»   » ಹೆಣ್ಣು ಮಗುವನ್ನ ದತ್ತು ಪಡೆಯಲು ಮುಂದಾದ ಬಿಗ್ ಬಾಸ್ ಸ್ಪರ್ಧಿ

ಹೆಣ್ಣು ಮಗುವನ್ನ ದತ್ತು ಪಡೆಯಲು ಮುಂದಾದ ಬಿಗ್ ಬಾಸ್ ಸ್ಪರ್ಧಿ

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಹೆಣ್ಣು ಮಗುವನ್ನು ದತ್ತು ಪಡೆಯಲು ನಿರ್ಧಾರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್ 5 ಸೀಸನ್ ನ ಸ್ಪರ್ಧಿಯೊಬ್ಬರು ಮಗುವನ್ನ ದತ್ತು ಪಡೆಯಲು ಮುಂದಾಗಿದ್ದಾರೆ. ಹೆಣ್ಣು ಮಗುವನ್ನೇ ದತ್ತು ಪಡೆಯಬೇಕು ಎಂದೂ ನಿರ್ಧಾರವನ್ನ ಮಾಡಿದ್ದಾರಂತೆ. ಈ ಸುದ್ದಿ ಅಂತೆ ಕಂತೆ ಅಲ್ಲ ಖುದ್ದು ಅವರೇ ಈ ಬಗ್ಗೆ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.

ಜಯಶ್ರೀನಿವಾಸನ್ ಎಂಟ್ರಿ ವಿಚಿತ್ರ: ಔಟ್ ಆಗಿದ್ದೂ ವಿಚಿತ್ರವೇ.!

ಬಿಗ್ ಬಾಸ್ ನಲ್ಲಿ ಆಗಿರುವ ಎಕ್ಸ್ ಪೀರಿಯನ್ಸ್ ನಿಂದಾಗಿ ಇಂತಹ ಬದಲಾವಣೆ ತಮ್ಮ ಜೀವನದಲ್ಲಿ ತಂದುಕೊಳ್ಳಲು ನಿರ್ಧರಿಸಿದ್ದು. ಇನ್ನ ಕೆಲವೇ ದಿನಗಳಲ್ಲಿ ಮಗುವನ್ನ ದತ್ತು ಪಡೆಯಲು ಮುಂದಾಗಲಿದ್ದಾರೆ. ಹೆಣ್ಣು ಮಗು ದತ್ತು ಸ್ವೀಕಾರ ಮಾಡಲು ಬಿಗ್ ಬಾಸ್ ನಲ್ಲಿದ್ದ ಒಬ್ಬ ಹೆಣ್ಣು ಮಗಳೇ ಕಾರಣವಂತೆ.

ಅಷ್ಟಕ್ಕೂ ಆ ಸ್ಪರ್ಧಿ ಯಾರು? ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಈ ರೀತಿಯ ಬದಲಾವಣೆ ಮಾಡಿಕೊಳ್ಳಲು ಕಾರಣವೇನು? ಹೆಣ್ಣು ಮಗುವನ್ನ ದತ್ತು ಪಡೆಯುತ್ತಿರುವ ಉದ್ದೇಶವೇನು? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಹೆಣ್ಣು ಮಗು ದತ್ತು ಪಡೆಯುತ್ತಿರುವ ಜಯ ಶ್ರೀನಿವಾಸನ್

ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸ್ಪರ್ಧಿ ಜಯ ಶ್ರೀನಿವಾಸನ್ ಹೆಣ್ಣು ಮಗುವನ್ನ ದತ್ತು ಪಡೆಯಲು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಜಯ ಶ್ರೀನಿವಾಸನ್ ಹೇಳಿಕೊಂಡಿದ್ದಾರೆ.

ಸ್ಫೂರ್ತಿ ಆದರೂ ಆಶಿತಾ

ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ಆಗಿದ್ದ ನಟಿ ಆಶಿತಾ ಅವರನ್ನ ನೋಡಿದ ಮೇಲೆ ಈ ರೀತಿಯ ನಿರ್ಧಾರ ಮಾಡಿದ್ದಾರಂತೆ. ತಮ್ಮ ಮನೆಯಲ್ಲೂ ಒಬ್ಬಳು ಹೆಣ್ಣು ಮಗಳಿರಬೇಕು ಎಂದು ಜಯ ಶ್ರೀನಿವಾಸನ್ ಮಗು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.

ಜಯ ಶ್ರೀನಿವಾಸನ್ ಅವರಿಗೆ ನಾಲ್ಕು ಗಂಡುಮಕ್ಕಳು

ಜಯ ಶ್ರೀನಿವಾಸನ್ ಅವರಿಗೆ ಈಗಾಗಲೇ ನಾಲ್ಕು ಜನ ಗಂಡು ಮಕ್ಕಳಿದ್ದಾರೆ. ಹಿಂದಿನಿಂದಲೂ ಶ್ರೀನಿವಾಸನ್ ಮತ್ತು ಅವರ ಪತ್ನಿಗೆ ಹೆಣ್ಣು ಮಗುವಿನ ಮೇಲೆ ತುಂಬಾ ಪ್ರೀತಿ ಇತ್ತಂತೆ.

ಜೀವನ ಶೈಲಿಯಲ್ಲೂ ಬದಲಾವಣೆ

ವೃತ್ತಿಯಲ್ಲಿ ಸಂಖ್ಯಾಶಾಸ್ತ್ರಜ್ಞ ಆಗಿರುವ ಜಯ ಶ್ರೀನಿವಾಸ್ ಇಷ್ಟು ದಿನಗಳ ಕಾಲ ಶ್ರೀಮಂತರಿಗೆ ಸಂಖ್ಯಾಶಾಸ್ತ್ರವನ್ನ ಹೇಳುತ್ತಿದ್ದರಂತೆ. ಸಾಮಾನ್ಯ ಜನರಿಗೆ ಲಭ್ಯವಾಗುತ್ತಿರಲಿಲ್ಲವಂತೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಬಡವರಿಗೂ ಸಂಖ್ಯಾಶಾಸ್ತ್ರ ಹೇಳಬೇಕಾಗಿ ನಿರ್ಧಾರ ಮಾಡಿದ್ದು ತಮ್ಮ ಶುಲ್ಕವನ್ನು ಕಡಿಮೆ ಮಾಡಿಕೊಂಡಿದ್ದಾರಂತೆ.

English summary
Bigg Boss season 5 contestant Jaya Srinivasan has decided to adopt a girl child. Jaya Srinivasan said in an interview on this issue

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X