For Quick Alerts
  ALLOW NOTIFICATIONS  
  For Daily Alerts

  ನವರಸ ನಾಯಕ ಕಿರುತೆರೆಗೆ ಕಾಲಿಡುತ್ತಾರಂತೆ!

  By ಸೋನು ಗೌಡ
  |

  ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಹಾಡಿನ ಮೂಲಕ ಚಂದನವನದಲ್ಲಿ ಕೊಂಚ ಡಿಫರೆಂಟಾಗಿ ಸುದ್ದಿಯಾಗಿದ್ದ, ನವರಸ ನಾಯಕ ಜಗ್ಗೇಶ್ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

  ಅಂದಹಾಗೆ ಈ ಬಾರಿ ಜಗ್ಗೇಶ್ ಗಾಸಿಪ್ ಮೂಲಕ ಸುದ್ದಿಯಾಗಿಲ್ಲ ಬದಲಾಗಿ ಕಿರುತೆರೆ ಕ್ಷೇತ್ರಕ್ಕೆ ತಮ್ಮ ಎಡಗಾಲು ಇಡುತ್ತಾರೆ ಅಂತ ಇಡೀ ಗಾಂಧಿನಗರದಲ್ಲಿ ಸುದ್ದಿ.

  ಇದೇನಪ್ಪಾ ಹಿರಿತೆರೆಯಲ್ಲಿ ಕೈಗೆ ತೆಗೆದುಕೊಂಡ ಯಾವ ಪ್ರಾಜೆಕ್ಟ್ ಗಳು ತಮ್ಮ ಕೈ ಹಿಡಿಯಲಿಲ್ಲ ಅಂತ ಕಿರುತೆರೆಗೆ ಕಾಲಿಡುತ್ತಿದ್ದಾರ ಎಂದು ನೀವು ಯೋಚನೆ ಮಾಡ್ತಾ ಇದ್ದೀರಾ?. ಅಥವಾ ಉಪೇಂದ್ರ ಅವರ 'ಉಪ್ಪಿ-ಟ್ಟು' ಮೂಲಕ ಬಿಟ್ಟಿ ಪ್ರಚಾರ ಪಡೆದುಕೊಂಡು ಕಿರುತೆರೆಯಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನನಾನ ಅಂತ ಕೇಳಬೇಡಿ.[ವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ]

  ಸದ್ಯಕ್ಕೆ ಜಗ್ಗೇಶ್ ಅವರು ಕಿರುತೆರೆಗೆ ಕ್ಷೇತ್ರಕ್ಕೆ ಕಾಲಿಡ್ತಾ ಇರೋದು ಸೀರಿಯಲ್ ನಲ್ಲಿ ನಟಿಸಲು ಅಲ್ಲ ಬದಲಾಗಿ ಇನ್ನೇನು ಸದ್ಯದಲ್ಲಿ ಶುರುವಾಗಲಿರುವ ಹಾಸ್ಯ ಸೀರಿಯಲ್ ಒಂದರ ನಿರ್ಮಾಪಕರಾಗಿ.

  ಆದರೆ ನವರಸ ನಾಯಕ ಜಗ್ಗೇಶ್ ಅಂದಾಗ ಸಡನ್ ಆಗಿ ಎಲ್ಲರೂ ಯೋಚನೆ ಮಾಡೋದು ಇದು ಪಕ್ಕಾ ಕಾಮಿಡಿ ಶೋ ಅಥವಾ ಕಾಮಿಡಿ ಧಾರಾವಾಹಿ ಇರಬಹುದು ಅಂತ ಅಲ್ವಾ. ಹೌದು ನಿಮ್ಮ ಊಹೆ ಸರಿಯಾಗಿಯೇ ಇದೆ.[ಕೇಸ್ ಹಾಕಿದ ಜಗ್ಗೇಶ್, ತುಟಿ ಬಿಚ್ಚದ ಉಪೇಂದ್ರ!]

  ಇದೀಗ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಹತ್ತೂವರೆಗೆ ಪ್ರಸಾರವಾಗುವ ಕಾಮಿಡಿ ಸೀರಿಯಲ್ ಒಂದನ್ನು ಮಾಡಲು ಕಾಮಿಡಿ ನಟ ಜಗ್ಗೇಶ್ ಅವರು ಆಫರ್ ಪಡೆದುಕೊಂಡಿದ್ದಾರೆ. ಜೊತೆಗೆ ಅವರ ಹಿರಿಯ ಪುತ್ರ ಗುರುರಾಜ್ ಅವರು ಅಧಿಕೃತ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಾರೆ ಅಂತ ಸದ್ಯದ ಸುದ್ದಿ.

  ಇನ್ನೂ ಜಗ್ಗೇಶ್ ಅವರಿಗೆ ಕಿರುತೆರೆ ಕ್ಷೇತ್ರ ಅಷ್ಟೇನು ಹೊಸದಲ್ಲ ಬಿಡಿ, ಯಾಕಂದ್ರೆ ಈ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೈಯಲ್ಲಿ ಕೋಟಿ ಹೇಳ್ಬಿಟ್ಟ್ ಹೊಡೀರಿ' ಎಂಬ ಗೇಮ್ ಶೋ ನಡೆಸಿಕೊಟ್ಟಿದ್ದರು. ಆದರೆ ನಿರ್ಮಾಪಕರಾಗಿ ಮೊದಲನೇ ಹೆಜ್ಜೆ ಇಡುತ್ತಿದ್ದಾರೆ.[ಇರ್ಲಾರ್ದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ, ಜಗ್ಗೇಶ್!]

  ಹಿಂದಿ ಚಾನಲ್ ಆಂಡ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಭಾಬಿಜೀ ಘರ್ ಪರ್ ಹೈ' ಎನ್ನುವ ಹಾಸ್ಯ ಸೀರಿಯಲ್ ಕನ್ನಡಕ್ಕೆ ರಿಮೇಕ್ ಆಗಲಿದ್ದು, ಇದಕ್ಕೆ ಜಗ್ಗೇಶ್ ಅವರು ಬಂಡವಾಳ ಹಾಕುತ್ತಿದ್ದಾರೆ. ಜೊತೆಗೆ ಇದರ ನಿರ್ದೇಶನದ ಜವಾಬ್ದಾರಿಯನ್ನು ಪೃಥ್ವಿರಾಜ್ ಹೊತ್ತುಕೊಂಡಿದ್ದಾರೆ.

  ಸದ್ಯದಲ್ಲೇ ಪ್ರಾರಂಭವಾಗಲಿರುವ ಈ ಧಾರಾವಾಹಿಯ ಪಾತ್ರ ವರ್ಗ ಪರಿಚಯಿಸಲು ಜಗ್ಗೇಶ್ ಆನ್ ಸ್ಕ್ರೀನ್ ಬರುತ್ತಾರೆ ಹೊರತು ನಟಿಸುವುದಿಲ್ಲವಂತೆ. ಆದರೆ ಅವರ ಪುತ್ರರಲ್ಲೊಬ್ಬರು ಕಾಣಿಸಿಕೊಳ್ಳಲಿದ್ದಾರಂತೆ.

  English summary
  Kannada actor Jaggesh will produce a comedy serial for TV. Actor Jaggesh will produce the hindi remake serial of 'Bhabhi Ji Ghar Par Hai'. This Serial will be Telecasted in Zee kannada channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X