For Quick Alerts
  ALLOW NOTIFICATIONS  
  For Daily Alerts

  ಚೊಚ್ಚಲ ಎಪಿಸೋಡ್‌ನಲ್ಲೇ ದಾಖಲೆ ಬರೆದ ಜೂ ಎನ್‌ಟಿಆರ್

  |

  ಜೂನಿಯರ್ ಎನ್‌ಟಿಆರ್‌ಗೆ ಟಿವಿ ಕಾರ್ಯಕ್ರಮ ನಿರೂಪಣೆ ಮಾಡುವುದು ಹೊಸತೇನಲ್ಲ. ಈ ಹಿಂದೆ ಬಿಗ್ ಬಾಸ್ ಅಂತಹ ದೊಡ್ಡ ರಿಯಾಲಿಟಿ ಶೋ ಹೋಸ್ಟ್ ಮಾಡಿದ್ದಾರೆ. ಇದೀಗ, ಬಹಳ ವರ್ಷದ ನಂತರ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ನಂದಮೂರಿ ತಾರಕ್ 'ಎವರು ಮಿಲೋ ಕೋಟೇಶ್ವರಡು' ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

  2017ರಲ್ಲಿ ಎನ್‌ಟಿಆರ್‌ ಚೊಚ್ಚಲ ಬಾರಿಗೆ ಬಿಗ್ ಬಾಸ್ ನಿರೂಪಣೆ ಮಾಡಿದ್ರು. 'ಸ್ಟಾರ್ ಮಾ' ವಾಹಿನಿಯಲ್ಲಿ ಪ್ರಸಾರವಾದ ಮೊದಲ ಆವೃತ್ತಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಹಿಂದೆಯೊಮ್ಮೆ 'ಎವರು ಮಿಲೋ ಕೋಟೇಶ್ವರಡು' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಈಗ ಅವರೇ ನಿರೂಪಣೆ ಮಾಡ್ತಿದ್ದಾರೆ.

  ವಿಶೇಷ ಅತಿಥಿಯೊಡನೆ ಕಿರುತೆರೆಗೆ ಬರುತ್ತಿದ್ದಾರೆ ಜೂ.ಎನ್‌ಟಿಆರ್ವಿಶೇಷ ಅತಿಥಿಯೊಡನೆ ಕಿರುತೆರೆಗೆ ಬರುತ್ತಿದ್ದಾರೆ ಜೂ.ಎನ್‌ಟಿಆರ್

  ಜೂನಿಯರ್ ಎನ್‌ಟಿಆರ್ ನಿರೂಪಣೆ ಮಾಡಿದ ಮೊದಲ ಸಂಚಿಕೆ ಅತಿ ಹೆಚ್ಚು ಟಿಆರ್‌ಪಿ ತಂದುಕೊಟ್ಟಿದೆ. ಈ ಹಿಂದಿನ ನಾಲ್ಕು ಆವೃತ್ತಿಯಲ್ಲೂ ಸಿಗದ ಟಿಆರ್‌ಪಿ ಐದನೇ ಆವೃತ್ತಿ ಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹೌದು, ಎನ್‌ಟಿಆರ್ ಸಾರಥ್ಯದ 'ಎವರು ಮಿಲೋ ಕೋಟೇಶ್ವರಡು' ಶೋಗೆ 11.4 ಟಿಆರ್‌ಪಿ ಅಂಕ ಸಿಕ್ಕಿದೆ.

  ಇದಕ್ಕೂ ಮುಂಚೆ ಮೊದಲನೇ ಆವೃತ್ತಿಯಲ್ಲಿ 9.7 (ನಾಗಾರ್ಜುನ), ಎರಡನೇ ಆವೃತ್ತಿಯಲ್ಲಿ 8.2 (ನಾಗಾರ್ಜುನ), ಮೂರನೇ ಆವೃತ್ತಿಯಲ್ಲಿ 6.72 (ನಾಗಾರ್ಜುನ) ಹಾಗೂ ನಾಲ್ಕನೇ ಆವೃತ್ತಿಯಲ್ಲಿ 3.62 (ಚಿರಂಜೀವಿ) ಟಿಆರ್‌ಪಿ ರೇಟಿಂಗ್ ಸಿಕ್ಕಿತ್ತು.

  ಐದನೇ ಆವೃತ್ತಿಯ ಮೊದಲ ಸಂಚಿಕೆಯಲ್ಲಿ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆರ್‌ಆರ್‌ಆರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವ ಸ್ಟಾರ್‌ ನಟರ ಗೇಮ್ ಶೋನಲ್ಲಿ ಒಟ್ಟಿಗೆ ಭಾಗವಹಿಸಿದರು. ಮೊದಲ ಸ್ಪರ್ಧಿಯಾಗಿ ಭಾಗವಹಿಸಿದ್ದ ರಾಮ್ ಚರಣ್ ತೇಜ 25 ಲಕ್ಷ ರೂಪಾಯಿ ಗೆದ್ದರು. ಗೆದ್ದ ಹಣವನ್ನು ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಗೆ ಕೊಡುವುದಾಗಿ ತಿಳಿಸಿದರು. ಇವರಿಬ್ಬರು ಜುಗಲ್‌ಬಂಧಿಯಲ್ಲಿ ಮೂಡಿಬಂದ ಮೊದಲ ಸಂಚಿಕೆಯ ಟಿಆರ್‌ಪಿ ಈಗ ಟಾಲಿವುಡ್ ಕಿರುತೆರೆಯಲ್ಲಿ ದಾಖಲೆ ಬರೆದಿದೆ.

  ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ಯಾವಾಗ?

  ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ಇಬ್ಬರು ನಟಿಸುತ್ತಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರು ಕುರಿತಾದ ಸಿನಿಮಾ ಇದಾಗಿದೆ. ಅಲ್ಲುರಿ ಸೀತಾರಾಮ ರಾಜು ಮತ್ತು ಕೊಮ್ಮರನ್ ಭೀಮ್ ಪಾತ್ರಗಳಲ್ಲಿ ಇಬ್ಬರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಸರಣ್ ಹಸ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಸ್ಟಾರ್ ಕಲಾವಿದರು ಚಿತ್ರೀಕರಣ ಮುಗಿಸಿದ್ದಾರೆ. ಈ ಹಿಂದೆ ಘೋಷಿಸಿದಂತೆ ಅಕ್ಟೋಬರ್ 13ಕ್ಕೆ ಸಿನಿಮಾ ಬರುವುದು ಅನುಮಾನ. ಈಗ ಹೊಸ ದಿನಾಂಕ ಯಾವುದು ಎಂಬ ಕುತೂಹಲ ಮೂಡಿದೆ.

  English summary
  Evaru Meelo Koteeswarulu hosted by Jr NTR has registered a record TRP of 11.4 points. This is the highest for any season.
  Friday, September 3, 2021, 17:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X