»   » ಬಿಗ್ ಟ್ವಿಸ್ಟ್ : ವಿವೇಕ್ ಔಟ್, ಕುಶಾಲ್ ಎಸ್ಕೇಪ್!

ಬಿಗ್ ಟ್ವಿಸ್ಟ್ : ವಿವೇಕ್ ಔಟ್, ಕುಶಾಲ್ ಎಸ್ಕೇಪ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಎಲ್ಲರ ನಿರೀಕ್ಷೆ ಮೀರಿ ಪ್ರಬಲ ಸ್ಪರ್ಧಿ ಎನ್ನಲಾಗಿದ್ದ ಶಿಲ್ಪಾ ಅಗ್ನಿಹೋತ್ರಿ ಮನೆಯಿಂದ ಹೊರ ಹಾಕಿದ್ದೆ ದೊಡ್ಡ ಟ್ವಿಸ್ಟ್ ಎಂದು ಪ್ರೇಕ್ಷಕರು ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ, ಅದಕ್ಕಿಂತ ದೊಡ್ಡ ಟ್ವಿಸ್ಟ್ ಗಳನ್ನು ಬಿಗ್ ಬಾಸ್ ನೀಡುತ್ತಿದ್ದಾರೆ.

ಮನೆಗೆ ಹೊಸ ಅತಿಥಿಯಾಗಿ ನಾಯಿಯೊಂದು ಎಂಟ್ರಿ ಕೊಟ್ಟಿದ್ದು ಆಯ್ತು ಸ್ಪರ್ಧಿಗಳು ಕೆಲಕಾಲ ಎಲ್ಲಾ ಮರೆತು ಅದರೊಟ್ಟಿಗೆ ಆಟವಾಡಿ ನಲಿದಾಡಿದ್ದು ಆಯ್ತು. ಈ ನಡುವೆ ಕ್ಯಾಪ್ಟನ್ ಆಗಿ ಅಪೂರ್ವ ಕಾರ್ಯನಿರ್ವಹಿಸುವ ಆರಂಭದ ದಿನಗಳು ಕಷ್ಟಕರವಾಗಿದೆ.

ನಗ್ನ ಯೋಗ ಗುರು ವಿವೇಕ್ ವಿರುದ್ಧ ಕುಶಾಲ್ ತಿರುಗಿ ಬಿದ್ದು ಕಿಚಾಯಿದ ಘಟನೆ ನಂತರ ಇಬ್ಬರೂ ಈಗ 'ಬಿಗ್ ಟ್ವಿಸ್ಟ್ ' ನ ಭಾಗವಾಗುತ್ತಿದ್ದಾರೆ. ಕಣ್ಣೀರಿಟ್ಟ ವಿವೇಕ್ ಮತ್ತೊಮ್ಮೆ ಕಣ್ಣೀರು ಸುರಿಸುತ್ತಾ ಮನೆಯಿಂದ ಹೊರ ಬೀಳುವ ಸುದ್ದಿ ಸಿಕ್ಕಿದೆ. ಈ ನಡುವೆ ತನೀಶಾ ಜತೆ ಕಿತ್ತಾಡಿಕೊಂಡ ಕುಶಾಲ್, ತನೀಶಾ ವಿರುದ್ಧ ಕ್ರಮ ಜರುಗಿಸದ ಬಿಗ್ ಬಾಸ್ ಪಕ್ಷಪಾತ ವಿರೋಧಿಸಿ ಮನೆಯಿಂದ ಹೊರ ಹಾರುವ ಯತ್ನ ನಡೆಸಿದ ಘಟನೆ ನಡೆದಿದೆ.

ಗೌಹರ್ ಹಿಂದೆ ಮುಂದೆ ಸುತ್ತುತ್ತಾ ಸುದ್ದಿಯಾಗಿದ್ದ ಕುಶಾಲ್ ಬಾಕ್ಸ್ ಟಾಸ್ಕ್ ನಲ್ಲಿ ಗೌಹರ್ ವಿರುದ್ಧ ನಿಂತು ಆಕೆಯ ಕೋಪ ಗುರಿಯಾಗಿದ್ದ. ಅರ್ಮಾನ್ ಕೂಡಾ ಬಾಕ್ಸ್ ಟಾಸ್ಕ್ ನಲ್ಲಿ ಎಲ್ಲಿ ತಲೆ ಡಿಚ್ಚಿ ಕೊಟ್ಟ. ಕಾಮ್ಯಾ ಹಳೆ ಕಥೆ ಹೊರಗೆಳೆದು ಕಿರುಚಾಡಿದ ಆದರೆ, ದಿನದ ಕೊನೆಯಲ್ಲಿ ಆಕೆ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದು ವಿಶೇಷವಾಗಿತ್ತು.

ಬಿಗ್ ಬಾಕ್ಸ್ ಟಾಸ್ಕ್

ಅರ್ಮಾನ್ ಚೀರಾಟದ ನಂತರವೂ ಬಿಗ್ ಬಾಕ್ಸ್ ಆಟವನ್ನು ಬಿಗ್ ಬಾಸ್ ಮುಂದುವರೆಸಿದ್ದಾರೆ. ಬಿಗ್ ಬಾಕ್ಸ್ ಮೂಲಕ ಲಕ್ಸುರಿ ಬಜೆಟ್ ಟಾಸ್ಕ್ ಕೊಟ್ಟ ಬಿಗ್ ಬಾಸ್ ಇತರೆ ಸ್ಪರ್ಧಿಗಳಿಗೂ ಅದೇ ಟಾಸ್ಕ್ ಮುಂದುವರೆಸುತ್ತಾರೆ.

ಸಣ್ಣ ಬಾಕ್ಸಿನಲ್ಲಿ ತನೀಶಾ ಕುಳಿತಾಗ ಕುಶಾಲ್ ಕೀಟಲೆ ಮಾಡತೊಡಗುತ್ತಾನೆ. ನಿಯಮದ ಪ್ರಕಾರ ಇದಕ್ಕೆ ಅವಕಾಶವೂ ಇರುತ್ತದೆ. ಆದರೆ, ಕುಶಾಲ್ ಸ್ವಲ್ಪ ಅತಿಯಾಗಿ ವರ್ತಿಸಿ ತನೀಶಾ ಹೊರ ಬರುವಂತೆ ಮಾಡುತ್ತಾನೆ. ತನೀಶಾ ಹೊರ ಬಂದಾಗ ಕುಶಾಲ್ ನನ್ನು ತಬ್ಬುತ್ತಾಳೆ. ಇದರಿಂದ ಕಿರಿಕ್ ಶುರುವಾಗುತ್ತದೆ.

ತನೀಶಾ ವಿರುದ್ಧ ಕುಶಾಲ್

ತನೀಶಾ ವರ್ತನೆಯಿಂದ ಬೇಸತ್ತ ಕುಶಾಲ್ ಸುಮ್ಮನಿರುವಂತೆ ಹೇಳುತ್ತಾನೆ. ಆದರೆ, ತನೀಶಾ ತನ್ನ ಹಠ ಮುಂದುವರೆಸಿ ಕುಶಾಲ್ ನನ್ನು ಕಿಚಾಯಿಸುತ್ತಾಳೆ. ಕುಶಾಲ್ ಕೋಪಗೊಂಡು ತನೀಶಾಳನ್ನು ನೀನು ಫ್ಲಾಪ್ ನಟಿ ನಿಮ್ಮ ಕುಟುಂಬಕ್ಕೆ ಕಪ್ಪು ಚುಕ್ಕೆ ಎಂದು ಹೀಯಾಳಿಸುತ್ತಾನೆ. ಕುಶಾಲ್ ನನ್ನು ನಿರ್ಲಕ್ಷಿಸಿ ತನೀಶಾಳನ್ನು ಹೊರನಡೆಯುತ್ತಾಳೆ.

ತನೀಶಾ ವಿರುದ್ಧ ದೂರು

ತನೀಶಾ ಒರಟು ವರ್ತನೆಗೆ ತಕ್ಕ ಶಾಸ್ತಿಯಾಗಬೇಕು ಆಕೆ ಮೇಲೆ ಕ್ರಮ ಜರುಗಿಸಬೇಕು ಎಂದು ಬಿಗ್ ಬಾಸ್ ಗೆ ಕುಶಾಲ್ ಗೆ ದೂರು ನೀಡುತ್ತಾನೆ. ಆದರೆ, ಇದರಿಂದ ಏನು ಪ್ರಯೋಜನವಾಗುವುದಿಲ್ಲ. ಇನ್ನಷ್ಟು ಕೆರಳಿದ ಕುಶಾಲ್ ಮನೆ ತೊರೆಯುವುದಾಗಿ ಹೇಳುತ್ತಾನೆ. ಎಲ್ಲ ನಿಯಮ ಮೀರಿ ಬಿಗ್ ಬಾಸ್ ಮನೆ ಗೋಡೆ ಹಾರಿ ಮನೆಯಿಂದ ಹೊರ ಹೋಗಲು ನಿರ್ಧರಿಸುತ್ತಾನೆ.

ಮಧ್ಯರಾತ್ರಿ ವೇಳೆಯಲ್ಲಿ

ಮಧ್ಯರಾತ್ರಿ ವೇಳೆಯಾದರೂ ತನೀಶಾ ವಿರುದ್ಧ ಯಾವ ಕ್ರಮ ಜರುಗಿಸದಿದ್ದಕ್ಕೆ ಕೋಪಗೊಂಡು ಕುಶಾಲ್ ಪೂರ್ವ ಯೋಜನೆಯಂತೆ ಬ್ಯಾಗ್ ಪ್ಯಾಕ್ ಮಾಡಿ ಇಟ್ಟು ಬಿಗ್ ಬಾಸ್ ಮನೆ ಗೋಡೆ ಏರುತ್ತಾನೆ. ಕೆಲವರು ಚೇರ್ ಹಾಕಿ ಸಹಾಯ ಮಾಡುತ್ತಾರೆ.

ಕುಶಾಲ್ ಮುಂದೆ ಹೆಜ್ಜೆ ಇಡುತ್ತಾನೆ

ಗೌಹರ್ ಕಣ್ಣೀರಿಡುತ್ತಾ ಬೇಡ ಹೋಗಬೇಡ ಎನ್ನುತ್ತಾಳೆ. ಎಲ್ಲರ ಮಾತು ಮೀರಿ ಕಂಬಿ ಹಾರಿ ಕುಶಾಲ್ ಮುಂದೆ ಹೆಜ್ಜೆ ಇಡುತ್ತಾನೆ. ಅಷ್ಟರಲ್ಲಿ ಮನೆ ಸದಸ್ಯರು ಲಿವಿಂಗ್ ರೂಮ್ ಗೆ ಬರುವಂತೆ ಸೂಚಿಸುತ್ತಾರೆ. ಆದರೆ, ಕುಶಾಲ್ ಬಿಗ್ ಬಾಸ್ ಕೇಳದೆ ಇನ್ನೊಂದು ಬೇಲಿ ಹಾರುತ್ತಾನೆ. ಇದರಿಂದ ಕುಶಾಲ್ ಮನೆಯಿಂದ ಹೊರ ದೂಡಲ್ಪಡುತ್ತಾನಾ? ಕಾದು ನೋಡಬೇಕಿದೆ.

ಬಿಗ್ ಬಾಸ್ ಬಾಕ್ಸ್ ಕಥೆ

ಪ್ರತ್ಯೂಷಾ, ಅರ್ಮಾನ್, ಕುಶಾಲ್, ಗೌಹಾರ್ ಹಾಗೂ ಸಂಗ್ರಾಮ್ ಮೊದಲ ಹಂತದಲ್ಲಿ ಬಾಕ್ಸ್ ನಲ್ಲಿ ಕೂರಲು ಮುಂದಾಗುತ್ತಾರೆ.

ಉಳಿದ ಸ್ಪರ್ಧಿಗಳು ಬಾಕ್ಸ್ ಮೇಲೆ ಗುಟ್ಟುತ್ತಾ ಕಿರಿಕಿರಿ ಉಂಟು ಮಾಡುತ್ತಾರೆ. ಗಾರ್ಡನ್ ಏರಿಯಾದಿಂದ ಮನೆಯೊಳಗೆ ಬಾಕ್ಸ್ ಸಮೇತ ತೆವಳಿಗೊಂಡ ಬಂದ ಮೇಲೆ ಕುಶಾಲ್ ಕೆಲ ಹೊತ್ತಿನ ನಂತರ ಬಾಕ್ಸಿನಿಂದ ಹೊರ ಬೀಳುತ್ತಾನೆ.

ಟಾರ್ಗೆಟ್ ಅರ್ಮಾನ್

ಮೊದಲಿಗೆ ಪತ್ಯೂಷಾ ಇರುವ ಬಾಕ್ಸ್ ಮೇಲೆ ಆಂಡಿ ದಾಳಿ ನಡೆಸಿ ಶಬ್ದ ಮಾಡುತ್ತಾನೆ ಆದರೆ, ನನಗೆ ನೋವಾಗುತ್ತಿದೆ ಎಂದಾಗ ಆಂಡಿ ಸುಮ್ಮನಾಗುತ್ತಾನೆ. ನಂತರ ಎಲ್ಲರ ಟಾರ್ಗೆಟ್ ಅರ್ಮಾನ್ ಬಾಕ್ಸ್ ಆಗುತ್ತದೆ.

ಕಾಮ್ಯಾ ಹಾಗೂ ಆಂಡಿ ವಿರುದ್ಧ ಅರ್ಮಾನ್ ತಿರುಗಿಬೀಳುತ್ತಾನೆ ಕೆಟ್ಟ ಪದ ಬಳಸುತ್ತಾನೆ. ಕಾಮ್ಯಾ ಅಲ್ಲಿಂದ ಹೊರ ನಡೆದು ಜೋರಾಗಿ ಅಳತೊಡಗುತ್ತಾಳೆ. ಆಂಡಿ ಸಮಾಧಾನ ಮಾಡುತ್ತಾನೆ. ಏನು ನಡೆಯುತ್ತದೆ ಎಂದು ಹೇಳು ಎಂದು ವಿವೇಕ್ ಗೆ ಪ್ರತ್ಯೂಷಾ ಕೇಳುತ್ತಾಳೆ. ಅವನು ಉತ್ತರಿಸದಿದ್ದಾಗ ನೀನು ಒರಟ ಎಂದು ದೂರುತ್ತಾಳೆ ಬಾಕ್ಸ್ ನಿಂದ ಹೊರ ಬರುತ್ತಾಳೆ

ಎಲ್ಲಿ ಗೆ ಪೆಟ್ಟು

ಕುಶಾಲ್, ಎಲ್ಲಿ, ಕಾಮ್ಯಾ, ಆಸೀಫ್ ಹಾಗೂ ಆಂಡಿ ಒಟ್ಟಿಗೆ ಅರ್ಮಾನ್ ಬಾಕ್ಸ್ ಮೇಲೆ ಮುಗಿ ಬಿದ್ದು ಕುಟ್ಟುತ್ತಾ ಶಬ್ದ ಮಾಡುತ್ತಾರೆ.ಆದರೆ, ಒಳಗೆ ನೋವು ತಿಂದ ಅರ್ಮಾನ್ ಜೋರಾಗಿ ಬೀಸುತ್ತಾನೆ. ಬಾಕ್ಸ್ ಚಲಿಸಿದ್ದರಿಂದ ಹತ್ತಿರವಿದ್ದ ಎಲ್ಲಿಗೆ ಪೆಟ್ಟಾಗುತ್ತದೆ.

ಮತ್ತೆ ಕಾಮ್ಯಾ ಹಾಗೂ ಆಂಡಿ ವಿರುದ್ಧ ಅರ್ಮಾನ್ ವಾಗ್ದಾಳಿ ಶುರುವಾಗುತ್ತದೆ. ಕೊನೆಗೆ ಬಾಕ್ಸಿನಿಂದ ಹೊರ ಬಿದ್ದ ಅರ್ಮಾನ್ ಎಲ್ಲರ ಮೇಲೆ ಕೂಗಾಡುತ್ತಾನೆ. ಕ್ಯಾಪ್ಟನ್ ಅಪೂರ್ವ ಅರ್ಮಾನ್ ನನ್ನು ಶಾಂತಗೊಳಿಸಲು ಯತ್ನಿಸಿ ವಿಫಲನಾಗುತ್ತಾನೆ.

ಅರ್ಮಾನ್ ಕ್ಷಮೆಯಾಚನೆ

ಅರ್ಮಾನ್ ಗೆ ತನೀಶಾ ಮಾತ್ರ ಸಪೋರ್ಟ್ ಮಾಡಿದ್ದು ಎಂದು ಒತ್ತಿ ಹೇಳಬೇಕಾಗಿಲ್ಲ. ನಂತರ ತಪ್ಪಿನ ಅರಿವಾಗಿ ಅರ್ಮಾನ್ ಎಲ್ಲಿ ಹಾಗೂ ಕಾಮ್ಯಾ ಅವರ ಕೈ ಕಾಲು ಹಿಡಿದು ಕ್ಷಮೆ ಬೇಡುತ್ತಾನೆ.

ತಕ್ಷಣವೇ ಕ್ಷಮಿಸದಿದ್ದರೂ ಅರ್ಮಾನ್ ತಬ್ಬಿಕೊಂಡು ಮನ್ನಿಸಲು ಯತ್ನಿಸುತ್ತೇನೆ ಎಂದು ಕಾಮ್ಯಾ ಹೇಳುತ್ತಾಳೆ. ನನ್ನ ಹಳೆ ಕಥೆ ಬಗ್ಗೆ ಮಾತನಾಡುವ ಮೊದಲು ನನ್ನ ಪರಿಸ್ಥಿತಿ ಬಗ್ಗೆ ಒಮ್ಮೆ ಯೋಚಿಸಬೇಕಿತ್ತು ಎಂದು ಅರ್ಮಾನ್ ಗೆ ಕಾಮ್ಯಾ ಹೇಳುತ್ತಾಳೆ.

ಗೌಹಾರ್ ಕೋಪ ತಾಪ ಕಣ್ಣೀರು

ಮುಂದೆ ಗೌಹರ್ ಹಾಗೂ ಸಂಗ್ರಾಮ್ ಮಾತ್ರ ತಡರಾತ್ರಿವರೆಗೂ ಕಿರುಕುಳ ಸಹಿಸಿಕೊಂಡು ಬಾಕ್ಸಿನಲ್ಲಿ ಉಳಿಯುತ್ತಾರೆ. ಬಾಕ್ಸಿನಲ್ಲಿ ಹಲ್ಲಿ, ತಣ್ಣನೆ ನೀರು, ಶೇವಿಂಗ್ ಕ್ರೀಮ್ ಸೇರಿದಂತೆ ಸಿಕ್ಕಿದ್ದೆಲ್ಲ ಹಾಕಿ ಹಿಂಸೆ ನೀಡುತ್ತಾರೆ.

ಕುಶಾಲ್ ಕೂಡಾ ಹಿಂಸೆ ನೀಡಿದ್ದು ಗೌಹರ್ ಗೆ ಅಳು ತರಿಸುತ್ತದೆ.ಕೊನೆಗೆ ಗೌಹರ್ ನಂತರ ಸಂಗ್ರಾಮ್ ಬಾಕ್ಸಿನಿಂದ ಹೊರ ಬರುತ್ತಾರೆ ಉಳಿದವರು ಗೆಲುವಿನ ನಗೆ ಬೀರುತ್ತಾರೆ. ಕುಶಾಲ್ ಮೇಲೆ ಗೌಹರ್ ಕೋಪಗೊಳ್ಳುತ್ತಾಳೆ. ನಂತರ ಕುಶಾಲ್ ಗೋಡೆ ಹಾರುವಾಗ ಬೇಡ ಎಂದು ಮತ್ತೆ ಅಳುತ್ತಾಳೆ

English summary
Kushal attempts to cross the boundary of the Bigg Boss house : Kushal was appalled by Tanisha’s arrogance and behavior and demanded for some action to be taken against her. He told Bigg Boss that on failing to do so he will not care about the rules of the show and jump over the wall of the house and walk off.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada