For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಹಳ್ಳಿಹೈದ ರಾಜೇಶ್

  By Rajendra
  |

  ಕಡೆಗೂ ಹಳ್ಳಿ ಹೈದ ರಾಜೇಶ್ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಗುರುವಾರ (ಏ.25) ರಾಜೇಶ್ ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಮನೆಗೆ ಹೊಸ ಅತಿಥಿಯಾಗಿ ಪ್ರವೇಶ ಪಡೆಯುತ್ತಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ 11ನೇ ಅತಿಥಿಯಾಗಿ ಹೆಜ್ಜೆ ಇಡುತ್ತಿದ್ದಾರೆ.

  ಈ ಹಿಂದಿನಿಂದಲೂ ರಾಜೇಶ್ ಬಿಗ್ ಬಾಸ್ ಮನೆಗೆ ಭೇಟಿ ನೀಡಲಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈಗ ಸುದ್ದಿ ಪಕ್ಕಾ ಆಗಿದೆ. ಬಿಗ್ ಬಾಸ್ 31ನೇ ದಿನದ ಎಪಿಸೋಡಿನಲ್ಲಿ ರಾಜೇಶ್ ಎಂಟ್ರಿ ಬಗ್ಗೆ ಸೂಚನೆ ನೀಡಿದ್ದಾರೆ.

  ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ರಾಜೇಶ್ ಬಿಗ್ ಬಾಸ್ ಮನೆಯಲ್ಲಿ ಇರಬೇಕಾಗಿತ್ತು. ಅದೇನು ಕೆಟ್ಟ ಗಳಿಗೆಯೋ ಏನೋ ಆತನ ಮಾನಸಿಕ ಆರೋಗ್ಯ ಕೈಕೊಟ್ಟ ಕಾರಣ ಆತ 'ಬಿಗ್ ಬಾಸ್' ಸ್ಪರ್ಧೆಯಿಂದ ಹಿಂದೆ ಸರಿಯುವಂತಾಯಿತು.

  ರಾಜೇಶ್ ಬಿಗ್ ಬಾಸ್ ಟೈಟಲ್ ಗೆಲ್ತಾನಾ?

  ರಾಜೇಶ್ ಬಿಗ್ ಬಾಸ್ ಟೈಟಲ್ ಗೆಲ್ತಾನಾ?

  ಈಗ ರಾಜೇಶ್ ಮಾನಸಿಕ ಆರೋಗ್ಯ ಸುಧಾರಿಸಿದೆ. ಆತ ಪರ್ಫೆಕ್ಟ್ ಆಗಿದ್ದಾನೆ. 'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ವಿನ್ನರ್ ಈಗ ಬಿಗ್ ಬಾಸ್ ಟೈಟಲ್ ಗೆಲ್ತಾನಾ ಎಂಬುದೇ ಪ್ರಶ್ನೆ. ಮೇಲ್ಮೋಟಕ್ಕೆ ಅದು ದೂರದ ಮಾತಾದರೂ ಮುಂದೇನು ಎಂಬುದು ಬಿಗ್ ಬಾಸ್ ಗಷ್ಟೇ ಗೊತ್ತು.

  ಅವಕಾಶ ಕಳೆದುಕೊಂಡಿದ್ದ ರಾಜೇಶ

  ಅವಕಾಶ ಕಳೆದುಕೊಂಡಿದ್ದ ರಾಜೇಶ

  ಬಿಗ್ ಬಾಸ್ ರಿಯಾಲಿಟಿ ಶೋನ 13ನೇ ಸ್ಪರ್ಧಿಯಾಗಿ ರಾಜೇಶ್ ಈ ಹಿಂದೆ ಆಯ್ಕೆಯಾಗಿದ್ದ. ಚಿತ್ರೀಕರಣ ಹಂತದಲ್ಲಿರುವ 'ಲವ್ ಈಸ್ ಪಾಯಿಸನ್' ಚಿತ್ರ ಅರ್ಧಕ್ಕೆ ನಿಂತುಹೋದ ಕಾರಣ ರಾಜೇಶ್ ಕೆಲಸವಿಲ್ಲದಂತಾಗಿದ್ದ. ಇದೇ ಸಂದರ್ಭದಲ್ಲಿ ಆತನಿಗೆ ಬಿಗ್ ಬಾಸ್ ಅವಕಾಶ ಹುಡುಕಿಕೊಂಡು ಬಂದಿತ್ತು.

  ವಾಹಿನಿ ಕ್ಯಾಮೆರಾಮೆನ್ ಮೇಲೆ ಕೈಮಾಡಿದ್ದನೆ?

  ವಾಹಿನಿ ಕ್ಯಾಮೆರಾಮೆನ್ ಮೇಲೆ ಕೈಮಾಡಿದ್ದನೆ?

  ಚಾನ್ಸ್ ಏನೋ ಸಿಕ್ಕಿತು ಆದರೆ ರಾಜೇಶ್ ಕೊನೆಯ ಘಳಿಗೆಯಲ್ಲಿ ಅವಕಾಶದಿಂದ ವಂಚಿತವಾಗಿದ್ದ. ಇದಕ್ಕೆ ಕಾರಣ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ನಂಬಲರ್ಹ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಈತ ವಾಹಿನಿಯ ಕ್ಯಾಮೆರಾಮೆನ್ ಮೇಲೆ ಕೈ ಮಾಡಿದ್ದ ಎಂಬ ಸಮಾಚಾರವಿದೆ.

  ಮಾನಸಿಕ ಅಸ್ವಸ್ಥತೆಯಿಂದ ಸಂಪೂರ್ಣ ಗುಣಮುಖ

  ಮಾನಸಿಕ ಅಸ್ವಸ್ಥತೆಯಿಂದ ಸಂಪೂರ್ಣ ಗುಣಮುಖ

  ಮಾನಸಿಕವಾಗಿ ಅಸ್ವಸ್ಥನಾಗಿದ್ದ ರಾಜೇಶ್ ಅವರಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗವರು ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಗಾಗಿ ಮೊದಲು ಕೊಟ್ಟ ಮಾತಿನಂತೆ ಈಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಡುತ್ತಿದ್ದಾರೆ ಎನ್ನಲಾಗಿದೆ.

  ರಾಜೇಶ ಇನ್ನೇನು ಅವಾಂತರ ಮಾಡುತ್ತಾನೋ

  ರಾಜೇಶ ಇನ್ನೇನು ಅವಾಂತರ ಮಾಡುತ್ತಾನೋ

  ಒಟ್ಟಾರೆಯಾಗಿ ರಾಜೇಶ್ ಆಗಮನವಾದರೆ, ಬಿಗ್ ಬಾಸ್ ಮನೆಯಲ್ಲಿ ಇನ್ನೇನಾಗುತ್ತದೋ ಎಂಬ ಭಯ ಉಳಿದ ಸ್ಪರ್ಧಿಗಳಿಗೆ ತಪ್ಪಿದ್ದಲ್ಲ. ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ಆಗಲೇ ಸ್ಪರ್ಧಿಗಳ ನಡುವೆ ತಿಕ್ಕಾಟ ಶುರುವಾಗಿದೆ.

  ಮನೆ ಮಂದಿಗೆ ಅದೇನು ಕಾದಿದೆಯೋ ಏನೋ?

  ಮನೆ ಮಂದಿಗೆ ಅದೇನು ಕಾದಿದೆಯೋ ಏನೋ?

  ಬಿಗ್ ಬಾಸ್ ಮನೆಯಿಂದ ಇನ್ನೂ ಯಾರ್ಯಾರು ಹೊರಬೀಳುತ್ತಾರೋ ಏನೋ. ಈಗಾಗಲೆ ನರ್ಸ್ ಜಯಲಕ್ಷ್ಮಿ ಔಟ್ ಆಗಿ ಮತ್ತೆ ಮನೆಗೆ ಪ್ರವೇಶ ಪಡೆದಿದ್ದಾರೆ. ಸಂಜನಾ ಗಲ್ ರಾಣಿ ಹಾಗೂ ಶ್ವೇತಾ ಪಂಡಿತ್ ಗೆ ಬಿಗ್ ಬಾಸ್ ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ.

  English summary
  'Jungle Jackie' fame Kannada actor Rajesh entering Etv Kannada's reality show Bigg Boss from day 32rd. Recently Rajesh admitted to Mysore's K.R.Hospital to get treatment for metal disorder. Now he is all right and entering to Bigg Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X