For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಪ್ರಸಾರ ಆಗ್ತಿದೆ 'ಮುನಿರತ್ನ ಕುರುಕ್ಷೇತ್ರ' ಸಿನಿಮಾ

  |

  50 ದಿನಗಳನ್ನು ಪೂರೈಸಿರುವ ಸಂಭ್ರಮದಲ್ಲಿ ಇರುವ 'ಮುನಿರತ್ನ ಕುರುಕ್ಷೇತ್ರ' ಸಿನಿಮಾ ಈಗ ಕಿರುತೆರೆಗೆ ಬಂದಿದೆ. ಜೀ ಕನ್ನಡ ವಾಹಿನಿ ಸಿನಿಮಾವನ್ನು ಪ್ರಸಾರ ಮಾಡುತ್ತಿದೆ.

  ಫೇಸ್ ಬುಕ್ ನಲ್ಲಿ ಸಿನಿಮಾದ ಪ್ರೋಮೋವನ್ನು ಹಂಚಿಕೊಂಡಿರುವ ಜೀ ವಾಹಿನಿ ಸಿನಿಮಾವನ್ನು ಪ್ರಸಾರ ಮಾಡುವ ಬಗ್ಗೆ ತಿಳಿಸಿದೆ. ಸದ್ಯಕ್ಕೆ ಚಿತ್ರದ ಪ್ರಸಾರದ ದಿನಾಂಕ ಇನ್ನು ನಿಗದಿಯಾಗಿಲ್ಲ. ಅತಿ ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗುತ್ತಿದೆ.

  Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'

  ಈಗಲೂ 'ಕುರುಕ್ಷೇತ್ರ' ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಆಗಲೇ ಟಿವಿಯಲ್ಲಿಯೂ ಪ್ರಸಾರ ಮಾಡಲಾಗುತ್ತದೆ. ಕನ್ನಡದ ಈ ಮಹಾ ಸಿನಿಮಾದ ಪ್ರಸಾರದ ಹಕ್ಕನ್ನು ಜೀ ಕನ್ನಡ ವಾಹಿನಿ ಖರೀದಿ ಮಾಡಿದೆ.

  'ಕುರುಕ್ಷೇತ್ರ' ದರ್ಶನ್ ಅಭಿನಯನದ ಐವತ್ತನೇ ಸಿನಿಮಾ. ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದು. ಕನ್ನಡದ ಜೊತೆಗೆ ಸಿನಿಮಾ ತಮಿಳು, ಮಲೆಯಾಳಂ, ತೆಲುಗಿನಲ್ಲಿಯೂ ಬಿಡುಗಡೆ ಆಗಿತ್ತು.

  ಅಂಬರೀಶ್, ದರ್ಶನ್, ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಾಥ್, ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್, ನಿಖಿಲ್ ಕುಮಾರ್, ಶಶಿಕುಮಾರ್, ಮೇಘನಾ ರಾಜ್, ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

  ದಿನ ಪತ್ರಿಕೆಗಳಲ್ಲಿ 'ಕುರುಕ್ಷೇತ್ರ' ಗುಣಗಾನ: ಯಾರು ಎಷ್ಟು ಸ್ಟಾರ್ ಕೊಟ್ಟಿದ್ದಾರೆ?ದಿನ ಪತ್ರಿಕೆಗಳಲ್ಲಿ 'ಕುರುಕ್ಷೇತ್ರ' ಗುಣಗಾನ: ಯಾರು ಎಷ್ಟು ಸ್ಟಾರ್ ಕೊಟ್ಟಿದ್ದಾರೆ?

  ಮುನಿರತ್ನ ಸಿನಿಮಾದ ನಿರ್ಮಾಣ ಮಾಡಿದ್ದು, ನಾಗಣ್ಣ ನಿರ್ದೇಶನ ಮಾಡಿದ್ದರು. ಆಗಸ್ಟ್ 9 ರಂದು ಸಿನಿಮಾ ಬಿಡುಗಡೆ ಆಗಿತ್ತು.

  English summary
  'Kurukshetra' kannada film will be telecasting soon in zee kannada
  Sunday, September 29, 2019, 8:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X