»   » ಕನ್ನಡದ ಈ ನಟನ ಜೊತೆಗೆ ಮಾನ್ವಿತಾ ಮದುವೆ ಆಗ್ತಾರಂತೆ !

ಕನ್ನಡದ ಈ ನಟನ ಜೊತೆಗೆ ಮಾನ್ವಿತಾ ಮದುವೆ ಆಗ್ತಾರಂತೆ !

Posted By:
Subscribe to Filmibeat Kannada

ನಟಿ ಮಾನ್ವಿತಾ 'ಕೆಂಡಸಂಪಿಗೆ' ನಂತರ 'ಟಗರು' ಸಿನಿಮಾದಲ್ಲಿ ಪುನರ್ವಸು ಆಗಿ ಕಾಡುತ್ತಿದ್ದಾರೆ. 'ಟಗರು' ಸಿನಿಮಾದ ಅಷ್ಟೊಂದು ಪಾತ್ರಗಳ ಮಧ್ಯೆ ಮಾನ್ವಿತಾ ಎಲ್ಲರ ಗಮನ ಸೆಳೆದರು. ಆದರೆ ಈಗ 'ಟಗರು' ಸಿನಿಮಾ ಸಂಭ್ರಮ ಜೊತೆಗೆ ಮಾನ್ವಿತಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

ಸುದೀಪ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಬಯಸಿದ ನಟಿ

ನಟಿ ಮಾನ್ವಿತಾ ಹರೀಶ್, ನಟ ಧನಂಜಯ್ ಹಾಗೂ ವಸಿಷ್ಟ ಮೂರು ಜನ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಟಗರು ಶಿವ ಶಿವಣ್ಣ ಹೇಳುವ ಪ್ರಶ್ನೆಗಳಿಗೆ ಟಗರು ಪುಟ್ಟಿ ಮಾನ್ವಿತಾ ಉತ್ತರಿಸಿದರು. ಈ ವೇಳೆ ಮಾನ್ವಿತಾ ಯಾರ ಜೊತೆಗೆ ಮದುವೆ ಮತ್ತು ಯಾರ ಜೊತೆಗೆ ಡೇಟಿಂಗ್ ಮಾಡುತ್ತಾರೆ ಎನ್ನುವ ವಿಷಯ ಕೂಡ ತಿಳಿದಿದೆ. ಆದರೆ ಮಾನ್ವಿತಾ ಕೊಟ್ಟ ಉತ್ತರ ಜಸ್ಟ್ ತಮಾಷೆಗಾಗಿ ಮಾತ್ರ ಆಗಿದೆ.ಮುಂದೆ ಓದಿ..

ಶಿವಣ್ಣನ ಪ್ರಶ್ನೆ

ಕಾರ್ಯಕ್ರಮದಲ್ಲಿ ಮಾನ್ವಿತಾ ಅವರಿಗೆ ಶಿವಣ್ಣ ''ನೀವು ಕನ್ನಡದ ಯಾವ ನಟನ ಜೊತೆಗೆ ಡೇಟಿಂಗ್ ಮಾಡುತ್ತೀರಾ, ಯಾವ ನಟನ ಜೊತೆಗೆ ಮದುವೆ ಆಗುತ್ತೀರಾ ಮತ್ತು ಯಾವ ನಟನ ಜೊತೆಗೆ ಲಾಂಗ್ ಡ್ರೈವ್ ಹೋಗುತ್ತೀರಾ?'' ಎಂದು ಮೂರು ಪ್ರಶ್ನೆಗಳನ್ನು ಕೇಳಿದರು.

'ಟಗರು' ಚಿತ್ರದಲ್ಲಿ ನನ್ನ ಪಾತ್ರ ತುಂಬ ಚಿಕ್ಕದು ಅನಿಸಿತು ಎಂದ ವಸಿಷ್ಟ!

ಪುನೀತ್ ಜೊತೆಗೆ ಡೇಟಿಂಗ್

ಶಿವರಾಜ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಮಾನ್ವಿತಾ ಮೊದಲು ಪುನೀತ್ ರಾಜ್ ಕುಮಾರ್ ಹೆಸರು ತೆಗೆದುಕೊಂಡರು. ಪುನೀತ್ ಅವರ ಜೊತೆಗೆ ಡೇಟಿಂಗ್ ಹೋಗುತ್ತಾನೆ ಎಂದರು ಮಾನ್ವಿತಾ.

ಶಿವಣ್ಣನ ಜೊತೆಗೆ ಮದುವೆ

'ಯಾವ ನಟನ ಜೊತೆಗೆ ಮದುವೆ ಆಗುತ್ತೀರಾ?' ಎಂದು ಕೇಳಿದಾಗ ಮೊದಲು ಮಾನ್ವಿತಾ ನಮ್ಮ ಇಂಡಸ್ಟ್ರಿಯಲ್ಲಿ ಮದುವೆ ಆಗದ ನಟರು ಯಾರಿದ್ದಾರೆ ಎಂದು ಯೋಚಿಸಿದರು ನಂತರ ಇದು ತಮಾಷೆಗೆ ಯಾರ ಹೆಸರಾದರು ಕೇಳಿ ಎಂದಾಗ 'ಶಿವಣ್ಣ' ಎಂದು ಮಾನ್ವಿತಾ ಹೇಳಿದರು. ಮಾನ್ವಿತಾ ಉತ್ತರ ಕೇಳಿ ಶಿವಣ್ಣ ಕೂಡ ನಕ್ಕರು.

ಧನಂಜಯ್ ಜೊತೆಗೆ ಲಾಂಗ್ ಡ್ರೈವ್

ಇನ್ನು ಯಾರ ಜೊತೆಗೆ ಲಾಂಗ್ ಡ್ರೈವ್ ಹೋಗಬೇಕು ಎಂಬ ಪ್ರಶ್ನೆಗೆ ಮಾನ್ವಿತಾ ಅಲ್ಲಿಯೇ ಇದ್ದ ಧನಂಜಯ್ ಅವರನ್ನು ತೋರಿಸಿ ''ಮ್ಯೂಸಿಕ್ ನಲ್ಲಿ ನನಗೆ ಮತ್ತೆ ಧನಂಜಯ್ ಅವರಿಗೆ ಒಂದೇ ರೀತಿಯ ಟೆಸ್ಟ್ ಇರುವುದರಿಂದ ಧನಂಜಯ್ ಜೊತೆಗೆ ಹೋಗುತ್ತೇನೆ'' ಎಂದರು. ನಂತರ ಶಿವಣ್ಣ ಧನಂಜಯ್ ಆದರೆ ಯಾಕೆ ತಡ ಇಬ್ಬರು ಹೋಗಿ ಎಂದು ತಮಾಷೆ ಮಾಡಿದರು.

English summary
Vasishta Simha spoke about her marriage in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada