಡಲ್‌ನ ಎಲ್ಲ ಸಂಗೀತಗಾರರಿಗೆ, ನಮ್ಮ ಕೋಚ್‌ಗಳಿಗೆ ಈ ಟ್ರೋಫಿ ನಿಮ್ಮೆಲ್ಲರಿಗೂ ಸೇರಿದ್ದು'' ಎಂದಿದ್ದಾರೆ.

  English summary
  Singing reality show Indian Idol 12: Pawandeep Rajan won the title. Pawandeep won 25 lakh rs and the trophy.
  Monday, August 16, 2021, 9:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X