For Quick Alerts
ALLOW NOTIFICATIONS  
For Daily Alerts

  ಪ್ರತಿದಿನ ನಿಮ್ಮನ್ನ ನಕ್ಕು ನಲಿಸುವ ಉದಯ ಕಾಮಿಡಿಗೆ 9ನೇ ಹುಟ್ಟುಹಬ್ಬ ಕಣ್ರೀ

  By Harshitha
  |

  ವೀಕ್ಷಕರಲ್ಲಿರುವ ಟೆನ್ಷನ್ ನನ್ನು ಕಡಿಮೆ ಮಾಡಲು, ನಾನ್ ಸ್ಟಾಪ್ ನಗುವನ್ನು ನೀಡಲು 2009 ರಲ್ಲಿ ಬಂದ ಕರುನಾಡಿನ ಏಕೈಕ ಕಾಮಿಡಿ ಚಾನಲ್ 'ಉದಯ ಕಾಮಿಡಿ'. ನಗುವಿನ ಕಾರ್ಯಕ್ರಮಗಳ ಸರಮಾಲೆಯನ್ನು ಅಲಂಕರಿಸಿಕೊಂಡು ಬಂದ 'ಉದಯ ಕಾಮಿಡಿ' ಈಗ ಒಂಬತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

  ರಾಜ್ಯದ ಏಕೈಕ ಹಾಸ್ಯ ವಾಹಿನಿ 'ಉದಯ ಕಾಮಿಡಿ' ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ತನ್ನ ಕಾಮಿಡಿ ಕಮಾಲ್ ಮೂಲಕವೇ ಅತೀ ಹೆಚ್ಚು ಪ್ರೇಕ್ಷಕರನ್ನು ತಲುಪಿದ ಹಿರಿಮೆ ವಾಹಿನಿಯದು. ನಗರ ಪ್ರದೇಶದಲ್ಲಾಗಲಿ ಗ್ರಾಮಾಂತರ ಪ್ರದೇಶದಲ್ಲಾಗಲಿ 'ಉದಯ ಕಾಮಿಡಿ'ಗೆ ತನ್ನದೇ ಆದ ಪ್ರೇಕ್ಷಕರಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ 'ಉದಯ ಕಾಮಿಡಿ'ಗೆ ಅತಿ ಹೆಚ್ಚು ಪ್ರೇಕ್ಷಕರಿದ್ದು, ಟಿ.ಆರ್.ಪಿಯಲ್ಲಿ 'ಉದಯ ಕಾಮಿಡಿ' ಉನ್ನತ ಸ್ಥಾನದಲ್ಲಿದೆ.

  ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಹಾಸ್ಯ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಜನತೆಯನ್ನು ನಗಿಸುತ್ತಾ ಸಂತೋಷವಾಗಿಡುತ್ತಿರುವ 'ಉದಯ ಕಾಮಿಡಿ' 'ದಕ್ಷಿಣ ಭಾರತದ ನಂಬರ್ ಒನ್ ಕಾಮಿಡಿ ಚಾನಲ್' ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅಂಕಿ ಸಂಖ್ಯೆಯ ಅನುಗುಣವಾಗಿಯೂ 2015ರಲ್ಲಿ 55 ಜಿ.ಆರ್.ಪಿ ಇಂದ 2018ರ ಹೊತ್ತಿಗೆ 120 ಜಿ.ಆರ್.ಪಿಯನ್ನು 'ಉದಯ ವಾಹಿನಿ' ಪಡೆದಿದೆ.

  ಬ್ರೇಕ್ ಇಲ್ಲದೇ 30 ನಿಮಿಷದ 'ನಾನ್ ಸ್ಟಾಪ್ ನಗು' ಶೋ ಬಹು ಯಶಸ್ವಿಯ ಕಾರ್ಯಕ್ರಮವಾಗಿದೆ. 'ಟಾಪ್ 10 @ 9', 'ಬ್ಲಾಕ್ ಬಸ್ಟರ್ ಮಿಡ್ ಡೇ ಟಾಕೀಸ್', 'ನಗಲೇಬೇಕು', 'ಸಿಕ್ಕಾಪಟ್ಟೆ ನಕ್ಕುಬಿಡಿ', 'ಕಿರಿಕ್ ಗ್ಯಾಂಗ್', 'ಸೂಪರ್ ಸುಬ್ಬಲಕ್ಷ್ಮೀ', 'ಸೆಲ್ಫಿ ಸೀನ್' ನಂತಹ ಹಾಸ್ಯ ಕಾರ್ಯಕ್ರಮಗಳು ಈಗ 'ಉದಯ ಕಾಮಿಡಿ'ಯಲ್ಲಿ ಪ್ರಸಾರವಾಗುತ್ತಿವೆ. ಮುಂದೆ ಓದಿರಿ....

  ಉದಯ ಕಾಮಿಡಿಯ ಯಶಸ್ವಿ ಕಾರ್ಯಕ್ರಮ ಹಳ್ಳಿಹಬ್ಬ

  'ಉದಯ ಕಾಮಿಡಿ' ಯಶಸ್ವಿ ಕಾರ್ಯಕ್ರಮಗಳಲ್ಲಿ 'ಹಳ್ಳಿಹಬ್ಬ' ಸಹ ಒಂದು. ಹಳ್ಳಿಯ ಸೊಗಡು ಹಾಗೂ ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಬಿಂಬಿಸುವುದರ ಜೊತೆಗೆ ಅಲ್ಲಿನ ಜನರನ್ನು ಮೋಜು ಮಸ್ತಿನಲ್ಲಿ ತೊಡಗಿಸಿ ನಕ್ಕುನಲಿಸುವಲ್ಲೂ ಯಶಸ್ವಿಯಾಗಿದೆ. ಅಲ್ಲದೆ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜನಪ್ರಿಯ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.

  ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕಾರ್ಯಕ್ರಮ

  'ಹಳ್ಳಿಹಬ್ಬ' ಕಾರ್ಯಕ್ರಮ ಈವರೆಗೆ ಹಾಸನ, ತುಮಕೂರು, ಬೆಳಗಾವಿ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ನಡೆಸಿ ಯಶಸ್ವಿಯಾಗಿದೆ. ಈ ಹಳ್ಳಿ ಸೊಗಡಿನ ಕಾರ್ಯಕ್ರಮಕ್ಕೆ 'ಉದಯ ಟಿವಿ'ಯ ಕಣ್ಮಣಿ ಹಾಗೂ ಬ್ರಹ್ಮಾಸ್ತ್ರ ಧಾರಾವಾಹಿಯ ತಂಡದವರೂ ಸಹ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ.

  ಕಾಮಿಡಿ ನಟರ ಶುಭಾಶಯ

  ''ಉದಯ ಕಾಮಿಡಿ ಒಂಬತ್ತು ವರ್ಷವನ್ನು ಮುಗಿಸಿ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರು ಕಾಮಿಡಿಯನ್ನು ಎಷ್ಟು ಇಷ್ಟ ಪಡುತ್ತಾರೆ ಇದರಿಂದ ತಿಳಿಯುತ್ತದೆ'' ಎಂದು ಕರ್ನಾಟಕದ ಕುಳ್ಳ ಎಂದೇ ಪ್ರಸಿದ್ಧಿಯಾದ ನಟ, ನಿರ್ದೇಶಕ ದ್ವಾರಕೀಶ್ ಹೇಳಿದ್ದಾರೆ. ''ಕರ್ನಾಟಕದಲ್ಲಿ ಇರೋ ಒಂದೇ ಕಾಮಿಡಿ ಚಾನಲ್ ಉದಯ ಕಾಮಿಡಿ, ನಾನು ಅದರ ಅಭಿಮಾನಿ'' ಎಂದು ನವರಸ ನಾಯಕ ಜಗ್ಗೇಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

  ಸಾಧು ಕೋಕಿಲ ಎನಂತಾರೆ.?

  ಹಾಸ್ಯ ನಟ, ಸಂಗೀತ ನಿರ್ದೇಶಕ ಕೋಕಿಲ ಸಾಧು ಮಾತನಾಡಿ ''ನಾನು ಯಾವುದೇ ಊರಿಗೆ ಹೋಗ್ಲಿ, ಪ್ರತಿಯೊಬ್ಬ ಅಭಿಮಾನಿ ಹೇಳೋದು ಒಂದೇ ಮಾತು, ನಾವು ಮಲಗುವ ಮುಂಚೆ ಉದಯ ಕಾಮಿಡಿಯಲ್ಲಿ ನಿಮ್ಮ ಕಾಮಿಡಿ ನೋಡೇ ಮಲಗೋದು'' ಎಂದಿದ್ದಾರೆ. ''ಕೆಲಸಕ್ಕೆ ಹೋಗಿ ಬೇಜಾರಾಗಿ ಬಂದಾಗ, ಯಾವುದೇ ಖರ್ಚಿಲ್ಲದೆ ಮನೋರಂಜನೆ ಕೊಡೋದು ಉದಯ ಕಾಮಿಡಿ ಒಂದೇ'' ಎಂದು ಹೇಳಿದರು ರಾಕ್ ಲೈನ್ ವೆಂಕಟೇಶ್.

  ಶುಭ ಕೋರಿದ ಹಾಸ್ಯ ದಿಗ್ಗಜರು

  ''ಚಿಂತೆ ಮರೆಯೋಕೆ ಒಂದೇ ಒಂದು ಸಾಧನೆ ಅದು ಉದಯ ಕಾಮಿಡಿ'' ಅಂತಾರೆ ದೊಡ್ಡಣ್ಣ. ''ಆರೋಗ್ಯಕರವಾದ ಕಾರ್ಯಕ್ರಮ ನೀಡುತ್ತಿರೋ ಉದಯ ಕಾಮಿಡಿಗೆ ಕರ್ನಾಟಕದ ಎಲ್ಲಾ ಜನತೆಯ ಪರವಾಗಿ ನನ್ನ ಅಭಿನಂದನೆಗಳು'' ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹಾಗೆ ಹಿರಿಯನಟಿ ಲಕ್ಷ್ಮೀದೇವಿ, ಉಮೇಶ್, ಡಿಂಗ್ರಿ ನಾಗರಾಜ, ಟೆನ್ನಿಸ್ ಕೃಷ್ಣ, ರೇಖಾದಾಸ್, ಚಿಕ್ಕಣ್ಣ, ಬಿರಾದರ್, ಬ್ಯಾಂಕ್ ಜನಾರ್ಧನ್, ಸೃಜನ್ ಲೋಕೇಶ್, ಮಂಡ್ಯ ರಮೇಶ್, ಕುರಿ ಪ್ರತಾಪ್ 'ಉದಯ ಕಾಮಿಡಿ'ಗೆ ಶುಭ ಹಾರೈಸಿದ್ದಾರೆ.

  ಹೊಸ ಹುರುಪಿನಲ್ಲಿ ಉದಯ ಕಾಮಿಡಿ

  ಇನ್ನು ಈ ವಾಹಿನಿಯಲ್ಲಿ ನಿರೂಪಕರಾಗಿದ್ದ ಕುರಿ ಪ್ರತಾಪ್, ಚಿಕ್ಕಣ್ಣ ಈಗ ಚಲನಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಜನ ಎಷ್ಟೇ ಟೆನ್ಷನ್ ಹಾಗೂ ಗಡಿಬಿಡಿಯಲ್ಲಿ ಮನೆಗೆ ಬಂದಿದ್ದರೂ ಅವರಿಗೆ ನಿರಾಸೆ ಮೂಡಿಸದೆ ಮನಸ್ಸಿಗೆ ಮಂದಹಾಸ ಮೂಡಿಸುವುದು 'ಉದಯ ಕಾಮಿಡಿ'ಯ ಉದ್ದೇಶ. 9 ವರ್ಷ ಪೂರೈಸಿರುವ 'ಉದಯ ಕಾಮಿಡಿ' ಹೊಸ ಹುರುಪಿನೊಂದಿಗೆ ಮತ್ತಷ್ಟು ಹೊಸ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರನ್ನು ರಂಜಿಸಲು ಮುಂದಾಗಿದೆ.

  English summary
  “Udaya Comedy” is the one and only satellite television channel in Karnataka which is dedicated to comedy. Launched on 2009, the channel is now celebrating its ninth anniversary.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more