»   » ಕುತೂಹಲದ ಕಣವಾದ 'ಲೈಫ್ ಸೂಪರ್ ಗುರೂ'

ಕುತೂಹಲದ ಕಣವಾದ 'ಲೈಫ್ ಸೂಪರ್ ಗುರೂ'

Posted By:
Subscribe to Filmibeat Kannada

ಸಾಮಾನ್ಯವಾಗಿ ರಿಯಾಲಿಟಿ ಶೋ ಎಂದರೆ ಸೆಲೆಬ್ರಿಟಿಗಳೇ ತುಂಬಿ ತುಳುಕುತ್ತಿರುತ್ತಾರೆ. ಅವರನ್ನು ಬಿಟ್ಟು ರಿಯಾಲಿಟಿ ಶೋ ಮಾಡುವುದು ಹೇಗೆ ಎಂಬ ಸಣ್ಣ ಆಲೋಚನೆಯನ್ನೂ ಯಾರೂ ಮಾಡಲ್ಲ. ಆ ರೀತಿಯ ಒಂದು ಏಕತಾನತೆಯನ್ನು ಮುರಿಯುತ್ತಿರುವ ವಾಹಿನಿ ಜೀ ಕನ್ನಡ.

ಇಷ್ಟು 'ವೀಕೆಂಡ್ ವಿತ್ ರಮೇಶ್'ನಂತಹ ವಿಭಿನ್ನ ಶೋ ಕೊಟ್ಟ ವಾಹಿನಿ ಇದೀಗ ಲೈಫ್ ಸೂಪರ್ ಗುರು ಎಂಬ ಕಾರ್ಯಕ್ರವನ್ನು ಕಿರುತೆರೆ ವೀಕ್ಷಕರ ಮುಂದೆ ತಂದಿದೆ. ಈ ಶೋನಲ್ಲಿ ಭಿನ್ನ ಸ್ಪರ್ಧಿಗಳಿದ್ದು ಯಾರೂ ಸೆಲೆಬ್ರಿಟಿಗಳಲ್ಲ ಎಂಬುದೇ ವಿಶೇಷ. [ಮೊದಲ ದಿನವೇ ಮನಸೆಳೆದ 'ಲೈಫ್ ಸೂಪರ್ ಗುರೂ']

ಇಲ್ಲಿರುವ ಸ್ಪರ್ಧಿಗಳನ್ನು ನೋಡುತ್ತಿದ್ದರೆ ಇವರು ಯಾವ ಸೆಲೆಬ್ರಿಟಿಗಳಿಗೂ ಕಮ್ಮಿ ಇಲ್ಲ ಎಂಬಂತಿದ್ದಾರೆ. ಹತ್ತು ಮಂದಿ ಸೂಪರ್ ಸೀನಿಯರ್ಸ್ ಹಾಗೂ ಹತ್ತು ಮಂದಿ ಜಾಲಿ ಜೂನಿಯರ್ಸ್ ನಡುವೆ ನಡೆಯಲಿರುವ ಸ್ಪರ್ಧೆ ಇದು. ಒಂದು ಕಡೆ ಯುವಕರ ಉತ್ಸಾಹ, ಇನ್ನೊಂದು ಕಡೆಯ ಹಿರಿಯ ಪ್ರೋತ್ಸಾಹದ ಮಾತುಗಳು ಸ್ಪರ್ಧೆಗೆ ಹೊಸ ಕಳೆತಂದಿದೆ.

ಅರುವತ್ತರಲ್ಲಿ ಬಾಡಿ ಬಿಲ್ಡ್ ಮಾಡಿದ ಸಾಹಸಿಗ

ಐವತ್ತಾಗುತ್ತಿದ್ದಂತೆ ಜೀವನವೇ ಮುಗಿದು ಹೋಯಿತು ಎಂಬಂತಿರುವ ಈ ಜಮಾನದಲ್ಲಿ ತಮ್ಮ 61ನೇ ವಯಸ್ಸಲ್ಲಿ ಬಾಡಿ ಬಿಲ್ಡ್ ಮಾಡಿ ಯುವಕರಿಗೆ ಸೆಡ್ಡುಹೊಡೆದಿದ್ದಾರೆ ರಾಮಪ್ಪ. ತಮ್ಮನ್ನು ಯಾರೋ ಚಪ್ಪಲೀಲಿ ಹೊಡೀತೀನಿ ಎಂದಾಗ ಬೇಸರಗೊಂಡ ಇವರು ಆಗಲೇ ಚಾಲೆಂಜಿಂಗ್ ಗಾಗಿ ಬಾಲ್ಡಿ ಬಿಲ್ಡಿಂಗ್ ಮಾಡಿದರು.

ನನಗೆ ನನ್ನ ಮಗನೇ ಗುರು ಎನ್ನುವ ರಾಮಪ್ಪ

ನಿವೃತ್ತಿಯಾಗಿ ನಾಲ್ಕು ವರ್ಷ ಆಗಿದೆ. ಯಂಗ್ ಸ್ಟರ್ಸ್ ಜೊತೆ ಸ್ಪರ್ಧಿಸಿ ಗೆದ್ದೇ ಗೆಲ್ಲುತ್ತೀನಿ ಎಂಬ ಅದಮ್ಯ ಉತ್ಸಾಹ ಇವರದು. ನನಗೆ ನನ್ನ ಮಗನೇ ಗುರು ಎನ್ನುವ ರಾಮಪ್ಪ ಅವರ ಪುತ್ರ ರಘು ಅವರು ಸಹ ಬಾಲ್ಡಿ ಬಿಲ್ಡರ್. ಅಪ್ಪ ಮಗ ಇಬ್ಬರೂ ಒಟ್ಟಿಗೆ ಕಸರತ್ತು ಮಾಡಿ ತಮ್ಮ ದೇಹವನ್ನು ಹುರಿಗಟ್ಟಿಸಿದ್ದಾರೆ.

ಇವರ ಪ್ರಾಯ ಅರುವತ್ತು ಅನ್ನಿಸುವುದೇ ಇಲ್ಲ

ರಾಮಪ್ಪ ಅವರನ್ನು ನೋಡಿದರೆ ಇವರಿಗೆ ವಯಸ್ಸು 60 ಎಂದು ಅನ್ನಿಸುವುದೇ ಇಲ್ಲ. ಎಲ್ಲೋ ನಲವತ್ತರ ಆಸುಪಾಸು ಎನ್ನಿಸುತ್ತದೆ. ಈ ವಯಸ್ಸಲ್ಲೂ ಏನಾದರೂ ಸಾಧಿಸಬಹುದು ಎಂಬುದನ್ನು ತೋರಿಸಬೇಕು ಎಂಬ ಉದ್ದೇಶದಿಂದಲೇ ನಾನು ಈ ಶೋಗೆ ಬಂದಿದ್ದೇನೆ ಎಂದರು.

ನ್ಯಾಶನಲ್ ಲೆವೆಲ್ ಶೂಟರ್ ಕಿರಣ್ ರಾಜ್

ಸವಾಲಿಗೆ ಸಲಾಲು ಹಾಕೋ ಸರದಾರ ನಾನು. ಹೆಸರು ಕಿರಣ್ ರಾಜ್. ವಯಸ್ಸು ಇನ್ನೂ 22ರ ಪ್ರಾಯ. ನ್ಯಾಶನಲ್ ಲೆವೆಲ್ ಶೂಟರ್. ಇವರ ತಂದೆ ಎಕ್ಸ್ ಆರ್ಮಿಮೆನ್. ನಟನಾಗಬೇಕೆಂದು ಕನಸು ಕಂಡವನು. ಈ ಶೋನಲ್ಲಿ ವಿನ್ ಆಗಿಯೇ ಆಗ್ತೀನಿ ಎಂದರು. ಮೈಸೂರು ಹುಡುಗ. ಹಿಂದಿ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ.

ಕಿರಣ್ ಎದುರು ಗೆದ್ದ ರಾಮಪ್ಪ

ಇದೇ ಸಂದರ್ಭದಲ್ಲಿ ರಾಮಪ್ಪ ಮತ್ತು ಕಿರಣ್ ರಾಜ್ ಅವರಿಗೆ ಬಸ್ಕಿ ಹೊಡೆಯುವ ಸ್ಪರ್ಧೆ ವೇದಿಕೆ ಮೇಲೆ ನಡೆಯಿತು. ಎಲ್ಲರೂ ಊಹಿಸಿದ್ದು ರಾಮಪ್ಪ ಸೋಲುತ್ತಾರೆ ಎಂದು. ಆದರೆ ಕಿರಣ್ ರಾಜ್ ಅವರ ಆಟ ರಾಮಪ್ಪ ಮುಂದೆ ನಡಿಯಲ್ಲಿಲ್ಲ. ಅರುವತ್ತರಲ್ಲಿ ನವ ಯುವಕರೂ ನಾಚುವಂತೆ ಬಸ್ಕಿ ಹೊಡೆದು ಗೆದ್ದರು ರಾಮಪ್ಪ.

ಬೆಲ್ಲಿ ಡಾನ್ಸರ್ ಹುಬ್ಬಳ್ಳಿಯ ಸುಷ್ಮಾ

ಕಿರಣ್ ರಾಜ್ ಅವರ ಬಳಿಕ ಸೊಂಟ ಕುಣಿಸುತ್ತಾ ವೇದಿಕೆಗೆ ಬಂದರು ಸುಷ್ಮಾ. ಹುಬ್ಬಳ್ಳಿ ಮೂಲದ ಇವರು ಬೆಲ್ಲಿ ಡಾನ್ಸರ್. ವಯಸ್ಸು ಇನ್ನೂ 26ರ ಹರಯ. ಶಾಪಿಂಗ್ ಅಂದ್ರೆ ಇಷ್ಟ, ಪಾರ್ಟಿಗಳು ಎಂದರೂ ತುಂಬಾ ಇಷ್ಟ. ಮುಂಬೈಗೆ ಹೋಗಿ ರೂಪದರ್ಶಿಯಾದರು. ಅಲ್ಲಿ ಬೆಲ್ಲಿ ಡಾನ್ಸ್ ನಲ್ಲಿ ವಿಶೇಷ ಪರಿಣಿತಿ ಸಾಧಿಸಿದರು. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇಲ್ಲಿಗೆ ಬಂದಿದ್ದೇನೆ. ಹಿರಿಯರ ಬಗ್ಗೆ ರೆಸ್ಪೆಕ್ಟ್ ಇದೆ ಎನ್ನುವ ಇವರಿಗೂ ಗೆಲ್ಲುವ ಉತ್ಸಾಹ ಇದೆ.

ಸುನಾಮಿ ಕಿಟ್ಟಿ ತಾಯಿ ತರಕಾರಿ ದೇವಮ್ಮ

ಬಳಿಕ ಬಂದರು ನೋಡಿ ತರಕಾರಿ ದೇವಮ್ಮ. ತರಕಾರಿ ಮಾರುವುದು ಇವರ ಕುಲಕಸುಬು. ಸುನಾಮಿ ಕಿಟ್ಟಿ ಅವರ ತಾಯಿ. ಎಚ್ ಡಿ ಕೋಟೆ ತರಕಾರಿ ದೇವಮ್ಮ ನಮ್ಮ ತಾಯಿ ಎಂದರು ಕಿಟ್ಟಿ. ವಯಸ್ಸು 66 ಆಗಿದ್ದರೂ ಇನ್ನೂ ಯುವ ಉತ್ಸಾಹ ಇವರದು.

ತಾನು ಭದ್ರಾವತಿ ಉಕ್ಕು ಎಂದರು ದೇವಮ್ಮ

ಮನೆಯಲ್ಲಿ ನಾನು ಹುಲಿ ಇದ್ದಂತೆ, ಉಳಿದವರು ಮರಿ ಹುಲಿಗಳಿದ್ದಂತೆ. ಹುರುಳಿಕಾಳು, ಸೊಪ್ಪು ಸಾರು ತಿಂದಿರೋ ದೇಹ ಇದು, ಭದ್ರಾವತಿ ಉಕ್ಕು. ತಮಟೆ ಸದ್ದು ಕೇಳಿದರೆ ಕುಣೀಬೇಕು ಅನ್ನಿಸುತ್ತದೆ. ಈ ಶೋನಲ್ಲಿ ಆಡೇ ಆಡ್ತೀನಿ ಗೆದ್ದೇ ಗೆಲ್ತೀನಿ ಅಂತಾರೆ ದೇವಮ್ಮ. ಒಂದು ರೀತಿ ಪಂಚಭಾಷಾ ತಾರೆ ಇದ್ದಂತೆ. ಏಕೆಂದರೆ ಐದು ಭಾಷೆಗಳಲ್ಲಿ ತರಕಾರಿ ಮಾರುತ್ತೇನೆ ಎಂದರು.

ತೊಡೆ ತಟ್ಟಿ ಬಂದ ಕುಸ್ತಿ ಪೈಲ್ವಾನ್ ಜಟ್ಟಿಮನಿ

ಇದಾದ ಬಳಿಕ ವೇದಿಕೆಗೆ ಬಂದರು ನೋಡಿ ಬಾಗಲಕೋಟೆ ಭೂಪ, ಪೈಲ್ವಾನ್, ಜಟ್ಟಿ ಮನಿ. ವಯಸ್ಸು 69 ಆಗಿದ್ದರೂ ಈಗಲೂ ತೊಡೆ ತಟ್ಟಿ ಪಂಥಕ್ಕೆ ಆಹ್ವಾನ ನೀಡುವ ಉತ್ಸಾಹ. ಪೂರ್ತಿ ಹೆಸರು ಕಾಡಪ್ಪ ಜಟ್ಟಿಮನಿ, ಕುಸ್ತಿ ಪೈಲ್ವಾನ್. ಇವರ ಮೂರು ತಲೆಮಾರು ಕುಸ್ತಿ ಪಟುಗಳಾಗಿ ಬಂದವರು. ಅದೆಷ್ಟೋ ಜನರನ್ನು ಮಣ್ಣುಮುಕ್ಕಿಸಿದ್ದಾರೆ.

ಈಗಿನ ಯುವಕರಿಗೆ ಮೈಯಲ್ಲಿ ತಾಕತ್ತಿಲ್ಲದಂತಾಗಿದೆ

ಮನೆಗೊಬ್ಬ ಪೈಲ್ವಾನ್ ಇರಬೇಕು, ಊರಿಗೊಬ್ಬ ಕುಸ್ತಿಪಟು ಬೇಕು. ಈಗಿನ ಯುವಕರು ಗುಟ್ಕಾ ಮಾವಾ ಅದೂ ಇದೂ ತಿಂದು ಮೈಯಲ್ಲಿ ತಾಕತ್ತಿಲ್ಲ ಇಲ್ಲದಂತಾಗಿದೆ. ಕುಸ್ತಿಯಲ್ಲಿ ಕಿಮ್ಮತ್ತು ಯಾವ ಜಿಮ್ಮು ಕರಾಟೆಯ್ಲ್ಲೂ ಇಲ್ಲ. ತನ್ನ ಹದಿನೈದು ವಯಸ್ಸಿನಿಂದಲೇ ಈ ಕುಸ್ತಿ ಆರಂಭಿಸಿದ್ದೇನೆ ಎನ್ನುತ್ತಾರೆ ಜಟ್ಟಿಮನಿ.

ಮೈಕೇಲ್ ಜಾಕ್ಸನ್ನೇ ನನ್ನ ಫ್ಯಾನ್

ಬಳಿಕ ಕುಣಿಯುತ್ತಾ ಬಂದರು ಡಾನ್ಸರ್ ಶರತ್. ಮೈಕೇಲ್ ಜಾಕ್ಸನ್ನೇ ನನ್ನ ಫ್ಯಾನ್. ನಾನು ನಮ್ಮ ಏರಿಯಾ ಆಂಗ್ರಿ ಎಂಗ್ ಮ್ಯಾನ್. ವಯಸ್ಸು ಇನ್ನೂ 24ರ ಪ್ರಾಯ. ಕೊರಿಯೋಗ್ರಾಫರ್. ಡಿಫರೆಂಟ್ ಡಾನ್ಸ್ ಗಳನ್ನು ಕಲಿತಿದ್ದಾರೆ. ತನ್ನ ನೋವುಗಳನ್ನು ಮರೆಯಲು ಇದ್ದದ್ದು ಒಂದೇ ಒಂದು ಚಾನ್ಸ್ ಡಾನ್ಸ್. ಇಮ್ರಾನ್ ಸರ್ದಾರಿಯಾ ಡಾನ್ಸ್ ಕ್ಲಾಸ್ ನಲ್ಲಿ ತರಬೇತಿದನಾಗಿದ್ದಾರೆ.

English summary
Zee Kannada's Life Super Guru show becomes interesting arena. The different category, background contestants are the main attraction in the show. Here is the day 2 highlights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada