For Quick Alerts
  ALLOW NOTIFICATIONS  
  For Daily Alerts

  ಜಾನಕಿ ತಾಯಿ ರಶ್ಮಿ ಮುಂದೆ ಸತ್ಯ ಬಾಯ್ಬಿಟ್ಟ ನಿರಂಜನ್.!

  By Harshitha
  |

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಟಿ.ಎನ್.ಸೀತಾರಾಮ್ ನಿರ್ದೇಶನ ಮಾಡುತ್ತಿರುವ 'ಮಗಳು ಜಾನಕಿ' ಧಾರಾವಾಹಿ ರೋಚಕ ಘಟ್ಟ ತಲುಪಿದೆ.

  ಇಷ್ಟು ದಿನ ಚಂದು ಭಾರ್ಗಿ ಹೇಳಿದಂತೆ ಕೇಳುತ್ತಾ, ಐಎಎಸ್ ಆಫೀಸರ್ ಅಂತ ಸುಳ್ಳು ಹೇಳಿ ನಾಟಕ ಮಾಡುತ್ತಿದ್ದ ನಿರಂಜನ್ ಇದೀಗ ಜಾನಕಿ ತಾಯಿ ರಶ್ಮಿ ಮುಂದೆ ಸತ್ಯ ಬಾಯಿಬಿಟ್ಟಿದ್ದಾರೆ.

  ''ನಾನು ಐಎಎಸ್ ಆಫೀಸರ್ ಅಲ್ಲ. ನಾನು ಡಿಗ್ರಿ ಮಾಡಿ ಖಾಲಿ ಕೂತಿರುವೆ. ಜಾನಕಿಗೆ ಮೋಸ ಮಾಡುವ ಉದ್ದೇಶ ನನಗಿಲ್ಲ. ಬೇಕಿದ್ದರೆ, ನನ್ನ ವಿರುದ್ಧ ಕಂಪ್ಲೇಂಟ್ ಕೊಟ್ಟು ಅರೆಸ್ಟ್ ಮಾಡಿಸಿ'' ಎಂದು ರಶ್ಮಿ ಮುಂದೆ ನಿರಂಜನ್ ಹೇಳಿಕೊಂಡಿದ್ದಾರೆ.

  ನಿರಂಜನ್ ಬಾಯ್ಬಿಟ್ಟ ಈ ಸತ್ಯ ಕೇಳಿ ರಶ್ಮಿ ಅಕ್ಷರಶಃ ಆಘಾತಗೊಂಡಿದ್ದಾರೆ. ನಿರಂಜನ್ ಜೊತೆಗಿನ ಮದುವೆಗೆ ಜಾನಕಿ ಒಪ್ಪಿಗೆ ಕೊಟ್ಟಿದ್ದೇ ಹೆಚ್ಚು. ಅಂಥದ್ರಲ್ಲಿ, ನಿರಂಜನ್ ಸುಳ್ಳು ಹೇಳಿದ್ದಾರೆ ಅಂತ ಗೊತ್ತಾದರೆ, ಜಾನಕಿಯ ಪ್ರತಿಕ್ರಿಯೆ ಹೇಗಿರಬಹುದು.? ಮುಂದೆ ಓದಿರಿ...

  ಕಣ್ಣೀರು ಹಾಕಲಿಲ್ಲ ಜಾನಕಿ

  ಕಣ್ಣೀರು ಹಾಕಲಿಲ್ಲ ಜಾನಕಿ

  ಆನಂದ್ ಜೊತೆಗಿನ ಮದುವೆ ಮುರಿದು ಬಿದ್ದ ಮೇಲೆ ಜಾನಕಿ ಕಣ್ಣೀರು ಹಾಕಲಿಲ್ಲ, ಕೊರಗಲಿಲ್ಲ. ಧೈರ್ಯವಾಗಿ ಮುನ್ನಡೆಯುವ ಮನಸ್ಸು ಮಾಡಿದರು. ಜಾನಕಿಯನ್ನ ಒಂಟಿಯಾಗಿ ಇರಲು ಬಿಡಬಾರದು ಎಂದುಕೊಂಡ ರಶ್ಮಿ, ನಿರಂಜನ್ ಜೊತೆಗೆ ಮದುವೆ ಮಾಡಿಸಲು ಪ್ರಯತ್ನ ಪಟ್ಟರು.

  ಮಗಳ ಮದುವೆ ನಡೆಯಲಿಲ್ಲ: ಜಾನಕಿ ಕಣ್ಣೀರು ಹಾಕಲಿಲ್ಲ.! ಮಗಳ ಮದುವೆ ನಡೆಯಲಿಲ್ಲ: ಜಾನಕಿ ಕಣ್ಣೀರು ಹಾಕಲಿಲ್ಲ.!

  ಸಮ್ಮತಿ ಸೂಚಿಸಿದ ಜಾನಕಿ

  ಸಮ್ಮತಿ ಸೂಚಿಸಿದ ಜಾನಕಿ

  ಆನಂದ್ ಜೊತೆಗೆ ಮದುವೆ ಆಗಲು ಮನೆ ಬಿಟ್ಟು ಹೋದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರಂಜನ್ ರನ್ನ ಮದುವೆ ಆಗಲು ಜಾನಕಿ ಸಮ್ಮತಿ ಸೂಚಿಸಿದರು.

  ಐ.ಪಿ.ಎಸ್ ಪಾಸ್ ಮಾಡ್ತಾರಾ 'ಮಗಳು ಜಾನಕಿ': ಬರಲಿದೆ ಹೊಸ ತಿರುವು.?ಐ.ಪಿ.ಎಸ್ ಪಾಸ್ ಮಾಡ್ತಾರಾ 'ಮಗಳು ಜಾನಕಿ': ಬರಲಿದೆ ಹೊಸ ತಿರುವು.?

  ಅತ್ತ ಖುಷಿಯಾಗಿದ್ದ ನಿರಂಜನ್

  ಅತ್ತ ಖುಷಿಯಾಗಿದ್ದ ನಿರಂಜನ್

  ಜಾನಕಿ ಜೊತೆಗಿನ ಮದುವೆ ಮುರಿದು ಬಿದ್ದಿದ್ದಕ್ಕೆ ಖುಷಿ ಆಗಿದ್ದ ನಿರಂಜನ್ ಗೆ ಮತ್ತೆ ಶಾಕ್ ಕಾದಿತ್ತು. ಜಾನಕಿ ಜೊತೆಗಿನ ಮದುವೆ ಪ್ರಸ್ತಾಪವನ್ನ ಮರಳಿ ನಿರಂಜನ್ ಮುಂದೆ ರಶ್ಮಿ ಮುಂದಿಟ್ಟರು. ಚಂದು ಭಾರ್ಗಿ ಸೂಚನೆ ಮೇರೆಗೆ ಮದುವೆಗೆ ನಿರಂಜನ್ ಒಪ್ಪಿಕೊಳ್ಳಲೇಬೇಕಾಯಿತು.

  'ಮಗಳು ಜಾನಕಿ'ಯ ಕಥೆ ಮುಂದುವರೆಸಿ, ಟಿ.ಎನ್.ಎಸ್ ಕಡೆಯಿಂದ ಸಂಭಾವನೆ ಪಡೆಯಿರಿ.! 'ಮಗಳು ಜಾನಕಿ'ಯ ಕಥೆ ಮುಂದುವರೆಸಿ, ಟಿ.ಎನ್.ಎಸ್ ಕಡೆಯಿಂದ ಸಂಭಾವನೆ ಪಡೆಯಿರಿ.!

  ಸುಳ್ಳು ಹೇಳಿ ಮದುವೆ ಆಗಲು ಇಷ್ಟ ಇಲ್ಲ

  ಸುಳ್ಳು ಹೇಳಿ ಮದುವೆ ಆಗಲು ಇಷ್ಟ ಇಲ್ಲ

  ಜಾನಕಿ ಮತ್ತು ತಾಯಿ ರಶ್ಮಿಗೆ ಸುಳ್ಳು ಹೇಳಿ ಮದುವೆ ಆಗುವುದು ನಿರಂಜನ್ ಗೆ ಇಷ್ಟ ಇರಲಿಲ್ಲ. ಹೀಗಾಗಿ, ರಶ್ಮಿ ಮುಂದೆ ತಮ್ಮ ಹಿನ್ನಲೆಯ ಸತ್ಯವನ್ನ ನಿರಂಜನ್ ಹೇಳಿಬಿಟ್ಟರು. ಆಘಾತದಲ್ಲಿ ರಶ್ಮಿ ಕಣ್ಣೀರು ಸುರಿಸಿದರು.

  ಚಂದು ಭಾರ್ಗಿ ಬಗ್ಗೆ ಏನೂ ಹೇಳಲಿಲ್ಲ.!

  ಚಂದು ಭಾರ್ಗಿ ಬಗ್ಗೆ ಏನೂ ಹೇಳಲಿಲ್ಲ.!

  ತಾವು ಸುಳ್ಳು ಹೇಳಿ, ನಾಟಕ ಮಾಡಲು ಚಂದು ಭಾರ್ಗಿ ಕಾರಣ ಎಂಬ ಸತ್ಯವನ್ನ ನಿರಂಜನ್, ರಶ್ಮಿ ಮುಂದೆ ಬಾಯಿಬಿಟ್ಟಿಲ್ಲ. ತಮ್ಮ ಹಿನ್ನಲೆ ಬಗ್ಗೆ ಮಾತ್ರ ಹೇಳಿಕೊಂಡಿರುವ ನಿರಂಜನ್, ಅರೆಸ್ಟ್ ಆಗುವುದಕ್ಕೂ ರೆಡಿ ಇದ್ದಾರೆ.

  ನಿರಂಜನ್-ಜಾನಕಿ ಮದುವೆ ನಡೆಯುತ್ತಾ.?

  ನಿರಂಜನ್-ಜಾನಕಿ ಮದುವೆ ನಡೆಯುತ್ತಾ.?

  ಸತ್ಯ ಕೇಳಿದ್ಮೇಲೂ, ನಿರಂಜನ್ ಗೆ ಜಾನಕಿಯನ್ನ ಕೊಟ್ಟು ಮದುವೆ ಮಾಡಲು ರಶ್ಮಿ ಮುಂದಾಗುತ್ತಾರೆ. ಈ ವಿಷಯ ಗೊತ್ತಾದರೆ, ಜಾನಕಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

  English summary
  TN Seetharam's 'Magalu Janaki' written update: Niranjan confesses the truth to Janaki's mother Rashmi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X