For Quick Alerts
  ALLOW NOTIFICATIONS  
  For Daily Alerts

  ಹಿಂದಿ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿರುವ ಕಿಲಿ ಪೌಲ್

  |

  ಭಾರತದ ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡುವ ಆಫ್ರಿಕಾದ ತಾಂಜಾನಿಯಾದ ಪ್ರಜೆ ಕಿಲಿ ಪೌಲ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯ. ತನ್ನ ಸಾಂಪ್ರಾಯಿಕ ಉಡುಪಿನಲ್ಲಿ, ಪತ್ನಿಯೊಟ್ಟಿಗೆ ಸೇರಿಕೊಂಡು ಭಾರತೀಯ ಸಿನಿಮಾಗಳ ಹಾಡಿಗೆ ಸರಳವಾಗಿ ಅದರೆ ಸುಂದರವಾಗಿ ಡ್ಯಾನ್ಸ್ ಮಾಡುವ ಕಿಲಿ ಪೌಲ್ ಜನರ ಮನಸ್ಸು ಮಾತ್ರವಲ್ಲ ಸ್ವತಃ ಪ್ರಧಾನಿ ಮೋದಿಯವರ ಮನಸ್ಸು ಗೆದ್ದಿದ್ದಾರೆ.

  ಇಷ್ಟು ದಿನ ಆಫ್ರಿಕಾದ ತಾಂಜಾನಿಯಾದಲ್ಲಿದ್ದುಕೊಂಡೆ ಭಾರತದ ಹಾಡುಗಳಿಗೆ ಡ್ಯಾನ್ಸ್ ಮಾಡಿ ಭಾರತದ ಸಿನಿಮಾ ಪ್ರಿಯರ ಮೆಚ್ಚಿನ ಡ್ಯಾನ್ಸರ್ ಆಗಿದ್ದ ಕಿಲಿ ಪೌಲ್ ಇದೀಗ ಭಾರತಕ್ಕೆ ಬಂದಿದ್ದು ಇಲ್ಲಿ ಹಲವು ರಿಯಾಲಿಟಿ ಶೋಗ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

  RRR ಬಳಿಕ ದಕ್ಷಿಣದ ಭಾರತದ ಸಿನಿಮಾಗಳ ಮೇಲೆ ನೆಟ್‌ಫ್ಲಿಕ್ಸ್‌ ಕಣ್ಣು: ಕನ್ನಡ ಲೆಕ್ಕಕ್ಕೇ ಇಲ್ವಾ?RRR ಬಳಿಕ ದಕ್ಷಿಣದ ಭಾರತದ ಸಿನಿಮಾಗಳ ಮೇಲೆ ನೆಟ್‌ಫ್ಲಿಕ್ಸ್‌ ಕಣ್ಣು: ಕನ್ನಡ ಲೆಕ್ಕಕ್ಕೇ ಇಲ್ವಾ?

  ಮೊದಲಿಗೆ ಹಿಂದಿ ಬಿಗ್‌ಬಾಸ್ ಮನೆಗೆ ಆಗಮಿಸಿದ ಕಿಲಿ ಪೌಲ್ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಶಾಕ್ ನೀಡಿದರು. ಬಳಿಕ ಮನೆಯ ಸದಸ್ಯರೊಟ್ಟಿಗೆ ಹಿಂದಿ ಹಾಡುಗಳಿಗೆ ಕುಣಿದು ಖುಷಿ ಪಟ್ಟರು. ಮನೆಯಲ್ಲಿರುವ ಎಂಸಿ ಸ್ಟಾನ್, ಸಾಜಿದ್ ಖಾನ್, ಟೀನಾ ದತ್ತ, ಅಬ್ದು ರೋಜಿಕ್ ಇನ್ನಿತರರು ಕಿಲಿ ಪೌಲ್ ಜೊತೆಗೆ ಚೆನ್ನಾಗಿ ಬೆರೆತರು. ಬಿಗ್‌ಬಾಸ್‌ ಮನೆಗೆ ಬರುವ ಮುಂಚೆಯೇ ಕಂಟೆಂಟ್ ಕ್ರಿಯೇಟರ್ ಅಬ್ದು ರೋಜಿಕ್ ಜೊತೆ ಕಿಲಿ ಪೌಲ್‌ಗೆ ಉತ್ತಮ ಬಾಂಧವ್ಯ ಇತ್ತು. ಹಾಗಾಗಿ ಮನೆಯಲ್ಲಿರುವ ಅಬ್ದು ರೋಜಿಕ್ ಅವರೇ ಕಿಲಿ ಪೌಲ್ ಅನ್ನು ಸ್ವಾಗತಿಸಿದರು.

  ಬಿಗ್‌ಬಾಸ್ ಬಳಿಕ 'ಝಲಕ್ ದಿಕ್‌ಲಾಜಾ 10' ರಿಯಾಲಿಟಿ ಶೋನಲ್ಲಿ ಕಿಲಿ ಪೌಲ್ ಭಾಗವಹಿಸಿದ್ದಾರೆ. ಅಲ್ಲಿ ಡ್ಯಾನ್ಸ್ ಮಾಡಿರುವುದು ಮಾತ್ರವಲ್ಲ, ಡ್ಯಾನ್ಸ್ ಕ್ವೀನ್ ಮಾಧುರಿ ದೀಕ್ಷಿತ್ ಅವರೊಟ್ಟಿಗೆ ಹಾಡು ಹಾಡಿ ಸ್ಟೆಪ್ ಹಾಕಿದ್ದಾರೆ ಕಿಲಿ ಪೌಲ್.

  ಕಿಲಿ ಪೌಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್‌ಗಳಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಕಿಲಿ ಪೌಲ್‌ ಮೇಲೆ ಅಪರಿಚಿತರು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕಿಲಿ ಪೌಲ್‌ಗೆ ದೇಹದ ಐದು ಭಾಗಗಳಿಗೆ ಹೊಲಿಗೆ ಹಾಕಲಾಗಿತ್ತು. ಒಂದೇ ತಿಂಗಳಲ್ಲಿ ಚೇತರಿಸಿಕೊಂಡ ಕಿಲಿ ಪೌಲ್ ಮತ್ತೆ ಡ್ಯಾನ್ಸ್ ಮಾಡಲು ಆರಂಭಿಸಿದ್ದರು. ಈಗ ಭಾರತಕ್ಕೆ ಭೇಟಿ ನೀಡಿದ್ದಾರೆ.

  ಇದೀಗ ಬಿಗ್‌ಬಾಸ್ ಹಾಗೂ 'ಝಲಕ್‌ ದಿಖ್‌ ಲಾಜಾ' ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಕಿಲಿ ಪೌಲ್, ಭಾರತದ ಇನ್ನೂ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

  English summary
  Social media secsation Kili Paul entered Bigg Boss Hindi season 16 but not as contestant. He also appeared in Jhalak Dikh La Ja dance reality show.
  Friday, October 7, 2022, 17:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X