For Quick Alerts
  ALLOW NOTIFICATIONS  
  For Daily Alerts

  ಮಾನ್ಸಿ ಆಡಿದ ಮಾತುಗಳಿಂದ ಬೇಸರಿಸಿಕೊಂಡ ಪ್ರಿಯದರ್ಶಿನಿ ಹಾಗೂ ಪ್ರಭು ದೇಸಾಯಿ ಮುಂದೇನು ಮಾಡುತ್ತಾರೆ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಮನೆಯಲ್ಲಿ ಫ್ರಿಡ್ಜ್ ಕೆಟ್ಟೋಗಿದೆ. ಈ ವಿಚಾರವಾಗಿ ಪುಷ್ಪಾ ಹಾಗೂ ಸುಬ್ಬು ತಮಾಷೆಯಾಗಿ ಜಗಳವಾಡುತ್ತಿರುವುದನ್ನು ನೋಡಿ ಅನು ನಗುತ್ತಾಳೆ. ಮಗಳು ನಗುವುದನ್ನು ನೋಡಿದ ಪುಷ್ಪಾ-ಸುಬ್ಬು ಖುಷಿ ಪಡುತ್ತಾರೆ.

  ಮಾನ್ಸಿ, ಸಂಜು ನಿಜವಾಗಲೂ ಯಾರು..? ನಮ್ಮ ಮನೆಗೆ ಬಂದು ಯಾಕೆ ಬಂದಿದ್ದಾರೆ.? ಸಂಜು ಹಿಂದಿನ ರಹಸ್ಯವೇನು ಎಂದು ತಲೆ ಕೆಡಿಸಿಕೊಂಡಿದ್ದಾಳೆ. ಸಂಜು ನಿಜವಾದ ಹೆಸರು ವಿಶ್ವಾಸ್ ದೇಸಾಯಿ ಎಂಬುದನ್ನು ಕೂಡ ತಿಳಿದುಕೊಂಡಿದ್ದಾಳೆ.

  ಬೆಟ್ಟದ ಹೂ: ಮೂರನೇ ಬಾರಿಗೆ ಹೂವಿಗೆ ತಾಳಿ ಕಟ್ಟಿದ ರಾಹುಲ್: ಮಾಲಿನಿ ಕಣ್ಣಿಗೆ ಸಿಕ್ಕಿಬೀಳುತ್ತಾರಾ..?
  ವಿಶ್ವಾಸ್ ದೇಸಾಯಿ ಅವರನ್ನು ಸಂಜು ಎಂದು ಯಾಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಅವರ ಮೇಲೆ 700 ಕೋಟಿ ಸಾಲ ಇರುವುದನ್ನು ನಮ್ಮಿಂದ ಯಾಕೆ ಮುಚ್ಚಿಟ್ಟಿದ್ದಾರೆ. ಹೇಗಾದರೂ ಮಾಡಿ ಸಂಜು ಮತ್ತು ಅವರ ತಂದೆ-ತಾಯಿಯನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಮಾನ್ಸಿ ಪಣ ತೊಟ್ಟಿದ್ದಾಳೆ.

   ಮತ್ತೆ ಅನು ಮನೆಗೆ ಬಂದ ಸಂಜು

  ಮತ್ತೆ ಅನು ಮನೆಗೆ ಬಂದ ಸಂಜು

  ಸುಬ್ಬು ಸಂಜುನನ್ನು ಕರೆದುಕೊಂಡು ಹೋಗುತ್ತಿರುತ್ತಾನೆ. ಇಬ್ಬರೂ ಮಾತನಾಡಿಕೊಂಡು ತಮಾಷೆಯಾಗಿ ನಗುತ್ತಿರುತ್ತಾರೆ. ಸುಬ್ಬು ತಮ್ಮ ಏರಿಯಾ ಪರಿಚಯ ಮಾಡಿಸುತ್ತೀನಿ ಎಂದು ವಾಕ್ ಮಾಡುತ್ತಿರುತ್ತಾರೆ. ಝೇಂಡೇ ಕಡೆಯವರು ಸಂಜುನನ್ನು ಹಿಂಬಾಲಿಸುತ್ತಿರುತ್ತಾರೆ. ಇದನ್ನು ಗಮನಿಸುವ ಸಂಜು ಆತ ಆರ್ಯನ ಅಸ್ತಿ ಬಿಡುವ ಜಾಗದಲ್ಲಿ ನೋಡಿದ ನೆನಪಾಗಿ ಹಿಡಿಯಲು ಹೋಗುತ್ತಾನೆ. ಆದರೆ ಅವನು ಸಿಗುವುದಿಲ್ಲ. ಬದಲಿಗೆ ಸಂಜು ಬಟ್ಟೆಗೆ ಕೊಚ್ಚೆಯಾಗುತ್ತದೆ. ಹಾಗಾಗಿ ಸಂಜು ವಾಪಸ್ ಅನು ಮನೆಗೆ ಹೋಗುತ್ತಾನೆ.

   ಸಂಜು ವಿಚಾರವಾಗಿ ಜಗಳ ತೆಗೆದ ಮಾನ್ಸಿ

  ಸಂಜು ವಿಚಾರವಾಗಿ ಜಗಳ ತೆಗೆದ ಮಾನ್ಸಿ

  ವೈದ್ಯರನ್ನು ಭೇಟಿಯಾಗಿ ಪ್ರಿಯದರ್ಶಿನಿ ಹಾಗೂ ಪ್ರಭುದೇಸಾಯಿ ಮನೆಗೆ ಬರುತ್ತಾರೆ. ಆಗ ಶಾರದಾ ದೇವಿ ಸಂಜು ವಠಾರಕ್ಕೆ ಹೋಗಿರುವ ವಿಚಾರವನ್ನು ಹೇಳಿದಾಗ, ಇಬ್ಬರೂ ಅದು ಹೇಗೆ ಅಲ್ಲಿಗೆ ಹೋದರು ಎಂದು ಯೋಚಿಸುತ್ತಿರುತ್ತಾರೆ. ಅಷ್ಟೊತ್ತಿಗೆ ಮಾನ್ಸಿ ಬಂದು ಮಧ್ಯೆ ಬಾಯಿ ಹಾಕುತ್ತಾಳೆ. ಅದು ಹೇಗೆ ಸಂಜು ಅನು ಮನೆ ಮುಂದೇನೆ ಕಳೆದು ಹೋಗಿದ್ದಾನೆ. ಅದು ಹೇಗೆ ಸಾಧ್ಯ..? ನನಗೆ ಅನ್ನಿಸೋ ಹಾಗೆ ಸಂಜು ಬೇಕಂತಲೇ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳುತ್ತಾಳೆ. ಅಲ್ಲದೇ ಸಂಜು ಅಲ್ಲಿಗೆ ಹೋಗಿರುವುದು ನಿಮಗೆ ಮುಂಚೇನೆ ಗೊತ್ತಿದೆ. ಇನ್ನು ಸಂಜು ನಿಜವಾಗಿಯೂ ಸಂಜು ಅಲ್ಲ ಅಂತ ಹೇಳುತ್ತಾಳೆ. ಆಗ ಶಾರದಾ ಮಧ್ಯೆ ಮಾತನಾಡಿ ಮಾನ್ಸಿಗೆ ಬೈಯುತ್ತಾರೆ. ಯಾವಾಗ, ಯಾರ ಮುಂದೆ ಏನು ಮಾತನಾಡಬೇಕು ಎಂಬುದೇ ಗೊತ್ತಾಗೋದಿಲ್ಲ. ಈಗೇನು ನಿನಗೆ ಸಂಜು ವಿಶ್ವಾಸ್ ದೇಸಾಯಿ ಎಂಬುದನ್ನು ನಾನು ಒಪ್ಪಿಕೊಳ್ಳಬೇಕು ಅಷ್ಟೇ ಅಲ್ವಾ ಎಂದು ಬೈದು ಕಳಿಸುತ್ತಾಳೆ.

   ಮಾನ್ಸಿಗೆ ಸಮಾಧಾನ ಮಾಡಿದ ಹರ್ಷ

  ಮಾನ್ಸಿಗೆ ಸಮಾಧಾನ ಮಾಡಿದ ಹರ್ಷ

  ಇತ್ತ ಮಾನ್ಸಿ ನಡೆದುಕೊಂಡ ರೀತಿಗೆ ಬೇಸರ ಮಾಡಿಕೊಂಡ ಪ್ರಭು ದೇಸಾಯಿ ಹಾಗೂ ಪ್ರಿಯದರ್ಶಿನಿ ರೂಮಿಗೆ ಹೋಗುತ್ತಾರೆ. ಬಳಿಕ ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ವೈದ್ಯರು ಸತ್ಯ ಹೇಳಬೇಡಿ ಎಂದರು. ಆದರೆ ಇಲ್ಲಿ ನೋಡಿದರೆ ಏನೇನೋ ಆಗುತ್ತಿದೆ. ಈ ವಿಚಾರವನ್ನು ನಾವು ಅನು ಮತ್ತು ಶಾರದಾ ದೇವಿ ಅವರಿಗಾದರೂ ಹೇಳಲೇಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ಮಾನ್ಸಿಯ ಕೋಪ ಹೆಚ್ಚಾಗುತ್ತದೆ. ಹರ್ಷ ಮಾನ್ಸಿಗೆ ಸಮಾಧಾನ ಮಾಡುತ್ತಾನೆ. ಅನು ನಿನ್ನ ಜೊತೆಗೆ ಇರುತ್ತೇನೆ ಎಂದು ಹೇಳುತ್ತಾನೆ.

   ಅನುಗೆ ಸತ್ಯ ಗೊತ್ತಾದರೆ ಏನಾಗಬಹುದು..?

  ಅನುಗೆ ಸತ್ಯ ಗೊತ್ತಾದರೆ ಏನಾಗಬಹುದು..?

  ಮನೆಗೆ ಜೋಗ್ತವ್ವ ಬರುತ್ತಾಳೆ. ಬಂದು ಮನೆ ಮಗಳನ್ನು ಎಲ್ಲೂ ಕಳಿಸಬೇಡ. ಅವಳು ಮನೆಯಲ್ಲಿದ್ದರೆ ಒಳ್ಳೆಯದು ಎಂಬ ಅರ್ಥದಲ್ಲಿ ಹೇಳಿ ಹೋಗುತ್ತಾಳೆ. ಇನ್ನು ಅನುಗೆ ಸಂಜುನನ್ನು ಕಂಡರೆ ಉಸಿರುಕಟ್ಟಿದಂತೆ ಆಗುತ್ತದೆ ಎಂದು ಹೇಳುತ್ತಾಳೆ. ಪುಷ್ಪಾ ಯಾಕೆ ಎಂದು ಕೇಳಿದರೆ, ಅವರು ತೀರಾ ಕಾಳಜಿ ಮಾಡುತ್ತಾರೆ. ಅದರಿಂದ ನನಗೆ ಆರ್ಯ ಸರ್ ನೆನಪಾಗುತ್ತಾರೆ. ಆರ್ಯ ಸರ್ ಕೂಡ ತುಂಬಾ ಕಾಳಜಿ ಮಾಡುತ್ತಿದ್ದರು ಎಂದು ಪುಷ್ಪಾ ಬಳಿ ಅನು ಹಿಂಸೆಯಿಂದ ಹೇಳುತ್ತಾಳೆ. ಈಗ ಜೋಗ್ತವ್ವ ಬೇರೆ ಮನೆ ಮಗಳನ್ನು ಕರೆಸಿಕೊ ಎಂದು ಶಾರದಾಗೆ ಹೇಳಿರುವುದಕ್ಕೆ ಅನುಳನ್ನು ವಾಪಸ್ ರಾಜನಂದಿನಿ ವಿಲಾಸಕ್ಕೆ ಕರೆಸಿಕೊಳ್ಳುತ್ತಾಳಾ..? ಸಂಜು ಬಗ್ಗೆ ಶಾರದಾ ಹಾಗೂ ಅನುಗೆ ಸತ್ಯ ಗೊತ್ತಾಗುತ್ತೆದೆಯೇ ಎಂದು ಕಾದು ನೋಡಬೇಕಿದೆ.

  English summary
  jothe jotheyali Serial 10th october Episode Written Update. mansi speaks up about sanju in front of priyadarshini and prabhu desai. Mansi behavior makes sharada feel sad.
  Tuesday, October 11, 2022, 19:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X