»   » 'ವೀಕೆಂಡ್' ಕಾರ್ಯಕ್ರಮಕ್ಕೆ ರಕ್ಷಿತ್ ಯಾಕೆ.? ಅಂತ ಕೇಳಿದವರಿಗೆ 'ಉತ್ತರ' ಸಿಕ್ಕಿದೆ.!

'ವೀಕೆಂಡ್' ಕಾರ್ಯಕ್ರಮಕ್ಕೆ ರಕ್ಷಿತ್ ಯಾಕೆ.? ಅಂತ ಕೇಳಿದವರಿಗೆ 'ಉತ್ತರ' ಸಿಕ್ಕಿದೆ.!

Written By: Naveen
Subscribe to Filmibeat Kannada

"ಸಾಧಕರ ಸೀಟ್ ನಲ್ಲಿ ತುಂಬ ದೊಡ್ಡವರು ಕುಳಿತುಕೊಂಡಿದ್ದಾರೆ. ನನಗೆ ಈ ಸೀಟ್ ನಲ್ಲಿ ಕೂರುವ ಅರ್ಹತೆ ಇದೆಯಾ... ಇಲ್ವಾ.. ಗೊತ್ತಿಲ್ಲ'' - ಹೀಗಂತ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಕುಳಿತುಕೊಂಡ ರಕ್ಷಿತ್ ಶೆಟ್ಟಿ ಹೇಳಿದ ಮೊದಲ ಮಾತು ಇದು.

ರಕ್ಷಿತ್ ಶೆಟ್ಟಿ ಈ ಕಾರ್ಯಕ್ರಮಕ್ಕೆ ಬರುತ್ತಾರೆ ಅಂತ ತಿಳಿದಾಗ ಅನೇಕರು ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದರು, ಟ್ರಾಲ್ ಮಾಡಿದರು. ಅಷ್ಟಕ್ಕೂ, ಒಬ್ಬ ನಟ ಈ ಮಟ್ಟಕ್ಕೆ ಬೆಳೆಯೋದು ಅಂದ್ರೆ, ಫೇಸ್ ಬುಕ್ ನಲ್ಲಿ ಟ್ರಾಲ್ ಮಾಡಿದಷ್ಟು ಸುಲಭ ಅಲ್ಲ.

ದೊಡ್ಡ ಸಾಧನೆ ಮಾಡಿದವರನ್ನ ಕರೆದು ಸನ್ಮಾನ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ಈಗ 'ಏನಾದರು ಸಾಧನೆ ಮಾಡುತ್ತೀನಿ' ಅಂತ ಹೊರಟವರಿಗೆ ಬೆನ್ನು ತಟ್ಟುವುದು ಅಷ್ಟೇ ಮುಖ್ಯ.! ಎಲ್ಲ ಗೆದ್ದವರಿಗೆ ಕಂಗ್ರಾಟ್ಸ್ ಹೇಳುವುದಕ್ಕಿಂತ, ಎಲ್ಲವನ್ನ ಗೆಲ್ಲುತ್ತೇನೆ ಎನ್ನುವವರಿಗೆ 'ಆಲ್ ದಿ ಬೆಸ್ಟ್' ಹೇಳಬೇಕು.!

'ರಕ್ಷಿತ್ ಶೆಟ್ಟಿ' ಇಷ್ಟು ಬೇಗ ಸಾಧಕರ ಸೀಟ್ ನಲ್ಲಿ ಯಾಕೆ..? ಎಂದು ಪ್ರಶ್ನೆ ಮಾಡಿದವರಿಗೆ ಇಲ್ಲಿದೆ ಉತ್ತರ

ರಮೇಶ್ ಸ್ಪಷ್ಟನೆ

ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ಶುರುವಿನಲ್ಲಿಯೇ ರಮೇಶ್ ಸ್ಪಷ್ಟನೆ ನೀಡಿದರು. "ಈ ವಾರದ ಅತಿಥಿ, ಸಾಧನೆಯ ಪಯಣದ ಮೊದಲ ಹಂತವನ್ನ ಗೆದ್ದಿದ್ದಾರೆ. ಅವರ ಬೆನ್ನು ತಟ್ಟಬೇಕು'' ಅಂತ ಈ ಎಪಿಸೋಡ್ ನ ಉದ್ದೇಶವನ್ನ ತಿಳಿಸಿದ್ರು.

ಯುವಕರಿಗೆ ಸ್ಫೂರ್ತಿ

ಕನ್ನಡದಲ್ಲಿ ಹೊಸ ಬಗೆಯ ಸಿನಿಮಾಗಳನ್ನ ಮಾಡಿ ಹೊಸ ಟ್ರೆಂಡ್ ಸೃಷ್ಠಿ ಮಾಡಿದ ನಿರ್ದೇಶಕರ ಪೈಕಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಸಿನಿಮಾದಲ್ಲಿ ಒಮ್ಮೆ ಸೋತ್ತಿದ್ದರು, ಮತ್ತೆ ಗೆದ್ದು ತೋರಿಸಿದ ಅವರ ಜರ್ನಿ ಇಂದಿನ ಯುವ ನಟ, ನಿರ್ದೇಶಕರಿಗೆ ದೊಡ್ಡ ಪ್ರೇರಣೆ ನೀಡಬಲ್ಲದು.

ಕಥೆಗೆ ತಕ್ಕ ನಾಯಕ

"ಹೀರೋ' ಅಂತ್ತಿದ್ದ ಹಾಗೆ, ಮೂರು ಫೈಟು, ಅವಶ್ಯಕತೆ ಇರಲಿ ಇಲ್ಲದಿರಲ್ಲಿ ಒಂದು ಬಿಲ್ಡಪ್ ಸಾಂಗ್ ಇರಲೇ ಬೇಕು ಅನ್ನೋದು ಗಾಂಧಿನಗರದ ನಿಯಮ. ಆದರೆ, ರಕ್ಷಿತ್ ತಮ್ಮ ಸಿನಿಮಾಗಳಲ್ಲಿ ಕಥೆಗೆ ತಕ್ಕ ನಾಯಕನಾಗಿರುತ್ತಾರೆ. ಅಲ್ಲಿ ನಾಯಕನಿಗಾಗಿ ಕಥೆಯ ದಿಕ್ಕು ಬದಲಾಗುವುದಿಲ್ಲ.

ನಟ ಮತ್ತು ನಿರ್ದೇಶಕ

ಕನ್ನಡದಲ್ಲಿ ನಟನೆ ಮತ್ತು ನಿರ್ದೇಶನ ಎರಡು ಮಾಡಿ ಗೆದ್ದವರು ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಿ ಉಪೇಂದ್ರ ಮತ್ತು ರವಿಚಂದ್ರನ್ ಬಿಟ್ಟರೆ ಎರಡೂ ವಿಭಾಗಗಳನ್ನ ಚೆನ್ನಾಗಿ ನಿಭಾಯಿಸಬಲ್ಲೇ ಅಂತ ಸಾಬೀತು ಮಾಡಿರೋದು ರಕ್ಷಿತ್ ಮಾತ್ರ.

8 ಸಿನಿಮಾಗಳಲ್ಲಿ ಸಾಧನೆ

ರಕ್ಷಿತ್ ಶೆಟ್ಟಿ ಮಾಡಿರುವುದು ಕೇವಲ 8 ಸಿನಿಮಾಗಳಾದರೂ, ಆ 8 ಸಿನಿಮಾಗಳಲ್ಲಿ 6 ಪ್ರತಿಷ್ಠಿತ ಪ್ರಶಸ್ತಿಗಳನ್ನ ಪಡೆದಿದ್ದಾರೆ. 2 ಕರ್ನಾಟಕ ರಾಜ್ಯ ಪ್ರಶಸ್ತಿ, 1 ಫಿಲ್ಮ್ ಫೇರ್, 3 ಬಾರಿ ಐಫಾ ಪ್ರಶಸ್ತಿಗಳು ರಕ್ಷಿತ್ ಅಕೌಂಟ್ ನಲ್ಲಿದೆ.

ಹೊಸ ತನವಿತ್ತು

'ಜೀ ವಾಹಿನಿ'ಯ ಅನೇಕ ಕಾರ್ಯಕ್ರಮಗಳು ಈಗ ಹೊಸತನದಿಂದ ತುಂಬಿರುತ್ತೆ. ಆ ಹೊಸತನ ಜನರಿಗೆ ತುಂಬಾನೇ ಇಷ್ಟ ಆಗುತ್ತಿದೆ. ಅದೇ ರೀತಿ 'ರಕ್ಷಿತ್ ಶೆಟ್ಟಿ' ಅಂತಹ ಯುವ ಸಾಧಕರನ್ನ ಕರೆಸಿದ್ದು ಒಂದು ಹೊಸತನದ ಆಲೋಚನೆ.

English summary
Kannada Actor Rakshith Shetty in Weekend with Ramesh 3 show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada