For Quick Alerts
  ALLOW NOTIFICATIONS  
  For Daily Alerts

  ಬ್ರೇಕಿಂಗ್ : ಕುಶಾಲ್, ಗೌಹರ್ ಹೊರದಬ್ಬಿದ ಬಿಗ್ ಬಾಸ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಹೊರ ಬಿದ್ದಿದೆ. ಶಿಲ್ಪಾ ಅಗ್ನಿಹೋತ್ರಿ, ಆಸಿಫ್ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಹೊರ ನಡೆದರೆ, ತನ್ನದಲ್ಲದ ತಪ್ಪಿಗೆ ವಿಜೆ ಆಂಡಿ ಮನೆ ಬಿಡುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ನ್ಯಾಯವೇ ಇಲ್ಲವೇ ಅಥವಾ ಇದು ಬಿಗ್ ಬಾಸ್ ಆಟವೇ ಎಂದು ಪ್ರೇಕ್ಷಕರು ಅಂದುಕೊಳ್ಳುತ್ತಿದ್ದಂತೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

  ಲಭ್ಯ ಮಾಹಿತಿ ಪ್ರಕಾರ ಮನೆಯಿಂದ ಹೊರ ಹಾರಲು ಯತ್ನಿಸಿದ್ದ ಕುಶಾಲ್ ಥಂಡನ್ ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿದ್ದಾರೆ. ನಿನ್ನೆ ನಡೆದ ನಾಮಿನೇಷನ್ ಸಂದರ್ಭದಲ್ಲಿ ಕ್ಯಾಪ್ಟನ್ ಆಗಿದ್ದು ಕೊಂಡು ಕುಶಾಲ್ ನಡೆದುಕೊಂಡ ರೀತಿ ಸ್ವಜನಪಕ್ಷಪಾತ, ಗೌಹರ್ ಬಚಾವ್ ಮಾಡಿದ ರೀತಿ, ನಾಮಿನೇಷನ್ ಬಗ್ಗೆ ಮಾತನಾಡಿಕೊಳ್ಳಲು ಸಹಕರಿಸಿದ್ದು ಎಲ್ಲವೂ ಕುಶಾಲ್ ಗೆ ಮುಳುವಾಗಿದೆ.

  ಜತೆಗೆ ಇದೇ ವಿಷಯಕ್ಕೆ ವಿಜೆ ಆಂಡಿ ಜತೆ ಕುಶಾಲ್ ಜೋರು ಜಗಳವಾಡಿಕೊಂಡಿದ್ದಾನೆ. ಆಂಡಿಗೆ ಒಂದು ಡಿಚ್ಚಿಯನ್ನು ಕೊಟ್ಟಿದ್ದಾನೆ ಎಂಬ ಸುದ್ದಿಯಿದೆ. ದೈಹಿಕವಾಗಿ ಹಲ್ಲೆ ಮಾಡುವುದು ಬಿಗ್ ಬಾಸ್ ಮನೆ ನಿಯಮಕ್ಕೆ ವಿರೋಧವಾಗಿದ್ದು ಇದರಿಂದ ಚಾನೆಲ್ ನವರು ಕುಶಾಲ್ ಹೊರ ಹಾಕಲು ಮುಂದಾದರು ಎನ್ನಲಾಗಿದೆ.

  ಕುಶಾಲ್ ಬಿಟ್ಟಿರದ ಗೌಹರ್ ಕೂಡಾ ಕುಶಾಲ್ ಹಿಂದೆ ಮನೆ ತೊರೆಯಲು ಮುಂದಾದಳು ಎಂದು ತಿಳಿದು ಬಂದಿದೆ. ಇಬ್ಬರು ಜನಪ್ರಿಯ ಸ್ಪರ್ಧಿಗಳನ್ನು ಈ ರೀತಿ ಕಳೆದುಕೊಂಡು ಕಲರ್ಸ್ ವಾಹಿನಿ ಯಾವ ರೀತಿ ತಂತ್ರ ಮಾಡುತ್ತದೆ ಕಾದು ನೋಡಬೇಕಿದೆ. ಕ್ಯಾರವಾನ್ ನಲ್ಲಿ ಕುಳಿತಿರುವ ಕ್ಯಾಂಡಿ ಬ್ರಾರ್ ಹಾಗೂ ಖಾನ್ ಮನೆಯೊಳಗೆ ಯಾವಾಗ ಪ್ರವೇಶಿಸುತ್ತಾರೆ ತಿಳಿಯಬೇಕಿದೆ. ಕುಶಾಲ್ ಹಾಗೂ ಆಂಡಿ ಅಗಲಿಕೆಯಿಂದ ಅರ್ಮಾನ್ ಹಾಗೂ ತನೀಶಾ ಅವರಂತೂ ಖುಷಿಯಾಗುವುದು ಗ್ಯಾರಂಟಿ.

  ಆಂಡಿ ಸೇಡು

  ಆಂಡಿ ಸೇಡು

  ಕಳೆದ ದಿನದ ನಾಮಿನೇಷನ್ ಸಮಯದಲ್ಲಿ ಅನ್ಯಾಯವನ್ನು ಮನದಲ್ಲಿಟ್ಟುಕೊಂಡಿದ್ದ ಆಂಡಿ ತನಗೆ ಮೋಸ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.

  ಬಜೆಟ್ ಟಾಸ್ಕ್ ನಲ್ಲಿ ಬೇರೆ ಸ್ಪರ್ಧಿಗಳು ಹೆಚ್ಚು ಬಜೆಟ್ ಗಳಿಸದಂತೆ ಮಾಡಲು ಆಂಡಿ ನಿರ್ಧರಿಸಿದ್ದು ಕ್ಯಾಪ್ಟನ್ ಕುಶಾಲ್ ಗೆ ಸಿಟ್ಟು ತರಿಸಿತು.

  ಮಾತಿಗೆ ಮಾತಿಗೆ ಬೆಳೆದು ಆಂಡಿ ಕುತ್ತಿಗೆ ಪಟ್ಟಿ ಹಿಡಿದು ಕುಶಾಲ್ ಎರಡು ಬಿಗಿದಿದ್ದಾನೆ. ಕುಶಾಲ್ ತಡೆಯಲು ಗೌಹರ್ ಯತ್ನಿಸಿ ವಿಫಲಳಾಗಿದ್ದಾಳೆ

  ಸಿಟ್ಟಿನಿಂದ ಮನೆಯಿಂದ ಹೊರಕ್ಕೆ

  ಸಿಟ್ಟಿನಿಂದ ಮನೆಯಿಂದ ಹೊರಕ್ಕೆ

  ಕುಶಾಲ್ ಕೋಪಗೊಂಡು ಆಂಡಿಗೆ ಬಾರಿಸಿದ್ದು ಗೌಹರ್ ಗೂ ಶಾಕ್ ತಂದಿತು. ಗೌಹರ್ ಪರಿ ಪರಿಯಾಗಿ ಕುಶಾಲ್ ನನ್ನು ಬೇಡಿಕೊಂಡರೂ ಕುಶಾಲ್ ಕೋಪ ತಣ್ಣಗಾಗಲಿಲ್ಲ. ಆಂಡಿ, ಕುಶಾಲ್ ಹಾಗೂ ಗೌಹರ್ ಒಳ್ಳೆ ಗೆಳಯರಾಗಿದ್ದರು. ಗೌಹರ್ ಹಾಗೂ ಸಂಗ್ರಾಮ್ ನನ್ನ ಉತ್ತಮ ಗೆಳೆಯರು ಎಂದು ಆಂಡಿ ಕೂಡಾ ಹೇಳಿಕೊಂಡಿದ್ದ.

  ಬಟ್ಟೆ ಬರೆ ಪ್ಯಾಕ್

  ಬಟ್ಟೆ ಬರೆ ಪ್ಯಾಕ್

  ಕುಶಾಲ್ ಮನೆಯಿಂದ ಔಟ್ ಅದ ಕುಶಾಲ್ ಸಿಟ್ಟಿನಿಂದಲೆ ಬಟ್ಟ ಬರೆ ಪ್ಯಾಕ್ ಮಾಡಿಕೊಳ್ಳುತ್ತಿದ್ದಾನೆ

  ಕಂಗಾಲಾದ ಗೌಹರ್

  ಕಂಗಾಲಾದ ಗೌಹರ್

  ಕುಶಾಲ್ ವರ್ತನೆಯಿಂದ ಗೌಹಾರ್ ಖಾನ್ ಕಂಗಾಲಾಗಿದ್ದು ಕಂಡು ಬಂದಿತು. ಅಪೂರ್ವ ಹಾಗೂ ಸಂಗ್ರಾಮ್ ಆಕೆಯನ್ನು ಸಮಾಧಾನ ಪಡಿಸಿದರು. ಅದರೆ, ಕುಶಾಲ್ ಇಲ್ಲದ ನಾನು ಇಲ್ಲಿ ಇರಲಾರೆ ಎಂದು ಕುಶಾಲ್ ಹಿಂದೆ ಹೋಗಲು ಆಕೆ ನಿರ್ಧರಿಸಿದಳು

  ಹೊರ ನಡೆದ ಪ್ರೇಮ ಹಕ್ಕಿಗಳು

  ಹೊರ ನಡೆದ ಪ್ರೇಮ ಹಕ್ಕಿಗಳು

  ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಅತಿಯಾದ ಆಪ್ತತೆಯಿಂದ ಇರುತ್ತಿದ್ದ ಲವ್ ಬರ್ಡ್ಸ್ ನಂತೆ ಕಾಣುತ್ತಿದ್ದ ಗೌಹರ್ ಕುಶಾಲ್ ಜೋಡಿ ಅಚ್ಚರಿಯ ರೀತಿಯಲ್ಲಿ ಮನೆಯಿಂದ ಹೊರ ನಡೆದಿದ್ದಾರೆ. ಇಬ್ಬರು ಕೈ ಕೈ ಹಿಡಿದು ಕೊಂಡು ಹೊರ ಹೋದರು.

  ಮನೆಗೆ ಬಂದ ಭದ್ರತೆ

  ಮನೆಗೆ ಬಂದ ಭದ್ರತೆ

  ಕುಶಾಲ್ ತಲೆ ಕೆಟ್ಟು ಇನ್ನೆಲ್ಲಿ ಆಂಡಿ ತಲೆ ಒಡೆಯುತ್ತಾನೋ ಎಂದು ಬಿಗ್ ಬಾಸ್ ತನ್ನ ಭದ್ರತಾ ಸಿಬ್ಬಂದಿಗಳನ್ನು ಮನೆಯೊಳಗೆ ಕಳಿಸಿದರು.

  ಅತಿಯಾದ ಪ್ರೇಮ

  ಅತಿಯಾದ ಪ್ರೇಮ

  ಲವ್ ಬರ್ಡ್ಸ್ ಕುಶಾಲ್ ಹಾಗೂ ಗೌಹರ್ ಟಾಸ್ಕ್ ನಲ್ಲಿ ವಿರಾಮದಲ್ಲಿ ಎಲ್ಲಾ ಕಡೆ ಒಂದೇ ರೀತಿ ಇರುತ್ತಿದ್ದರು. ಭದ್ರತಾ ಸಿಬ್ಬಂದಿ ಕಣ್ಮುಂದೆ ಗೌಹರ್ ಹೊತ್ತು ನಡೆದಿರುವ ಕುಶಾಲ್

  ನಿಯಂತ್ರಣ ಕಳೆದುಕೊಂಡ ಕುಶಾಲ್

  ನಿಯಂತ್ರಣ ಕಳೆದುಕೊಂಡ ಕುಶಾಲ್

  ಡ್ರಗ್ ಅಡಿಕ್ಟ್ ಆಗಿ ಚೇತರಿಕೆ ಹೊಂದಿದ ನಂತರ ಬಿಗ್ ಬಾಸ್ ಮನೆಗೆ ಬಂದಿದ್ದ ಕುಶಾಲ್ ಮನೆಯಲ್ಲಿ ಯಾವಾಗಲೂ ಸಿಡುಕುತ್ತಲೇ ಇದ್ದ. ಗೌಹರ್ ಸಹವಾಸದಿಂದ ಸ್ವಲ್ಪ ಸುಧಾರಿಸಿದ್ದ. ಅದರೆ, ಆಂಡಿ ಮೇಲೆ ಯಾಕೆ ಅಷ್ಟು ಕೋಪಮಾಡಿಕೊಂಡು ಮತ್ತೆ ಮತ್ತೆ ದಾಳಿ ನಡೆಸಲು ಮುಂದಾದ ಗೊತ್ತಿಲ್ಲ

  ದಿನದ ಟಾಸ್ಕ್

  ದಿನದ ಟಾಸ್ಕ್

  ಆಂಡಿ ಮೇಲೆ ಕುಶಾಲ್ ಕೈ ಮಾಡುವುದಕ್ಕೂ ಮುನ್ನ ಬಿಗ್ ಬಾಸ್ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಇತರೆ ಸ್ಪರ್ಧಿಗಳು ತನ್ನತ್ತ ಗಮನ ಹರಿಸುವಂತೆ ಮಾಡುವುದು ಆಂಡಿಗೆ ಕೊಟ್ಟ ಟಾಸ್ಕ್ ಆಗಿತ್ತು.

  ಎಲ್ಲಿ ಜತೆ ಆಂಡಿ

  ಎಲ್ಲಿ ಜತೆ ಆಂಡಿ

  ಮೊದಲಿಗೆ ಎಲ್ಲಿ ಆವ್ರಾಮ್ ಬಳಿ ಹೋದ ಆಂಡಿ ಆಕೆಯನ್ನು ಕಿಚಾಯಿಸಲು ಆರಂಭಿಸಿದ ಆಕೆ ಆತನ ಕಡೆಗೆ ಗಮನ ಹರಿಸಲೇ ಇಲ್ಲ

  ತನೀಶಾ ಬಳಿ

  ತನೀಶಾ ಬಳಿ

  ಥ್ರೆಡ್ ಮಿಲ್ ನಲ್ಲಿ ಓಡುತ್ತಿದ್ದ ತನೀಶಾ ಬಳಿ ಬಂದ ಆಂಡಿ ಜೋರಾಗಿ ಅರಚುತ್ತಾ ತನೀಶಾ ಗಮನ ಸೆಳೆಯಲು ಯತ್ನಿಸಿ ವಿಫಲನಾದ

   ಅರ್ಮಾನ್ ಜತೆ

  ಅರ್ಮಾನ್ ಜತೆ

  ಎಲ್ಲೂ ತನ್ನ ತಂತ್ರ ಗಿಟ್ಟದಿದ್ದಾಗ ಉಗ್ರ ಪ್ರತಾಪಿ ಅರ್ಮಾನ್ ಬಳಿ ಹೋದ ಆಂಡಿ ಅಲ್ಲೂ ಕೂಡಾ ಸೋಲು ಅನುಭವಿಸಿದ. ಆಂಡಿ ಮಂಗಾಟಕ್ಕೆ ಅರ್ಮಾನ್ ಕ್ಯಾರೆ ಎನ್ನಲಿಲ್ಲ.

  ಮತ್ತೆ ಎಲ್ಲಿ ಜತೆ

  ಮತ್ತೆ ಎಲ್ಲಿ ಜತೆ

  ಆಂಡಿಯನ್ನು ಎಲ್ಲಿ ನಿರ್ಲಕ್ಷಿಸಿದ್ದಲ್ಲದೆ ಆತನನ್ನು ಕಂಡರೆ ಆಗದಂತೆ ವರ್ತಿಸಿದಳು. ಹಳೆ ಪ್ರಸಂಗಗಳು ಎಲ್ಲಿ ಮನೆಯಲ್ಲಿ ಅಚ್ಚೊತ್ತಿರಬೇಕು

  ವಿದೂಷಕ ಆಂಡಿ

  ವಿದೂಷಕ ಆಂಡಿ

  ಒಳ್ಳೆ ಮಿಮಿಕ್ರಿ, ಹಾಡುಗಾರಿಕೆ, ನರ್ತನ ಕಲೆ ಗೊತ್ತಿದ್ದರೂ ಆಂಡಿ ಯಾರೊಬ್ಬರ ಗಮನ ಸೆಳೆಯಲು ವಿಫಲನಾಗಿದ್ದ. ಕೊನೆಯದಾಗಿ ವಿಚಿತ್ರ ವೇಷ ಧರಿಸಿ ಎಲ್ಲರನ್ನು ನಗಿಸಲು ಯತ್ನಿಸಿದ

  ಚಪ್ಪಲಿ ತೊಳೆದ ಆಂಡಿ

  ಚಪ್ಪಲಿ ತೊಳೆದ ಆಂಡಿ

  ಸ್ಪರ್ಧಿಗಳಿಗೆ ನಗು ತರಿಸಲಾಗದ ಆಂಡಿ ಸಿಟ್ಟು ಬರುವಂತೆ ಮಾಡಲು ಸಿಮ್ಮಿಂಗ್ ಪೂಲ್ ನಲ್ಲಿ ತನ್ನ ಶೂ, ಚಪ್ಪಲಿಗಳನ್ನು ತೊಳೆಯಲು ಮುಂದಾದ

  English summary
  Bigg Boss 7 has thrown out Kushal Tandon from the house since he attacked VJ Andy. Andy had got nominated by his co-contestants for plotting and planning nominations on Monday, because of which Andy had gone verbal over everyone including Kushal and Gauhar. This ticked off Kushal and made him physically hurt Andy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X