»   » ಟಿವಿ9 ವಾಹಿನಿಗೆ ಶಿವರಾಜ್.ಕೆ.ಆರ್.ಪೇಟೆ ಸೇರಿದ್ಹೇಗೆ ಗೊತ್ತಾ.?

ಟಿವಿ9 ವಾಹಿನಿಗೆ ಶಿವರಾಜ್.ಕೆ.ಆರ್.ಪೇಟೆ ಸೇರಿದ್ಹೇಗೆ ಗೊತ್ತಾ.?

Posted By:
Subscribe to Filmibeat Kannada

ಕರ್ನಾಟಕದ ಜನಪ್ರಿಯ 'ಟಿವಿ9' ಸುದ್ದಿ ವಾಹಿನಿಯನ್ನ ಬಿಟ್ಟೂಬಿಡದೆ ನೋಡುವವರಿಗೆ 'ಹಳ್ಳಿ ಕಟ್ಟೆ' ಹಾಗೂ 'ನೀವು ಹೇಳಿದ್ದು... ನಾವು ಕೇಳಿದ್ದು' ಕಾರ್ಯಕ್ರಮಗಳು ಗೊತ್ತಿರಲೇಬೇಕು. ಯಾಕಂದ್ರೆ, ಅಷ್ಟರಮಟ್ಟಿಗೆ ಈ ಎರಡೂ ಕಾರ್ಯಕ್ರಮಗಳು ಜನಜನಿತ. ಈ ಎರಡೂ ಪ್ರೋಗ್ರಾಂಗಳಲ್ಲಿ ತಮ್ಮ ಪ್ರತಿಭೆಯಿಂದ ಫೇಮಸ್ ಆಗಿರುವವರು ಶಿವರಾಜ್ ಕೆ.ಆರ್.ಪೇಟೆ.['ಕಾಮಿಡಿ ಕಿಲಾಡಿ' ಶಿವರಾಜ್.ಕೆ.ಆರ್.ಪೇಟೆ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ]

ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಶೋ ಗೆದ್ದಿರುವ ಶಿವರಾಜ್.ಕೆ.ಆರ್.ಪೇಟೆ ಟಿವಿ9 ವಾಹಿನಿಯಲ್ಲಿ ಫ್ರೀ ಲಾನ್ಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟಕ್ಕೂ, ಶಿವರಾಜ್.ಕೆ.ಆರ್.ಪೇಟೆ ಟಿವಿ9 ಕನ್ನಡ ವಾಹಿನಿ ಸೇರಿದ್ಹೇಗೆ ಗೊತ್ತಾ.? ಆ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ ಓದಿರಿ....

ಆಕ್ಟಿಂಗ್ ಕೋರ್ಸ್ ಮಾಡಿದ್ದೆ.!

''ಹತ್ತು ವರ್ಷಗಳ ಹಿಂದೆ ಬೆಂಗಳೂರು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದೆ. ನಂತರ ನಟನೆಗೆ ಅಷ್ಟು ಅವಕಾಶಗಳು ಸಿಗಲಿಲ್ಲ. ಹವ್ಯಾಸಿ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡ್ತಿದ್ದೆ. ಆಗ ಟಿವಿ9 ವಾಹಿನಿಯಲ್ಲಿ 'ಹಳ್ಳಿಕಟ್ಟೆ' ಪ್ರೋಗ್ರಾಂಗೆ ಒಂದು ಕ್ಯಾರೆಕ್ಟರ್ ಹುಡುಕುತ್ತಿದ್ದಾರೆ ಅಂತ ಗೊತ್ತಾಯ್ತು'' - ಶಿವರಾಜ್.ಕೆ.ಆರ್.ಪೇಟೆ ['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

ಬಸ್ಯಾ ಕ್ಯಾರೆಕ್ಟರ್

''ಆಗಷ್ಟೇ ಟಿವಿ9ನಲ್ಲಿ 'ಹಳ್ಳಿಕಟ್ಟೆ' ಪ್ರೋಗ್ರಾಂ ಸ್ಟಾರ್ಟ್ ಆಗಿತ್ತು. ಒಂದು ಎಪಿಸೋಡ್ ಮುಗಿದಿತ್ತು. ಬಸ್ಯಾ ಎಂಬ ಕ್ಯಾರೆಕ್ಟರ್ ಗೆ ಮಂಡ್ಯ ಭಾಷೆಯಲ್ಲಿ ಮಾತನಾಡುವ ಹುಡುಗ ಬೇಕಾಗಿತ್ತು. ಆಡಿಷನ್ ಕರೆದಿದ್ದರು. ಆಗ ನಾನು ಕೆ.ಆರ್.ಪೇಟೆಯಲ್ಲಿದ್ದೆ'' - ಶಿವರಾಜ್.ಕೆ.ಆರ್.ಪೇಟೆ

ತಂದೆಯ ಪೆನ್ಷನ್ ದುಡ್ಡು ತಗೊಂಡು ಬಂದಿದ್ದೆ

''ಬೆಂಗಳೂರಿಗೆ ಬಂದು ಆಡಿಷನ್ ಕೊಡೋಕೆ ದುಡ್ಡು ಇರ್ಲಿಲ್ಲ. ನನ್ನ ತಂದೆಯ ಅಕೌಂಟ್ ನಲ್ಲಿ ಇದ್ದದ್ದು ಒಂದು ಸಾವಿರ. ಅದು ಪೆನ್ಷನ್ ದುಡ್ಡು. ಅದರಲ್ಲಿ ನನಗೆ 500 ರೂಪಾಯಿ ಕೊಟ್ಟು ಕಳುಹಿಸಿದರು. ನನ್ನ ತಂದೆಗೆ ನನ್ನ ಪ್ರತಿಭೆ ಮೇಲೆ ನಂಬಿಕೆ ಇತ್ತು'' - ಶಿವರಾಜ್.ಕೆ.ಆರ್.ಪೇಟೆ

ಆಡಿಷನ್ ನಲ್ಲಿ ಸೆಲೆಕ್ಟ್ ಆದೆ

''ಟಿವಿ9 ಆಡಿಷನ್ ಗೆ ಹೋದಾಗ ಒಂದೇ ಡೈಲಾಗ್ ಕೊಟ್ಟರು. ಮಂಡ್ಯ ಭಾಷೆಯಲ್ಲಿ ಹೇಳಿಬಿಟ್ಟೆ. ಸೆಲೆಕ್ಟ್ ಆದೆ. ರಘುನಂದನ್ ಸರ್ ನನ್ನನ್ನ ಸೆಲೆಕ್ಟ್ ಮಾಡಿದರು. 96 ಎಪಿಸೋಡ್ ಮಾಡಿದೆ. ಒಂದು ಎಪಿಸೋಡ್ ಗೆ ಒಂದು ಸಾವಿರ. ಅಂದ್ರೆ ತಿಂಗಳಿಗೆ ನಾಲ್ಕು ಸಾವಿರ ಬರುತ್ತಿತ್ತು. ಜೀವನ ನಡೆಸುವುದು ಕಷ್ಟ ಆಗ್ತಿತ್ತು'' - ಶಿವರಾಜ್.ಕೆ.ಆರ್.ಪೇಟೆ

ತಿಂಗಳಿಗೆ ಇಪ್ಪತ್ತು ಸಾವಿರ

''ಸ್ವಲ್ಪ ದಿನ ಆದ್ಮೇಲೆ ''ನೀವು ಹೇಳಿದ್ದು ನಾವು ಕೇಳಿದ್ದು' ನಿಂತ್ಹೋಯ್ತಲ್ಲ ಯಾಕೆ ನಿಲ್ಸಿದ್ದೀರಾ'' ಅಂತ ಕೇಳಿದೆ. ''ವಾಯ್ಸ್ ಓವರ್ ಕೊಡುವವರಿಲ್ಲ'' ಅಂತ ಹೇಳಿದರು. ಆಗ ನಾನೇ ಕೊಡುತ್ತೇನೆ ಅಂತ ಮಿಮಿಕ್ರಿ ಮಾಡಿ ತೋರಿಸಿದೆ. ಅವರಿಗೆ ಇಷ್ಟ ಆಯ್ತು. ಸ್ಕ್ರಿಪ್ಟ್ ಬರೆಯಲು ಶರತ್ ಚಕ್ರವರ್ತಿ ರವರನ್ನ ಕರ್ಕೊಂಡ್ರು. ಹಾಗೇ ಅದೂ ಕೂಡ ಸ್ಟಾರ್ಟ್ ಆಯ್ತು. ಆಗ ನನಗೆ ತಿಂಗಳಿಗೆ ಇಪ್ಪತ್ತು ಸಾವಿರ ಬರೋಕೆ ಶುರು ಆಯ್ತು. ಅಲ್ಲಿಂದ ಇಲ್ಲಿಯವರೆಗೂ ಬಂದಿದ್ದೇನೆ'' - ಶಿವರಾಜ್.ಕೆ.ಆರ್.ಪೇಟೆ

ಹೊಟೆಗಾಗಿ... ಬಟ್ಟೆಗಾಗಿ

''ಐದು ವರ್ಷದಿಂದ ಟಿವಿ 9 ವಾಹಿನಿಗೆ ಫ್ರೀ ಲಾನ್ಸರ್ ಆಗಿದ್ದೇನೆ. ಟಿವಿ 9 'ಹಳ್ಳಿಕಟ್ಟೆ' ಪ್ರೋಗ್ರಾಂ ಜೊತೆಗೆ 'ನೀವು ಹೇಳಿದ್ದು, ನಾವು ಕೇಳಿದ್ದು' ಪ್ರೋಗ್ರಾಂಗೆ ಧೀರೇಂದ್ರ ಗೋಪಾಲ್ ಮತ್ತು ಓತಿಕೇತ... ಎರಡು ವಾಯ್ಸ್ ನಾನೇ ಕೊಡುವುದು. ಐದು ವರ್ಷದಿಂದ ಹೊಟ್ಟೆಗಾಗಿ ಇದನ್ನ ಮಾಡುತ್ತಿದ್ದೇನೆ'' - ಶಿವರಾಜ್.ಕೆ.ಆರ್.ಪೇಟೆ

English summary
Here is an interesting story of Shivaraj.K.R.Pete, Winner of Zee Kannada Channel's popular show 'Comedy Khiladigalu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada