»   » ಸುದೀಪ್ ದಂಪತಿಗೆ 'ಜೆಕೆ' ಧನ್ಯವಾದ ಹೇಳಿದ್ದೇಕೆ?

ಸುದೀಪ್ ದಂಪತಿಗೆ 'ಜೆಕೆ' ಧನ್ಯವಾದ ಹೇಳಿದ್ದೇಕೆ?

Posted By:
Subscribe to Filmibeat Kannada
ಜೆ ಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಸುದೀಪ್ ದಂಪತಿಗೆ ಥ್ಯಾಂಕ್ಸ್ ಹೇಳಿದ್ಯಾಕೆ? | Filmibeat Kannada

ಬಿಗ್ ಬಾಸ್ ಮನೆಯಲ್ಲಿರುವ ಕಾರ್ತಿಕ್ ಜಯರಾಂ ಮತ್ತ ಕಿಚ್ಚ ಸುದೀಪ್ ಒಳ್ಳೆಯ ಸ್ನೇಹಿತರು. ಸುದೀಪ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಟರ ಪೈಕಿ ಜೆಕೆ ಕೂಡ ಒಬ್ಬರು. ಸುದೀಪ್ ಅವರ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಜೆಕೆ, ಸಿಸಿಎಲ್ ಕ್ರಿಕೆಟ್ ನಲ್ಲೂ ಕಿಚ್ಚನ ಜೊತೆ ಆಟವಾಡಿದ್ದಾರೆ.

ಇದೀಗ, ಬಿಗ್ ಬಾಸ್ ಮನೆಯಲ್ಲಿರುವ ಜೆಕೆ, ಸುದೀಪ್ ದಂಪತಿಗೆ ಧನ್ಯವಾದ ಹೇಳಿದ್ದಾರೆ. 'ಸಿಂಪಲ್ ಆಗಿ ಒಂದು ಥ್ಯಾಂಕ್ಸ್' ಹೆಸರಿನಲ್ಲಿ ಈ ವಾರ ಟಾಸ್ಕ್ ನೀಡಲಾಗಿತ್ತು. ಇದರ ಅನುಸಾರ, ಕುಟುಂಬದವರನ್ನ ಹೊರತುಪಡಿಸಿ ಸಹಾಯ ಮಾಡಿದ ಹೊರಗಿನವರಿಗೆ ಥ್ಯಾಂಕ್ಸ್ ಹೇಳಬೇಕಿತ್ತು. ಈ ಅವಕಾಶವನ್ನ ಬಳಸಿಕೊಂಡ ನಟ ಜೆಕೆ, ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿಗೆ ಥ್ಯಾಂಕ್ಸ್ ಹೇಳಿದರು.

ಬೆಟ್ಟಿಂಗ್ ನಲ್ಲಿ ಗೆದ್ದ ಸಮೀರಾಚಾರ್ಯ: ಜಯರಾಂ ಕಾರ್ತಿಕ್ ಗೆ ಐದು ಲಕ್ಷ ಲಾಸ್.!

ಜೆಕೆ ಅವಕಾಶಗಳಿಲ್ಲದೇ ಕಷ್ಟದ ಸಮಯದಲ್ಲಿದ್ದಾಗ, ಸುದೀಪ್ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹಿಸಿದ್ದಾರೆ. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನಾನು ನಟಿಸಲು ಪ್ರಿಯಾ ಅವರು ಕಾರಣ ಎಂದು ಹೇಳುವ ಮೂಲಕ ಇಬ್ಬರಿಗೂ ಥ್ಯಾಂಕ್ಸ್ ಹೇಳಿದರು.

Karthik Jayaram says thanks to sudeep family

ಅದಾದ ನಂತರ ಜೆಕೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯ ದೊಡ್ಡ ಧಾರಾವಾಹಿಯಲ್ಲಿ ರಾವಣನ ಪಾತ್ರ ನಿರ್ವಹಿಸಿದ್ದಾರೆ. ಈಗ ತಮ್ಮದೇ ಪ್ರೊಡಕ್ಷನ್ ನಲ್ಲಿ ಒಂದು ಸಿನಿಮಾ ಮಾಡ್ತಿದ್ದಾರೆ.

ಈ ವಾರ ಜಯರಾಂ ಕಾರ್ತಿಕ್ ಔಟ್: ಐದು ಲಕ್ಷ ರೂಪಾಯಿ ಬೆಟ್ಟಿಂಗ್.!

English summary
Bigg Boss had given a task 'Simple Agi Ond Thanks Heli' for the contestants. In this task, Contestants had to express their Gratitude towards the person who helped them in their Bad Times. So JK aka Karthik Jayaram expressed his Gratitude towards Sudeep & Priya Sudeep who helped him in his bad times.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X