»   » ಅಪ್ಪು ಎದುರು ವಿಲನ್ ಆಗ್ತಾರಂತೆ ಕಾಲಿವುಡ್ ಸ್ಟಾರ್ ಆರ್ಯ

ಅಪ್ಪು ಎದುರು ವಿಲನ್ ಆಗ್ತಾರಂತೆ ಕಾಲಿವುಡ್ ಸ್ಟಾರ್ ಆರ್ಯ

Posted By:
Subscribe to Filmibeat Kannada
ಪುನೀತ್ ರಾಜ್ ಕುಮಾರ್ ಅವರ ಎದುರು ನಾನು ವಿಲನ್ ಆಗ್ಬೇಕು ಎಂದ ಕಾಲಿವುಡ್ ಸ್ಟಾರ್ | Filmibeat Kannada

''ಪುನೀತ್ ರಾಜ್ ಕುಮಾರ್ ಡ್ಯಾನ್ಸ್, ಫೈಟ್ ತುಂಬ ಚೆನ್ನಾಗಿ ಮಾಡುತ್ತಾರೆ'' ಈ ಮಾತನ್ನು ಅನೇಕ ಸ್ಟಾರ್ ಗಳು ಈಗಾಗಲೇ ಹೇಳಿದ್ದಾರೆ. ಕನ್ನಡ ಮಾತ್ರವಲ್ಲ ಟಾಲಿವುಡ್ ನಟರಾದ ಅಲ್ಲು ಅರ್ಜುನ್, ಮಹೇಶ್ ಬಾಬು, ಜೂನಿಯರ್ ಎಸ್ ಟಿ ಆರ್ ಸೇರಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಸಹ ಅಪ್ಪು ಸಿನಿಮಾಗಳಲ್ಲಿ ಮಾಡುವ ಸಾಹಸವನ್ನು ಕೊಂಡಾಡಿದ್ದಾರೆ. ಈಗ ತಮಿಳಿನ ಸ್ಟಾರ್ ನಟ ಆರ್ಯ ಕೂಡ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿಗಷ್ಟೆ 'ಭಂಡಾರಿ ಸಹೋದರರ ರಾಜರಥ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಆರ್ಯ ಕನ್ನಡ ಸಿನಿಮಾ ಪ್ರೇಮಿಗಳಿಗೆ ಇಷ್ಟ ಆಗಿದ್ದರು. ಅದರ ನಂತರ ಆರ್ಯ ಇದೀಗ ಪುನೀತ್ ರಾಜ್ ಕುಮಾರ್ ಜೊತೆಗೆ ವಿಲನ್ ಆಗಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಹಾಗಾದರೆ, ಪುನೀತ್ ಜೊತೆಗೆ ಆರ್ಯ ಹೊಸ ಸಿನಿಮಾ ಮಾಡುತ್ತಿದ್ದಾರ ಎನ್ನುವ ಕುತೂಹಲ ಸಾಮಾನ್ಯವಾಗಿ ಮೂಡುತ್ತದೆ.

ವಿಮರ್ಶೆ: ಅಲ್ಲಲ್ಲಿ ನಿಂತು ಮುಂದೆ ಸಾಗುವ 'ರಾಜರಥ'

ಆದರೆ ಆರ್ಯ ಹೇಳಿದ ಮಾತಿನ ನಿಜವಾದ ಅರ್ಥ ತಿಳಿಯಬೇಕು ಅಂದರೆ ನೀವು ಹಾಗೆ ಮುಂದೆ ಓದಬೇಕು...

'ನಂ 1 ಯಾರಿ ವಿತ್ ಶಿವಣ್ಣ' ಶೋ ನಲ್ಲಿ ಆರ್ಯ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಕಳೆದ ಭಾನುವಾರ ನಟ ಆರ್ಯ ಬಂದಿದ್ದರು. ಇದೇ ವೇಳೆ ಪುನೀತ್ ರಾಜ್ ಕುಮಾರ್ ಸಿನಿಮಾಗೆ ವಿಲನ್ ಆಗುತ್ತೇನೆ ಎಂದು ಆರ್ಯ ಹೇಳಿದ್ದಾರೆ.

ಶಿವಣ್ಣನ ಪ್ರಶ್ನೆಗೆ ಉತ್ತರ

''ನಿಮಗೆ ವಿಲನ್ ರೋಲ್ ಬಂದರೆ ಈ ಹೀರೋಗಳಲ್ಲಿ ಯಾರ ಜೊತೆಗೆ ಮಾಡುತ್ತೀರಾ?'' ಎಂದು ಶಿವರಾಜ್ ಕುಮಾರ್ ಕನ್ನಡದ ನಾಲ್ಕು ದೊಡ್ಡ ನಟರ ಹೆಸರನ್ನು ಹೇಳಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡಿ ಬಾಸ್ ದರ್ಶನ್ ಮತ್ತು ಕಿಚ್ಚ ಸುದೀಪ್ ಎಂಬ ನಾಲ್ಕು ಆಯ್ಕೆಗಳು ಆರ್ಯ ಮುಂದೆ ಇತ್ತು. ಇವುಗಳಲ್ಲಿ ಅವರು ಪುನೀತ್ ರಾಜ್ ಕುಮಾರ್ ಹೆಸರನ್ನು ತೆಗೆದುಕೊಂಡರು.

ಪುನೀತ್ ಫೈಟ್ ನೋಡಿದರೆ ಭಯ ಆಗುತ್ತೆ

ಪುನೀತ್ ಹೆಸರು ತೆಗೆದುಕೊಂಡ ನಂತರ ಶಿವಣ್ಣ, ''ಪುನೀತ್ ನನ್ನ ತಮ್ಮ ಅಂತ ನೀವು ಆ ಹೆಸರು ಸೆಲೆಕ್ಟ್ ಮಾಡಿಕೊಂಡ್ರಾ?'' ಎಂದು ನಗುತ್ತಾ ಕೇಳಿದರು. ಆಗ ಆರ್ಯ ''ಇಲ್ಲ... ನಾನು ಪುನೀತ್ ಅವರ ಫೈಟ್ ನೋಡಿದ್ದೇನೆ. ಅವು ತುಂಬ ರಿಸ್ಕಿ ಮತ್ತು ಭಯಪಡುವ ಹಾಗೆ ಇರುತ್ತದೆ. ನಾನು ಇದನ್ನು ಅವರ ಜೊತೆ ಕೂಡ ಮಾತನಾಡುವಾಗ ಹೇಳಿದ್ದೇನೆ.'' ಎಂದರು.

ಶಿವಣ್ಣನ 'ನಂ 1 ಯಾರಿ' ಕಾರ್ಯಕ್ರಮಕ್ಕೆ ಬಂದ ತಮಿಳು ಸ್ಟಾರ್ !

ಪುನೀತ್ ತುಂಬ ಸ್ಟ್ರಾಂಗ್

''ಪುನೀತ್ ಜೊತೆಗೆ ವಿಲನ್ ಆಗಿ ಫೈಟ್ ಮಾಡುವವರಿಗೆ ತುಂಬ ಕಷ್ಟ ಇರುತ್ತದೆ. ಪುನೀತ್ ತುಂಬ ಸ್ಟ್ರಾಂಗ್'' ಎಂದು ಆರ್ಯ ಕಾರ್ಯಕ್ರಮದಲ್ಲಿ ಅಪ್ಪುವನ್ನು ಆರ್ಯ ಗುಣಗಾನ ಮಾಡಿದರು. ಇನ್ನು ರಿಯಲ್ ಆಗಿ ಪುನೀತ್ ಅವರ ಯಾವುದೇ ಹೊಸ ಚಿತ್ರಕ್ಕೆ ಆರ್ಯ ವಿಲನ್ ಆಗಿಲ್ಲ. ಆದರೆ ಮುಂದೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.

ಕನ್ನಡದ ಮೊದಲ ಟಿವಿ ಕಾರ್ಯಕ್ರಮ

ವಿಶೇಷ ಅಂದರೆ 'ನಂ 1 ಯಾರಿ ವಿತ್ ಶಿವಣ್ಣ' ನಟ ಆರ್ಯ ಭಾಗಿಯಾಗಿದ್ದ ಕನ್ನಡದ ಮೊದಲ ಕಿರುತೆರೆಯ ಕಾರ್ಯಕ್ರಮವಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ 'ರಾಜರಥ' ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ, ನಾಯಕಿ ನಿರೂಪ್ ಭಂಡಾರಿ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಸಹ ಇದ್ದರು.

English summary
Kollywood actor Arya spoke about Power star Puneeth Rajkumar in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X