»   » ನಗುವಿನ ಅರಸನ ನೋವಿನ ಕಥೆ ಈ ವೀಕೆಂಡ್ ನಲ್ಲಿ ಅನಾವರಣ

ನಗುವಿನ ಅರಸನ ನೋವಿನ ಕಥೆ ಈ ವೀಕೆಂಡ್ ನಲ್ಲಿ ಅನಾವರಣ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ಶೀಘ್ರದಲ್ಲೇ ವಿರಾಜಮಾನರಾಗುತ್ತಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ?.

ಇನ್ನು ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ಯಾರು ಕೂರುತ್ತಾರೆ ಎಂಬ ಕುತೂಹಲ ನಿಮಗಿತ್ತಲ್ವಾ, ಇದೀಗ ಆ ಕುತೂಹಲಕ್ಕೂ ತೆರೆ ಬಿದ್ದಿದೆ.[ರವಿ ಬೆಳಗೆರೆ ಮಾತಿನ ವೈಖರಿಗೆ ವೀಕ್ ಆದ ಮೈಕ್ ಬ್ಯಾಟರಿ]

Kannada Actor-Director-Music Director Sadhu Kokila in Weekend with Ramesh

ಹೌದು ಈ ವಾರ ವೀಕೆಂಡ್ ನಲ್ಲಿ ತಮ್ಮ ಸಾಧನೆಯನ್ನು ಮತ್ತು ನೆನಪುಗಳನ್ನು ಮೆಲುಕು ಹಾಕಲು ಬರುತ್ತಿರುವವರು ಬೇರಾರು ಅಲ್ಲ. ನಮ್ಮ ಕನ್ನಡದ ಖ್ಯಾತ ಕಾಮಿಡಿ ಕಿಂಗ್ ಸಾಧು ಮಹಾರಾಜ್ ಅವರು.

ಎಷ್ಟೋ ಮಂದಿ ಅತ್ತಾಗ ತಮ್ಮ ಕಾಮಿಡಿ ಮೂಲಕ ಅವರ ಕಣ್ಣೀರು ಒರೆಸುವ ಕೆಲಸ ಮಾಡಿರುವ ಸ್ಯಾಂಡಲ್ ವುಡ್ ನ ಕಾಮಿಡಿ ನಟ-ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಕಾಮಿಡಿ ಮಾಡುವ ಮೂಲಕ ಜನಮನ ಗೆದ್ದ ಈ ನಟ ತಾವು ಮಾಡಿದ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Kannada Actor-Director-Music Director Sadhu Kokila in Weekend with Ramesh

ಕಾಮಿಡಿ ಮಾಡಿ ಅನೇಕ ಜನರನ್ನು ಬಾಯ್ತುಂಬಾ ನಗಿಸಿ ನೋವಿನ ಕಣ್ಣೀರನ್ನು ತೊಡೆದು ಹಾಕಿದ ನಟ ಸಾಧು ಅವರ ಆ ನಗುವಿನ ಹಿಂದೆ ಅದೆಷ್ಟು ನೋವಿನ ಕಥೆ ಇರಬಹುದು ಎಂಬುದು ಯಾರಿಗೂ ಗೊತ್ತಿಲ್ಲ.

ಅದೆಲ್ಲವೂ ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ. ಸಾಧು ಅವರ ಜೊತೆ ಅವರ ಪತ್ನಿ ಗೆಳೆಯರು ಹಾಗೂ ಚಿತ್ರರಂಗದ ಕೆಲವು ಕಲಾವಿದರು ಕೂಡ ಆಗಮಿಸಿದ್ದು, ಸಾಧು ಅವರ ಜೀವನದ ಕಥೆಗೆ ಸಾಥ್ ನೀಡಿದ್ದಾರೆ.

ಅಂತೂ ಈ ವೀಕೆಂಡ್ ನಲ್ಲಿ ಸಾಧು ಮಹಾರಾಜ್ ಅವರು ಬದುಕೆಂಬ ಪುಸ್ತಕದ ಪುಟಗಳನ್ನು ತಿರುವಿ ಹಾಕುವ ಮೂಲಕ ಮತ್ತೊಮ್ಮೆ ತಮ್ಮ ಹಳೇ ನೆನಪುಗಳತ್ತ ಜಾರಿ ಹೋಗಲಿದ್ದಾರೆ.

English summary
Kannada Actor-Director-Music Director Sadhu Kokila recently attended the 'Weekend with Ramesh - 2' and shared his experiences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada