For Quick Alerts
  ALLOW NOTIFICATIONS  
  For Daily Alerts

  ವೈದ್ಯರ ಮಾತನ್ನು ಕೇಳಿ ಆರ್ಯ ಬದುಕಿದ್ದಾನೆ ಎಂಬ ಸತ್ಯವನ್ನು ಪ್ರಿಯದರ್ಶಿನಿ ಮುಚ್ಚಿಡುತ್ತಾಳಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು ದಾರಿ ತಪ್ಪಿ ತನಗೇ ಗೊತ್ತಿಲ್ಲದೇ ಕಮಲಮ್ಮನ ವಾರಕ್ಕೆ ಬಂದಿದ್ದಾನೆ. ಬಂದು ಎಲ್ಲಿಗೆ ಬಂದೆ, ಇದು ನನಗೆ ಮೊದಲೇ ಗೊತ್ತಿರುವ ಜಾಗವೇ ಎಂದು ಯೋಚಿಸುತ್ತಿದ್ದಾನೆ. ಈಗ ಎಲ್ಲಿಗೆ ಹೋಗಬೇಕು, ಇದು ಯಾರ ಮನೆ ಎಂಬುದೇ ಗೊತ್ತಿಲ್ಲ.

  ಪ್ರಭು ದೇಸಾಯಿ ಮತ್ತು ಪ್ರಿಯದರ್ಶಿನಿ ಇಬ್ಬರೂ ವೈದ್ಯರ ಬಳಿ ಹೋಗಿದ್ದಾರೆ. ಸಂಜು ಬಗ್ಗೆ ವೈದ್ಯರ ಬಳಿ ಮಾತನಾಡುತ್ತಾ ಯಾವಾಗ ಸಂಜುನೇ ಆರ್ಯ ಎಂದು ಹೇಳಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದಾರೆ.

  ಬೆಟ್ಟದ ಹೂ: ಹೂವಿ ತಾಯಿಗೆ ಸತ್ಯ ಗೊತ್ತಾಯ್ತು.. ಮುಂದೇನು ಮಾಡುತ್ತಾಳೆ..?ಬೆಟ್ಟದ ಹೂ: ಹೂವಿ ತಾಯಿಗೆ ಸತ್ಯ ಗೊತ್ತಾಯ್ತು.. ಮುಂದೇನು ಮಾಡುತ್ತಾಳೆ..?

  ಅನು ಪ್ರತಿಯೊಂದು ವಿಚಾರದಲ್ಲೂ ಆರ್ಯನನ್ನು ನೆನಪು ಮಾಡಿಕೊಂಡು ಅಳುತ್ತಿದ್ದಾಳೆ. ಫ್ರಿಡ್ಜ್ ಕೆಟ್ಟು ಹೋಗಿದ್ದಕ್ಕೆ, ಅನು ಮತ್ತೆ ಆರ್ಯನನ್ನು ನೆನಪು ಮಾಡಿಕೊಂಡಿದ್ದಾಳೆ.

  ಅನು ಮನೆಗೆ ಬಂದ ಸಂಜು

  ಅನು ಮನೆಗೆ ಬಂದ ಸಂಜು

  ವಠಾರದಲ್ಲಿ ಒಬ್ಬನೇ ನಿಂತಿದ್ದ ಸಂಜುವನ್ನು ನೋಡಿದ ಸುಬ್ಬು ಅವರು ಅವನನ್ನು ಮಾತನಾಡಿಸುತ್ತಾರೆ. ಸಂಜು ನಾನು ಆಸ್ಪತ್ರೆಯಿಂದ ಮನೆಗೆ ಹೋಗಬೇಕಿತ್ತು. ದಾರಿ ತಪ್ಪಿದ್ದೀನಿ, ಬಸ್ ಸ್ಟಾಪ್ ಎಲ್ಲಿದೆ ಅಂತ ಕೇಳುತ್ತಾನೆ. ಆಗ ಸುಬ್ಬು ಸರಿ ಸದ್ಯ ಇದು ನಮ್ಮ ಮನೆ ಬನ್ನಿ ಅಂತ ಸುಬ್ಬು ಮನೆಗೆ ಕರೆದುಕೊಂಡು ಬಂದಿದ್ದಾರೆ. ಸಂಜುನನ್ನು ಅನು, ಪುಷ್ಪಾ ಇಬ್ಬರೂ ನೋಡಿ ಶಾಕ್ ಆಗುತ್ತಾರೆ. ಸಂಜು ಇಲ್ಲಿಗೆ ಹೇಗೆ ಬಂದ ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ. ಸಂಜು ದಾರಿ ತಿಳಿಯದೇ ನಾನೇ ಇಲ್ಲಿಗೆ ಬಂದೆ, ಬಟ್ ಅದು ಹೇಗೆ ಇದು ನಿಮ್ಮ ಮನೆಗೆ ಬಂದೆ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾನೆ. ಆಗ ಅನು ಸರಿ ನಾನು ಮನೆಗೆ ಫೋನ್ ಮಾಡುತ್ತೀನಿ. ಕಾರು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ.

  ಅರ್ಧಾಂಗಿ: ಮೈತ್ರಿ ಫ್ಲ್ಯಾನ್ ಫ್ಲಾಪ್.. ಅದಿತಿ ಜೊತೆಗಿದ್ದಾಳೆ ರೇಣುಕಾ ದೇವಿ!ಅರ್ಧಾಂಗಿ: ಮೈತ್ರಿ ಫ್ಲ್ಯಾನ್ ಫ್ಲಾಪ್.. ಅದಿತಿ ಜೊತೆಗಿದ್ದಾಳೆ ರೇಣುಕಾ ದೇವಿ!

  ಮಾನ್ಸಿ ಜೊತೆ ಕೈ ಜೋಡಿಸಿದ ಮೀರಾ

  ಮಾನ್ಸಿ ಜೊತೆ ಕೈ ಜೋಡಿಸಿದ ಮೀರಾ

  ಮಾನ್ಸಿ ಈಗ ಸಂಜು ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಳೆ. ಸಂಜು ಹಾಗೂ ಅವರ ಹೆಂಡತಿ ನಂಬರ್ ನನ್ನ ಬಳಿ ಇದೆ. ಆ ನಂಬರ್‌ನಿಂದ ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯಬಹುದಾ ಎಂದು ಮೀರಾಳನ್ನು ಕೇಳುತ್ತಾಳೆ. ಮೀರಾ ಕಂಡು ಹಿಡಿಯಬಹುದು ಎಂದು ಹೇಳಿದಾಗ, ಹರ್ಷ, ಮೀರಾಗೆ ನೀನು ಮಾನ್ಸಿ ಜೊತೆ ಸೇರಿದ್ಯಾ ಎನ್ನುತ್ತಾನೆ. ಅದಕ್ಕೆ ಮೀರಾ ಅವರು ಯಾವಾಗ ಆರ್ಯ ಸರ್ ನಂಬರ್ ಹೇಳಿದರೋ ಆಗಲೇ ನನಗೂ ಡೌಟ್ ಬಂತು. ಅವರ ಹಿಂದೆ ಏನೋ ರಹಸ್ಯವಿದೆ ಎಂದು ಹೇಳುತ್ತಾಳೆ.

  ಶುಂಠಿ ಟೀ ಕುಡಿದು ಗುರುತು ಹಿಡಿದ ಸಂಜು

  ಶುಂಠಿ ಟೀ ಕುಡಿದು ಗುರುತು ಹಿಡಿದ ಸಂಜು

  ಪುಷ್ಪಾ ಸಂಜುಗೆ ಶುಂಠಿ ಟೀ ಅನ್ನು ಮಾಡಿಕೊಡುತ್ತಾಳೆ. ಸಂಜು ಟೀ ಕುಡಿಯುತ್ತಾನೆ. ಕುಡಿಯುತ್ತಿದ್ದಂತೆ ಇದು ಶುಂಠಿ ಟೀ ಎಂದು ಹೇಳಿ, ಹೊಗಳುತ್ತಾನೆ. ಅಲ್ಲದೇ, ಈ ಕುಡಿದಿದ್ದೀರಾ ಎಂದು ಕೇಳಿದ್ದಕ್ಕೆ, ಅದೇನೋ ಗೊತ್ತಿಲ್ಲ. ಆದರೆ ಈ ಕುಡಿದಿದ್ದಕ್ಕೆ ನನಗೆ ನನ್ನ ನೆನಪೆಲ್ಲವನ್ನೂ ತುಂಬಿ ಕೊಟ್ಟಂತೆ ಆಯ್ತು ಎಂದು ಹೇಳುತ್ತಾನೆ. ಆಗ ಪುಷ್ಪಾ ನನ್ನ ಅಳಿಯಂದಿರು ಬಿಟ್ಟರೆ, ನೀವೇ ನಾನು ಮಾಡಿದ ಟೀಯನ್ನು ಹೊಗಳಿದ್ದು ಎನ್ನುತ್ತಾಳೆ. ಅನು ಆಗ ಆರ್ಯ ಅವರನ್ನು ನೆನೆದು ಬೇಸರ ಮಾಡಿಕೊಳ್ಳುತ್ತಾಳೆ. ಬಳಿಕ ಅನು ಶಾರದಾಗೆ ಫೋನ್ ಮಾಡಿ ಸಂಜು ಬಂದಿರುವ ವಿಚಾರವನ್ನು ಹೇಳುತ್ತಾಳೆ. ಶಾರದಾ ಕಾರನ್ನು ಕಳಿಸುವುದಾಗಿ ಹೇಳುತ್ತಾಳೆ.

  ಸಂಜುನ ಫಾಲೋ ಮಾಡುತ್ತಿರುವುದು ಯಾರು..?

  ಸಂಜುನ ಫಾಲೋ ಮಾಡುತ್ತಿರುವುದು ಯಾರು..?

  ಇತ್ತ ಆಸ್ಪತ್ರೆಗೆ ಪ್ರಭು ದೇಸಾಯಿ ಹಾಗೂ ಪ್ರಿಯದರ್ಶಿನಿ ಬಂದು, ಆರ್ಯನ ಬಗ್ಗೆ ಮಾತನಾಡುತ್ತಾರೆ. ಸತ್ಯವನ್ನು ಅವರ ಮನೆಯವರಿಗೆ ತಿಳಿಸಬೇಕು ಎಂದಾಗ ವೈದ್ಯರು, ಅದರ ಅವಶ್ಯಕತೆ ಎಷ್ಟಿದೆಯೋ, ಅಷ್ಟೇ ಈ ಸತ್ಯವನ್ನು ಮುಚ್ಚಿಡಬೇಕಾಗಿದೆ. ಆರ್ಯ ಅವರ ಮೇಲೆ ಕೊಲೆ ಯತ್ನವಾಗಿದ್ದು, ಈಗ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಹಾಗಾಗಿ ಆರ್ಯ ಅವರು ಬದುಕಿರುವುದು ತಿಳಿಸದೇ ಇರುವುದು ಒಳ್ಳೆಯದು ಎನ್ನುತ್ತಾರೆ. ಅದಕ್ಕೆ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಇನ್ನು ಸಂಜು ಹಿಂದೆ ಝೇಂಡೇ ಸ್ಪೈ ಬಿಟ್ಟಿದ್ದಾನೆ. ಆ ವ್ಯಕ್ತಿ ಸಂಜು ಎಲ್ಲೇ ಹೋದರೂ ಫಾಲೋ ಮಾಡುತ್ತಿದ್ದಾನೆ. ಈ ವಿಚಾರ ಸಂಜುಗೆ ಗೊತ್ತಾದರೆ ಏನಾಗುತ್ತದೋ ಎಂದು ಕಾದು ನೋಡಬೇಕಿದೆ.

  English summary
  jothe jotheyali Serial 7th october Episode Written Update. sanju comes to anu house and drinks ginger tea. Mansi tries to find out sanju history by taking meera help.
  Sunday, October 9, 2022, 19:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X