Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೈಲೆಂಟ್ ಆಗಿ ಬಿಗ್‌ಬಾಸ್ ಕನ್ನಡ ಸೀಸನ್ 9ರ ಫೈನಲ್ ಪ್ರವೇಶಿಸಿದ ದಿವ್ಯಾ ಉರುಡುಗಾ ಜರ್ನಿ ಹೇಗಿತ್ತು?
ಬಿಗ್ ಬಾಸ್ ಸೀಸನ್ 9 ಫೈನಲ್ ಹಂತ ತಲುಪಿದ್ದು ವಿನ್ನರ್ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಅಭಿಮಾನಿಗಳು ತಮ್ಮ ತಮ್ಮ ಫೇವರಿಟ್ ಸ್ಪರ್ಧಿಗಳಿಗೆ ವೋಟ್ ಮಾಡುತ್ತಿದ್ದಾರೆ.
ಈ ಸಲದ ಬಿಗ್ ಬಾಸ್ ಸೀಸನ್‌ನ ವಿಶೇಷ ಎಂಧೃಏ ಪ್ರವೀಣರು ಮತ್ತು ನವೀನರು. ಪ್ರವೀಣರಾಗಿ ಈಗ ಫಿನಾಲೆಗೆ ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಎಂಟ್ರಿ ಕೊಟ್ಟಿದ್ದರೆ, ನವೀನರಾಗಿ ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಫಿನಾಲೆ ಹಂತ ತಲುಪಿದ್ದಾರೆ.
ವೈಲ್ಡ್
ಕಾರ್ಡ್‌ನಲ್ಲಿ
ಆಗಮಿಸಿದ
ದೀಪಿಕಾ
ಬಿಗ್
ಬಾಸ್
ಗೆಲ್ಲುತ್ತಾರಾ?
ಈ ಐವರು ಸ್ಪರ್ಧಿಗಳು ತುಂಬಾನೇ ಸ್ಟ್ರಾಂಗ್ ಆಗಿದ್ದು, ಮನೆಯೊಳಗೂ ಯಾರು ವಿನ್ನರ್ ಆಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಟಾಪ್ ಐದು ಸ್ಪರ್ಧಿಗಳಿಗೂ ತಾವೇ ಗೆಲ್ಲಬೇಕು ಎಂಬ ಆಸೆಯೂ ಹೆಚ್ಚಾಗುತ್ತಿದೆ. ಆದರೆ ಫಿನಾಲೆಯಲ್ಲಿ ವಿನ್ನರ್ ಪಟ್ಟ ಯಾರ ಪಾಲಾಗುತ್ತದೋ ಎಂಬ ಚರ್ಚೆ ಜೋರಾಗುತ್ತಿದೆ.

ಮತ್ತೆ ಬಿಗ್ ಮನೆಗೆ ಬಂದ ದಿವ್ಯಾ
ಬಿಗ್ ಬಾಸ್ ಸೀಸನ್ 8ರಲ್ಲಿ ಬೈಕ್ ರೇಸರ್ ಕೆಪಿ ಅರವಿಂದ್ ಜೊತೆಗೆ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ ಮತ್ತೆ ಸೀಸನ್ 9ರಲ್ಲಿ ಕಾಣಿಸಿಕೊಂಡಾಗ ಎಲ್ಲರಿಗೂ ಶಾಕ್ ಆಗಿತ್ತು. ಆದರೆ, ದಿವ್ಯಾ ಉರುಡುಗಾ ಸೀಸನ್ 8ರಲ್ಲಿ ಗುರುತಿಸಿಕೊಂಡ ರೀತಿಗೂ ಈ ಸೀಸನ್‌ನಲ್ಲಿ ಆಡುತ್ತಿರುವ ರೀತಿಗೂ ಬಹಳ ವ್ಯತ್ಯಾಸಗಳಿವೆ. ಸೀಸನ್ 8ರಲ್ಲಿ ದಿವ್ಯಾ ಉರುಡುಗಾ ಫೇವರಿಸಂ ಎಂದೇ ಗುರುತಿಸಿಕೊಂಡಿದ್ದರು. ಆದರೆ ಈ ಸೀಸನ್‌ನಲ್ಲಿ ಎಲ್ಲರ ಜೊತೆಗೂ ಕಾಣಿಸಿಕೊಂಡಿದ್ದು, ಹೆಚ್ಚು ಜಗಳವಾಡಿಲ್ಲ. ಯಾರಿಗೂ ನೋವು ಮಾಡಿಲ್ಲ. ನೋವಿನಲ್ಲಿದ್ದವರಿಗೆ ಹೆಗಲು ಕೊಟ್ಟು ಖುಷಿಯ ಸಂದರ್ಭದಲ್ಲಿ ಸಂಭ್ರಮಿಸಿದ್ದಾರೆ.
BBK9:ನನ್ನ
ಕರ್ಮದ
ಫ್ರೆಂಡ್
ರೂಪೇಶ್
ರಾಜಣ್ಣ
:
ರೂಪೇಶ್
ಶೆಟ್ಟಿ
ನೊಂದುಕೊಂಡಿದ್ದೇಕೆ?

ನಿಸ್ವಾರ್ಥ ಆಟವಾಡಿದ್ದ ಬೆಡಗಿ
ದಿವ್ಯಾ ಉರುಡುಗಾ ಅವರು ಎಲ್ಲಾ ಆಟಗಳನ್ನು ಸೂಪರ್ ಆಗಿ ಆಡಿದ್ದಾರೆ. ಟಾಸ್ಕ್ ಎಂದು ಬಂದಾಗ ಎಲ್ಲೂ ತಮ್ಮನ್ನು ತಾವು ಬಿಟ್ಟುಕೊಟ್ಟಿಲ್ಲ. ಅದು ಗ್ರೂಪ್ ಟಾಸ್ಕ್ ಆಗಿರಲಿ. ಇಲ್ಲವೇ ಏಕಾಂಗಿ ಆಗಿ ಆಡುವ ಆಟವಾದರೂ ಟಫ್ ಫೈಟ್ ಕೊಟ್ಟಿದ್ದಾರೆ. ಹೆಚ್ಚು ಎಮೋಷನಲ್ ಆಗಿ ಗುರುತಿಸಿಕೊಂಡ ದಿವ್ಯಾ ಉರುಡುಗ, ಕಿಚ್ಚನ ಚಪ್ಪಾಳೆ ಪಡೆದಿಲ್ಲ, ವಾದ-ವಿವಾದಗಳನ್ನೂ ಮಾಡಿಕೊಂಡಿಲ್ಲ. ಎಲ್ಲೂ ತಮ್ಮನ್ನು ತಾವು ಸ್ವಾರ್ಥಿಯಾಗಿ ಗುರುತಿಸಿಕೊಳ್ಳಲಿಲ್ಲ. ಆಟದಲ್ಲೂ ಮನೆಯ ಚಟುವಟಿಕೆಗಳಲ್ಲೂ ನಿಸ್ವಾರ್ಥವಾಗಿ ನಡೆದುಕೊಂಡಿದ್ದಾರೆ.

ದಿವ್ಯಾ ಗೆಲ್ಲಲಿ ಎನ್ನುತ್ತಿರುವ ಫ್ಯಾನ್ಸ್
ಆಗಾಗ ಬಿಗ್ ಬಾಸ್ ಮನೆಯಲ್ಲಿ ಹಾಡುಗಳನ್ನು ಬರೆದು ಎಂಟರ್‌ಟೈನ್ ಮಾಡಿದ್ದಾರೆ. ಬೆಸ್ಟ್ ಪರ್ಫಾಮೆನ್ಸ್ ಪಡೆದಿಲ್ಲ, ಕಳಪೆ ಪಟ್ಟವೂ ಸಿಕ್ಕಿಲ್ಲ, ಕ್ಯಾಪ್ಟನ್ ಕೂಡ ಆಗಿಲ್ಲ. ಹಾಗಿದ್ದರೂ ತಮ್ಮದೇ ರೀತಿಯಲ್ಲಿ ಆಟವಾಡಿ ಫಿನಾಲೆ ತಲುಪಿದ್ದಾರೆ. ಹೀಗಾಗಿ ದಿವ್ಯಾ ಉರುಡುಗ ಗೆಲ್ಲಬೇಕು ಎಂಬುದು ಹಲವರ ಬಯಕೆ. ಯಾರು ಏನೇ ಅಂದ್ರೂ, ಇತರರಿಗಿಂತ ದಿವ್ಯಾ ಉರುಡುಗ ನಡವಳಿಕೆ ಉತ್ತಮವಾಗಿದೆ. ಹೀಗಾಗಿ ದಿವ್ಯಾ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ.

ವೀಕ್ಷಕರ ಫೇವರಿಟ್ ಹುಡುಗಿ
ಪ್ರತಿ ವಾರವೂ ನಾಮಿನೇಟ್ ಆಗುತ್ತಿದ್ದ ದಿವ್ಯಾ ಅವರನ್ನು ಅಭಿಮಾನಿಗಳು ಸೇವ್ ಮಾಡುತ್ತಾ ಬಂದಿದ್ದಾರೆ. ಟಾಸ್ಕ್, ಮನೋರಂಜನೆ ಹಾಗೂ ಮನೆಯಲ್ಲಿ ಎಲ್ಲರ ಜೊತೆ ಇದ್ದ ರೀತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ದಿವ್ಯಾ ಉರುಡುಗ ಈ ಸಲ ವಿನ್ನರ್ ಆಗೋದು ಗ್ಯಾರಂಟಿ ಎಂದು ತೋರುತ್ತಿದೆ. ದಿವ್ಯಾ ಉರುಡುಗ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಸೆಯೂ ಆಗಿದೆ.