ಮತ್ತೆ ಬಂತು 'ಕನ್ನಡ ಕೋಗಿಲೆ': ಈ ಸಲ ಸರ್ಪ್ರೈಸ್ ಮೇಲೆ ಸರ್ಪ್ರೈಸ್
ಕಿರುತೆರೆಯ ಸೂಪರ್ ಹಿಟ್ ಸಿಂಗಿಂಗ್ ರಿಯಾಲಿಟಿ ಶೋ ಕನ್ನಡ ಕೋಗಿಲೆ ಮತ್ತೆ ಬರ್ತಿದೆ. ಕಳೆದ ಬಾರಿ ಸಂಗೀತ ಪ್ರೇಕ್ಷಕರನ್ನ ರಂಜಿಸಿದ್ದ ಈ ಕಾರ್ಯಕ್ರಮ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು.
ಈಗ ಎರಡನೇ ಸೀಸನ್ ಬರ್ತಿದ್ದು, ಈ ಸಲ ಹಲವು ಸರ್ಪ್ರೈಸ್ ಗಳ ಜೊತೆ ಮೂಡಿ ಬರ್ತಿದೆ. ಮೊದಲ ಸರ್ಪ್ರೈಸ್ ಈಗಾಗಲೇ ಗೊತ್ತಾಗಿದೆ. ಕಳೆದ ಆವೃತ್ತಿ ನಿರೂಪಣೆ ಮಾಡಿದ್ದ ಅನುಪಮಾ ಗೌಡ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ.
ಅನುಪಮಾ ಬದಲು 'ಕನ್ನಡ ಕೋಗಿಲೆ ಸೀಸನ್ 2'ಗೆ ಹೊಸ ಆಂಕರ್
ಭರವಸೆ ಇದೆ. ಇನ್ನು ಕರ್ನಾಟಕ ರಾಜ್ಯಾದ್ಯಂತ ಹಲವು ಸ್ಥಳಿಯ ಪ್ರತಿಭೆಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಈ ಸಲ ಸೂಪರ್, ಡೂಪರ್, ಎಕ್ಸ್ಟ್ರಾ ಸೂಪರ್ ಎನ್ನುವಂತಹ ಪ್ರತಿಭೆಗಳು ಈ ವೇದಿಕೆಗೆ ಬರಲಿದೆಯಂತೆ.

ಈಗಾಗಲೇ ಕೆಲವು ಸ್ಪರ್ಧಿಗಳ ಪ್ರೋಮೋ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಕಳೆದ ಮೂರು ದಶಕಗಳಿಂದ ಅನೇಕ ವೇದಿಕೆಗಳಲ್ಲಿ ಹಾಡಿದ ಮೋಹನ್ ಕೃಷ್ಣ ಕನ್ನಡ ಕೋಗಿಲೆ ವೇದಿಕೆಯಲ್ಲಿ ಹಾಡುತ್ತಿದ್ದಾರೆ. ಇಂತಹ ಹಲವು ಕಲಾವಿದರು ಭಾಗಿಯಾಗಲಿದ್ದಾರೆ.
ಮಾರ್ಚ್ 23ರಂದು ರಾತ್ರಿ 9 ಗಂಟೆಗೆ 'ಕನ್ನಡ ಕೋಗಿಲೆ'ಯ ಮೊದಲ ಎಪಿಸೋಡ್ ಆರಂಭವಾಗ್ತಿದೆ.


Click it and Unblock the Notifications











