»   » ನೀವು ಕೇಳಿರದ ಶುಭಾ ಪೂಂಜಾ ರವರ 'ರಿಯಲ್' ಲವ್ ಸ್ಟೋರಿ

ನೀವು ಕೇಳಿರದ ಶುಭಾ ಪೂಂಜಾ ರವರ 'ರಿಯಲ್' ಲವ್ ಸ್ಟೋರಿ

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ಒಂಬತ್ತನೇ ಕ್ಲಾಸ್ ಓದುತ್ತಿರುವಾಗಲೇ, ಸಹಪಾಠಿ ಆಶೀಶ್ ಮೇಲೆ ಶುಭಾ ಪೂಂಜಾಗೆ ಕಣ್ಣು ಬಿದ್ದಿತ್ತು. ಸ್ಕೂಲ್ ನಲ್ಲಿ ನಡೆದ ತಮ್ಮ ಒಂದು ಕ್ಯೂಟ್ ಲವ್ ಸ್ಟೋರಿ ಬಗ್ಗೆ ನಟಿ ಶುಭಾ ಪೂಂಜಾ 'ಕಲರ್ಸ್ ಸೂಪರ್ ವಾಹಿನಿ'ಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದು ಹೀಗೆ....

''ಒಂದು ಹುಡುಗ ಇದ್ದ... ಅವನ ಹೆಸರು ಆಶೀಶ್ ಅಂತ. ಯಾವಾಗಲೂ ಹುಡುಗರು, ಹುಡುಗಿಯರ ಹಿಂದೆ ಬೀಳುತ್ತಾರೆ. ಆದ್ರೆ, ನಾನು ಆಶೀಶ್ ಹಿಂದೆ ಬಿದ್ದಿದ್ದೆ. ನನಗೆ ಅವನ ಮೇಲೆ ಹುಚ್ಚು ಪ್ರೀತಿ. ಅವನನ್ನ ನೋಡಲು ಅವನ ಹಾಸ್ಟೆಲ್ ಹತ್ತಿರ ಸೈಕಲ್ ತೆಗೆದುಕೊಂಡು ಹೋಗುತ್ತಿದ್ದೆ. ಹಾಸ್ಟೆಲ್ ಮುಂದೆ ಇರುವ ಬೇಕರಿಯಲ್ಲಿ ಬನ್ ತಿನ್ನುತ್ತಾ ಆಶೀಶ್ ನ ನೋಡುತ್ತಿದ್ದೆ''

Kannada Actress Shubha Poonja reveals her school love story

''ನಾನು ಆಗ ಒಂಬತ್ತನೇ ಕ್ಲಾಸ್ ಓದುತ್ತಿದ್ದೆ. ಅವನಿಗೆ ನನ್ನ ಕಂಡರೆ ಇಷ್ಟ ಇರಲಿಲ್ಲ. ಆದ್ರೆ, ನನ್ನ ಜಬರ್ದಸ್ತ್ ನಿಂದ ನನ್ನನ್ನ ಇಷ್ಟ ಪಡಲು ಶುರು ಮಾಡಿದ''

''ಹತ್ತನೇ ಕ್ಲಾಸ್ ಆದ್ಮೇಲೆ ಅವನು ಊರು ಬಿಟ್ಟೆ. ಪಿಯುಸಿ ಓದುವಾಗ, ನನ್ನನ್ನ ನೋಡಲು ಬಂದಿದ್ದ, ಆದ್ರೆ ಅಷ್ಟರಲ್ಲಿ ಎಷ್ಟೊಂದು ಲವ್ ಸ್ಟೋರಿಗಳು ಆಗಿ ಹೋಗಿತ್ತು.!!'' ಎಂದು ತಮ್ಮ ಗತಕಾಲದ ಲವ್ ಸ್ಟೋರಿಯನ್ನ ಕಾರ್ಯಕ್ರಮದಲ್ಲಿ ಶುಭಾ ಪೂಂಜಾ ಮೆಲುಕು ಹಾಕಿದರು.

Kannada Actress Shubha Poonja reveals her school love story

ಅಂದ್ಹಾಗೆ, ಸದ್ಯ ನಟಿ ಶುಭಾ ಪೂಂಜಾ ರವರ ''ರಿಲೇಶನ್ ಶಿಪ್ ಸ್ಟೇಟಸ್ ಏನು.?'' ಎಂದು ಅಕುಲ್ ಬಾಲಾಜಿ ಕೇಳಿದ್ದಕ್ಕೆ, ''ಸಿಂಗಲ್ ರೆಡಿ ಟು ಮಿಂಗಲ್'' ಎಂದರು ನಟಿ ಶುಭಾ ಪೂಂಜಾ.

English summary
Kannada Actress Shubha Poonja reveals her love story in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada