For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಕಿಲಾಡಿಗಳ ಅಡ್ಡದಲ್ಲಿ ಜಗ್ಗೇಶ್ ಪ್ರತ್ಯಕ್ಷ !

  By Suneetha
  |

  ಜಗ್ಗೇಶ್ ಅಂದ್ರೆ ಕಾಮಿಡಿ, ಕಾಮಿಡಿ ಅಂದ್ರೆ ಜಗ್ಗೇಶ್. ಎಲ್ಲಾ ನವರಸಗಳನ್ನು ಅರೆದು ಕುಡಿದಿರುವ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ 'ನವರಸ ನಾಯಕ' ಅಂತಾನೇ ಫೇಮಸ್. ಅವರ ಮಾತು ಬಿಡಿ, ಅವರ ಮುಖಭಾವವೇ ನಮ್ಮನ್ನು ನಗಿಸಿ, ಹೊಟ್ಟೆ ಹುಣ್ಣಾಗುವಂತೆ ಮಾಡುತ್ತದೆ.

  ಇಂತಹ ಅದ್ಭುತ ನಟ ಇದೀಗ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆಗೆ ಬರುತ್ತಿರುವ ಕಾಮಿಡಿ ಪಂಟರಲ್ಲಿ, ಮುಂದಿನ ಕಾಮಿಡಿ ಖಿಲಾಡಿ ಯಾರು ಅನ್ನೋದನ್ನ ಜಗ್ಗೇಶ್ ಅವರು ತೀರ್ಮಾನಿಸಲಿದ್ದಾರೆ.['ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ಯಾಕ್ ರಿಜಿಸ್ಟರ್ ಮಾಡ್ಸಿದ್ರು?]

  ಹೋ ಪೀಠಿಕೆ ಯಾಕೆ ಅಂತ ಅರ್ಥ ಆಗ್ಲಿಲ್ವಾ?, ಹೌದು ಜಗ್ಗೇಶ್ ಅವರು ಕಿರುತೆರೆ ಲೋಕಕ್ಕೆ ಕಾಲಿಡ್ತಾ ಇರೋದು, 'ಕಾಮಿಡಿ ಕಿಲಾಡಿ'ಗಳು ಎಂಬ ಹೊಸ ಕಾಮಿಡಿ ರಿಯಾಲಿಟಿ ಶೋ ಒಂದಕ್ಕೆ ಮುಖ್ಯ ತೀರ್ಪುಗಾರರಾಗಿ. ಮುಂದೆ ಓದಿ....

  ಹೊಚ್ಚ ಹೊಸ ಶೋ 'ಕಾಮಿಡಿ ಕಿಲಾಡಿಗಳು'

  ಹೊಚ್ಚ ಹೊಸ ಶೋ 'ಕಾಮಿಡಿ ಕಿಲಾಡಿಗಳು'

  ಇಷ್ಟು ದಿನ 'ಡ್ರಾಮ ಜೂನಿಯರ್ಸ್' ಎಂಬ ಪುಟ್ಟ-ಪುಟ್ಟ ಮಕ್ಕಳ ನಾಟಕ ನೋಡಿ ಎಂಜಾಯ್ ಮಾಡಿದ್ದ ವೀಕ್ಷಕರು, ಇನ್ನುಮುಂದೆ ಕಿಡಿಗಳು ಮಾಡೋ ಕಾಮಿಡಿ ನೋಡಿ ಬಿದ್ದು-ಬಿದ್ದು ನಗಬಹುದು.[ಜಾನಪದ ಹಾಡಿಗೆ ನವರಸ ನಾಯಕ ಜಗ್ಗೇಶ್ ಕಂಠದಾನ]

  ಯಾವ ಚಾನೆಲ್ ನಲ್ಲಿ

  ಯಾವ ಚಾನೆಲ್ ನಲ್ಲಿ

  ಅಂದಹಾಗೆ ಈ ಹೊಸ ಮನರಂಜನಾ ಶೋವನ್ನು ಆಯೋಜಿಸಿದ್ದು, ಎಲ್ಲರ ಮೆಚ್ಚಿನ ಮನರಂಜನಾ ಚಾನೆಲ್ ಜೀ ಕನ್ನಡ ವಾಹಿನಿ. ಭರ್ಜರಿ ಧಾರಾವಾಹಿ, ಕಲರ್ ಫುಲ್ ಕಾರ್ಯಕ್ರಮಗಳು ಹಾಗೂ ವೀಕೆಂಡ್ ನಲ್ಲಿ ಮಸ್ತಿ ಮಾಡಲು ಹೊಚ್ಚ-ಹೊಸ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದ್ದ ಜೀ ಕನ್ನಡ ವಾಹಿನಿಯ, ಮನರಂಜನಾ ಕಾರ್ಯಕ್ರಮಗಳ ಪಟ್ಟಿಗೆ 'ಕಾಮಿಡಿ ಕಿಲಾಡಿಗಳು' ಹೊಸ ಸೇರ್ಪಡೆ.

  ಜಗ್ಗೇಶ್ ಮುಖ್ಯ ತೀರ್ಪುಗಾರ

  ಜಗ್ಗೇಶ್ ಮುಖ್ಯ ತೀರ್ಪುಗಾರ

  'ಕಾಮಿಡಿ ಕಿಲಾಡಿಗಳು' ಶೋಗೆ ಒಟ್ಟು ಮೂರು ಜನ ತೀರ್ಪುಗಾರರಿದ್ದು, ಅದರಲ್ಲಿ ಮುಖ್ಯ ತೀರ್ಪುಗಾರರಾಗಿ ನಟ ಜಗ್ಗೇಶ್ ಅವರು ಆಯ್ಕೆಯಾಗಿದ್ದಾರೆ. ಮಾತ್ರವಲ್ಲದೇ ಜಗ್ಗೇಶ್ ಅವರ ಪ್ರೊಮೋ ಕೂಡ ಈಗಾಗಲೇ ಬಿಡುಗಡೆ ಆಗಿ, ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

  ಜಗ್ಗೇಶ್ ಸಂಭ್ರಮ

  ಜಗ್ಗೇಶ್ ಸಂಭ್ರಮ

  ಜೀ ಟಿವಿಯಲ್ಲಿ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ನನ್ನನ್ನು ಜಡ್ಜ್ ಆಗಲು ಕೇಳಿದ್ದಾರೆ... ನಾನು ಆ ಕಾರ್ಯಕ್ರಮದಲ್ಲಿ ಬರಲು ನಿಮಗೆ ಇಷ್ಟವಿದೆಯಾ? ನಗಿಸುವುದು ನನ್ನ ಧರ್ಮ... ನಗುವಿರುವ ಜಾಗದಲ್ಲಿ ನಾನಿರುತ್ತೇನೆ... ನಿಮ್ಮ ಮೊಗದಲ್ಲಿ ನಗು ನಿರಂತರ ಬರಿಸುವುದೆ ನನ್ನ ಕರ್ತವ್ಯ ಎಂದು ಭಾವಿಸುವೆ..." ಹೀಗಂತ ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  ಯಾವಾಗ ಆರಂಭ

  ಯಾವಾಗ ಆರಂಭ

  ಅಕ್ಟೋಬರ್ 15 ರಿಂದ, ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ 'ಕಾಮಿಡಿ ಕಿಲಾಡಿಗಳು' ಪ್ರಸಾರವಾಗಲಿದೆ. ಇನ್ನುಮುಂದೆ ಜಗ್ಗೇಶ್ ಅವರನ್ನು ದಿನನಿತ್ಯ ರಾತ್ರಿ ನೋಡುವ ಭಾಗ್ಯ ಅಭಿಮಾನಿಗಳಿಗೆ ಲಭಿಸಲಿದೆ.

  English summary
  Kannada Entertainment Channel Zee Kannada has come up with a new Comedy Show called 'Comedy Khiladigalu'. Kannada actor Jaggesh judging this reality show. 'Comedy Khiladigalu' which will go on air from October 15th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X