Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೇಘನಾ ರಾಜ್‌ಗೆ ಮಗನನ್ನು ಬಿಟ್ಟಿರಲು ಅಭದ್ರತೆ ಕಾಡುತ್ತಂತೆ: ಶೂಟಿಂಗ್‌ನಲ್ಲಿದ್ದಾಗಾ ಏನ್ ಮಾಡ್ತಾರೆ?
ನಟ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ನಟಿ ಮೇಘನಾ ಮಗು ಮತ್ತು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು. ಈಗ ಸಮಯ ಕಳೆದಂತೆ ಮತ್ತೆ ಬಣ್ಣ ಹಚ್ಚಲು ಆರಂಭಿಸಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ನಟಿ ಮೇಘನಾ ಸಕ್ರಿಯವಾಗಿದ್ದಾರೆ. ನೋವನ್ನು ನುಂಗಿ ಕೊಂಡು ನಟಿ ಮೇಘನಾ ಮಗುವಿಗಾಗಿ ಛಲಗಾತಿಯಂತೆ ಎದ್ದು ನಿಂತಿದ್ದಾರೆ.
ಮಗುವಿಗೆ ವರ್ಷ ತುಂಬಿದ ಬಳಿಕ ಮೇಘನಾ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಒಂದೊಂದೆ ಸಿನಿಮಾ ಮತ್ತು ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಎಲ್ಲರೂ ಸಂತೋಷವಾಗಿ ಇರುವುದು ಎಂದರೆ ಚಿರುಗೆ ಬಲು ಇಷ್ಟ ಎಂದು ಮೇಘನಾ ಹಲವು ಬಾರಿ ಹೇಳಿಕೊಂಡಿದ್ದಾರೆ. ಅಂತೆಯೇ ಮೇಘನಾ ಅವರು ಈಗ ಟಿವಿ ಕಾರ್ಯಕ್ರಮದ ಮೂಲಕ ಎಲ್ಲರ ಮುಂದೆ ಬಂದಿದ್ದಾರೆ.
ಚಿರಂಜೀವಿ
ಸರ್ಜಾ
ಪತ್ನಿ
ಮೇಘನಾ
ರಾಜ್‌ಗಾಗಿ
ಮಾಡಿಟ್ಟ
ಆಸ್ತಿ
ಇದು!
ಇತ್ತೀಚೆಗೆ ನಟಿ ಮೇಘನಾ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ವೇಳೆ ಮಗನನ್ನು ಬಿಟ್ಟಿರಲು ಕಷ್ಟವಾಗುತ್ತದೆ ಎಂದಿದ್ದಾರೆ. ಜೊತೆಗೆ ಅವರು ರಾಯನ್ ಇಷ್ಟದ ಬಗ್ಗೆ ಕೂಡ ಮಾತನಾಡಿದ್ದಾರೆ. ಮೇಘನಾ ಅವರನ್ನು ಟಿವಿಯಲ್ಲಿ ನೋಡುತ್ತಾ ರಾಯನ್ ಡಾನ್ಸ್ ಮಾಡುತ್ತಾನಂತೆ.

ರಾಯನ್‌ನನ್ನು ಬಿಟ್ಟಿರಲು ತುಂಬಾ ಕಷ್ಟ ಆಗುತ್ತೆ: ಮೇಘನಾ ರಾಜ್!
ನಟಿ ಮೇಘನಾ ರಾಜ್ ಕಿರುತೆರೆ ಕಾರ್ಯಕ್ರಮದ ಮೂಲಕ ಪ್ರತೀ ವಾರಾಂತ್ಯಕ್ಕೆ ಪ್ರೇಕ್ಷರ ಮುಂದೆ ಬರುತ್ತಾರೆ. ಹಾಗಾಗಿ ಅವರು ಶೂಟಿಂಗ್‌ನಲ್ಲಿ ಸದಾ ಬ್ಯುಸಿ ಇರುತ್ತಾರೆ. ಶೂಟಿಂಗ್ ಕಾರಣಕ್ಕೆ ಅವರು ಮಗ ರಾಯನ್ ರಾಜ್‌ನನ್ನು ಮನೆಯಲ್ಲೇ ಬಿಟ್ಟು ಹೋಗಬೇಕಾಗುತ್ತದೆ. ಇದರಿಂದ ಅವರು ಮಗನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರಂತೆ. ಸದಾ ಮನೆಗೆ ಫೋನ್ ಮಾಡಿ ಮಗನ ಬಗ್ಗೆ ವಿಚಾರಿಸಿಕೊಳ್ಳುತ್ತಾರಂತೆ ಮೇಘನಾ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಮೇಘನಾ ಹೇಳಿಕೊಂಡಿದ್ದಾರೆ. ಆದರೆ ಇದೆಲ್ಲವೂ ಬದುಕಿನ ಭಾಗ ಅನುಸರಿಸಿಕೊಂಡು ಹೋಗಬೇಕು ಎಂದಿದ್ದಾರೆ.
ಮತ್ತೊಂದು
ಹೊಸ
ಚಿತ್ರಕ್ಕೆ
ಮೆಘನಾ
ರಾಜ್
ಗ್ರೀನ್
ಸಿಗ್ನಲ್!

ಮಗನಿಗಾಗಿಯೇ ನಾನು ಇದೆಲ್ಲಾ ಮಾಡ್ತಿರೋದು: ನಟಿ ಮೇಘನಾ ರಾಜ್!
ಮಗನ ಬಗ್ಗೆ ಹೆಚ್ಚಾಗಿ ಮಾತನಾಡಿದ ಮೇಘನಾ "ಶೂಟಿಂಗ್ ಸಮಯದಲ್ಲಿ ಹೆಚ್ಚಾಗಿ ಮಗನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅಪ್ಪ, ಅಮ್ಮ ಅವನೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ನನಗೆ ಅದು ಸಾಧ್ಯ ಆಗುತ್ತಿಲ್ಲ ಎನ್ನುವ ಒಂದು ರೀತಿಯ ಅಭದ್ರತೆ ಕಾಡುತ್ತೆ. ಆದರೆ ನಾನು ಇದೆಲ್ಲಾ ಮಾಡುತ್ತಾ ಇರೋದು ಅವನಿಗಾಗಿಯೇ. ಎಲ್ಲಾ ಮುಗಿದು ಮನೆಗೆ ಹೋದ ಮೇಲೆ ನಮ್ಮ ಕೆಲಸ ನೋಡಿದಾಗ ಸಾರ್ಥಕತೆಯ ಭಾವ ಮೂಡುತ್ತೆ. ಹಾಗಾಗಿ ನಾವು ಮಾಡುವ ಸಣ್ಣ, ಪುಟ್ಟ ತ್ಯಾಗಗಳು ಹೆಚ್ಚು ದೊಡ್ಡದು ಅನಿಸುವುದಿಲ್ಲ." ಎಂದಿದ್ದಾರೆ.

ಅಮ್ಮನನ್ನು ಟಿವಿಯಲ್ಲಿ ನೋಡಿ ಕುಣಿಯುತ್ತಾನೆ ರಾಯನ್!
ಇನ್ನು ರಾಯನ್ ಟಿವಿಯಲ್ಲಿ ಮೇಘನಾ ಅವರ ಕಾರ್ಯಕ್ರಗಳನ್ನು ಹಾಕಿದರೆ. ನೋಡುತ್ತಾನಂತೆ, ಅಲ್ಲದೆ ಡಾನ್ಸ್ ಕೂಡ ಮಾಡುತ್ತಾನಂತೆ. "ನನ್ನ ಕಾರ್ಯಕ್ರಮವನ್ನು ರಾಯನ್ ಟಿವಿಯಲ್ಲಿ ನೋಡ್ತಾನೆ. ಅವನು ಡಾನ್ಸ್ ಮಾಡ್ತಾನೆ. ಅಂದರೆ ಕಲರ್ ಫುಲ್ ಫ್ರೇಮ್, ಮ್ಯೂಸಿಕ್, ಅವನಿಗೆ ಇಷ್ಟ ಆಗುತ್ತೆ. ಹಾಗಾಗಿ ಡಾನ್ಸ್ ಮಾಡ್ತಾನೆ. ಆದರೆ ಇದನೆಲ್ಲಾ ಅರ್ಥಮಾಡಿಕೊಳ್ಳಲು ಅವನು ತುಂಬಾ ಚಿಕ್ಕವನು." ಎಂದಿದ್ದಾರೆ.

ಸಿನಿಮಾಗಳಲ್ಲೂ ನಟಿ ಮೇಘನಾ ಬ್ಯುಸಿ!
ಕಿರುತೆರೆಯ ಕಾರ್ಯಕ್ರಮದ ಜೊತೆಗೆ ನಟಿ ಮೇಘನಾ ರಾಜ್ ಅವರು ಸಿನಿಮಾದಲ್ಲಿ ಸಕ್ರಿಯ ಆಗ ತೊಡಗಿದ್ದಾರೆ. ಈಗಾಗಲೇ ಅವರು ಒಂದೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅವರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಇತ್ತೀಚೆಗೆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ ಆಗುವ ಬಗ್ಗೆ ಫೊಟೋ ಒಂದನ್ನು ಕೂಡ ಮೇಘನಾ ಅವರು ಹಂಚಿಕೊಂಡಿದ್ದರು. ಒಟ್ಟಾರೆ ಮೇಘನಾ ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯ ಆಗುತ್ತಿದ್ದು, ಅಭಿಮಾನಿಗಳ ಮುಂದಿದೆ ಸಿನಿಮಾಗಳ ಮೂಲಕ ಮತ್ತೆ ಬರಲಿದ್ದಾರೆ.