India
  For Quick Alerts
  ALLOW NOTIFICATIONS  
  For Daily Alerts

  ಹಳ್ಳಿ ಹೈದ : ಗ್ರಾಂಡ್ ಫಿನಾಲೆಯಲ್ಲಿ ಫುಲ್ ಗೋಲ್ಮಾಲ್?

  By ಜೀವನರಸಿಕ
  |

  ಸುವರ್ಣ ವಾಹಿನಿಯಲ್ಲಿ ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್-2 ನೀವೆಲ್ಲಾ ನೋಡ್ತಾನೇ ಇರ್ತೀರಾ. ಈಗ ಸೀಸನ್-2 ಹಳ್ಳಿ ಹೈದ ಪ್ಯಾಟೆಗ್ ಬಂದ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದೆ. ಆದ್ರೆ ವಾಹಿನಿಯ ಶೂಟಿಂಗ್ ಪ್ರಕಾರ ಗ್ರ್ಯಾಂಡ್ ಫಿನಾಲೆ ನಡೆದೂ ಹೋಗಿದೆ.

  ಓಹೋ ಹಾಗಾದ್ರೆ ಹಳ್ಳಿ ಹೈದರಲ್ಲಿ ಗೆದ್ದವರ್ಯಾರು? ಸಿಕ್ಕಾಪಟ್ಟೆ ಓವರ್ ಆ್ಯಕ್ಟಿಂಗ್ ಮಾಡ್ತಿದ್ದ ಗೋವಾ ಹೈದ ಬೌತಿಶ್ ಅನ್ನೋ ಮಿಕ್ಸೆಡ್ ಹಳ್ಳಿ ಪ್ಯಾಟೆ ಹೈದ ಗೆದ್ನಾ? ಇಲ್ಲಾ ಅಚ್ಚ ಕನ್ನಡದ ಜೊತೆ ಚೂರ್ ಚೂರ್ ಇಂಗ್ಲಿಷ್ ಮಿಕ್ಸ್ ಮಾಡ್ತಿದ್ದ ಪುನೀತ ಗೆದ್ನಾ? ಆರಂಭದಿಂದ ಇಲ್ಲೀವರೆಗೂ ಅನೀತಾ ಅನೀತಾ ಅನ್ಕೊಂಡು ಇನ್ನೋಸೆಂಟಾಗಿ ಗೇಮ್ ಆಡ್ತಿರೋ ಬಾಸ್ಕರನಾ ವಿನ್ನರ್? ಶಿವಕುಮಾರ್-ಚಂದನ ಜೋಡಿ ಏನಾಯ್ತು?

  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಗ್ರಾಂಡ್ ಫಿನಾಲೆ ಮುಗಿದೂ ಹೋಗಿದೆ. ಗೆದ್ದಿದ್ದೂ ಆಗಿದೆ. ಸೋತವರು ಬಹುಮಾನವನ್ನ ತಿರಸ್ಕರಿಸಿದ್ದೂ ಆಗಿದೆ. ಆದ್ರೆ ಸುವರ್ಣ ವಾಹಿನಿ ಫಿನಾಲೆಯಲ್ಲಿ ಮಾಡಿದ ಆಯ್ಕೆಯಲ್ಲಿ ಮೋಸ ನಡೀತಾ? ಹಂಗ್ಯಾಕಾಯ್ತು ಅಂತಿದೆ ಹಳ್ಳಿ ಮೂಲಗಳು. ಇದಕ್ಕೆಲ್ಲ ಉತ್ತರ ಕೊಡುವವರಾರು?

  ನಾಲ್ಕನೆ ಸ್ಥಾನಕ್ಕೆ ಪುನೀತ...

  ನಾಲ್ಕನೆ ಸ್ಥಾನಕ್ಕೆ ಪುನೀತ...

  ಇಡೀ ಶೋನಲ್ಲಿ ಮಾತಲ್ಲಿ ಮೈ ಮರೆಸ್ತಿದ್ದ ಪುನೀತ್ ಅನ್ನೋ ಹಳ್ಳಿ ಹೈದ ಪವರ್ಸ್ಟಾರ್ ಪುನೀತ್ ಫ್ಯಾನು. ಈ ಹೈದನ ಪರ್ಫಾಮನ್ಸ್ ಚೆನ್ನಾಗಿದ್ರೂ ನಾಲ್ಕನೆ ಸ್ಥಾನ ಕೊಡಲಾಗಿದೆ. ಇದು ಪುನೀತನನ್ನ ಪುನೀತನಾಗಿಸಲಿಲ್ಲ ಜೊತೆಗೆ ಮೆಂಟರ್ ಅಶ್ವಿನಿಗೂ ಬೇಸರ ಉಂಟು ಮಾಡಿದೆ.

  ಬೌತಿಶ್ನನ್ನ ದೂರಿದ ಅಶ್ವಿನಿ

  ಬೌತಿಶ್ನನ್ನ ದೂರಿದ ಅಶ್ವಿನಿ

  ಪುನೀತ್ ಪರ್ಫಾಮನ್ಸ್ನಲ್ಲಿ ಬೌತಿಶ್ಗಿಂತ ಮುಂದೆ ಇದ್ದ ಆದ್ರೂ ಯಾಕೆ ನಾಲ್ಕನೇ ಸ್ಥಾನ ಕೊಟ್ರಿ ಅಂತ ಪುನೀತ್ನ ಜೋಡಿ ಪ್ಯಾಟೆ ಹುಡ್ಗಿ ಅಶ್ವಿನಿ ಪ್ರಶ್ನೆಗೆ ಸುವರ್ಣ ವಾಹಿನಿ ನಾನಾ ಸಬೂಬು ಕೊಟ್ಟಿದೆ.

  ಅಮಾಯಕ ಭಾಸ್ಕರ

  ಅಮಾಯಕ ಭಾಸ್ಕರ

  ಭಾಸ್ಕರ ಅನ್ನೋ ಪರ್ಫೆಕ್ಟ್ ಹಳ್ಳಿ ಹೈದ ಮೂರನೇ ಸ್ಥಾನಕ್ಕೆ ಜಾರಿದ. ಆದ್ರೆ ಪ್ರಫಾಮನ್ಸ್ ಪ್ರಕಾರ ನೋಡಿದ್ರೆ ಭಾಸ್ಕರ ರನ್ನರ್ ಅಥ್ವಾ ವಿನ್ನರ್ ಆಗಲೇಬೇಕಿತ್ತು ಅಂತ ಭಾಸ್ಕರನ ಮೆಂಟರ್ ನೇಹಾ ವೇದಿಕೆಯಲ್ಲಿ ಪಟ್ಟು ಹಿಡಿದ್ರು ಆದ್ರೆ ವಾಹಿನಿಯ ನಿರ್ಧಾರ ಬದಲಾಗಲಿಲ್ಲ.

  ಆಯ್ಕೆಗೆ ಮಾನದಂಡವೇನು?

  ಆಯ್ಕೆಗೆ ಮಾನದಂಡವೇನು?

  ಅವ್ರು ಟಾಸ್ಕ್ನಲ್ಲಿ ಮಾಡಿದ ಪರ್ಫಾಮನ್ಸ್ ಮತ್ತು ಅವ್ರ ನಡತೆ ಅಂತ ಆ್ಯಂಕರ್ ಸಂತೋಷ್ ಘೋಷಣೆ ಮಾಡಿದ್ರು. ಆದ್ರೆ ಆ ಆ್ಯಂಗಲ್ನಿಂದ ನೋಡಿದ್ರೂ ಬೌತಿಶ್ ಮತ್ತು ಶಿವಕುಮಾರ ಹಲವು ವಿಚಾರಗಳಲ್ಲಿ ದುರ್ವರ್ತನೆ ತೋರಿ ಛೀಮಾರಿ ಹಾಕಿಸಿಕೊಂಡಿದ್ರು. ಇದನ್ನು ಭಾಸ್ಕರನ ಮೆಂಟರ್ ನೇಹಾ ವೇದಿಕೆ ಮೇಲೆ ಕೂಗಿ ಕೂಗಿ ಹೇಳಿದ್ರೂ ಯಾರೂ ಕೇಳೋ ಸ್ಥಿತಿಯಲ್ಲಿರಲಿಲ್ಲ..

  ಕೊನೆಗೂ ಮುಗ್ಧನಾಗೇ ಉಳಿದ ಭಾಸ್ಕರ

  ಕೊನೆಗೂ ಮುಗ್ಧನಾಗೇ ಉಳಿದ ಭಾಸ್ಕರ

  ನೇಹಾ ಮೂರನೇ ಸ್ಥಾನ ಸ್ವೀಕರಿಸಲು ಒಪ್ಪದಿದ್ದಾಗ ವಾಹಿನಿಯವರು ಭಾಸ್ಕರನಿಗೆ ಮೂರನೇ ಸ್ಥಾನದಿಂದ ಸಮಾಧಾನ ಇದೆಯಾ ಅಂತ ಕೇಳಿದ್ದಾಯ್ತು. ಭಾಸ್ಕರ ಅಲ್ಲೂ ಪಕ್ಕಾ ಹಳ್ಳಿ ಹೈದನಾಗಿ ನನಗೇನೂ ತೊಂದರೆ ಇಲ್ಲ ಅಂತ ಅವಾರ್ಡು ಸ್ವೀಕರಿಸಿದ. ಭಾಸ್ಕರನ ಮುಗ್ಧತೆ ಜನ್ರ ಮನಸ್ಸಲ್ಲಿ ಅವನನ್ನ ನಂಬರ್ ಒನ್ ಆಗಿಸೋದ್ರಲ್ಲಿ ಅನುಮಾನವಿಲ್ಲ.

  ಬೌತಿಶ್ ಗೆಲ್ಲಲಿಲ್ಲ

  ಬೌತಿಶ್ ಗೆಲ್ಲಲಿಲ್ಲ

  ಆದ್ರೆ ಎಲ್ಲರ ನಿರೀಕ್ಷೆ ಇದ್ದಿದ್ದು ಬೌತಿಶ್ ಹಳ್ಳಿ ಹೈದ ಪಟ್ಟ ಗೆಲ್ಲಬಹುದು ಅಂತ ಆದ್ರೆ ಹಳ್ಳಿ ಹೈದ ಪಟ್ಟ ಬೌತಿಶ್ ಕೂಡ ಗೆಲ್ಲಲಿಲ್ಲ. ಬೌತಿಶ್ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

  ಶಿವಕುಮಾರ್ ವಿನ್ನರ್

  ಶಿವಕುಮಾರ್ ವಿನ್ನರ್

  ಕೊನೆಗೂ ಗೆದ್ದಿದ್ದು ಎಲ್ಲೂ ಹಳ್ಳಿಹೈದ ಅನ್ನಿಸದೇ ಇದ್ದ ಶಿವಕುಮಾರ. ಎಲ್ಲ ಗೊತ್ತಿದ್ದರೂ ಏನೂ ಗೊತ್ತಿಲ್ಲದವರಂತೆ ಡ್ರಾಮ ಮಾಡ್ತಾನೆ ಅಂತ ಪ್ರೇಕ್ಷಕರಿಂದ ಅನ್ನಿಸಿಕೊಳ್ತಿದ್ದ ಬಾಡಿಬಿಲ್ಡರ್ ಶಿವಕುಮಾರ್ ಚಂದನ ಜೋಡಿ ವಿನ್ನರ್ ಅಂತ ಘೋಷಣೆಯಾಗಿದೆ.

  ಘೋಷಣೆಯಲ್ಲ ಶೋಷಣೆ

  ಘೋಷಣೆಯಲ್ಲ ಶೋಷಣೆ

  ಇದು ಮನ್ನಣೆಯಲ್ಲ. ತಮಗೆ ಬೇಕಾದವ್ರಿಗೆ ಮಣೆ ಹಾಕೋದು ಅಂತ ನೇಹಾ ಫ್ಯಾಮಿಲಿಯವ್ರು ವೇದಿಕೆ ಇಳಿದು ಹೊರಟು ಹೋಗಿದ್ದಾರೆ. ಫಿನಾಲೆಯಲ್ಲಿ ವಿನ್ನರ್ ಯಾರು ಅಂತ ಘೋಷಣೆ ಶೋಷಣೇನಾ ಅನ್ನೋ ಅನುಮಾನ ಪ್ರೇಕ್ಷಕರನ್ನ ಕಾಡ್ತಿದೆ.

   ಏನೋ ಐತೆ...

  ಏನೋ ಐತೆ...

  ಗೆಲ್ಲೋದು ಯಾರು ಅನ್ನೋದು ಮೊದಲೇ ನಿರ್ಧಾರ ಆಗಿತ್ತು.. ಇದೆಲ್ಲಾ ಗೋಲ್ಮಾಲ್ ಅಂತ ಭಾಸ್ಕರನ ಮೆಂಟರ್ ನೇಹಾ ತಾಯಿ ಕೋಪ ಮಾಡಿಕೊಂಡು ಶೂಟಿಂಗ್ ನಡೆದ ರಾತ್ರೋರಾತ್ರಿ ಮಡಿಕೇರಿಯ ಬಸ್ಸು ಹತ್ತಿದ್ದಾರೆ.. ನಿಜಾನಾ ಸುಳ್ಳಾ? ನೀವೇ ನಿರ್ಧಾರ ಮಾಡಿ. ನಿಮ್ಮ ಪ್ರಕಾರ ಯಾರು ವಿನ್ನರ್ ಅಂತ ನಮಗೆ ತಿಳಿಸಿ.

  English summary
  Is Kannada tv reality show Halli Hyda Pyateg Banda Season 2 over? Who won in the grand finale? Why runners up refused to accept the prize? Why mentors of few participants walked out of reality show? Here is reality check. ಹಳ್ಳಿ ಹೈದ : ಗ್ರಾಂಡ್ ಫಿನಾಲೆಯಲ್ಲಿ ಫುಲ್ ಗೋಲ್ಮಾಲ್?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X