For Quick Alerts
  ALLOW NOTIFICATIONS  
  For Daily Alerts

  ದೇಶ-ವಿದೇಶ ಸುತ್ತಾಡಿ ವರ್ಷದ ನಂತರ ಸಿಕ್ಕ ಬಿಳಿಹೆಂಡ್ತಿ : ಯಾರಿವಳು?

  By Pavithra
  |

  ಕಿರುತೆರೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮನೋರಂಜನಾ ವಾಹಿನಿಗಳು ಹೆಚ್ಚಾಗುತ್ತಿವೆ. ವಿಭಿನ್ನವಾದ ಹಾಗೂ ವಿಶೇಷವಾಗಿರುವ ಧಾರಾವಾಹಿಗಳನ್ನ ನೀಡಬೇಕು ಎನ್ನುವುದು ಎಲ್ಲರ ಹೋರಾಟವಾಗಿದೆ. ಹೊಸ ರೂಪದಲ್ಲಿ, ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಕಿರುತೆರೆಯಲ್ಲೇ ಯಾರು ಮಾಡದಂತಹ ಹೊಸ ಪ್ರಯತ್ನ ಮಾಡಿದ್ದಾರೆ.

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮುಂದಿನವಾರದಿಂದ ಹೊಸ ಧಾರಾವಾಹಿ ಶುರುವಾಗುತ್ತಿದ್ದು ಬಿಳಿಹೆಂಡ್ತಿ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ವಿದೇಶದಿಂದ ನಾಯಕಿಯನ್ನ ಕರೆತಂದಿರುವ ಬಿಳಿ ಹೆಂಡ್ತಿ ತಂಡ, ಇದಕ್ಕಾಗಿ ಸುಮಾರು ಒಂದು ವರ್ಷ ಸತತ ಪ್ರಯತ್ನ ಮಾಡಿದೆ.

  'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ' : ಮೊದಲ ವಾರವೇ ಔಟ್ ಶಿವಮೊಗ್ಗದ ಸ್ಫೂರ್ತಿ'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ' : ಮೊದಲ ವಾರವೇ ಔಟ್ ಶಿವಮೊಗ್ಗದ ಸ್ಫೂರ್ತಿ

  'ಬಿಳಿ ಹೆಂಡ್ತಿ' ಹೆಸರಿನಲ್ಲಿ ಸಿಕ್ಕಿರುವ ವಿದೇಶಿ ನಟಿ ಯಾರು? ಈಕೆಯನ್ನ ಸೀರಿಯಲ್ ಟೀಂ ಹೇಗೆ ಹುಡುಕಿಕೊಂಡು ಬಂತು? ವಿದೇಶದಿಂದ ಬಂದ ನಟಿಗೆ ಕನ್ನಡದ ಪಾಠ ಹೇಗಾಯ್ತು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮೆಂದೆ ಓದಿ

  ಸ್ಟಾರ್ ಸುವರ್ಣದಲ್ಲಿ ಬಿಳಿ ಹೆಂಡ್ತಿ

  ಸ್ಟಾರ್ ಸುವರ್ಣದಲ್ಲಿ ಬಿಳಿ ಹೆಂಡ್ತಿ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮುಂದಿನವಾರದಿಂದ ಹೊಸ ಧಾರಾವಾಹಿ ಆರಂಭ ಆಗ್ತಿದೆ. ಕಿರುತೆರೆಯಲ್ಲಿಯೇ ಮೊಟ್ಟ ಮೊದಲ ಪ್ರಯತ್ನ ಇದಾಗಿದ್ದು ಬಿಳಿ ಹೆಂಡ್ತಿ ಸೀರಿಯಲ್ ಗಾಗಿ ದೇಶ-ವಿದೇಶ ಹುಡುಕಿ ಸೀರಿಯಲ್ ನಿರ್ಮಾಪಕರು ವಿದೇಶಿ ನಟಿಯನ್ನ ಕರೆತಂದಿದ್ದಾರೆ.

  ವಿದೇಶಿ ನಟಿ ದೆವೀನಾ

  ವಿದೇಶಿ ನಟಿ ದೆವೀನಾ

  ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ನಟಿಸುತ್ತಿರುವ ವಿದೇಶಿ ನಟಿಯ ಹೆಸರು 'ಕ್ರಿಸ್ಟೀನಾ ದೆವೀನಾ ಲಾಸನ್'. ಒಂದು ವರ್ಷ ನಿರ್ಮಾಪಕರು ಎಲ್ಲೆಡೆ ಹುಡುಕಿದ ನಂತರ ಸಿಕ್ಕ ಈಕೆ ಪೋಲೆಂಡ್ ನ 'ಸಿ ಎನ್ ಬಿ ಸಿ' ವಾಹಿನಿಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

  ಅಭಿನಯ ಕಲಿತ ದೆವೀನಾ

  ಅಭಿನಯ ಕಲಿತ ದೆವೀನಾ

  ಡಿವಿನಾ ಧಾರಾವಾಹಿಯಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದ ನಂತರ ಬಿಳಿಹೆಂಡ್ತಿ ತಂಡದಿಂದ ಕನ್ನಡ ಭಾಷೆ ಮತ್ತು ಅಭಿನಯದ ಬಗ್ಗೆ ತರಬೇತಿ ನೀಡಲಾಗಿದೆ. ಈಗಾಗಲೇ ಕನ್ನಡದಲ್ಲಿ ಮಾತನಾಡುವುದನ್ನೂ ಕಲಿತಿದ್ದಾರೆ ದೆವೀನಾ.

  ಪ್ರತಿ ಸಂಜೆ 7 ಕ್ಕೆ ಬಿಳಿಹೆಂಡ್ತಿ

  ಪ್ರತಿ ಸಂಜೆ 7 ಕ್ಕೆ ಬಿಳಿಹೆಂಡ್ತಿ

  ಬಿಳಿ ಹೆಂಡ್ತಿ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೂ ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ. ಕೋರಮಂಗಲ ಅನಿಲ್ ಸೀರಿಯಲ್ ನಿರ್ದೇಶನ ಮಾಡುತ್ತಿದ್ದು, ವಿಜ್ಞೇಶ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ಗುರು ಎಲೆಕೊಪ್ಪ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಶ್ರೀಕಾಂತ್ ಹೆಬ್ಳಿಕರ್, ದೀಪಕ್ ಗೌಡ, ಶಿಲ್ಪ, ಮಾನ್ಯ, ದೀಪಿಕಾ ಇನ್ನು ಅನೇಕರು ಬಿಳಿಹೆಂಡ್ತಿ ಜೊತೆ ಅಭಿನಯ ಮಾಡುತ್ತಿದ್ದಾರೆ.

  ಕುತೂಹಲಕಾರಿ ಆಗಿದೆ ಸ್ಟೋರಿ

  ಕುತೂಹಲಕಾರಿ ಆಗಿದೆ ಸ್ಟೋರಿ

  ಫಾರಿನ್ ಹುಡುಗಿಯೊಬ್ಬಳು ಕನ್ನಡದ ಅದರಲ್ಲೂ ಸಂಪ್ರದಾಯಸ್ಥ ಕುಟುಂಬದ ಮನೆಗೆ ಸೊಸೆಯಾಗಿ ಬರುತ್ತಾಳೆ ಎಂಬ ಕಾನ್ಸೆಪ್ಟ್ ತುಂಬ ಕುತೂಹಲಕಾರಿಯಾಗಿದೆ. ಈ ಕಥೆಯ ಪ್ರತಿ ಸಂಚಿಕೆಯನ್ನು ತುಂಬ ಇಂಟೆನ್ಸ್ ಆಗಿ ಕಟ್ಟಿಕೊಡಲಾಗುತ್ತದೆ.

  ಬ್ಯೂಟಿಫುಲ್ ಮನಸ್ಸುಗಳು ರತ್ನ ಈಗ ಸ್ಮಾಲ್ ಸ್ಕ್ರೀನ್ ಸೂಪರ್ ಸ್ಟಾರ್ಬ್ಯೂಟಿಫುಲ್ ಮನಸ್ಸುಗಳು ರತ್ನ ಈಗ ಸ್ಮಾಲ್ ಸ್ಕ್ರೀನ್ ಸೂಪರ್ ಸ್ಟಾರ್

  English summary
  know more about Krystyna devina lason lead actress of 'Bili Hendthi' Kannada serial. the serial will be telecasted from april 16th on Star suvarna

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X