»   » 'ಬಿಗ್ ಬಾಸ್' ಸ್ವರ್ಧಿಗಳು, ಈಗ 'ಮಜಾ ಭಾರತ'ದ ಸಾರಥಿಗಳು!

'ಬಿಗ್ ಬಾಸ್' ಸ್ವರ್ಧಿಗಳು, ಈಗ 'ಮಜಾ ಭಾರತ'ದ ಸಾರಥಿಗಳು!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕುಟುಂಬದಿಂದ ಮತ್ತೊಂದು ರಿಯಾಲಿಟಿ ಶೋ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದ ಹೆಸರು 'ಮಜಾ ಭಾರತ'. ಇದೊಂದು ಪಕ್ಕಾ ಕಾಮಿಡಿ ರಿಯಾಲಿಟಿ ಶೋ.

ವಾರಾಂತ್ಯದಲ್ಲಿ ಕನ್ನಡ ಮನರಂಜನ ವಾಹಿನಿಗಳು ವಿವಿಧ ಬಗ್ಗೆಯ ಕಾರ್ಯಕ್ರಮಗಳ ಮೂಲಕ ವೀಕ್ಷರನ್ನ ರಂಜಿಸುತ್ತವೆ. ಆದ್ರೆ, ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಲಿರುವ 'ಮಜಾ ಭಾರತ' ವಾರದ ಪ್ರಾರಂಭದಲ್ಲಿ ವೀಕ್ಷಕರನ್ನ ರಂಜಿಸಲು ಬರುತ್ತಿದೆ.['ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!]

24 ಹಾಸ್ಯ ಕಲಾವಿದರು, 6 ತಂಡಗಳು.....ಇಬ್ಬರು ಸೂಪರ್ ಆಂಕರ್ ಗಳ ಜೊತೆ, ಇಬ್ಬರು ಮಾಸ್ಟರ್ ಗಳು 'ಮಜಾ ಭಾರತ' ನಲ್ಲಿದ್ದಾರೆ. ಮುಂದೆ ಓದಿ...

'ಕಲರ್ಸ್ ಸೂಪರ್'ನಲ್ಲಿ ಕಾಮಿಡಿ ಶೋ!

'ಬಿಗ್ ಬಾಸ್ ಕನ್ನಡ 4' ಕಾರ್ಯಕ್ರಮವನ್ನ ಕೊನೆ ಎರಡು ವಾರ ಯಶಸ್ವಿಯಾಗಿ ಪ್ರಸಾರ ಮಾಡಿದ 'ಕಲರ್ಸ್ ಸೂಪರ್ ವಾಹಿನಿ ಈಗ 'ಮಜಾ ಭಾರತ್' ಎಂಬ ಕಾಮಿಡಿ ಕಾರ್ಯಕ್ರಮವನ್ನ ಹೊತ್ತು ತಂದಿದೆ. 24 ಕಲಾವಿದರ, 6 ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.

ಶೀತಲ್ ಶೆಟ್ಟಿ-ನಿರಂಜನ್ ನಿರೂಪಣೆ

ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಕಾಮಿಡಿ ಕಾರ್ಯಕ್ರಮ 'ಮಜಾ ಭಾರತ್' ನಲ್ಲಿ ಕರಾವಳಿ ಚೆಲುವೆ ಶೀತಲ್ ಶೆಟ್ಟಿ ಹಾಗೂ ಮಾತಿನ ಮಾಂತ್ರಿಕ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಲಿದ್ದಾರೆ.

ಶ್ರುತಿ-ಎಸ್.ನಾರಾಯಣ್ ತೀರ್ಪುಗಾರರು

ಅಂದ್ಹಾಗೆ, ಈ ರಿಯಾಲಿಟಿ ಶೋ ಗೆ ಕನ್ನಡದ ಖ್ಯಾತ ನಟಿ ಶ್ರುತಿ ಹಾಗೂ ಕನ್ನಡದ ಖ್ಯಾತ ನಟ-ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ವಾರದಿಂದ ಶುರು!

ಇದೇ ಫೆಬ್ರವರಿ 6 ರಿಂದ 'ಕಲರ್ಸ್ ಸೂಪರ್ ವಾಹಿನಿ'ಯಲ್ಲಿ 'ಮಜಾ ಭಾರತ' ಶುರುವಾಗಲಿದ್ದು, ಸೋಮವಾರ, ಮಂಗಳವಾರ, ಬುಧವಾರ ಮೂರು ದಿನಗಳು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

English summary
Kannada Entertainment Channel Colors Kannada has come up with a new reality show called 'Maja Bharath' which will go on air from February 6th. Sheethal Shetty and Niranjan Despande to host 'Maja Bharath'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X