»   » ಸುದೀಪ್ ಗೂ ಮೊದಲೇ ಶಿವಣ್ಣನ ಜೊತೆ ನಟಿಸಬೇಕಿತ್ತು 'ಸ್ಪರ್ಶ' ರೇಖಾ.!

ಸುದೀಪ್ ಗೂ ಮೊದಲೇ ಶಿವಣ್ಣನ ಜೊತೆ ನಟಿಸಬೇಕಿತ್ತು 'ಸ್ಪರ್ಶ' ರೇಖಾ.!

Posted By:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವ ಹಾಗೇ ಕಿಚ್ಚ ಸುದೀಪ್ ರವರ ವೃತ್ತಿ ಜೀವನಕ್ಕೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾ 'ಸ್ಪರ್ಶ'. ಇದೇ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ರೇಖಾ.

ಮಾಡೆಲಿಂಗ್ ಮಾಡುತ್ತಿದ್ದ ರೇಖಾ ರವರ ಫೋಟೋಗಳನ್ನ ನೋಡಿದ ಮೇಲೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ 'ಸ್ಪರ್ಶ' ಚಿತ್ರಕ್ಕೆ ರೇಖಾ ರವರನ್ನ ಆಯ್ಕೆ ಮಾಡಿಕೊಂಡರು.

ಆದ್ರೆ, ಇದಕ್ಕೂ ಮೊದಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಜೊತೆ ರೇಖಾ ನಟಿಸಬೇಕಿತ್ತು ಅನ್ನೋದು ನಿಮಗೆ ಗೊತ್ತಾ.? ಗೊತ್ತಿಲ್ಲ ಅಂದ್ರೆ ಪೂರ್ತಿ ವಿವರ ಓದಿರಿ...

'ಇಂದ್ರ ಧನುಷ್' ಚಿತ್ರಕ್ಕಾಗಿ ಕರೆ ಬಂದಿತ್ತು

ಮಾಡೆಲ್ ಆಗಿದ್ದ ರೇಖಾ ರವರನ್ನ ಶಿವರಾಜ್ ಕುಮಾರ್ ರವರ 'ಇಂದ್ರ ಧನುಷ್' ಚಿತ್ರದಲ್ಲಿ ನಾಯಕಿ ಮಾಡಬೇಕು ಎಂದು ವಿ.ಮನೋಹರ್ ನಿರ್ಧರಿಸಿದ್ದರು. ಅದಕ್ಕಾಗಿ ರೇಖಾ ರವರ ಜೊತೆ ಮಾತುಕತೆ ಕೂಡ ನಡೆದಿತ್ತು. ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ದ ನಟಿ ರೇಖಾ ಬಳಿಕ 'ಇಂದ್ರ ಧನುಷ್' ಚಿತ್ರದಲ್ಲಿ ನಟಿಸಲು ಒಲ್ಲೆ ಎಂದರು. ಅದಕ್ಕೆ ಕಾರಣ....

ರೇಖಾ ಕನಸು

'ಇಂದ್ರ ಧನುಷ್' ಚಿತ್ರೀಕರಣದ ಡೇಟ್ಸ್ ಹಾಗೂ ಮೌಂಟೇನಿಯರಿಂಗ್... ಎರಡೂ ಕ್ಲಾಶ್ ಆಗುತ್ತಿದ್ದರಿಂದ ತಮ್ಮ ವರ್ಷಗಳ ಬಯಕೆ ಮೌಂಟೇನಿಯರಿಂಗ್ ನ ಆಯ್ಕೆ ಮಾಡಿಕೊಂಡು 'ಇಂದ್ರ ಧನುಷ್' ಆಫರ್ ನ ರಿಜೆಕ್ಟ್ ಮಾಡಿದ್ರಂತೆ ರೇಖಾ.

ಆಮೇಲೆ ಬಂದಿದ್ದು 'ಸ್ಪರ್ಶ' ಆಫರ್

ಮೌಂಟೇನಿಯರಿಂಗ್ ಮುಗಿಸಿಕೊಂಡು ಬಂದ್ಮೇಲೆ 'ಸ್ಪರ್ಶ' ಚಿತ್ರಕ್ಕಾಗಿ ಸುನೀಲ್ ಕುಮಾರ್ ದೇಸಾಯಿ ಆಫರ್ ಮಾಡಿದ್ರಂತೆ. ಅಲ್ಲಿಂದ ರೇಖಾ ರವರ ಚಿತ್ರರಂಗದ ಪಯಣ ಆರಂಭ ಆಯ್ತು.

'ಸೂಪರ್ ಟಾಕ್ ಟೈಮ್'ನಲ್ಲಿ ರೇಖಾ

ಈ ವಿಚಾರವನ್ನ ನಟಿ ರೇಖಾ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು. ಗಾಯಕ ರಾಜೇಶ್ ಕೃಷ್ಣನ್, ನಟಿ ಭಾವನಾ ಜೊತೆ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ರೇಖಾ ಪಾಲ್ಗೊಂಡಿದ್ದರು.

English summary
Kannada Actress Rekha revealed about her debut offer in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada