»   » ಲೂಸ್ ಮಾದ ಯೋಗಿ ಅದಷ್ಟು ಬೇಗ ಅಪ್ಪ ಆಗಬೇಕಂತೆ

ಲೂಸ್ ಮಾದ ಯೋಗಿ ಅದಷ್ಟು ಬೇಗ ಅಪ್ಪ ಆಗಬೇಕಂತೆ

Posted By:
Subscribe to Filmibeat Kannada
ಲೂಸ್ ಮಾದ ಯೋಗಿ ಅಪ್ಪ ಆಗಬೇಕಂತೆ | Filmibeat Kannada

ನಟ ಲೂಸ್ ಮಾದ ಯೋಗಿ ವಿವಾಹ ಕೆಲ ತಿಂಗಳುಗಳ ಹಿಂದೆ ನೆರವೇರಿದೆ. ಯೋಗಿ ತಮ್ಮ ಪ್ರೀತಿಯ ಪತ್ನಿ ಸಾಹಿತ್ಯ ಜೊತೆಗೆ ಸಂಸಾರ ಮಾಡುತ್ತಿದ್ದಾರೆ. ಗಂಡ ಆದ ಮೇಲೆ ಅಪ್ಪ ಆಗುವ ಆಸೆ ಎಲ್ಲರಲ್ಲಿಯೂ ಇರುತ್ತದೆ. ಈಗ ಯೋಗಿ ಕೂಡ ತಂದೆ ಆಗುವ ಸಂತೋಷದಲ್ಲಿ ಇದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಇದೀಗ ನಟ ಲೂಸ್ ಮಾದ ಯೋಗಿ ಆಗಮಿಸಿದ್ದಾರೆ. ಈ ವೇಳೆ ಶಿವಣ್ಣ ನೀವು ಯಾವ ಕ್ಷಣಕ್ಕಾಗಿ ಕಾಯುತ್ತಿದ್ದೀರಾ ? ಎಂದಾಗ ಯೋಗಿ ಅಪ್ಪ ಆಗುವುದಕ್ಕೆ ಎಂದಿದ್ದಾರೆ. ಈ ಸಂಚಿಕೆಯ ಚಿತ್ರೀಕರಣ ಈಗಾಗಲೇ ಆಗಿದೆ. ಈ ಕಾರ್ಯಕ್ರಮ ಪಕ್ಕಾ ಗೆಳೆಯರ ಬಗ್ಗೆ ಇದು ಯೋಗಿ ಜೊತೆಗೆ ನಟ ದೂದ್ ಪೇಡ ದಿಗಂತ್ ಕಾರ್ಯಕ್ರಮದ ಅತಿಥಿ ಆಗಿದ್ದಾರೆ. ಇದೇ ಭಾನುವಾರ ರಾತ್ರಿ 8 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸದ್ಯಕ್ಕೆ ಈ ಸಂಚಿಕೆಯ ಪ್ರೋಮೋ ಹೊರಬಂದಿದೆ.

ಗೆಳತಿ ಸಾಹಿತ್ಯ ಜೊತೆ ಹಸೆಮಣೆ ಏರಿದ ನಟ ಲೂಸ್ ಮಾದ ಯೋಗೀಶ್

Loose Mada Yogesh and Diganth in No1 yari with Shivanna program

ಅಂದಹಾಗೆ, ಲೂಸ್ ಮಾದ ಯೋಗಿ ಶಿವಣ್ಣ ಅವರ ದೊಡ್ಡ ಅಭಿಮಾನಿ. ಶಿವರಾಜ್ ಕುಮಾರ್ ಜೊತೆಗೆ 'ಮಾಸ್ ಲೀಡರ್' ಸಿನಿಮಾದಲ್ಲಿಯೂ ಯೋಗಿ ಅಭಿನಯಿಸಿದ್ದರು. ಈಗ ಒಂದೇ ಕಾರ್ಯಕ್ರಮದಲ್ಲಿ ಇವರಿಬ್ಬರ ಸಮಾಗಮವಾಗಿದೆ. ಶಿವಣ್ಣನ ತರ್ಲೆ ಪ್ರಶ್ನೆಗಳಿಗೆ ಯೋಗಿ ಉತ್ತರ ಕೊಡೆಕ್ಕೆ ಸಜ್ಜಾಗಿದ್ದಾರೆ. 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ನಾಲ್ಕನೇ ಸಂಚಿಕೆ ಇದಾಗಿದ್ದು, ಮೊದಲ ಸಂಚಿಕೆಯಲ್ಲಿ ಉಪೇಂದ್ರ - ಗುರುಕಿರಣ್, ಎರಡನೇ ಸಂಚಿಕೆಯಲ್ಲಿ ಶರಣ್, ಚಿಕ್ಕಣ್ಣ ಮತ್ತು ತರುಣ್ ಸುಧೀರ್, ಮೂರನೇ ಸಂಚಿಕೆಯಲ್ಲಿ ಧನಂಜಯ್, ವಸಿಷ್ಟ, ಮಾನ್ವಿತಾ ಹರೀಶ್ ಆಗಮಿಸಿದ್ದರು.

ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗೀಶ್-ಸಾಹಿತ್ಯ

English summary
Kannada actor Loose Mada Yogesh and Diganth in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada