Don't Miss!
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಆಫೀಸಿಗೆ ಬಂದ ಝೇಂಡೇಗೆ ಶಾರದಾ ದೇವಿ ಹೇಳಿದ್ದೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಶಾರದಾ ದೇವಿ ಕಾಲಿಡಿದು ಕ್ಷಮೆ ಕೇಳುತ್ತಾಳೆ. ತಾನು ಮಾಡಿದ ತಪ್ಪಿನ ಬಗ್ಗೆ ಹೇಳುತ್ತಾಳೆ. ಝೇಂಡೇ ಅನ್ನು ನಂಬಿ ಮೋಸ ಹೋದೆ ಎಂದು ಹೇಳುತ್ತಾಳೆ.
ಆರ್ಯ ಸರ್ ಹೆಸರನ್ನು ಬಳಸಿಕೊಂಡು ಝೇಂಡೇ ಮೋಸ ಮಾಡಿದರು. ಖಾಲಿ ಪೇಪರ್ ಗಳೀಗೆ ಸಹಿ ಹಾಕಿಸಿಕೊಂಡರು. ಈಗ ನೋಡಿದರೆ ವರ್ಧನ್ ಗ್ರೂಪ್ಸ್ ಅಕೌಂಟ್ ಗಳನ್ನೇ ಕ್ಲೋಸ್ ಮಾಡಿಸಿದ್ದಾರೆ ಎಂದು ಮೀರಾ ಹೇಳುತ್ತಾಳೆ.
Puttakkana
Makkalu
serial:
ಪುಟ್ಟಕ್ಕನ
ಮನೆಗೆ
ಆಗಮಿಸಿದ
ಮೇಷ್ಟ್ರ
ತಂದೆ
ತಾಯಿ
ಈ ಮಾತನ್ನು ಕೇಳಿದ ಶಾರದಾ ಸ್ವಲ್ಪವೂ ಬೇಸರ ಮಾಡಿಕೊಳ್ಳುವುದಿಲ್ಲ. ಬದಲಿಗೆ ಮೀರಾಗೆ ಸಮಾಧಾನ ಹೇಳುತ್ತಾಳೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಹೆದರಬೇಡ ಎಂದು ಹೇಳುತ್ತಾಳೆ.

ಮತ್ತೆ ತಪ್ಪು ಮಾಡಲ್ಲ ಎಂದ ಮೀರಾ
ಸಾವಿರಾರು ಮಂದಿಗೆ ಊಟ ಹಾಕಿದ ಸಂಸ್ಥೆ ಅದು. ಅದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಎಲ್ಲರಿಗೂ ಒಳ್ಳೆಯದೇ ಆಗುತ್ತದೆ. ಯಾವತ್ತೂ ಆ ಕಂಪನಿಯಿಂದ ಯಾರಿಗೂ ದ್ರೋಹ ಆಗುವುದಿಲ್ಲ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಸಮಾಧಾನ ಮಾಡಿಕೊಳ್ಳುವ ಮೀರಾ ಮತ್ತೆ ಈ ತಪ್ಪುಗಳನ್ನು ಮಾಡಲ್ಲ ಎಂದು ಹೇಳುತ್ತಾಳೆ. ನಾನೇ ಝೇಂಡೇ ಅನ್ನು ವಾಪಸ್ ಆಫೀಸಿಗೆ ಕರೆಸಿಕೊಂಡಿದ್ದು. ಆದರೆ ಹೀಗೆಲ್ಲಾ ನಡೆದು ಹೋಯ್ತು ಎಂದು ಹೇಳುತ್ತಾಳೆ. ಇನ್ನು ಶಾನುಭೋಗರು ಕೂಡ ಝೇಂಡೇ ಮಾಡಿದ ಕೆಲಸದ ಬಗ್ಗೆ ಪತ್ರ ಬರೆದಿರುತ್ತಾರೆ. ಇದನ್ನು ಶಾರದಾ ಓದುತ್ತಾರೆ.

ಮೀರಾ ಕಾಲೆಳೆದ ಮಾನ್ಸಿ
ಇದೇ ವೇಳೆಗೆ ಹರ್ಷನಿಗೆ ಆಫೀಸಿನಿಂದ ಫೋನ್ ಬರುತ್ತದೆ. ಝೇಂಡೇ ಸರ್ ಬಂದಿದ್ದಾರೆ. ನಮಗೆಲ್ಲಾ ಬೈಯುತ್ತಿದ್ದಾರೆ. ಏನೇನೋ ಹೇಳುತ್ತಿದ್ದಾರೆ ಎಂದು ಹೇಳುತ್ತಾರೆ. ಕೂಡಲೇ ಆಫೀಸಿಗೆ ಬನ್ನಿ ಎಂದು ಕೇಳಿಕೊಳ್ಳುತ್ತಾರೆ. ಆಗ ಹರ್ಷ ಮತ್ತು ಅನು ಇಬ್ಬರೂ ಆಫೀಸಿಗೆ ಹೊರಡುತ್ತಾರೆ. ಇವರ ಜೊತೆಗೆ ಮೀರಾ ಕೂಡ ಹೋಗುತ್ತಾಳೆ. ಮೀರಾಳನ್ನು ತಡೆಯುವ ಮಾನ್ಸಿ ಕಾಲೆಳೆಯುತ್ತಾಳೆ. ಈ ಮನೆಯಲ್ಲಿ ಇಷ್ಟು ವರ್ಷ ನಡೆದ ನಾಟಕಕ್ಕಿಂತ ಇವತ್ತು ನೀನು ಕಾಲಿಗೆ ಬಿದ್ದು ಆಡಿದ ಮಾತುಗಳು ಸೂಪರ್ ಎಂದು ಹೇಳುತ್ತಾಳೆ. ಮಾನ್ಸಿ ಮಾತುಗಳಿಗೆ ಏನೂ ಹೇಳದೆ ಮೀರಾ ಹೊರಟು ಬಿಡುತ್ತಾಳೆ.

ಜೋಗ್ತವ್ವ ಹೇಳಿದ್ದೇನು..?
ಹರ್ಷ, ಅನು ಮತ್ತು ಮೀರಾ ಆಫೀಸಿಗೆ ಬಂದು ಮಾತನಾಡುತ್ತಾರೆ. ಸೀದಾ ಝೇಂಡೇ ರೂಮಿಗೆ ಹೋಗುತ್ತಾರೆ. ಕ್ಯಾಬಿನ್‌ನಲ್ಲಿ ಝೇಂಡೇ ಎಲ್ಲರಿಗೂ ಬೈಯುತ್ತಿರುತ್ತಾನೆ. ಬರುವ ಮೊದಲು ರಿಕ್ವೆಸ್ಟ್ ಮಾಡಬೇಕು ಎಂಬುದು ಗೊತ್ತಿಲ್ಲವಾ ಎಂದು ಜೋರು ಮಾಡುತ್ತಿರುತ್ತಾನೆ. ಇತ್ತ ಶಾರದಾ ಅವರಿಗೆ ಫೋನ್ ಒಂದು ಬರುತ್ತದೆ. ಅದರಿಂದ ಬೇಸರ ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿರುತ್ತಾರೆ. ತಾವು ಕೇಳಿದ ಸುದ್ದಿ ನಿಜವೇ ಎಂದು ಕೇಳಿದಾಗ ಅಲ್ಲಿಗೆ ಜೋಗ್ತವ್ವ ಬರುತ್ತಾಳೆ. ಜೋಗ್ತವ್ವ ನೀನು ಕೇಳಿದ್ದೆಲ್ಲಾ ನಿಜ. ಈಗ ನಿನ್ನ ಮಕ್ಕಳ ಜೊತೆ ಇರು ಹೋಗು. ಅವರಿಗೆ ನಿನ್ನ ಅವಶ್ಯಕತೆ ಇದೆ ಎಂದು ಹೇಳುತ್ತಾಳೆ.

ತಬ್ಬಿಬ್ಬಾದ ಝೇಂಡೇ
ಶಾರದಾ ಹೂವಿನ ಬೊಕ್ಕೆ ಹಿಡಿದು ಆಫೀಸಿಗೆ ಬರುತ್ತಾಳೆ. ಝೇಂಡೇ ಅನ್ನು ಹೀಗಾ ವೆಲ್ಕಂ ಮಾಡುವುದು ಎಂದು ಛೇಡಿಸುತ್ತಾ, ಝೇಂಡೇಗೆ ವಿಶ್ ಮಾಡುತ್ತಾಳೆ. ಶಾರದಾ ದೇವಿ ನಡವಳಿಕೆಯನ್ನು ಕಂಡು ಎಲ್ಲರೂ ಶಾಕ್ ಆಗುತ್ತಾರೆ. ಝೇಂಡೇಗೆ ಮುಜುಗರವಾಗುತ್ತದೆ. ಶಾರದಾ ಬೊಕ್ಕೆ ಕೊಡಲು ಬಂದಾಗ ಝೇಂಡೇ ತಬ್ಬಿಬ್ಬಾಗುತ್ತಾನೆ. ಶಾರದಾ ದೇವಿಗೆ ಆರ್ಯ ಬದುಕಿರುವ ಸತ್ಯ ಗೊತ್ತಾಗಿರಬೇಕು. ಅದಕ್ಕೆ ಹೀಗೆ ನಡೆದುಕೊಳ್ಳುತ್ತಿರಬಹುದು ಎಂದು ಊಹಿಸಲಾಗಿದೆ.