For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತ

  |

  'ಮಾಲ್ಗುಡಿ ಡೇಸ್' ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆರಂಭಿಸುವ ಮಾಹಿತಿ ಖಚಿತವಾದ ಬೆನ್ನಲ್ಲೇ, ಕನ್ನಡದ ಟೆಲಿವಿಷನ್ ವೀಕ್ಷಕರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಡಬ್ಬಿಂಗ್ ಪರ ಹೋರಾಟಗಾರರ ಸತತ ಪ್ರಯತ್ನದ ಫಲವಾಗಿ 'ಮಹಾಭಾರತ' ಧಾರಾವಾಹಿ ಕನ್ನಡದಲ್ಲಿ ಪ್ರಸಾರವಾಗಲಿದೆ. ಇದು ಕನ್ನಡ ಕಿರುತೆರೆ ಮತ್ತು ಡಬ್ಬಿಂಗ್ ಹೋರಾಟದಲ್ಲಿ ಹೊಸ ಇತಿಹಾಸ ಬರೆದಿದೆ.

  ಖಾಸಗಿ ವಾಹಿನಿಯಲ್ಲಿ 'ಮಹಾಭಾರತ'ದ ಕನ್ನಡ ಅವತರಣಿಕೆ ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ತಿಂಗಳಿನಿಂದಲೇ 'ಮಹಾಭಾರತ' ಕನ್ನಡ ಡಬ್ಬಿಂಗ್ ಪ್ರಸಾರವಾಗಬೇಕಿತ್ತು. ಆದರೆ ಟೆಲಿವಿಷನ್ ಧಾರಾವಾಹಿ ಒಕ್ಕೂಟದಿಂದ ಒತ್ತಡಗಳು ಬಂದಿದ್ದರಿಂದ ವಾಹಿನಿ, ಡಬ್ಬಿಂಗ್ ಧಾರಾವಾಹಿ ಪ್ರಸಾರದಿಂದ ಹಿಂದೆ ಸರಿದಿತ್ತು ಎನ್ನಲಾಗಿದೆ. ಅದರ ವಿರುದ್ಧ ನಡೆದ ಅಭಿಯಾನಗಳ ಪರಿಣಾಮವಾಗಿ 'ಮಹಾಭಾರತ' ಪ್ರಸಾರವಾಗಲಿದೆ. ಮುಂದೆ ಓದಿ...

  ನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನ

  ಸೋಮವಾರದಿಂದ ಪ್ರಸಾರ

  ಸೋಮವಾರದಿಂದ ಪ್ರಸಾರ

  ಲಾಕ್ ಡೌನ್ ಅವಧಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾದ 'ಮಹಾಭಾರತ' ಮತ್ತು 'ರಾಮಾಯಣ' ಧಾರಾವಾಹಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆದಿದ್ದವು. ಅದೇ ರೀತಿ ಪೌರಾಣಿಕ ಧಾರಾವಾಹಿಗಳು ಕನ್ನಡದಲ್ಲಿಯೂ ಪ್ರಸಾರವಾಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಮೇ 11ರಿಂದ ರಾತ್ರಿ 8 ಗಂಟೆಗೆ 'ಮಹಾಭಾರತ' ಬಿತ್ತರವಾಗಲಿದೆ.

  ಏಪ್ರಿಲ್‌ನಲ್ಲಿಯೇ ಪ್ರಸಾರವಾಗಬೇಕಿತ್ತು

  ಏಪ್ರಿಲ್‌ನಲ್ಲಿಯೇ ಪ್ರಸಾರವಾಗಬೇಕಿತ್ತು

  ಇದಕ್ಕೂ ಮುನ್ನ 'ಮಹಾಭಾರತ'ದ ಕನ್ನಡ ಅವತರಣಿಕೆ ಏಪ್ರಿಲ್‌ನಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಉದ್ದೇಶದಂತೆ ನಡೆದಿದ್ದರೆ ಏ. 13ರಿಂದ ರಾತ್ರಿ 9 ಗಂಟೆಗೆ 'ಮಹಾಭಾರತ' ಧಾರಾವಾಹಿ ಕನ್ನಡಿಗರನ್ನು ತಲುಪುತ್ತಿತ್ತು.

  'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ

  ಟ್ವಿಟ್ಟರ್‌ನಲ್ಲಿ ಆಂದೋಲನ

  ಟ್ವಿಟ್ಟರ್‌ನಲ್ಲಿ ಆಂದೋಲನ

  ಡಬ್ಬಿಂಗ್ ವಿರೋಧಿ ಬಣದ ಒತ್ತಡಕ್ಕೆ ಮಣಿದು 'ಮಹಾಭಾರತ' ಪ್ರಸಾರದಿಂದ ವಾಹಿನಿ ಹಿಂದೆ ಸರಿದಿತ್ತು. ಇದು ಡಬ್ಬಿಂಗ್ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ನಮ್ಮ ಭಾಷೆಯಲ್ಲಿ ಕಾರ್ಯಕ್ರಮ ವೀಕ್ಷಿಸುವುದು ನಮ್ಮ ಹಕ್ಕು. ಇದನ್ನು ಯಾರೂ ಕಸಿದುಕೊಳ್ಳುವಂತಿಲ್ಲ ಎಂದು, ಕನ್ನಡದಲ್ಲಿ ಮಹಾಭಾರತ ಪ್ರಸಾರಕ್ಕೆ ಟ್ವಿಟ್ಟರ್‌ನಲ್ಲಿ ಆಂದೋಲನ ನಡೆಸಲಾಗಿತ್ತು.

  ಧೈರ್ಯವಾಗಿ ಪ್ರಸಾರ ಮಾಡಿ

  ಧೈರ್ಯವಾಗಿ ಪ್ರಸಾರ ಮಾಡಿ

  ಕನ್ನಡದಲ್ಲಿ ಮಹಾಭಾರತ ಪ್ರಸಾರ ಮಾಡಬೇಡಿ ಎನ್ನುವವರು ಕನ್ನಡ ವಿರೋಧಿಗಳು, ಧೈರ್ಯವಾಗಿ ಪ್ರಸಾರ ಮಾಡಿ ನಿಮ್ಮ ಜೊತೆ ಕರವೇ ಇದೆ. 6.5 ಕೋಟಿ ಕನ್ನಡಿಗರ ಆಸೆಯೂ ಸಹ ಕನ್ನಡದಲ್ಲಿ ಬರಬೇಕು ಎಂಬುದು ಎಂದು ಕರವೇ ರಾಜ್ಯ ಉಪಾಧ್ಯಕ್ಷ ಡಾ. ಪಿ. ಆಂಜನಪ್ಪ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

  English summary
  Mahabharata serial to be telecasted in Kannada on Star Suvarna from May 11 after pro dubbing activists campaign. Here is the date and timing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X