For Quick Alerts
  ALLOW NOTIFICATIONS  
  For Daily Alerts

  ರತ್ನಾಕರ ರೆಡ್ಡಿ-ಝೇಂಡೇ ಬಣ್ಣ ಬಯಲು ಮಾಡುತ್ತಾಳಾ ರಮ್ಯಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ವರ್ಧನ್ ಮನೆಯಲ್ಲಿ ಸಂಜು ಎಲ್ಲಿದ್ದಾನೆ ಎಂಬುದು ತಿಳಿಯದೇ ಚಿಂತೆಗೀಡಾಗಿದ್ದಾರೆ. ಆರಾಧನಾ ಅಂತೂ ಇಲ್ಲಿಗೆ ಬರಲೇ ಬಾರದಿತ್ತೇನೋ ಎನ್ನುವಷ್ಟು ಯೋಚನೆ ಮಾಡುತ್ತಿದ್ದಾರೆ.

  ಹರ್ಷ ಬಂದು ಆರಾಧನಾಗೆ ಸಂಜು ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳುತ್ತಾನೆ. ಸಂಜು ವಠಾರದಲ್ಲಿ ಇದ್ದಾರೆ. ಯಾವುದೋ ಕೆಲಸದ ಮೇಲೆ ವಠಾರಕ್ಕೆ ಹೋಗಿದ್ದರಂತೆ. ಆಗ ಅಲ್ಲಿ ರಮ್ಯಾ ಎಂಗೇಜ್‌ಮೆಂಟ್ ಹಿನ್ನೆಲೆ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನುತ್ತಾನೆ.

  BBK9 : ದಿವ್ಯಾ ಉರುಡುಗಗೆ ತುಂಬಾ ಬೇಕಾದವರಿಗೆ ಹೆಚ್ಚು ಕಡಿಮೆಯಾಗುತ್ತೇನೋ ಅನ್ನೋ ಆತಂಕ!BBK9 : ದಿವ್ಯಾ ಉರುಡುಗಗೆ ತುಂಬಾ ಬೇಕಾದವರಿಗೆ ಹೆಚ್ಚು ಕಡಿಮೆಯಾಗುತ್ತೇನೋ ಅನ್ನೋ ಆತಂಕ!

  ಸಂಜು ವಠಾರದಲ್ಲಿ ಸೇಫ್ ಆಗಿದ್ದಾರೆ. ವರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹರ್ಷ ಹೇಳುತ್ತಾನೆ. ಈ ಮಾತನ್ನು ಕೇಳಿದ ಆರಾಧನಾಳಿಗೆ ಮತ್ತಷ್ಟು ಬೇಸರ ವಾಗುತ್ತದೆ. ನನಗನ್ನಿಸುತ್ತೆ ನನ್ನನ್ನು ಇಲ್ಲಿ ಬಕ್ರಾ ಮಾಡಲಾಗುತ್ತಿದೆ ಅಂತ ಹೇಳಿ ಹೊರಟು ಬಿಡುತ್ತಾಳೆ.

  ಆರಾಧನಾ ಬೇಡ ಎಂದ ಸಂಜು

  ಆರಾಧನಾ ಬೇಡ ಎಂದ ಸಂಜು

  ಅನು, ಸಂಜುಗೆ ಬೈದು ಮನೆಗೆ ಹೋಗುವಂತೆ ಹೇಳಿರುತ್ತಾಳೆ. ಆದರೆ, ಸಂಜು ಮನೆಗೆ ಹೋಗಲಾರದೇ, ಸುಮ್ಮನಿದ್ದಾನೆ. ಸಂಜುನನ್ನು ಪುಷ್ಪಾ ಮತ್ತು ಸುಬ್ಬು ಪ್ರಶ್ನೆ ಮಾಡಿದ್ದಕ್ಕೆ ಅಳುತ್ತಾ ನನಗೆ ಆರಾಧನಾ ಬೇಡ ಎನ್ನುತ್ತಾನೆ. ನನಗೆ ಆರಾಧನಾಳನ್ನು ನೋಡಿದರೆ ನನ್ನ ಹೆಂಡತಿ ಅಂತ ಅನಿಸುವುದೇ ಇಲ್ಲ. ಆ ಮನೆಯಲ್ಲಿ ನನಗೆ ಉಸಿರು ಕಟ್ಟಿದಂತೆ ಆಗುತ್ತದೆ. ನನಗೆ ಇಲ್ಲಿರುವುದಕ್ಕೆ ಇಷ್ಟ ಎಂದು ಹೇಳುತ್ತಾನೆ. ಈ ಮಾತುಗಳನ್ನೆಲ್ಲಾ ಕೇಳಿ ಪುಷ್ಪಾ ಮತ್ತು ಸುಬ್ಬು ಇಬ್ಬರೂ ಶಾಕ್ ಆಗುತ್ತಾರೆ.

  ಅನುಗೆ ಬೇಸರ ಮಾಡಿದ ರಜಿನಿ

  ಅನುಗೆ ಬೇಸರ ಮಾಡಿದ ರಜಿನಿ

  ಅನು, ರಮ್ಯಾಳನ್ನು ರೆಡಿ ಮಾಡಿ ಬಾಗಿಲಲ್ಲಿ ಸುಮ್ಮನೆ ನಿಂತಿರುತ್ತಾಳೆ. ಆಗ ರಜಿನಿ ಬಂದು ಹುಡುಗನ ಕಡೆಯವರು ಬರುವ ಸಮಯವಾಯ್ತು. ನೀನು ಅವರ ಎದುರಿಗೆ ಬರಬೇಡ ಅಪಶಕುನ ಎಂದು ಹೇಳಿ ಹೋಗುತ್ತಾಳೆ. ಈ ಮಾತನ್ನು ಕೇಳಿ ಅನುಗೆ ಬೇಸರವಾಗುತ್ತದೆ. ಆದರೆ, ಸಂಪತ್ ಬಂದು ಅನುಗೆ ಸಮಾಧಾನ ಮಾಡುತ್ತಾನೆ. ಇನ್ನು ಹುಡುಗನ ಕಡೆಯವರು ಬಂದ ಮೇಲೆ ತಾಂಬೂಲ ಬದಲಾಯಿಸಿಕೊಳ್ಳಲು ರತ್ನಾಕರ ರೆಡ್ಡಿ ನಮ್ಮ ಕಡೆಯವರು ಒಬ್ಬರು ಬರುವವರೆಗೂ ಕಾಯಿರಿ ಎಂದು ಹೇಳುತ್ತಾನೆ. ಇತ್ತ ಗೇಟ್ ಬಳಿ ಝೇಂಡೇ ಬಂದಿರುತ್ತಾನೆ.

  ಝೇಂಡೇನ ಬೈದ ಅನು

  ಝೇಂಡೇನ ಬೈದ ಅನು

  ಇನ್ನು ಸಂಜುಗೆ ಝೇಂಡೇ ಎದುರಾಗುತ್ತಾನೆ. ಆಗ ಸಂಜು, ಝೇಂಡೇಗೆ ಬೈಯುತ್ತಾನೆ. ನೀನು ಇಲ್ಲಿಗೆ ಯಾಕೆ ಬಂದೆ ಎಂದು ಗೊತ್ತು. ಅನುಗೆ ತೊಂದರೆ ಮಾಡುವುದಕ್ಕೋಸ್ಕರ ತಾನೇ ರಾತ್ರಿ ಕೂಡ ವಠಾರಕ್ಕೆ ಬಂದಿದ್ದು. ನಾನು ಆಚೆ ಮಲಗಿದ್ದನ್ನ ನೋಡಿ, ಯಾರೋ ಇದ್ದಾರೆ ಎಂದು ಹೋದೆ ಅಲ್ವಾ ಎಂದು ಬೈಯುತ್ತಿರುತ್ತಾನೆ. ಈ ವೇಳೆಗೆ ಅನು ಅಲ್ಲಿಗೆ ಬರುತ್ತಾಳೆ. ಝೇಂಡೇ ಅನ್ನು ನೋಡಿ, ಶಾಕ್ ಆಗುತ್ತಾಳೆ. ಅಷ್ಟೊತ್ತಿಗೆ ಝೇಂಡೇ, ಸಂಜುನನ್ನು ಆರ್ಯ ಎಂದು ಕೂಗುತ್ತಾನೆ. ಆಗ ಸಿಟ್ಟಾದ ಅನು ಆರ್ಯ ಹೆಸರು ಹೇಳೋ ಯೋಗ್ಯತೆ ನಿಮಗಿಲ್ಲ ಇಲ್ಲಿಂದ ಮೊದಲು ಹೊರಡಿ ಎಂದು ಬೈಯುತ್ತಾಳೆ.

  ಅನುಗೆ ಬೈದ ರತ್ನಾಕರ ರೆಡ್ಡಿ

  ಅನುಗೆ ಬೈದ ರತ್ನಾಕರ ರೆಡ್ಡಿ

  ಈ ವೇಳೆಗೆ ಬಂದ ರತ್ನಾಕರ ರೆಡ್ಡಿ, ನನ್ನ ಸ್ನೇಹಿತನಿಗೇ ಬೈತೀಯಾ ಎಂದು ಕೂಗಾಡುತ್ತಾನೆ. ಇದೇನಾ ಸಂಸ್ಕೃತಿ ಎಂದು ಹೇಳುತ್ತಾನೆ. ಈ ಮಾತಿನಿಂದ ಸಿಟ್ಟಾದ ರಮ್ಯಾ, ರತ್ನಾಕರ ರೆಡ್ಡಿಗೆ ಬೈಯುತ್ತಾಳೆ. ಕಳ್ಳರು. ಇನ್ನೊಬ್ಬರ ಹಣ ದೋಚುವವರು, ಕಂಡವರ ಆಸ್ತಿ ಮೇಲೆ ಕಣ್ಣು ಹಾಕಿರುವವರು. ನೀವು ಸಂಸ್ಕೃತಿ ಬಗ್ಗೆ ಪಾಠ ಹೇಳಬೇಡಿ ಎನ್ನುತ್ತಾಳೆ. ರಮ್ಯಾ ಆಡಿದ ಮಾತುಗಳಿಂದ ಎಂಗೇಜ್‌ಮೆಂಟ್ ನಿಂತು ಹೋಗುತ್ತಾ..? ರಮ್ಯಾ, ಝೇಂಡೇ ಮಾಡಿರುವ ಕೆಲಸವನ್ನು ಹೇಳಿ ಬಿಡುತ್ತಾಳಾ..?

  English summary
  jothe jotheyali Serial 23th november Episode Written Update. jhende comes for ramya engagement. Anu and sanju scolds jhende. Rathnakara supports jhende.
  Thursday, November 24, 2022, 17:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X