For Quick Alerts
  ALLOW NOTIFICATIONS  
  For Daily Alerts

  ಮದುವೆ ವಿಚಾರದಲ್ಲಿ ರಮ್ಯಾ ತೆಗೆದುಕೊಂಡಿರುವ ನಿರ್ಧಾರ ಸರಿಯೇ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾ ಅಂತೂ ಇಂತೂ ಮದುವೆಗೆ ಒಪ್ಪಿಕೊಂಡಿದ್ದಾಳೆ. ರಮ್ಯಾ ತನ್ನ ಸ್ನೇಹಿತೆಯ ಹಿತಕ್ಕಾಗಿ ಈ ಮದುವೆಗೆ ಒಪ್ಪಿದ್ದು, ಈ ವಿಚಾರವನ್ನು ಯಾರ ಬಳಿಯೂ ಹೇಳಿಲ್ಲ.

  ಎಲ್ಲರಿಗೂ ಈಗ ಸಂಜು ಪತ್ನಿ ಆರಾಧನಾಳ ಬಗ್ಗೆಯೇ ಕುತೂಹಲ ಹೆಚ್ಚಾಗಿದೆ. ಆರಾಧನಾ ಯಾರು..? ಆಕೆ ಯಾಕೆ ಸಂಜು ಜೊತೆ ಮಾತನಾಡುತ್ತಿಲ್ಲ.? ಇವರಿಬ್ಬರ ನಡುವಿನ ಆ ಜಗಳ ಯಾವುದು.? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡಿದೆ.

  ದಿವ್ಯಾ ಹೇಳಿದ ಸುಳ್ಳಿನಿಂದ ಸತ್ಯ ಬಾಳಲ್ಲಿ ಬಿರುಗಾಳಿ ಏಳುತ್ತಾ?ದಿವ್ಯಾ ಹೇಳಿದ ಸುಳ್ಳಿನಿಂದ ಸತ್ಯ ಬಾಳಲ್ಲಿ ಬಿರುಗಾಳಿ ಏಳುತ್ತಾ?

  ಆದರೆ, ಸಂಜುಗೆ ಆರಾಧನಾ ಬೇಕಾಗಿಲ್ಲ. ಅವನಿಗೆ ಅವಳ ನೆನಪು ಕೂಡ ಆಗುತ್ತಿಲ್ಲ. ಸಂಜುಗೆ ಅನು ಜೊತೆ ಇರುವುದೇ ಇಷ್ಟ. ಅವಳ ಜೊತೆಗೆ ಇರಲು ಪದೇ ಪದೇ ಸಂಜು ಬಯಸುತ್ತಾನೆ. ಆದರೆ, ಇದನ್ನು ಬಾಯಿ ಬಿಟ್ಟು ಹೇಳಲು ಸಾಧ್ಯವಾಗುತ್ತಿಲ್ಲ.

  ಅನುಗೆ ಸಂಜು ಕೊಟ್ಟ ಮಾತೇನು..?

  ಅನುಗೆ ಸಂಜು ಕೊಟ್ಟ ಮಾತೇನು..?

  ಸಂಜು ಮತ್ತು ಅನು ಆಫೀಸಿನಲ್ಲಿ ಊಟ ಮಾಡುತ್ತಾ ಮಾತನಾಡುತ್ತಿರುತ್ತಾರೆ. ಆಗ ಅನು ಮತ್ತೆ ಸಂಜುನನ್ನು ಆರಾಧನಾಗೆ ಕಾಲ್ ಮಾಡಿದ್ರಾ ಎಂದು ಕೇಳುತ್ತಾಳೆ. ಆಗ ಸಂಜುಗೆ ಏನು ಹೇಳುವುದು ಎಂಬುದೇ ತಿಳಿಯುವುದಿಲ್ಲ. ಹಾಗಾಗಿ ಸಂಜು ಕಾಲ್ ಮಾಡಿದ್ದೆ. ಅವಳಿಗೆ ನನ್ನ ಜೊತೆಗೆ ಮಾತನಾಡುವುದೂ ಇಷ್ಟವಿಲ್ಲ. ಡಿವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾಳೆ. ನನಗೆ ನಾವ್ಯಾಕೆ ಜಗಳ ಆಡಿದ್ದೆವು ಎಂಬುದೇ ನೆನಪಾಗುತ್ತಿಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಅನು ಬೇಸರ ಮಾಡಿಕೊಳ್ಳುತ್ತಾಳೆ. ಅಷ್ಟೇ ಅಲ್ಲದೇ, ಪರವಾಗಿಲ್ಲ, ನೀವು ನಿತ್ಯ ಆರಾಧನಾ ಅವರಿಗೆ ಫೋನ್ ಮಾಡುತ್ತಿರಿ. ಅವರೇ ಸರಿ ಹೋಗುತ್ತಾರೆ. ಪ್ರೀತಿ ಇರುವವರ ಮೇಲಷ್ಟೇ ಕೋಪ ಮಾಡಿಕೊಳ್ಳಲು ಸಾಧ್ಯ. ಅವರಿಗೆ ಫೋನ್ ಮಾಡುತ್ತೇನೆ ಎಂದು ಪ್ರಾಮಿಸ್ ಮಾಡಿ ಎಂದು ಕೇಳುತ್ತಾಳೆ. ಆಗ ವಿಧಿ ಇಲ್ಲದೇ, ಸಂಜು ಅನುಗೆ ಮಾತು ಕೊಡುತ್ತಾನೆ.

  ಪುಷ್ಪಾ ಯೋಚನೆಗೆ ಜೋಗ್ತವ್ವ ಉತ್ತರ

  ಪುಷ್ಪಾ ಯೋಚನೆಗೆ ಜೋಗ್ತವ್ವ ಉತ್ತರ

  ಇನ್ನು ವಠಾರದಲ್ಲಿ ಎಲ್ಲರೂ ರಮ್ಯಾ ಮದುವೆ ಗೊತ್ತಾಗಿರುವುದಕ್ಕೆ ಖುಷಿಯಾಗಿರುತ್ತಾರೆ. ಇದೇ ವೇಳೆಗೆ ವಠಾರದಲ್ಲಿ ಒಬ್ಬರು ಪಾಪ ಅನು. ಅವಳಿಗೂ ಒಬ್ಬ ಹುಡುಗ ಸಿಕ್ಕರೆ ರಮ್ಯಾ ಮದುವೆಯಲ್ಲೇ ಅವಳಿಗೂ ಮದುವೆ ಮಾಡಬಹುದು ಎನ್ನುತ್ತಾಳೆ. ಈ ಮಾತನ್ನು ಕೇಳಿದ ಪುಷ್ಪಾ ಬೇಸರ ಮಾಡಿಕೊಳ್ಳುತ್ತಾಳೆ. ಇದೇ ವೇಳೆಗೆ ಮನೆಗೆ ಜೋಗ್ತವ್ವ ಬರುತ್ತಾಳೆ. ಜೋಗ್ತವವ್ವ, ನಿನ್ನ ಮಗಳು ಸುಮಂಗಲಿ. ಅವಳ ಗಂಡನಿಗೆ ಏನೂ ಆಗಿಲ್ಲ. ಅವಳದ್ದು ರಾಜಯೋಗ ಎಂದು ಹೇಳಿ ಹೋಗುತ್ತಾಳೆ. ಇದರಿಂದ ಖುಷಿ ಪಡುವ ಪುಷ್ಪಾ, ಈ ವಿಚಾರವನ್ನು ಸುಬ್ಬುಗೆ ಹೇಳುತ್ತಾಳೆ.

  ರಮ್ಯಾ, ಕರುಣಾಕರನಿಗೆ ಹೇಳಿದ್ದೇನು..?

  ರಮ್ಯಾ, ಕರುಣಾಕರನಿಗೆ ಹೇಳಿದ್ದೇನು..?

  ಇತ್ತ ಅನು, ರಮ್ಯಾಳನ್ನು ಮಾತನಾಡಿಸುತ್ತಾಳೆ. ನೀನು ಮದುವೆಗೆ ಒಪ್ಪಿದ್ದಕ್ಕೆ ಖುಷಿಯಾಯ್ತು. ಕೊನೆಗೂ ಮದುವೆಗೆ ಒಪ್ಪಿಕೊಂಡೆಯಲ್ಲ. ಖುಷಿಯಾಗಿರು. ನಿನ್ನ ಮದುವೆ ಸಂಭ್ರಮ ಇಡೀ ವಠಾರದಲ್ಲಿ ತುಂಬಿರುತ್ತೆ ಎಂದು ಹೇಳುತ್ತಾಳೆ. ಆಗ ಮನದಲ್ಲಿ ರಮ್ಯಾ ನಾನು ಈ ಮದುವೆಗೆ ಒಪ್ಪಿರುವುದೇ, ರತ್ನಾಕರನ ಬಂಡವಾಳ ತಿಳಿಯಲು ಎಂದು ಮನದಲ್ಲಿ ಮಾತನಾಡಿಕೊಳ್ಳುತ್ತಾಳೆ. ಇನ್ನು ಕರುಣಾಕರ, ರಮ್ಯಾಳನ್ನು ಭೇಟಿ ಮಾಡುತ್ತಾನೆ. ಆಗ ರಮ್ಯಾ ಆತನಿಗೆ ನಿತ್ಯ ಆಫೀಸಿಗೆ ಹೋಗುವಂತೆ ಹೇಳುತ್ತಾಳೆ. ರಮ್ಯಾ ನಡೆ ಪ್ರೇಕ್ಷಕರಲ್ಲಿ ಒಂದು ರೀತಿಯ ಅನುಮಾನವನ್ನು ಮೂಡಿಸಿದೆ.

  ಅನು ಮೇಲೆ ಪ್ರೀತಿ ಹೆಚ್ಚಿಸಿಕೊಂಡ ಸಂಜು

  ಅನು ಮೇಲೆ ಪ್ರೀತಿ ಹೆಚ್ಚಿಸಿಕೊಂಡ ಸಂಜು

  ಹರ್ಷ ಈಗ ಹೆಚ್ಚಾಗಿಯೇ ಸಂಜು ಮೇಲೆ ಕಾಳಜಿ ವಹಿಸುತ್ತಿದ್ದಾನೆ. ಆತನ ಚೆಕಪ್ ಬಗ್ಗೆ ತಲೆ ಕೆಡಿಸಿಕೊಂಡಿರುವ ಹರ್ಷ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗುತ್ತಾನೆ. ಆದರೆ ಸಂಜುಗೆ ಇದು ಇಷ್ಟವಿರುವುದಿಲ್ಲ. ನನಗೆ ಯಾವ ಹಳೆಯ ನೆನಪೂ ಬೇಡ. ಆರಾಧನಾ ಬೇಡ. ನನಗೆ ಅನು ಒಬ್ಬರು ನನ್ನನ್ನ ಜೊತೆಗೆ ಇದ್ದರಷ್ಟೇ ಸಾಕು. ಅನು ಜೊತೆಗೆ ನನಗಿರಲು ಇಷ್ಟ. ಇದನ್ನೆಲ್ಲಾ ಇವರಿಗೆ ಹೇಗೆ ಹೇಳಲಿ ಎಂದು ಮನದಲ್ಲೇ ಯೋಚಿಸುತ್ತಾನೆ. ಆದರೆ ಸಂಜು ವಿಚಾರದಲ್ಲಿ ಹರ್ಷ, ಮಾನ್ಸಿ ಹಾಗೂ ಅನು ಸೇರಿ ಆರಾಧನಾಳನ್ನು ಮನೆಗೆ ಕರೆಸುತ್ತಾರಾ ಕಾದು ನೋಡಬೇಕಿದೆ.

  ಝೇಂಡೇ ಆಟ ಇಲ್ಲಿಗೆ ಮುಗಿಯುತ್ತಾ..? ಆರಾಧನಾ ಬರುತ್ತಾಳಾ..?ಝೇಂಡೇ ಆಟ ಇಲ್ಲಿಗೆ ಮುಗಿಯುತ್ತಾ..? ಆರಾಧನಾ ಬರುತ್ತಾಳಾ..?

  English summary
  jothe jotheyali Serial 01st november Episode Written Update. sanju is not willing to accept aradana. He likes to be closer to anu.
  Tuesday, November 1, 2022, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X