For Quick Alerts
  ALLOW NOTIFICATIONS  
  For Daily Alerts

  ಆರ್ಯನ ಹೆಸರು ಹೇಳಿ ಅನುಗೆ ಮಾನ್ಸಿ ಹರ್ಟ್ ಮಾಡಿದ್ದು ಸರಿನಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಖುಷಿಯಲ್ಲಿದ್ದಾಳೆ. ಆದರೆ ಮನದೊಳಗೆ ಕರುಣಾಕರ ಹಾಗೂ ಅವರ ತಂದೆಯ ಬಗ್ಗೆ ರಹಸ್ಯ ತಿಳಿದುಕೊಳ್ಳುವ ಬಗ್ಗೆಯೇ ಯೋಚಿಸುತ್ತಿರುತ್ತಾಳೆ.

  ಹೀಗಾಗಿ ಕರುಣಾಕರ ಸಿಕ್ಕಾಗಲೆಲ್ಲಾ ಆ ಸಂಪಿಗೆಪುರದ ಆಸ್ತಿಯ ಬಗ್ಗೆ ಕೇಳುತ್ತಿರುತ್ತಾಳೆ. ಕರುಣಾಕರ ಅವರ ತಂದೆಯ ಕೆಲ ಅವ್ಯವಹಾರಗಳ ಬಗ್ಗೆ ಹೇಳಿದ್ದಾನೆ. ಇದನ್ನೆಲ್ಲಾ ಕೇಳಿಸಿಕೊಂಡ ರಮ್ಯಾ ಮತ್ತಷ್ಟು ಮಾಹಿತಿಗಳನ್ನು ನೀಡುವಂತೆ ಹೇಳಿದ್ದಾಳೆ.

  ಕೀರ್ತನಾ ಮಾಡಿದ ಪ್ಲ್ಯಾನ್‌ನಿಂದ ಸಿಡಿದ ಪಟಾಕಿ: ಸೀತಾಗೆ ಏನಾಯ್ತು..?ಕೀರ್ತನಾ ಮಾಡಿದ ಪ್ಲ್ಯಾನ್‌ನಿಂದ ಸಿಡಿದ ಪಟಾಕಿ: ಸೀತಾಗೆ ಏನಾಯ್ತು..?

  ಇನ್ನು ಸಂಜು, ಆರಾಧನಾಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾನೆ. ಇದರಿಂದ ಆರಾಧನಾ ತೀರಾ ಬೇಸರದಲ್ಲಿದ್ದಾಳೆ. ಯಾಕೆ ಸಂಜು ತನ್ನನ್ನು ದೂರ ತಳ್ಳಲು ಕಾರಣವೇನು ಎಂದು ತಿಳಿದುಕೊಳ್ಳಲು ಮುಂದಾಗಿದ್ದಾಳೆ.

   ಆರಾಧನಾಗೆ ಬೇಸರ ಮಾಡಿದ ಸಂಜು

  ಆರಾಧನಾಗೆ ಬೇಸರ ಮಾಡಿದ ಸಂಜು

  ಸಂಜುನನ್ನು ಹುಡುಕುತ್ತಾ ಆರಾಧನಾ ರೀಡಿಂಗ್ ರೂಮ್‌ನತ್ತ ಹೊರಟಿರುತ್ತಾಳೆ. ಈ ವೇಳೆ ದಾರಿಯಲ್ಲಿ ಸಿಗುವ ಮಾನ್ಸಿ ಎಚ್ಚರಿಕೆಯನ್ನು ನೀಡುತ್ತಾಳೆ. ಸಂಜು ಮನಸ್ಸು ಬೇರೆ ಕಡೆ ಹೋಗುತ್ತಿದೆ. ಈ ಮನೆಗೂ ಮದುವೆಯಾದ ಜೋಡಿಗಳಿಗೂ ಸರಿ ಹೋಗಲ್ಲ. ಆದಷ್ಟು ಬೇಗ ಇಲ್ಲಿಂದ ಜಾಗ ಖಾಲಿ ಮಾಡಿ ಎನ್ನುತ್ತಾಳೆ. ಆರಾಧನಾ ಯೋಚಿಸುತ್ತಾ ರೀಡಿಂಗ್ ರೂಮ್‌ಗೆ ಹೋದಾಗ, ಸಂಜು, ಅನು ಜೊತೆ ಮಾತನಾಡಲು ಆರಾಧನಾಳನ್ನು ಅವಾಯ್ಡ್ ಮಾಡುತ್ತಾನೆ. ಇಲ್ಲಿಂದ ಹೋಗಿ ಎಂದು ಬೈಯುತ್ತಾನೆ. ಇದನ್ನೆಲ್ಲಾ ಕೇಳಿಸಿಕೊಂಡ ಅನುಗೆ ಮುಜುಗರವಾಗುತ್ತದೆ. ಆರಾಧನಾಳ ಅನುಮಾನ ಹೆಚ್ಚಾಗುತ್ತದೆ. ನನಗಿಂತ ಕೆಲಸ ಹೆಚ್ಚಾಯ್ತಾ ಎಂದು ಕೇಳಿದ್ದಕ್ಕೆ ಹೌದು ಎಂಬಂತೆ ಸಂಜು ಉತ್ತರ ಕೊಡುತ್ತಾನೆ.

   ಆರ್ಯನ ಬಗ್ಗೆ ಮಾತನಾಡಿ ಬೇಸರ ಮಾಡಿದ ಮಾನ್ಸಿ

  ಆರ್ಯನ ಬಗ್ಗೆ ಮಾತನಾಡಿ ಬೇಸರ ಮಾಡಿದ ಮಾನ್ಸಿ

  ವರ್ಧನ್ ಕುಟುಂಬಕ್ಕೆ ಆಫೀಸಿನಲ್ಲಿ ಆಗಿರುವ ಅನ್ಯಾಯದ ಬಗ್ಗೆ ಸಂಜು, ಅನುಗೆ ಹೇಳುತ್ತಾನೆ. ಸಂಪಿಗೆಪುರದಲ್ಲಿರುವ ವರ್ಧನ್ ಕುಟುಂಬದ ಆಸ್ತಿ ಸೇಲ್ ಆಗಿರುವ ಬಗ್ಗೆ ಹೇಳುತ್ತಾನೆ. ಇದು ವರ್ಧನ್ ಕುಟುಂಬಕ್ಕೂ, ಆಫೀಸಿನಲ್ಲೂ ಯಾರ ಗಮನಕ್ಕೂ ಬಂದಿಲ್ಲ. ಹಾಗೆ ಮಾರಾಟವಾಗಿದೆ. ರತ್ನಾಕರ ಎಂಬಾತ ಈ ಬಂಗಲೆಯನ್ನು ಖರೀದಿಸಿದ್ದಾನೆ ಎಂದು ಸಂಜು ಹೇಳುತ್ತಾನೆ. ಈ ಬಗ್ಗೆ ಅನು ಆಫೀಸಿಗೆ ಫೋನ್ ಮಾಡಿ ನಿಜಾಂಶವನ್ನು ತಿಳಿದುಕೊಳ್ಳುತ್ತಾಳೆ. ಇನ್ನು ರಮ್ಯಾ ಎಂಗೇಜ್ ಮೆಂಟ್ ಇರುವ ಹಿನ್ನೆಲೆ, ಅನು ಆಫೀಸಿಗೆ ಬರುತ್ತಿಲ್ಲ. ಆಫೀಸಿನಲ್ಲಿ ನಡೆಯುವ ವ್ಯವಹಾರದ ಬಗ್ಗೆ ಕೊಂಚ ಎಚ್ಚರಿಕೆಯಿಂದ ಇರುವಂತೆ ಹರ್ಷನ ಬಳಿ ಹೇಳುತ್ತಿರುತ್ತಾಳೆ. ಇದೇ ವೇಳೆಗೆ ಬಂದ ಮಾನ್ಸಿ, ಅನುಗೆ ಅವಮಾನ ಮಾಡುತ್ತಾಳೆ. ನಿನ್ನ ಗಂಡ ಆರ್ಯನಿಂದ ತಾನೇ ಆಫೀಸಿನಲ್ಲಿ ಅವ್ಯವಹಾರ ನಡೆಯುತ್ತಿರುವುದು ಎಂದು ಹೇಳುತ್ತಾಳೆ. ಇದರಿಂದ ಬೇಸರಗೊಂಡ ಅನು ಅಲ್ಲಿಂದ ಹೊರಡುತ್ತಾಳೆ.

   ಆತಂಕಗೊಂಡ ಆರಾಧನಾ

  ಆತಂಕಗೊಂಡ ಆರಾಧನಾ

  ಇನ್ನು ಅನು ಬೇಸರದಲ್ಲಿ ಹೋಗುವಾಗ ಆರಾಧನಾ ಎದುರಿಗೆ ಬರುತ್ತಾಳೆ. ಸಂಜು ಮನೆಯಲ್ಲಿ ಕಾಣುತ್ತಿಲ್ಲ. ರಾತ್ರಿಯೆಲ್ಲಾ ಕಾದರೂ ಸಂಜು ರೂಮಿಗೆ ಬರದೇ ಸ್ಟಡಿ ರೂಮ್ ನಲ್ಲೇ ಇದ್ದ ಎಂದು ಹೇಳುತ್ತಾಳೆ. ಆಗ ಹೊಸಮನಿ ಅಜ್ಜಯ್ಯ ಬಂದು, ಸಂಜು ಬೆಳಗ್ಗೆನೇ ಕೆಲಸವಿದೆ ಎಂದು ಹೇಳಿ ಹೊರಗಡೆ ಹೋದರು ಎನ್ನುತ್ತಾರೆ. ಆಗ ನನಗೆ ಹೇಳದೇ ಹೋಗಿದ್ದಾನೆ ಎಂದು ಆರಾಧನಾ ಆತಂಕಕ್ಕೆ ಒಳಗಾಗುತ್ತಾಳೆ.

   ಅನುಗೆ ಬೇರೆ ಮದುವೆ ಮಾಡುತ್ತಾರಾ..?

  ಅನುಗೆ ಬೇರೆ ಮದುವೆ ಮಾಡುತ್ತಾರಾ..?

  ಇನ್ನು ಪುಷ್ಪಾ, ಜೋಗ್ತವ್ವ ಹೇಳಿದ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಸುಬ್ಬು ಎಷ್ಟು ಜೋಕ್ ಮಾಡಿದರೂ ನಗದ ಪುಷ್ಪಾ, ಜೋಗ್ತವ್ವ ಹೇಳಿದ್ದನ್ನೆಲ್ಲಾ ಹೇಳುತ್ತಾಳೆ. ಅದಕ್ಕೆ ಸುಬ್ಬು, ಜೋಗ್ತವ್ವ ಕೂಡ ಅನುಗೆ ಎರಡನೇ ಮದುವೆ ಮಾಡುವ ಬಗ್ಗೆಯೇ ಮಾತನಾಡಿರುವುದು. ಅವಳು ಮುತ್ತೈದೆ ಎಂದರೆ ಇನ್ನೇನು ಅರ್ಥ ಎಂದು ಸುಬ್ಬು ಹೇಳುತ್ತಾನೆ. ಇದಕ್ಕೆ ಪುಷ್ಪಾ ಸ್ವಲ್ಪ ಕೋಪ ಕೂಡ ಮಾಡಿಕೊಳ್ಳುತ್ತಾಳೆ. ಹಾಗಾದರೆ, ಅನುಗೆ ಸುಬ್ಬು ಮತ್ತು ಪುಷ್ಪಾ ಸೇರಿ ಎರಡನೇ ಮದುವೆ ಮಾಡುತ್ತಾರಾ..?

  ಸಿರಿ ಹಾಗೂ ತುಳಸಿ ಮಧ್ಯೆ ಬೆಳೆಯುತ್ತಿದೆ ಬಾಂಧವ್ಯ!ಸಿರಿ ಹಾಗೂ ತುಳಸಿ ಮಧ್ಯೆ ಬೆಳೆಯುತ್ತಿದೆ ಬಾಂಧವ್ಯ!

  English summary
  jothe jotheyali Serial 14th november Episode Written Update. mansi blames arya for loss in company in front of anu. This makes anu feel bad and she cries.
  Monday, November 14, 2022, 19:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X