»   » ದಯವಿಟ್ಟು ಗಮನಿಸಿ : ಪೊಲೀಸರೇ ಈ ಧಾರಾವಾಹಿಗಳನ್ನು ನೀವೇ ಕಾಪಾಡಿ!

ದಯವಿಟ್ಟು ಗಮನಿಸಿ : ಪೊಲೀಸರೇ ಈ ಧಾರಾವಾಹಿಗಳನ್ನು ನೀವೇ ಕಾಪಾಡಿ!

Posted By:
Subscribe to Filmibeat Kannada
ಕಲರ್ಸ್ ಕನ್ನಡ ಧಾರಾವಾಹಿ ನೋಡಿ ಪೊಲೀಸ್ ಮೊರೆ ಹೋದ ವೀಕ್ಷಕ | Filmibeat Kannada

ಪ್ರತಿನಿತ್ಯ ಕಿರುತೆರೆಯಲ್ಲಿ ಪ್ರಸಾರ ಆಗುವ ಧಾರಾವಾಹಿಗಳ ಜನರನ್ನ ಹೆಚ್ಚಾಗಿ ಮೋಡಿ ಮಾಡುತ್ತಿವೆ. ಜನರು ದಿನೇ ದಿನೇ ಧಾರಾವಾಹಿಗಳ ಮಂದಿಗೆ ಬೈಯುತ್ತಲೇ ಸೀರಿಯಲ್ ನೋಡುತ್ತಾರೆ. ಸಂಜೆ ಆಯ್ತು ಅಂದರೆ ಸಾಕು ಹೆಣ್ಣು ಮಕ್ಕಳು ಮನೆ ಕೆಲಸವನ್ನೆಲ್ಲಾ ಬೇಗ ಮುಗಿಸಿ ಟಿವಿ ಮುಂದೆ ಹಾಜರ್ ಆಗುತ್ತಾರೆ. ಒಂದೊಂದು ಟೈಂ ನಲ್ಲಿ ಒಂದೊಂದು ವಾಹಿನಿ ಅಂತಾನೂ ಫಿಕ್ಸ್ ಮಾಡಿಕೊಂಡಿದ್ದಾರೆ.

ಇನ್ನು ವಿಶೇಷ ಅಂದರೆ ಮೊದಲು ಹೆಣ್ಣು ಮಕ್ಕಳು ಮಾತ್ರ ಧಾರಾವಾಹಿಯನ್ನ ನೋಡುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ ಗಂಡು ಮಕ್ಕಳು ಅದರಲ್ಲಿಯೂ ಯುವಕರು ಸೀರಿಯಲ್ ಫ್ಯಾನ್ಸ್ ಆಗಿರುವುದು ವಾಹಿನಿಗಳ ಟಿ ಆರ್ ಪಿ ಗೆ ಫ್ಲಸ್ ಪಾಯಿಂಟ್ ಆಗಿದೆ.

ಅಗ್ನಿಸಾಕ್ಷಿ ಚಂದ್ರಿಕಾಳ ಅಸಲಿ ಆಟಕ್ಕೆ ಮನೆಯವರ ಪರಡಾಟ

ಇಷ್ಟೆಲ್ಲಾ ಅಭಿಮಾನಿಗಳಿರೋ ಧಾರಾವಾಹಿಗಳಿಗೆ ಪೋಲೀಸರ ಸಹಾಯ ಬೇಕಾಗಿದೆ. ಸೀರಿಯಲ್ ಗೂ ಆರಕ್ಷಕರಿಗೂ ಏನು ಸಂಬಂಧ ಅಂತ ಯೋಚನೆ ಮಾಡಬೇಡಿ. ಅದನ್ನು ನಾವೇ ಹೇಳುತ್ತೇವೆ. ಯಾವ ಯಾವ ಧಾರಾವಾಹಿಗಳಿಗೆ ಯಾಕೆ ಪೋಲೀಸರ ಅವಶ್ಯಕತೆ ಇದೆ ಮತ್ತು ಯಾಕೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಆರಕ್ಷಕರೆ ದಯವಿಟ್ಟು ಗಮನಿಸಿ

ಧಾರಾವಾಹಿಗಳೇ ಹಾಗೇ ಎರಡು ಮೂರು ವರ್ಷವಾದರೂ ಮುಗಿಯುವುದಿಲ್ಲ. ಪ್ರೇಕ್ಷಕರ ನೋಡಿ ಬೇಸತ್ತು ನಿಲ್ಲಿಸಿ ಸಾಕು ಎಂದು ಕಿರುಚಿ ಹೇಳಿದರು ಧಾರಾವಾಹಿ ಮಾತ್ರ ಎಂಡ್ ಆಗುವುದಿಲ್ಲ. ಸದ್ಯ ಕನ್ನಡ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಸೀರಿಯಲ್ ಗಳಿಗೆ ಪೋಲೀಸರ ಅವಶ್ಯಕತೆ ತುಂಬಾ ಇದೆ. ಧಾರಾವಾಹಿಗಳಲ್ಲಿ ಮುಖ್ಯಪಾತ್ರಧಾರಿಗಳ ಅಪಹರಣ ನಡೆದಿದ್ದು ಅದಕ್ಕಾಗಿ ಮನೆಯವರು ಹುಡುಕಾಟ ಆರಂಭಿಸಿದ್ದಾರೆ.

ನಕುಲ್ ಗಾಗಿ ಹುಡುಕಾಟ

ಕಿನ್ನರಿ ಧಾರಾವಾಹಿಯಲ್ಲಿ ನಾಯಕ ನಕುಲ್ ಕಿಡ್ನಾಪ್ ಆಗಿದ್ದಾನೆ. ಯಾರು, ಏಕೆ? ಕಿಡ್ನಪ್ ಮಾಡಿದ್ದಾರೆ ಎನ್ನುವ ವಿಚಾರ ಮನೆಯವರಿಗೆ ತಿಳಿದಿಲ್ಲ ಕಳೆದ ಹದಿನೈದು ದಿನಗಳಿಂದ ಇದೇ ಕಥೆ ನಡೆಯುತ್ತಿದೆ.

ಕುಲವಧು ಗೌರವ್ ಎಲ್ಲಿ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಕುಲವಧು ಧಾರಾವಾಹಿಯಲ್ಲಿಯೂ ನಾಯಕ ನಟ ಗೌರವ್ ಕಾಣೆಯಾಗಿದ್ದಾನೆ. ಸುಮಾರು ಒಂದು ತಿಂಗಳಿಂದ ಗೌರವ್ ಸೀರಿಯಲ್ ನಲ್ಲಿ ಕಿಡ್ನಾಪ್ ಆಗಿದ್ದಾನೆ.

ಗೊಂಬೆ ರೂಪದಲ್ಲಿ ಶ್ರಾವ್ಯ ಪ್ರತ್ಯಕ್ಷ

ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೂ ಇದೇ ಕಥೆ. ಧಾರಾವಾಹಿಯ ನಾಯಕಿ ಗೊಂಬೆ ಕಾಣೆಯಾಗಿ ಎರಡು ತಿಂಗಳಾಯ್ತು. ಸೀರಿಯಲ್ ನಲ್ಲಿ ಸದ್ಯ ಗೊಂಬೆ ಪಾತ್ರಧಾರಿಯ ಆಗಮನ ಆಗಿದೆ. ಆದರೆ ಆಕೆ ಈಗ ಶ್ರಾವ್ಯ ಆಗಿ ಬದಲಾಗಿದ್ದಾಳೆ. ಗೊಂಬೆ ಮನೆಯವರು ಮಾತ್ರ ಗೊಂಬೆ ಕಾಣೆಯಾಗಿದ್ದಾಳೋ, ಸಾವಿಗೀಡಾಗಿದ್ದಾಲೋ ಎನ್ನುವ ಗೊಂದಲದಲ್ಲಿದ್ದಾರೆ.

ಯಾರು ಈ ರಾಧಿಕಾ? ಎಲ್ಲಿದ್ದಾಳೆ, ಹೇಗಿದ್ದಾಳೆ?

ಅತೀ ಹೆಚ್ಚು ಪ್ರೇಕ್ಷಕರ ಬಳಗವನ್ನು ಹೊಂದಿರುವ ಧಾರಾವಾಹಿಯ ಸಾಲಿನಲ್ಲಿ ಮೊದಲು ನಿಂತಿರುವ ಅಗ್ನಿಸಾಕ್ಷಿ ಆರಂಭದಿಂದಲೂ ರಾಧಿಕಾಗಾಗಿ ಹುಡುಕಾಟ ಶುರುವಾಗಿದೆ. ರಾಧಿಕಾ ಹೇಗಿದ್ದಾಳೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಮನೆಯವರು ಮಾತ್ರ ಪ್ರತಿ ಸಂಚಿಕೆಯಲ್ಲಿ ರಾಧಿಕಾ ಜಪ ಮಾಡುತ್ತಿರುತ್ತಾರೆ.

'ಅವನಿ' ಗಾಗಿ ಅಲೆದಾಟ

ಸದ್ಯ ಕಿರುತೆರೆಯಲ್ಲಿ ಸಂಚಲನ ಮೂಡಿಸಿರುವ ರಾಧಾರಮಣ ಧಾರಾವಾಹಿಯಲ್ಲಿಯೂ ಇದೇ ಕಥೆ. ರಮಣನ ತಂಗಿ ಅವನಿಗಾಗಿ ಹುಡುಕಾಟ ಆರಂಭ ಆಗಿ ಸಾಕಷ್ಟು ದಿನ ಆಯ್ತು. ಆದರೆ ಅವನಿ ಸುಳಿವು ಸಿಕ್ಕಿಲ್ಲ. ಸಿಕ್ಕಾಗ ಅದಕ್ಕೆ ಮತ್ತೊಂದು ಟ್ವಿಸ್ಟ್ ಸಿಗುತ್ತೆ.

ಟ್ರೋಲ್ ಆಗ್ತಿದೆ ಧಾರಾವಾಹಿಯ ಕಣ್ಣಾ ಮುಚ್ಚಾಲೆ

ಈ ಎಲ್ಲಾ ಧಾರಾವಾಹಿಗಳಲ್ಲೂ ಒಂದೇ ಸುದ್ದಿ ಆಯಾ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳು ಕಾಣೆ ಆಗಿದ್ದಾರೆ. ಆದರೆ ವಿಚಿತ್ರ ಎಂದರೆ ಯಾರು ಪೋಲೀಸರ ಸಹಾಯ ಪಡೆಯುವುದಿಲ್ಲ. ಇನ್ನಾದರೂ ಸೀರಿಯಲ್ ಗಳಲ್ಲಿ ಪೋಲೀಸರ ಎಂಟ್ರಿ ಆಗಿ ಕಣ್ಣಾಮುಚ್ಚಾಲೆ ಕೊನೆಯಾಗಲಿ ಎನ್ನುವುದು ವೀಕ್ಷಕರ ಆಸೆ.

'ಅಗ್ನಿಸಾಕ್ಷಿ' ಚಂದ್ರಿಕಾಳ ಮೌನ ಸನ್ನಿಧಿಗೆ ಭಯ ಹುಟ್ಟಿಸಿದೆ

English summary
Lead role artists in most of the serials of Colors Kannada Channel are missing. This has become viral on Social Media.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X