For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಸೂಪರ್ ಜೋಡಿಯಲ್ಲಿ ಲೂಸ್ ಮಾದ ಯೋಗೇಶ್

  By Rajendra
  |

  ಸುವರ್ಣವಾಹಿನಿಯು ತನ್ನ ಪರಿವಾರದ (ಧಾರಾವಾಹಿ) ಜೋಡಿಗಳಿಗೆಂದೇ ಇತ್ತೀಚೆಗೆ ಪ್ರಾರಂಭಿಸಿದ ಕಾರ್ಯಕ್ರಮ 'ಸುವರ್ಣ ಸೂಪರ್ ಜೋಡಿ' ಈಗ ಯಶಸ್ವಿಯಾಗಿ ಮೂಡಿಬರುತ್ತಿದೆ. ಕಳೆದ ವಾರವಷ್ಟೇ ನಟಿ ರಮ್ಯಾ ಗೆಸ್ಟ್ ಆಗಿ ಬಂದು ಕಾರ್ಯಕ್ರಮವನ್ನು ಕೊಂಡಾಡಿದ್ದರು.

  ಈಗ ಅದೇ ಸ್ಥಾನಕ್ಕೆ ಕನ್ನಡ ಚಲನಚಿತ್ರ ನಟ, ಲೂಸ್ ಮಾದ ಖ್ಯಾತಿಯ ಯೋಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದು ಇದೇ ಜುಲೈ 7ರ ಭಾನುವಾರದಂದು ಸಂಜೆ 8 ಗಂಟೆಗೆ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.

  ಅತ್ಯಂತ ಸರಳ ವ್ಯಕ್ತಿತ್ವದ ನಟ ಯೋಗಿ ಸುವರ್ಣ ಸೂಪರ್ ಜೋಡಿಗಳೊಂದಿಗೆ ಅವರ ಚಲನಚಿತ್ರ 'ಅಂಬರ'ದ ಅನುಭವಗಳನ್ನು ಹಂಚಿಕೊಂಡು ಆ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಅವರದೇ ಮತ್ತೊಂದು ಚಿತ್ರ ಅಂಬಾರಿಯಲ್ಲಿರುವ ಹಾಡಿಗೂ ಡಾನ್ಸ್ ಮಾಡಿ ವೀಕ್ಷಕರನ್ನು ರಂಜಿಸಲಿದ್ದಾರೆ.

  ಸುವರ್ಣ ವಾಹಿನಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಹೆಮ್ಮೆ ಅನಿಸುತ್ತದೆ. ಈ ಕಾರ್ಯಕ್ರಮದ ಮೂಲಕ ಸುವರ್ಣ ವಾಹಿನಿಯ ಎಲ್ಲ ಧಾರಾವಾಹಿಗಳ ಪಾತ್ರಧಾರಿಗಳನ್ನು ಪ್ರತ್ಯಕ್ಷವಾಗಿ ನೋಡುವಂತಾಯಿತು.

  ಇಲ್ಲಿ ಪ್ರತಿಯೊಂದು ಜೋಡಿ ಶ್ರದ್ಧೆಯಿಂದ ಟಾಸ್ಕ್ ಗಳನ್ನು ಮಾಡುತ್ತಿರುವುದು, ಅಷ್ಟೇ ಕಾರ್ಯಕ್ರಮವನ್ನು ಸ್ವಾರಸ್ಯಕರವಾಗಿ ಮೂಡಿಸುವಲ್ಲಿ ಸಹಕಾರಿಯಾಗುತ್ತಿದೆ ಅದಕ್ಕೆ ಸಿಹಿಕಹಿ ಚಂದ್ರು ಮತ್ತು ಗೀತಾ ಮೇಡಂ ಜೀವ ತುಂಬುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

  ಒಟ್ಟಿನಲ್ಲಿ ಸುವರ್ಣ ಸೂಪರ್ ಜೋಡಿಯಲ್ಲಿ ಈ ವಾರ ಯಾವ ರೀತಿಯ ವಿಭಿನ್ನ ಟಾಸ್ಕ್ ಗಳಿರುತ್ತವೆ? ಯಾವ ಜೋಡಿ ಕಾರ್ಯಕ್ರಮದಿಂದ ನಿರ್ಗಮಿಸುತ್ತದೆ? ಮತ್ತು ಲೂಸ್ ಮಾದನ ಅಂಬರದ ಅನುಭವ, ಸಿನಿಮಾ ಜೀವನದ ಒಂದಷ್ಟು ಸಿಹಿ ತುಣುಕುಗಳನ್ನು ಮೆಲಕು ಹಾಕುತ್ತಾ ಆಡುವ ಸುವರ್ಣದ ಸೂಪರ್ ಆಟ ಸುವರ್ಣ ಸೂಪರ್ ಜೋಡಿ ಮಿಸ್ ಮಾಡ್ದೇ ನೋಡಿ ಇದೆ ಭಾನುವಾರ ಸಂಜೆ 8 ಗಂಟೆಗೆ. (ಒನ್ಇಂಡಿಯ ಕನ್ನಡ)

  English summary
  Suvarna Super jodi celebrity Guest Loose Mada Yogesh episode will go on air on July 7 th 8PM. This reality show invites like-minded couples, who go through the toughest challenges to test their strengths, weaknesses, and emotional bond. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X