»   » ಯುಗಾದಿ ಹಬ್ಬದ ಉಡುಗೊರೆ: ಉದಯ ಟಿವಿಯಲ್ಲಿ 'ಅಂಜನಿಪುತ್ರ' ಪ್ರೀಮಿಯರ್

ಯುಗಾದಿ ಹಬ್ಬದ ಉಡುಗೊರೆ: ಉದಯ ಟಿವಿಯಲ್ಲಿ 'ಅಂಜನಿಪುತ್ರ' ಪ್ರೀಮಿಯರ್

Posted By:
Subscribe to Filmibeat Kannada

2017 ರಲ್ಲಿ ಯಶಸ್ವಿಯಾದ ಚಿತ್ರಗಳ ಪೈಕಿ 'ಅಂಜನಿಪುತ್ರ' ಕೂಡ ಒಂದು. ಹರ್ಷ ನಿರ್ದೇಶಿಸಿದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಯುಗಾದಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ಮಾರ್ಚ್ 18 ರಂದು ಸಂಜೆ 6 ಕ್ಕೆ ಪ್ರಸಾರವಾಗಲಿದೆ.

'ಅಂಜನಿ ಪುತ್ರ'ದಲ್ಲಿ ಪುನೀತ್ ರಾಜಕುಮಾರ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಪಿ.ರವಿಶಂಕರ್, ರಮ್ಯಾ ಕೃಷ್ಣ, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ತಮ್ಮ ನೈಜ ಅಭಿನಯದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

ಸಣ್ಣ ಉದ್ಯಮಿ ವಿರಾಟ್ ನ ಪ್ರಯಾಣದ ಸುತ್ತ ಹೆಣೆದ ಕಥೆಯೇ 'ಅಂಜನಿ ಪುತ್ರ'. ತನ್ನ ತಾಯಿಯ ತಪ್ಪು ಗ್ರಹಿಕೆಯಿಂದಾಗಿ ತನ್ನ ಶ್ರೀಮಂತ ಕುಟುಂಬದಿಂದ ದೂರಿರುತ್ತಾನೆ. ಕುಖ್ಯಾತ ಖಳನಾಯಕನನ್ನು ಎದುರಿಸಲು ತನ್ನ ತಾಯಿ ಮತ್ತು ಕುಟುಂಬದೊಂದಿಗೆ ಅವನು ಮತ್ತೆ ಸೇರಿದಾಗ ಕಥೆಯಲ್ಲಿ ಆಗ ತಿರುವು ಕಾಣುತ್ತದೆ.

Kannada Movie 'Anjaniputra' to premier in Udaya TV on March 18th

'ಅಂಜನಿಪುತ್ರ' ಒಂದು ಮಾಸ್ ಮನರಂಜನೆಯ ಚಿತ್ರವಾಗಿದ್ದು ಪುನೀತ್ ರಾಜ್ ಕುಮಾರ್ ತಮ್ಮ ಪಾತ್ರವನ್ನು ಸರಾಗವಾಗಿ ನಿರ್ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಪುನೀತ್ ಜೊತೆ ನಟಿಸಿದ ಚಿತ್ರ ಇದಾಗಿದೆ.

ದರ್ಶನ್ - ಪುನೀತ್ ರಾಜ್ ಕುಮಾರ್ ನಡುವೆ TRP ಚಾಲೆಂಜ್ !

ಒಟ್ಟಾರೆ 'ಅಂಜನಿಪುತ್ರ' ಒಂದು ರೋಮ್ಯಾಂಟಿಕ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಸೂಪರ್ ಹಿಟ್ ಸಾಂಗ್ಸ್ ಗಳಿಂದ ಕೂಡಿದ್ದು ವೀಕ್ಷಿಸಲು ಒಂದು ಮನರಂಜನೆಯ ಪ್ಯಾಕೇಜ್ ಎನ್ನಬಹುದು.

ಯುಗಾದಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ 'ಅಂಜನಿಪುತ್ರ' ಇದೇ ಮಾರ್ಚ್ 18ರಂದು ಸಂಜೆ 6ಕ್ಕೆ ಪ್ರಸಾರ ಆಗಲಿದೆ.

English summary
Power Star Puneeth Rajkumar starrer Kannada Movie 'Anjaniputra' to premier in Udaya TV on March 18th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada