»   » ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?

ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?

Posted By:
Subscribe to Filmibeat Kannada

ಬಹುಭಾಷೆಯಲ್ಲಿ ಮಿಂಚುತ್ತಿರುವ ಅಪ್ಪಟ್ಟ ಕನ್ನಡಿಗ ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಸುದೀಪ್, ಪತ್ನಿ ಪ್ರಿಯಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

ಅಷ್ಟಕ್ಕೂ ಕಿಚ್ಚ ಸುದೀಪ್ ರವರದ್ದು ಲವ್ ಮ್ಯಾರೇಜ್. ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಸದ್ಯ ದೂರವಾಗಿರುವುದು ಬೇಸರದ ಸಂಗತಿ.

ತಮ್ಮ ವಿಚ್ಚೇದನ ವಿಚಾರ ಕೋರ್ಟ್ ಕಟಕಟೆಯಲ್ಲಿರುವಾಗಲೇ, ಕಿಚ್ಚ ಸುದೀಪ್, ತಮ್ಮ ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಸುದೀಪ್ ಅಂತರಾಳ ಕೆದಕಿದ ರಮೇಶ್

ನಟ ರಮೇಶ್ ಅರವಿಂದ್, ಸುದೀಪ್ ರವರ ಅಂತರಾಳವನ್ನು ಕೆದಕುತ್ತಾ ಹೋದಂತೆ, ಅವರ ಹೃದಯದಲ್ಲಡಗಿದ್ದ ಮಾತುಗಳು ಒಂದೊಂದಾಗಿ ಹೊರಬರತೊಡಗಿದವು. [ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್]

ಬಾಲ್ಯ ಜೀವನದ ಬಗ್ಗೆ ಸುದೀಪ್ ಮಾತು

ಚಿಕ್ಕಂದಿನಲ್ಲಿ ಶಿವಮೊಗ್ಗದಲ್ಲಿ ಅವರು ಆಡಿದ ತುಂಟಾಟಗಳು, ಅಕ್ಕಂದಿರ ಜೊತೆಗಿನ ಬಾಂಧವ್ಯ, ತಂದೆ ತಾಯಿಯ ಜೊತೆಗಿನ ಸಂಬಂಧ, ಕೂಡು ಕುಟುಂಬದ ಸಂತಸವನ್ನು ಕಿಚ್ಚ ಸುದೀಪ್ ಮೆಲುಕು ಹಾಕಿದರು. ['ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!]

ಸುದೀಪ್ ಗೆ ಕಾದಿತ್ತು ಅಚ್ಚರಿ!

ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಾಗ ತಾವು ಎದುರಿಸಿದ ಸಮಸ್ಯೆಗಳು, ಕಾಲೇಜು ದಿನಗಳಲ್ಲಿನ ಕ್ರಿಕೆಟ್ ಆಟದ ಹುಚ್ಚು, ಗಿಟಾರ್ ಕಲಿತ ದಿನಗಳು, ಮುಂಬೈಗೆ ಆಕ್ಟಿಂಗ್ ತರಬೇತಿಗೆ ಹೋದ ಸಂದರ್ಭ, ಇವುಗಳೆಲ್ಲ 'ವೀಕೆಂಡ್ ಟೆಂಟ್' ಪರದೆ ಮೇಲೆ ಮೂಡಿದಾಗ, ಕಿಚ್ಚ ಸುದೀಪ್ ಅಚ್ಚರಿ ಪಟ್ಟರು. [ಕಿಚ್ಚ ಸುದೀಪ್ ವಿಶೇಷ 'ವೀಕೆಂಡ್'ಗೆ ಆಗಮಿಸಿದ ಸ್ಪೆಷಲ್ ಗೆಸ್ಟ್ ಯಾರು?]

ಚಿತ್ರರಂಗದಲ್ಲಿನ ಕಷ್ಟದ ದಿನಗಳು

ತಾವು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಎದುರಿಸಿದ ನೋವು ಅವಮಾನಗಳ ಬಗ್ಗೆ ಕಿಚ್ಚ ಸುದೀಪ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದರು.

ಪತ್ನಿ ಪ್ರಿಯಾ ಬಗ್ಗೆ ಸುದೀಪ್ ಮಾತು

''ನನ್ನ ಇಂದಿನ ಬೆಳವಣಿಗೆಗೆ ಪತ್ನಿ ಪ್ರಿಯಾ ಮುಖ್ಯ ಕಾರಣ'' ಅಂತ ಕಿಚ್ಚ ಸುದೀಪ್ ಹೇಳಿದರು.

ಪ್ರಿಯಾ ಪ್ರೀತಿಗೆ ಚಿರಋಣಿ

''ಪತ್ನಿ ಪ್ರೀತಿಗೆ ನಾನು ಸದಾ ಚಿರಋಣಿ'' ಅಂತ ಕೂಡ ಕಿಚ್ಚ ಸುದೀಪ್ ಹೇಳಿದರು.

ಸಾನ್ವಿ ಬಗ್ಗೆ ಸುದೀಪ್ ಮಾತು

ಇದೇ ಸಂದರ್ಭದಲ್ಲಿ ಪುತ್ರಿ ಸಾನ್ವಿ ಬಗ್ಗೆ ಕೂಡ ಸುದೀಪ್ ಮಾತನಾಡಿದರು.

ಯಾರಿಗೂ ಗೊತ್ತಿಲ್ಲದ ಅನೇಕ ವಿಷಯಗಳು ಬಹಿರಂಗವಾಗಲಿದೆ

ಕಿಚ್ಚ ಸುದೀಪ್ ಬಗ್ಗೆ ಅಭಿಮಾನಿಗಳಿಗೆ ಗೊತ್ತಿಲ್ಲದ ಅನೇಕ ಸಂಗತಿಗಳು, ಅದೆಷ್ಟೋ ನೆನಪುಗಳು ಹೃದಯಾಂತರಾಳದಿಂದ ಹೊರಬಂದು 'ವೀಕೆಂಡ್ ವಿತ್ ರಮೇಶ್' ಗ್ರ್ಯಾಂಡ್ ಫಿನಾಲೆಗೆ ಒಂದು ವಿಶೇಷ ಅಂತ್ಯವನ್ನು ತಂದುಕೊಟ್ಟಿದೆ.

ಇದೆಲ್ಲಾ ಸ್ಯಾಂಪಲ್ ಅಷ್ಟೆ.!

ಸುದೀಪ್ ಬಾಲ್ಯ ಜೀವನದ ಬಗ್ಗೆ ಹಾಗೂ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಬಗ್ಗೆ ಸುದೀಪ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಏನು ಹೇಳಿದ್ದಾರೆ ಅನ್ನೋದರ ಬಗ್ಗೆ ಸ್ವಲ್ಪ ಮಾಹಿತಿ ಮಾತ್ರ ನಿಮಗೆ ಕೊಟ್ಟಿದ್ದೀವಿ. ಇನ್ನೂ ಸಾಕಷ್ಟು ವಿಚಾರಗಳನ್ನ ಸುದೀಪ್ ಹಂಚಿಕೊಂಡಿದ್ದಾರೆ. ಎಲ್ಲವನ್ನೂ ಜೀ ಕನ್ನಡದಲ್ಲಿ ಪ್ರಸಾರವಾಗುವ ಸಂಚಿಕೆಯಲ್ಲಿ ನೋಡಿ...

ಸಂಚಿಕೆ ಪ್ರಸಾರ ಯಾವಾಗ?

ಈ ವಾರಾಂತ್ಯ ಅಂದ್ರೆ, ಏಪ್ರಿಲ್ 23 ಹಾಗೂ 24 ರಂದು ಸುದೀಪ್ ರವರ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Kannada Actor, Director, Kiccha Sudeep spoke about his wife Priya in Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada