»   » ಜಗ್ಗೇಶ್ 12 ರೂಪಾಯಿ ಬಿರಿಯಾನಿ ತಿಂದ ಸೀನ್ ನೋಡಿ ಬೇಜಾರ್ ಆಗಬೇಡಿ!

ಜಗ್ಗೇಶ್ 12 ರೂಪಾಯಿ ಬಿರಿಯಾನಿ ತಿಂದ ಸೀನ್ ನೋಡಿ ಬೇಜಾರ್ ಆಗಬೇಡಿ!

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್ 3' ಶುರುವಾಗಿದೆ. ಸಾಧಕರ ಜೊತೆಗೆ ರಮೇಶ್ ಯಾವಾಗ ಕಾಣಿಸಿಕೊಳ್ಳುತ್ತಾರೋ ಎಂಬ ಕುತೂಹಲಕ್ಕೆ ಕಳೆದ ವಾರವೇ ಬ್ರೇಕ್ ಬಿದ್ದಿದೆ. ಅಲ್ಲದೇ ಬಹುಭಾಷಾ ನಟ ಪ್ರಕಾಶ್ ರೈ ಅವರ ಸಾಧನೆಯ ಹಾದಿಯ ಬಗ್ಗೆ ನೀವೆಲ್ಲಾ ತಿಳಿದುಕೊಂಡಿದ್ದೀರಿ.

ಅಂದಹಾಗೆ ಈ ವಾರ ಬಹುಸಂಖ್ಯಾತರಿಗೆ ತಿಳಿದಂತೆ 'ವೀಕೆಂಡ್ ವಿತ್ ರಮೇಶ್ 3' ಸಾಧಕರ ಸೀಟ್ ಮೇಲೆ ಎರಡನೇ ಅತಿಥಿಯಾಗಿ ನಮ್ಮ ನೆಚ್ಚಿನ ನವರಸನಾಯಕ ಜಗ್ಗೇಶ್ ಕುಳಿತು, ತಮ್ಮ ಸಾಧನೆಯ ಜರ್ನಿ ಕುರಿತು ಹಂಚಿಕೊಳ್ಳಲಿದ್ದಾರೆ.[ಶ್ರೀಲಂಕಾ, ಮಲೇಶಿಯಾದಿಂದ ಜಗ್ಗೇಶ್ ಗೆ ಬಂದಿದೆ ಬೆದರಿಕೆ ಕರೆ.! ಯಾಕೆ.?]

ಜೀ ಕನ್ನಡ ವಾಹಿನಿ ಈಗಾಗಲೇ 'ವೀಕೆಂಡ್ ವಿತ್ ರಮೇಶ್ 3' ಜಗ್ಗೇಶ್ ಎಪಿಸೋಡ್ ನ ಸಣ್ಣ ವಿಡಿಯೋ ಟ್ರೈಲರ್ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಜಗ್ಗೇಶ್ ಅತಿ ಕಡಿಮೆ ಬೆಲೆಗೆ ತಿಂದ ಬಿರಿಯಾನಿ ಸೀನ್ ರೀಕ್ರಿಯೇಟ್ ಆಗಿರುವುದು ರಿವೀಲ್ ಆಗಿದೆ. ಆ ಸೀನ್ ಯಾವುದು? ಇಲ್ಲಿದೆ ಡೀಟೇಲ್ಸ್..

ಮರುಕಳಿಸಿದ ಜಗ್ಗೇಶ್ ಬಿರಿಯಾನಿ ಸೀನ್

ನೀವು ಬೇಜಾರು ಮಾಡಿಕೊಳ್ಳುವ ಹಾಗೆ ಜಗ್ಗೇಶ್ ಯಾವುದೇ ಅತಿ ಕಡಿಮೆ ಬೆಲೆಯ ಬಿರಿಯಾಗಿ ತಿಂದಿಲ್ಲ. ಬದಲಾಗಿ ಜಗ್ಗೇಶ್ ಸಿನಿಮಾ ಒಂದರಲ್ಲಿ ಅತಿ ಕಡಿಮೆ ಬೆಲೆಗೆ ತಿಂದ ಬಿರಿಯಾನಿ ಸೀನ್ ರಿಕ್ರಿಯೇಟ್ ಆಗಿದೆ.[ಜಗ್ಗೇಶ್ ದೊಡ್ಡತನಕ್ಕೆ ತಲೆಬಾಗಿ ಮುಗುಳ್ನಕ್ಕ ನಿರ್ದೇಶಕ ಯೋಗರಾಜ್ ಭಟ್.!]

ಬೌ ಬೌ ಬಿರಿಯಾನಿ ನೆನಪಿದೆಯಾ?

ಜಗ್ಗೇಶ್ ಕಾಮಿಡಿ ದೃಶ್ಯಗಳಲ್ಲಿ ಯಾವುದು ತುಂಬಾ ಇಷ್ಟ ಎಂದು ಯಾರಾದ್ರು ಕೇಳಿದ್ರೆ, ಎಲ್ಲರಿಗೂ ನೆನಪಾಗುವುದು ಅದ್ಭುತ ಹಾಸ್ಯ ದೃಶ್ಯ ಜಗ್ಗೇಶ್ ಅವರ 'ಬೌ ಬೌ ಬಿರಿಯಾನಿ' ಸೀನ್. ಈ ಸೀನ್ ಈಗ 'ವೀಕೆಂಡ್ ವಿತ್ ರಮೇಶ್ 3' ರಲ್ಲಿ ರೀಕ್ರಿಯೇಟ್ ಆಗಿದೆ.

'ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ'

'ವೀಕೆಂಡ್ ವಿತ್ ರಮೇಶ್ 3' ಜಗ್ಗೇಶ್ ಎಪಿಸೋಡ್ ನಲ್ಲಿ ರೀಕ್ರಿಯೇಟ್ ಆಗಿರುವುದು ಜಗ್ಗೇಶ್ ಅಭಿನಯದ 'ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ' ಸಿನಿಮಾದ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಕಾಮಿಡಿ ದೃಶ್ಯವೇ ರೀಕ್ರಿಯೇಟ್ ಆಗಿರುವುದು.

ಇಂದು ಸಂಜೆ ಮಿಸ್ ಮಾಡದೇ ನೋಡಿ..

ಬೌ ಬೌ ಬಿರಿಯಾನಿ ರೀಕ್ರಿಯೇಟ್ ಸೀನ್ ಅನ್ನು 'ವೀಕೆಂಡ್ ವಿತ್ ರಮೇಶ್ 3' ನಲ್ಲಿ ನೋಡಲು ಇಂದು ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯನ್ನು ತಪ್ಪದೇ ಟ್ಯೂನ್ ಮಾಡಿ. ಹಾಗೆ ಜಗ್ಗೇಶ್ ಸಾಧನೆಯ ಹಾದಿ ಕುರಿತು ತಿಳಿಯಲು ಮಿಸ್ ಮಾಡದಿರಿ.

English summary
Kannada Actor Jaggesh Starrer 'Yardo Duddu Yellammana Jathre' movie Bow Bow Biriyani Scene has Recreated in 'Weekend With Ramesh 3'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada