Don't Miss!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಕೆಡಿ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ರಂಗು, ಗುಂಗು!
ಶನಿವಾರ-ಭಾನುವಾರ ವೀಕೆಂಡ್ ಬಂತೆಂದರೆ, ಪ್ರೇಕ್ಷಕರಿಗೆ ಹಬ್ಬವೋ ಹಬ್ಬ. ಯಾವ ವಾಹಿನಿಯಲ್ಲಿ ಯಾವ ಪ್ರೋಗ್ರಾಮ್ ನೋಡುವುದು ಎಂದು ಕನ್‌ಫ್ಯೂಸ್ ಆಗಿ ಬಿಡುತ್ತಾರೆ. ಇನ್ನು ತಮ್ಮ ಇಷ್ಟದ ಪ್ರೋಗ್ರಾಮ್ ನೋಡಲು ಕೆಲಸವೆಲ್ಲಾ ಮುಗಿಸಿ ಕಾದು ಕುಳಿತಿರುತ್ತಾರೆ. ಅದರಲ್ಲೂ ಹೆಚ್ಚಿನವರಿಗೆ ಡಿಕೆಡಿ ತುಂಬಾ ಇಷ್ಟ.
ಯಾಕೆಂದರೆ ಡಿಕೆಡಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಬರುತ್ತಾರೆ. ಒಮ್ಮೊಮ್ಮೆ ಹಾಡು ಹಾಡುತ್ತಾರೆ. ಅಗತ್ಯ ಬಿದ್ದರೆ ಡ್ಯಾನ್ಸ್ ಮಾಡುತ್ತಾರೆ. ಇನ್ನು ತಮ್ಮ ಅನುಭವದ ಮಾತುಗಳನ್ನಾಡುತ್ತಾರೆ. ಇವೆಲ್ಲವನ್ನು ಕೇಳಲು ಪ್ರೇಕ್ಷಕರು ಕೂಡ ಅಷ್ಟೇ ಕುತೂಹಲದಿಂದ ಕಾಯುತ್ತಿರುತ್ತಾರೆ. ಹಾಗಾಗಿ ಡಿಕೆಡಿ ಕಾರ್ಯಕ್ರಮ ಕೊಂಚ ಸ್ಪೆಷಲ್ ಎಂದರೂ ತಪ್ಪಿಲ್ಲ.
ಜೊತೆ
ಜೊತೆಯಲಿ:
ಅನು
ಸಾಯಿಸಲು
ಝೇಂಡೆ
ಪಣ..
ಕಾಪಾಡಲು
ಆರ್ಯ
ಸಿದ್ಧ..!
ಇನ್ನು ಈ ಕಾರ್ಯಕ್ರಮದಲ್ಲಿ ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯ, ರಕ್ಷಿತಾ ಪ್ರೇಮ್, ಅನುಶ್ರೀ ಎಲ್ಲರೂ ಇರುತ್ತಾರೆ. ಸ್ಫರ್ಧಿಗಳ ಒಂದೊಂದು ಪರ್ಫಾಮೆನ್ಸ್ ಕೂಡ ಅದ್ಭುತವಾಗಿರುತ್ತದೆ. ಜಡ್ಜ್‌ಗಳು ಕೈಯಲ್ಲಿ ಜೀವ ಹಿಡಿದು ಡ್ಯಾನ್ಸ್ ನೋಡುತ್ತಾರೆ. ಇನ್ನು ಈ ವಾರ ಡಿಕೆಡಿ ಇನ್ನೂ ಸ್ಪೆಷಲ್ ಆಗಿ ಇರುವುದರಲ್ಲಿ ಡೌಟೇ ಇಲ್ಲ. ಯಾಕೆ ಅಂತೀರಾ ಮುಂದೆ ಸುದ್ದಿ ನೋಡಿ.

ಡಿಕೆಡಿಯಲ್ಲಿ ಈ ವಾರ ಇಬ್ಬರು ಸ್ಟಾರ್ಸ್!
ಡಿಕೆಡಿಯಲ್ಲಿ ಪ್ರತೀ ವಾರ ಸೆಂಟರ್ ಆಫ್ ದಿ ಅಟ್ರಾಕ್ಷನ್ ಎಂದರೆ ಅದು ಶಿವಣ್ಣ. ಶಿವಣ್ಣನಿಗಾಗಿಯೇ, ಶಿವಣ್ಣನ ನಗುವಿಗಾಗಿಯೇ ಮಾಡಿದ ಡ್ಯಾನ್ಸ್ ಸಾಕಷ್ಟಿವೆ. ಇನ್ನು ಶಿವಣ್ಣ ಕೂಡ ಡಿಕೆಡಿಯಲ್ಲಿ ಸಖತ್ ಎಂಜಾಯ್ ಮಾಡುತ್ತಾರೆ. ಭಾವನೆಗೆ ಒಳಗಾಗಿದ್ದಾರೆ, ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಪ್ಪನಿಗಾಗಿ, ತಮ್ಮನಿಗಾಗಿ ಹಾಡನ್ನು ಹಾಡಿದ್ದಾರೆ. ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸಿದ್ದಾರೆ. ಇದೀಗ ಈ ವಾರವೂ ಅಂಥದ್ದೇ ಘಟನೆಗಳು ನಡೆಯುವುದರಲ್ಲಿ ಡೌಟ್ ಇಲ್ಲ. ಈ ವಾರ ಶಿವಣ್ಣನ ಜೊತೆಗೆ ಕಿಚ್ಚ ಸುದೀಪ್ ಕೂಡ ದರ್ಶನ ಕೊಡಲಿದ್ದಾರೆ.
ಅಜ್ಜಿಯ
ಉಪವಾಸ
ಸತ್ಯಾಗ್ರಹದಿಂದ
ಇಕ್ಕಟ್ಟಿಗೆ
ಸಿಲುಕಿದ
ಏಜೆ-ಲೀಲಾ

ಎದೆ ಝಲ್ ಎನ್ನುವ ಫರ್ಫಾಮೆನ್ಸ್‌ಗಳು!
ಡಿಕೆಡಿಯಲ್ಲಿ ಎಷ್ಟೋ ಸಲ ನೋಡುಗರಿಗೆ ಹಾರ್ಟ್ ಬಾಯಿಗೆ ಬಂದಂತ ಫೀಲ್ ಆಗುತ್ತದೆ. ಮಜಾ ಮಾಡುವ ಪರ್ಫಾಮೆನ್ಸ್ ಗಿಂತ ಎದೆ ಝಲ್ ಎನ್ನುವ ಪರ್ಫಾಮೆನ್ಸ್ ಹೆಚ್ಚಾಗಿ ಸಿಗುತ್ತದೆ. ಕಾಂಪಿಟೇಷನ್ ದಿನೇ ದಿನೇ ಹೆಚ್ಚಾಗುವ ಕಾರಣ ಸ್ಪರ್ಧಿಗಳು ಕೂಡ ವಾರ ವಾರಕ್ಕೂ ತಮ್ಮ ಪರ್ಫಾಮೆನ್ಸ್ ಇಂಪ್ರೂಮೈಸ್ ಮಾಡಿಕೊಳ್ಳುತ್ತಾ ಬರುತ್ತಾರೆ. ಮೈನವಿರೇಳುವ ನೃತ್ಯವನ್ನು ನೋಡಲು ಕಿಚ್ಚ ಸುದೀಪ್ ಬರುತ್ತಿದ್ದಾರೆ. ಈಗಾಗಲೇ ಬಿಟ್ಟಿರುವ ಪ್ರೋಮೋದಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದು, ಯಾವ ಪರ್ಫಾಮೆನ್ಸ್ ಗೆ ಏನು ಹೇಳುತ್ತಾರೋ ನೋಡಬೇಕಿದೆ.
'ಡಿಕೆಡಿ'ಯಲ್ಲಿ ಕಿಚ್ಚನ ಆರ್ಭಟ!
ಕಿಚ್ಚ ಸುದೀಪ್ ಅವರು ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದೇ ಕಾರಣಕ್ಕಾಗಿಯೇ ಡಿಕೆಡಿಗೂ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಸುದೀಪ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಈ ವಾರ ಹಬ್ಬವೋ ಹಬ್ಬ. ಇನ್ನು ಸೀರೆಲಿ ಹುಡುಗಿರ ನೋಡಲೇ ಬಾರದು ಎಂಬ ಹಾಡಿಗೆ ನವೀನ್-ಹರ್ಷಿತ ಪರ್ಫಾಮೆನ್ಸ್ ಮಾಡಿದ್ದು, ಇದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ನೃತ್ಯದಲ್ಲಿನ ನವೀನ್-ಹರ್ಷಿತ ಅವರ ಕೆಮಿಸ್ಟ್ರಿ ನೋಡಿ ಸುದೀಪ್ ದಂಗಾಗಿದ್ದಾರೆ.
ಪುನೀತ್‌ಗಾಗಿ ಹಾಡಿದ ಸುದೀಪ್!
'ಡಿಕೆಡಿ'ಯಲ್ಲಿ ಸುದೀಪ್ ಅವರು ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಮಾತನಾಡಿದ ಮಾತುಗಳನ್ನು ನೆನೆದು ಸುದೀಪ್ ಭಾವುಕರಾಗಿದ್ದಾರೆ. ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ ಹಾಡನ್ನು ಅಪ್ಪುಗಾಗಿ ಹಾಡಿದ್ದಾರೆ. ಇನ್ನು ಸುದೀಪ್ ಹಾಗೂ ಅಪ್ಪುವಿನ ಚಿಕ್ಕವಯಸ್ಸಿನ ಫೋಟೋ ನೋಡಿದ ಸುದೀಪ್ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.