For Quick Alerts
  ALLOW NOTIFICATIONS  
  For Daily Alerts

  ಕಾವಿಗಳ ಉಳಿಸಲು ಜೋ ಗೆ ಕೈ ಕೊಟ್ಟ ಬಾಸ್

  By Mahesh
  |

  ಬಿಗ್ ಬಾಸ್ ಮನೆಯಿಂದ ಯಾರು ಔಟ್ ಎಂಬ ಪ್ರಶ್ನೆಗೆ ಈ ಬಾರಿ ಉತ್ತರ ಸುಲಭಕ್ಕೆ ಹೇಳುವುದು ಕಷ್ಟ. ಆದರೆ, ಲಭ್ಯ ಮಾಹಿತಿ ಪ್ರಕಾರ ಕಾವಿಧಾರರ ಮೇಲೆ ಶ್ರೀರಾಮನ ಕೃಪೆ ಬಿದ್ದಿದೆ. ಹೆಣ್ಣು ಮಕ್ಕಳನ್ನೇ ಮನೆಯಿಂದ ಔಟ್ ಎನ್ನುತ್ತಿರುವ ಬಿಗ್ ಬಾಸ್ ಮೇಲೆ ಪ್ರೇಕ್ಷಕ ಮುನಿಸಿಕೊಂಡಿದ್ದಾನೆ.

  ಬಿಗ್ ಬಾಸ್ ಮನೆ ಹೊಕ್ಕ ಮೇಲೆ ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಹಾಗೂ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮ ಅವರು ನಾನೊಂದು ತೀರ ನೀನೊಂದು ತೀರ ಎಂಬಂತಿದ್ದರು.

  ಅದರೆ, ಈಗ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಹಾಗೂ ಕಾಳಿ ಮಠದ ಋಷಿಕುಮಾರ ಸ್ವಾಮಿ ಒಂದೇ ವಾರದಲ್ಲಿ ತುಂಬ ಹತ್ತಿರವಾಗಿದ್ದಾರೆ. ಎಷ್ಟೇ ಆಗಲಿ ಇಬ್ಬರೂ ಕಾವಿಧಾರಿಗಳಲ್ಲವೇ. ಆಕರ್ಷಣೆ ಇದ್ದೇ ಇರುತ್ತದೆ ಬಿಡಿ. ಇವರಿಬ್ಬರೂ ಒಂದಾಗಿರುವುದು ಬಿಗ್ ಬಾಸ್ ಗೆ ತಲೆ ನೋವಾಗಿದೆ.

  ಬಿಗ್ ಬಾಸ್ ಆಟವನ್ನು ಅತ್ಯಂತ ಜಾಣ್ಮೆಯಿಂದ ಆಡುತ್ತಿರುವ ನರೇಂದ್ರ ಬಾಬು ಶರ್ಮ ಅವರು ಋಷಿ ಕುಮಾರ ಅವರ ಜೊತೆ ಪೈಪೋಟಿಗೆ ಬೀಳದೆ ಸೇಫ್ ಜೋನ್ ಗೆ ಬಂದಿದ್ದಾರೆ. ಹಾಗಿದ್ದರೆ ಈ ವಾರ ಮನೆಯಿಂದ ಹೊರ ಬೀಳುವುದು ಯಾರು? ಚಂದ್ರಿಕಾ, ನಿಖಿತಾ, ವಿನಾಯಕ್ ಜೋಶಿ ಅಥವಾ ಋಷಿಕುಮಾರ? ಮುಂದೆ ಓದಿ

  ನರೇಂದ್ರ ಬಾಬು ಶರ್ಮ

  ನರೇಂದ್ರ ಬಾಬು ಶರ್ಮ

  ಮನೆಯವರ ಅಚ್ಚುಮೆಚ್ಚಿನ ಗುರೂಜಿ, ನಿಖಿತಾ ಅನುಶ್ರೀಗೆ ಅಪ್ಪಾಜಿ, ಅರುಣ್ ಸಾಗರ್ ಗೆ ನರೇಂದ್ರ ಆಗಿರುವ ಬಾಡಿ ಬ್ರಹ್ಮಾಂಡ ಅವರು ಏನು ಮೋಡಿದ್ದಾರೋ ಪ್ರೇಕ್ಷಕರು ಅವರ ಕೈ ಬಿಟ್ಟಿಲ್ಲ. ಆರಂಭದ ದಿನಗಳಲ್ಲಿ ಮನೆಯವರ ಮನ ಗೆಲ್ಲಲು ಒದ್ದಾಡಿದ್ದ ಗುರೂಜಿ ಈಗ ಸತತವಾಗಿ ಸೇಫ್ ಜೋನ್ ನಲ್ಲಿದ್ದಾರೆ.

  ವಿಜಯ್ ರಾಘವೇಂದ್ರ

  ವಿಜಯ್ ರಾಘವೇಂದ್ರ

  ಮನೆಯವರ ಹಾಗೂ ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದು, ಬಿಗ್ ಬಾಸ್ ಮನೆಯಲ್ಲಿ ಕೊನೆ ತನಕ ಉಳಿಯುವ ಎಲ್ಲಾ ಕುರುಹು ತೋರಿದ್ದಾರೆ. ಮನೆ ಮಂದಿ ನೆನೆದು ಕಣ್ಣೀರಿಟ್ಟಿದ್ದು ಪ್ರೇಕ್ಷಕರ ಎದೆಕಲುಕಿದ್ದು ನಿಜ. ರಾಘು ಈ ವಾರ ಸೇಫ್

  ಅರುಣ್ ಸಾಗರ

  ಅರುಣ್ ಸಾಗರ

  ತುಂಟ ಮಾತು, ಕುಹಕ, ಗುಂಪುಗಾರಿಕೆ ಎಲ್ಲದರ ಸಮ್ಮಿಶ್ರವಾಗಿರುವ ಅರುಣ್ ಅವರು ಡೇಂಜರ್ ಜೋನ್ ನಿಂದ ಬಚಾವಾಗಿ ಸೇಫ್ ಜೋನ್ ಗೆ ಬಂದಿದ್ದಾರೆ. ಕಲೆಗಾರನನ್ನು ಪ್ರೇಕ್ಷಕರು ಸದ್ಯಕ್ಕೆ ಅರುಣ್ ಹೊರ ಹಾಕಲು ಮನಸ್ಸು ಮಾಡುತ್ತಿಲ್ಲ.

  ಅಪರ್ಣ ವಸ್ತಾರೆ

  ಅಪರ್ಣ ವಸ್ತಾರೆ

  ಮೊದಲವಾರ ಮನೆಯವರನ್ನು ನೆನೆದು ಕಣ್ಣೀರಿಟ್ಟ ಅಪರ್ಣ ನಂತರ ತಮ್ಮ ಸಹಜ ವರ್ತನೆ ಬದಲಾಯಿಸಿಕೊಂಡಿರುವುದನ್ನು ಗಮನಿಸಬಹುದು. ನಿಖಿತಾ ಹಿಂದೆ ಬಿದ್ದಿದ್ದ ಅಪರ್ಣ ಅವರಿಗೆ ವೋಟ್ ಔಟ್ ಆಗುವ ಭಾಗ್ಯ ಇಲ್ಲ. ಕನ್ನಡ ಭಾಷಿಕರ ಜೊತೆ ಗುಂಪುಗಾರಿಕೆಗೆ ಬೆಲೆ ಸಿಕ್ಕಿಲ್ಲ. ಪ್ರೇಕ್ಷಕರ ಎಸ್ ಎಂಎಸ್ ಕೂಡಾ ಸಾಲುತ್ತಿಲ್ಲ. ಇನ್ನು ಮನೆಯಲ್ಲೇ ಇರಬೇಕಾಗುತ್ತೆ

  ತಿಲಕ್

  ತಿಲಕ್

  ಸೈಲಂಟ್ ಕಿಲ್ಲರ್ ತಿಲಕ್ ಬಗ್ಗೆ ಇತರೆ ಸ್ಪರ್ಧಿಗಳಿಗೆ ಕುತೂಹಲವಿದ್ದರೂ ಆತನನ್ನು ಜಾಲದಲ್ಲಿ ಹೆಣೆಯಲು ಆಗುತ್ತಿಲ್ಲ. ತಿಲಕ್ ಆಗಾಗ ಮಾತಿನ ಜಗಳದಲ್ಲಿ ಕಾಣಿಸಿಕೊಂಡರೂ ಅದರ ಕಾರಣ ಮಾತ್ರ ತಿಲಕ್ ಆಗಿರಲಿಲ್ಲ ಎಂಬುದು ಗಮನಾರ್ಹ. ವೋಟ್ ಔಟ್ ನಲ್ಲಿ ತಿಲಕ್ ಸೇಫ್

  ಋಷಿಕುಮಾರ

  ಋಷಿಕುಮಾರ

  ಸ್ವಾಮೀಜಿಯೊಬ್ಬರು ಈ ರೀತಿಯೂ ಇರಬಹುದು ಎಂಬುದನ್ನು ಋಷಿಕುಮಾರ ತೋರಿಸಿಕೊಟ್ಟಿದ್ದಾರೆ. ಮೊದಮೊದಲು ಹೆಂಗಸರ ಜೊತೆ ನಡೆದುಕೊಂಡ ರೀತಿ ನೋಡಿದರೆ ಮೊದಲ ವಾರವೇ ಗಂಟು ಮೂಟೆ ಕಟ್ಟುವುದು ಗ್ಯಾರಂಟಿ ಎನಿಸಿತ್ತು. ಆದರೆ, ಬಿಗ್ ಬಾಸ್ ಮುಂದೆ ಕಣ್ಣೀರಿಟ್ಟ ರೀತಿ ನೋಡಿದರೆ ವೀಕ್ಷಕರ ಬಲ ಸಿಕ್ಕಿದೆ. ಕಾಳಿ ಸೇಫ್

  ಚಂದ್ರಿಕಾ

  ಚಂದ್ರಿಕಾ

  ಮನೆಯವರ ಹಾಗೂ ವೀಕ್ಷಕರ ಮತ ಕಳೆದುಕೊಂಡರೂ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವ ಭಾಗ್ಯ ಚಂದ್ರಿಕಾ ಅವರಿಗೆ ಲಭಿಸಲಿದೆ. ಕಾರಣ ಕಳೆದ ವಾರ ವೋಟ್ ಔಟ್ ಆದ ಶ್ವೇತಾ ಅವರು ಚಂದ್ರಿಕಾ ಅವರನ್ನು ಸೇಫ್ ಜೋನ್ ನಲ್ಲಿ ಇರಿಸಿದ್ದಾರೆ.

  ವಿನಾಯಕ್ ಜೋಶಿ

  ವಿನಾಯಕ್ ಜೋಶಿ

  ಮೊನ್ನೆ ವಿನಾಯಕ್ ಜೋಶಿ ಮಾಡಿಕೊಂಡ ನಿವೇದನೆ ಕಣ್ಣೀರು ಕಂಡರೆ ಇನ್ನು ಮನೆಯಲ್ಲಿ ಉಳಿಯುವ ಸಾಧ್ಯತೆ ಕಂಡು ಬಂದಿತು. ಆದರೆ, ತಂತ್ರಗಾರಿಕೆ, ತಾಳ್ಮೆ ಯಾವುದರಲ್ಲೂ ಹೆಚ್ಚಿನ ಆಟ ತೋರಿಸದ ಜೋಶಿ ಈ ವಾರ ಹೊರ ಬೀಳುವ ಸ್ಪರ್ಧಿಯಾಗಿದ್ದಾರೆ. ಉಳಿದು ಕೊಂಡರೆ ಅದಕ್ಕೆ ಬಿಗ್ ಬಾಸ್ ಅಥವಾ ಬಾಸ್ ಸುದೀಪ್ ಕಾರಣರಾಗಬಹುದು ಅಷ್ಟೇ. ವೀಕ್ಷಕರು ವೋಟ್ ವಿರುದ್ಧವಾಗೇ ಇದೆ

  ಅನುಶ್ರೀ

  ಅನುಶ್ರೀ

  ಶ್ವೇತಾ ನಂತರ ಮನೆಯಲ್ಲಿ ಬಿಂದಾಸ್ ಓಡಾಡಿಕೊಂಡಿರುವ ಅನು ಕೂಡಾ ಸೇಫ್ ಜೋನ್ ನಲ್ಲಿದ್ದಾರೆ.

  ನಿಖಿತಾ ತುಕ್ರಲ್

  ನಿಖಿತಾ ತುಕ್ರಲ್

  ಅಸಲಿಗೆ ಮನೆಯಿಂದ ಹೊರಬೀಳಬೇಕಿರುವ ಆಮದು ನಟಿ ನಿಖಿತಾ ತುಕ್ರಲ್ ಅವರು ಈ ವಾರ ಸೇಫ್ ಆಗಿದ್ದಾರೆ. ಮುಂದೆ ಗುರೂಜಿಗಳಲ್ಲಿ ಒಬ್ಬರನ್ನು ಮನೆಯಿಂದ ಹೊರ ಹಾಕುವ ಪ್ಲ್ಯಾನ್ ನಲ್ಲಿದ್ದಾರೆ.

  English summary
  Etv Kannada Bigg Boss is gaining its popularity day by day and public are voting cleverly and eliminating the un wanted contestant from Bigg Boss house. In order to save both Guruji's and a lady candidate Vinayak Joshi in danger of eviction

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X