For Quick Alerts
  ALLOW NOTIFICATIONS  
  For Daily Alerts

  ಗ್ರ್ಯಾಂಡ್ ಫಿನಾಲೆವರೆಗೂ ಬಂದು ಮುಗ್ಗರಿಸಿಬಿದ್ದ 'ಕಿರಿಕ್' ಹುಡುಗಿ ಸಂಯುಕ್ತ.!

  |

  ಕನ್ನಡದ ಕಿರಿಕ್ ಹುಡುಗಿ ಸಂಯುಕ್ತ ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಈಗಾಗಲೇ 'ರೋಡೀಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಸಂಯುಕ್ತ, ಡೇಟಿಂಗ್ ರಿಯಾಲಿಟಿ ಶೋ 'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು.

  'ಸ್ಪ್ಲಿಟ್ಸ್ ವಿಲ್ಲಾ-11'ಗೆ ಕಾಲಿಡುತ್ತಲೇ ಕೆಲ ಜೋಡಿಗಳಲ್ಲಿ ಬಿರುಕು ತಂದಿದ್ದ ನಟಿ ಸಂಯುಕ್ತ... ಹಾಗೂ ಹೀಗೂ ಹರಸಾಹಸ ಪಟ್ಟು ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದರು.

  ಎಂಟಿವಿ 'ಸ್ಪ್ಲಿಟ್ಸ್ ವಿಲ್ಲಾ'ದಲ್ಲೂ ನಟಿ ಸಂಯುಕ್ತ ಹೆಗಡೆ ಕಿರಿಕ್.!

  ಮೊದಮೊದಲು ಟಾಸ್ಕ್ ಗಳಲ್ಲಿ ಸೋಲು ಅನುಭವಿಸುತ್ತಿದ್ದ ನಟಿ ಸಂಯುಕ್ತ, ಬಳಿಕ ಶಗುನ್ ಜೊತೆಯಾದರು. ಶಗುನ್ ಜೊತೆ ಫಿನಾಲೆ ತಲುಪಿದ ನಟಿ ಸಂಯುಕ್ತ 'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಮುಂದೆ ಓದಿರಿ...

   ಗೆಲುವಿನ ನಗೆ ಬೀರಿದ ಗೌರವ್-ಶೃತಿ

  ಗೆಲುವಿನ ನಗೆ ಬೀರಿದ ಗೌರವ್-ಶೃತಿ

  'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ಗೌರವ್ ಮತ್ತು ಶ್ರುತಿ ವಿಜಯ ಪತಾಕೆ ಹಾರಿಸಿದ್ದಾರೆ. ಕೊಡಲಾದ ಚಟುವಟಿಕೆಯನ್ನು ಅತಿ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿ ಗೌರವ್ ಮತ್ತು ಶ್ರುತಿ ಜೋಡಿ ಗೆದ್ದಿದ್ದಾರೆ.

  ಹಿಂದಿ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪಿದ 'ಕಿರಿಕ್' ಸಂಯುಕ್ತ.!

  ಕೊನೆ ಕ್ಷಣದಲ್ಲಿ ಮುಗ್ಗರಿಸಿದ ಸಂಯುಕ್ತ

  ಕೊನೆ ಕ್ಷಣದಲ್ಲಿ ಮುಗ್ಗರಿಸಿದ ಸಂಯುಕ್ತ

  ಗ್ರ್ಯಾಂಡ್ ಫಿನಾಲೆ ಟಾಸ್ಕ್ ಮುಗಿಸುವಲ್ಲಿ ಸಂಯುಕ್ತ ಮತ್ತು ಶಗುನ್ ತಿಣುಕಾಡಿದರು. ಗೌರವ್ ಮತ್ತು ಶ್ರುತಿಗೆ ಹೋಲಿಸಿದರೆ ಚಟುವಟಿಕೆಯನ್ನು ಪೂರ್ಣಗೊಳಿಸುವಲ್ಲಿ ಸಂಯುಕ್ತ ಮತ್ತು ಶಗುನ್ ಹೆಚ್ಚು ಸಮಯ ತೆಗೆದುಕೊಂಡು. ಹೀಗಾಗಿ ಸಂಯುಕ್ತ ಮತ್ತು ಶಗುನ್ ಸೋಲನುಭವಿಸಿದರು.

  'ಸ್ಪ್ಲಿಟ್ಸ್ ವಿಲ್ಲಾ-11'ಗೆ ಬಂದ ಸಂಯುಕ್ತ ಹೆಗ್ಡೆ ಮಾಜಿ ಪ್ರಿಯಕರ: ಕಿರಿಕ್ ಹುಡುಗಿಯ ಲವ್ ಸ್ಟೋರಿಗಳೆಷ್ಟು.?

  ಗೆದ್ದ ಗೌರವ್ ಯಾರು ಗೊತ್ತಾ.?

  ಗೆದ್ದ ಗೌರವ್ ಯಾರು ಗೊತ್ತಾ.?

  'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ನಟಿ ಸಂಯುಕ್ತ ಹೇಳಿಕೊಂಡಿರುವ ಪ್ರಕಾರ ಗೌರವ್ ಆಕೆಯ ಮಾಜಿ ಪ್ರಿಯಕರ. ಹಳೆ ಬಾಯ್ ಫ್ರೆಂಡ್ ವಿರುದ್ಧ ಸೋತ ಸಂಯುಕ್ತ ಕೊಂಚ ಅಪ್ಸೆಟ್ ಆಗಿದ್ದರೆ ಅಚ್ಚರಿಪಡಬೇಡಿ.

  ಸಂಯುಕ್ತ ಜೀವಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ತು ಲವ್ ಲೆಟರ್.!

  ಇಂಪ್ರೆಸ್ ಮಾಡಿದ ಶಗುನ್

  ಇಂಪ್ರೆಸ್ ಮಾಡಿದ ಶಗುನ್

  'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ನಟಿ ಸಂಯುಕ್ತ ಮಾಡಿದ ಡ್ಯಾನ್ಸ್ ಗೆ ಮನಸೋತು ಆಕೆಗೆ ಶಗುನ್ ಲವ್ ಲೆಟರ್ ಬರೆದಿದ್ದರು. ಶಗುನ್ ತೋರಿದ ಪ್ರೀತಿಗೆ ಸಂಯುಕ್ತ ಕ್ಲೀನ್ ಬೌಲ್ಡ್ ಆಗಿದ್ದರು. ಶಗುನ್ ಮತ್ತು ಸಂಯುಕ್ತ ಒಟ್ಟಿಗೆ ಶೋ ಗೆಲ್ಲಲು ಇಚ್ಛಿಸಿದ್ದರು. ಆದರೆ ಇಬ್ಬರ ಆಸೆ ಈಡೇರಲಿಲ್ಲ.

  English summary
  MTV Splitsvilla 11: Samyuktha Hegde becomes runner-up with Shagun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X