For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಕರುಣಾಕರ ಹೇಳಿದ ಸಂಪಿಗೆಪುರದ ಬಂಗಲೆಯ ಆ ರಹಸ್ಯವೇನು..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ರಮ್ಯಾಳ ಎಂಗೇಜ್‌ಮೆಂಟ್‌ಗಾಗಿ ಎರಡು ದಿನ ಮೊದಲೇ ವಠಾರಕ್ಕೆ ಹೊರಟು ನಿಂತಿದ್ದಾಳೆ. ಅನುಗೆ ಶಾರದಾ ದೇವಿ ಸೀರೆಯನ್ನು ಕೊಟ್ಟು ಎಂಗೇಜ್‌ಮೆಂಟ್‌ಗೆ ಬರುವುದಕ್ಕೆ ಆಗೋದಿಲ್ಲ. ಮನೆಯಲ್ಲಿ ನೆಂಟರಿದ್ದಾರೆ. ಈ ಉಡುಗೊರೆಯನ್ನು ರಮ್ಯಾ ಕೊಡಲು ಹೇಳಿದ್ದಾಳೆ.

  ಅಲ್ಲದೇ, ಪ್ರಿಯದರ್ಶಿನಿ ಹಾಗೂ ಆರಾಧನಾ ನಡುವೆ ಏನೋ ಮನಸ್ತಾಪವಿದೆ. ಈ ಬಗ್ಗೆ ನಾನೇ ಕೂತು ಬಗೆಹರಿಸುತ್ತೇನೆ. ಬಂದಾಗಿನಿಂದ ಪ್ರಿಯದರ್ಶನಿ, ಆರಾಧನಾ ಅವರ ಜೊತೆಗೆ ಮಾತನಾಡಿಲ್ಲ ಎಂದು ಶಾರದಾ ದೇವಿ ಹೇಳುತ್ತಾಳೆ.

  ವೇದಾಂತ್ ಕಿಡ್ನಾಪ್‌? ಮೋಸದ ಜಾಲದಲ್ಲಿ ಸಿಲುಕಿರುವ ಮನೆ ಮಂದಿವೇದಾಂತ್ ಕಿಡ್ನಾಪ್‌? ಮೋಸದ ಜಾಲದಲ್ಲಿ ಸಿಲುಕಿರುವ ಮನೆ ಮಂದಿ

  ಸಂಜು ಮನೆಯಲ್ಲಿ ಯಾರಿಗೂ ಹೇಳದೇ ಹೋಗಿರುವುದಕ್ಕೆ ಆರಾಧನಾ, ವಿಶು ಮೊದಲು ಹೀಗಿರಲಿಲ್ಲ. ನನ್ನ ವಿಶೂ ಎಂದು ಅನಿಸುತ್ತಿಲ್ಲ ಎಂದು ಹೇಳುತ್ತಾಳೆ. ಸಂಜುವಿನಲ್ಲಿ ಆಗಿರುವ ಬದಲಾವಣೆಯನ್ನು ಆರಾಧನಾ ಬೇಸರ ಮಾಡಿಕೊಳ್ಳುತ್ತಾಳೆ.

  ಸಂಜು ಕೂಡ ಆರ್ಯನಂತೆಯೇ ಎಂದ ಮಾನ್ಸಿ

  ಸಂಜು ಕೂಡ ಆರ್ಯನಂತೆಯೇ ಎಂದ ಮಾನ್ಸಿ

  ಈ ಮಾತನ್ನು ಕೇಳಿದ ಮಾನ್ಸಿ ಮಧ್ಯೆ ಮಾತನಾಡುತ್ತಾಳೆ. ಆರ್ಯ ಬ್ರೋ ಕೂಡ ಹಾಗೆ ಇದ್ದರು. ಅವರು ಯಾವಾಗ ಎಲ್ಲಿಗೆ ಹೋಗುತ್ತಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಮನೆಯವರ ಬಳಿ ಏನನ್ನೂ ಹೇಳುತ್ತಿರಲಿಲ್ಲ ಎಂದು ಹೇಳುತ್ತಾಳೆ. ಈ ಮಾತಿಗೆ ಶಾರದಾ ಬೈಯುತ್ತಾಳೆ. ಯಾವಾಗ ಏನು ಮಾತನಾಡಬೇಕು ಎಂಬುದೇ ಗೊತ್ತಾಗುವುದಿಲ್ಲ ಎನ್ನುತ್ತಾಳೆ. ಇನ್ನು ಆರಾಧನಾ, ಸಂಜು ಬಂದ ಕೂಡಲೇ ನಮ್ಮನ್ನ ಇಲ್ಲಿಂದ ಕಳಿಸಿಕೊಡಿ. ನನಗೆ ಇಲ್ಲಿ ಉಸಿರು ಕಟ್ಟಿದಂತೆ ಆಗುತ್ತಿದೆ. ನಾವು ಇಲ್ಲಿಂದ ಹೊರಡುತ್ತೇವೆ ಎಂದು ಹೇಳುತ್ತಾಳೆ. ಅದಕ್ಕೆ ಅನು, ನಾನು ಎಂಗೇಜ್‌ಮೆಂಟ್‌ನಿಂದ ಬಂದ ಮೇಲೆ ಹೋಗಿ ಎಂದು ರಿಕ್ವೆಸ್ಟ್ ಮಾಡುತ್ತಾಳೆ.

  ಸಂಜುಗೆ ಬುದ್ಧಿ ಹೇಳಿದ ಝೇಂಡೇ

  ಸಂಜುಗೆ ಬುದ್ಧಿ ಹೇಳಿದ ಝೇಂಡೇ

  ಸಂಜು ಸಂಪಿಗೆಪುರದ ಬಳಿ ದಾರಿಯಲ್ಲಿ ನಿಂತಿರುತ್ತಾನೆ. ಅವನನ್ನು ಕಂಡ ಝೇಂಡೇ ಕಾರನ್ನು ನಿಲ್ಲಿಸಿ ಮಾತನಾಡಿಸುತ್ತಾನೆ. ಆಫೀಸಿನಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಂತೆ ಎಂದು ಕೇಳುತ್ತಾನೆ. ಆದರೆ ಸಂಜು ಆತನನ್ನು ಅನುಮಾನದಿಂದಲೇ ನೋಡುತ್ತಿರುತ್ತಾನೆ. ಇನ್ನು ಆರ್ಯನ ಮನೆಯವರು ಯಾರೂ ಸರಿ ಇಲ್ಲ. ಎಲ್ಲರೂ ಆರ್ಯನನ್ನು ಬಳಸಿಕೊಂಡು ಆ ಮನೆಯವರೇ ಅವನನ್ನು ಕೊಂದರು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಂಜು ಶಾಕ್ ಆಗುತ್ತಾನೆ. ಝೇಂಡೇ, ಸಂಜುಗೆ ಎಚ್ಚರದಿಂದಿರಲು ಹೇಳಿ ಹೋಗುತ್ತಾನೆ. ನಂತರ ಸಂಜು ಸಂಪಿಗೆಪುರದಲ್ಲಿರುವ ವರ್ಧನ್ ಕುಟುಂಬದ ಬಂಗಲೆಯನ್ನು ನೋಡಲು ಹೋಗುತ್ತಾನೆ. ಅಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಾನೆ.

  ಆರಾಧನಾಳನ್ನು ಭೇಟಿ ಮಾಡಿದ ಪ್ರಿಯದರ್ಶಿನಿ

  ಆರಾಧನಾಳನ್ನು ಭೇಟಿ ಮಾಡಿದ ಪ್ರಿಯದರ್ಶಿನಿ

  ಪ್ರಭು ದೇಸಾಯಿ, ಪ್ರಿಯದರ್ಶಿನಿಗೆ ಟೀ ತೆಗೆದುಕೊಂಡು ಹೋಗುತ್ತಿರುತ್ತಾನೆ. ಈ ವೇಳೆಗೆ ಬಂದ ಆರಾಧನಾ ನಾನೇ ತೆಗೆದುಕೊಂಡು ಹೋಗುತ್ತೀನಿ ಎಂದು ಹೇಳುತ್ತಾಳೆ. ಪ್ರಭು ಬೇಡ ಎನ್ನುವಷ್ಟರಲ್ಲಿ ಅಲ್ಲಿಗೆ ಪ್ರಿಯದರ್ಶಿನಿ ಬರುತ್ತಾಳೆ. ಆರಾಧನಾಳನ್ನು ಮಾತನಾಡಿಸುತ್ತಾಳೆ. ನಂತರ ನೀನು ನನ್ನ ಮಗನನ್ನು ಕರೆದುಕೊಂಡು ಹೋಗಬೇಡ. ಅವನು ಇಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳಲಿ ಎಂದು ಹೇಳುತ್ತಾಳೆ. ಅದು ಹೇಗೆ ಸಾಧ್ಯ ಎಂದು ಆರಾಧನಾ ಕೇಳಿದ್ದಕ್ಕೆ, ವೈದ್ಯರು ಏನು ಹೇಳುತ್ತಾರೋ ಹಾಗೆ ಮಾಡೋಣ ಎನ್ನುತ್ತಾಳೆ. ಆರಾಧನಾ ಕೂಡ ವೈದ್ಯರ ಬಳಿ ಬರುತ್ತೀನಿ ಎಂದಿದ್ದಕ್ಕೆ ಪ್ರಿಯದರ್ಶಿನಿ ಬೇಡ ಎನ್ನುತ್ತಾಳೆ.

  ಅನುಗೆ ಸತ್ಯ ಹೇಳುತ್ತಾಳಾ..?

  ಅನುಗೆ ಸತ್ಯ ಹೇಳುತ್ತಾಳಾ..?

  ಇನ್ನು ರಮ್ಯಾ ಮತ್ತು ಕರುಣಾಕರ ಮಾತನಾಡುವಾಗ ಬಂಗಲೆ ಬಗ್ಗೆ ಕೇಳುತ್ತಾಳೆ. ಕೇಶವ, ಝೇಂಡೇ ಎಂಬುವರ ಬ್ಲ್ಯಾಕ್ ಮನಿಯಿಂದ ಅಪ್ಪ ಅದನ್ನು ಖರೀದಿಸಿದ್ದಾರೆ ಎಂದು ಕರುಣಾಕರ ಹೇಳುತ್ತಾನೆ. ಬಳಿಕ ಅದನ್ನು ಆಫೀಶಿಯಲ್ ಆಗಿ ಝೇಂಡೇ ಅವರಿಗೆ ಕೊಟ್ಟಿದ್ದಾರೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ರಮ್ಯಾ ಶಾಕ್ ಆಗುತ್ತಾಳೆ. ಈ ಸತ್ಯವನ್ನು ರಮ್ಯಾ, ಅನುಗೆ ಹೇಳುತ್ತಾಳಾ, ಇಲ್ಲ ತನ್ನ ಮಾವನ ವ್ಯವಹಾರ ಎಂದು ಸುಮ್ಮನಾಗುತ್ತಾಳಾ..?

  English summary
  jothe jotheyali Serial 15th november Episode Written Update. priyadarshini talks aradhana but she tries to avoid her. Sanju meets jhende and hears shocking matter.
  Tuesday, November 15, 2022, 20:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X