»   » ಸುದೀಪ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಬಯಸಿದ ನಟಿ

ಸುದೀಪ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಬಯಸಿದ ನಟಿ

Posted By:
Subscribe to Filmibeat Kannada
ಸುದೀಪ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಬಯಸಿದ ನಟಿ | Filmibeat Kannada

ನಟ ಸುದೀಪ್ ಸ್ಯಾಂಡಲ್ ವುಡ್ ಚಿತ್ರರಂಗದ ಸ್ಟೈಲಿಷ್ ಸ್ಟಾರ್. ಸುದೀಪ್ ಡ್ರೆಸ್, ಅವರ ಲುಕ್ ನೋಡಿ ಅದೆಷ್ಟೋ ಹುಡುಗಿಯರು ಸೋತು ಹೋಗಿದ್ದಾರೆ. ಕನ್ನಡದ ಬಹುಪಾಲು ನಟಿಯರಿಗೆ ನೀವು ಯಾವ ನಟನ ಜೊತೆಗೆ ಸಿನಿಮಾ ಮಾಡಬೇಕು ಅಂದರೆ ಹೆಚ್ಚು ನಾಯಕಿಯರ ಬಾಯಲ್ಲಿ ಬರುವ ಉತ್ತರ ಸುದೀಪ್.

ಸದ್ಯ ಕನ್ನಡದ ನಟಿಯೊಬ್ಬರಿಗೆ ಸುದೀಪ್ ಅವರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡುವ ಬಯಕೆ ಹುಟ್ಟಿಕೊಂಡಿದೆ. ಅದು ಬೇರೆ ಯಾರಿಗೂ ಅಲ್ಲ. 'ಕೆಂಡಸಂಪಿಗೆ'ಯ ಹುಡುಗಿ, 'ಟಗರು' ಪುಟ್ಟಿ ಮಾನ್ವಿತಾ ಹರೀಶ್ ಅವರಿಗೆ. ಈ ವಿಷಯವನ್ನು ಅವರೇ 'ನಂ 1 ಯಾರ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

'ಟಗರು' ಚಿತ್ರದಲ್ಲಿ ನನ್ನ ಪಾತ್ರ ತುಂಬ ಚಿಕ್ಕದು ಅನಿಸಿತು ಎಂದ ವಸಿಷ್ಟ!

ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ''ನೀವು ಯಾವ ನಟನನ್ನು ಸಿಕ್ಸ್ ಪ್ಯಾಕ್ ನೋಡಲು ಇಷ್ಟ ಪಡುತ್ತೀರಾ?'' ಎಂದು ಕೇಳಿದರು. ಆಗ ಮಾನ್ವಿತಾ 'ಸುದೀಪ್ ಸರ್' ಎಂದು ನಟ ಸುದೀಪ್ ಅವರ ಹೆಸರನ್ನು ತೆಗೆದುಕೊಂಡರು. ಮಾನ್ವಿತಾ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ ''ಸುದೀಪ್ ನೀವು ಸಿಕ್ಸ್ ಪ್ಯಾಕ್ ಮಾಡಿದಾಗ ಮೊದಲು ಮಾನ್ವಿತಾಗೆ ತೋರಿಸಿ. ಇದು ನನ್ನ ಮನವಿ'' ಎಂದರು.

Manvitha Harish spoke about Sudeep in No1 yari with Shivanna program

ಅಂದಹಾಗೆ, ಸುದೀಪ್ ತಮ್ಮ ಮುಂದಿನ ಸಿನಿಮಾ 'ಪೈಲ್ವಾನ್' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರವನ್ನು 'ಹೆಬ್ಬುಲಿ' ಖ್ಯಾತಿಯ ನಿರ್ದೇಶಕ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

ಚಂದನವನದಲ್ಲಿ ಮಿನುಗುತ್ತಿದೆ ಪುನರ್ವಸು

English summary
Vasishta Simha spoke about Tagaru movie Chitte role in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada