For Quick Alerts
  ALLOW NOTIFICATIONS  
  For Daily Alerts

  ಕಪಿಲ್ ಶರ್ಮಾ ಶೋ ದಿಂದ ಔಟ್ ಆದ ಸಿಧು : ಕಾರಣವೇನು?

  |

  ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋದಿಂದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಹೊರಹಾಕಲಾಗಿದೆ. ಪುಲ್ವಾಮ ದಾಳಿ ಬಗ್ಗೆ ಸಿಧು ನೀಡಿದ ಹೇಳಿಕೆಯೇ ಇದಕ್ಕೆಲ್ಲ ಕಾರಣವಾಗಿದೆ.

  ಪುಲ್ವಾಮ ದಾಳಿ ಬಗ್ಗೆ ಮಾತನಾಡಿದ್ದ ಸಿಧು ''ಭಯೋತ್ಪಾದಕರ ಹೀನ ಕೃತ್ಯಗಳಿಗೆ ದೇಶಗಳನ್ನು ಹೊಣೆಗಾರನನ್ನಾಗಿಸಲು ಸಾಧ್ಯವಿಲ್ಲ. ಉಗ್ರರಿಗೆ ಪಂಥ ಮತ್ತು ಧರ್ಮವಿಲ್ಲ. ಅವರು ಒಳ್ಳೆಯವರು, ಕೆಟ್ಟವರು ಮತ್ತು ಕುರೂಪಿಗಳು. ಪ್ರತಿ ಸಂಸ್ಥೆಯೂ ಅವರನ್ನು ಹೊಂದಿದೆ. ಪ್ರತಿ ದೇಶದಲ್ಲಿಯೂ ಅವರಿದ್ದಾರೆ. ಈ ಕುರೂಪಿತನವನ್ನು ಶಿಕ್ಷಿಸಬೇಕಾಗಿದೆ. ಆದರೆ, ಈ ಘೋರ ಕೃತ್ಯಕ್ಕೆ ವ್ಯಕ್ತಿಗತ ದೂಷಣೆ ಮಾಡುವುದು ಸರಿಯಲ್ಲ'' ಎಂದು ಸಿಧು ಹೇಳಿದ್ದರು.

  ಪಾಕಿಸ್ತಾನ ಪರ ಹೇಳಿಕೆ ನೀಡಿದ್ದಕ್ಕೆ ಕಪಿಲ್ ಶರ್ಮಾ ಶೋದಿಂದ ಸಿಧು ಕಿಕ್‌ಔಟ್

  ಸಿದ್ದು ಹೇಳಿಕೆಗೆ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಬಾಯ್ಕಾಟ್ ಸಿಧು ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಕಷ್ಟು ಜನ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸಿದ್ದರು. ಇದರಿಂದ ಹೆಚ್ಚೆತ್ತ ಸೋನಿ ಚಾನೆಲ್ ನಿರ್ಮಾಣ ಸಂಸ್ಥೆ ಸಿಧು ಅವರನ್ನು ಕಾರ್ಯಕ್ರಮದಿಂದ ಕಿತ್ತು ಹಾಕುವಂತೆ ಸೂಚನೆ ನೀಡಿದೆ.

  ಕಪಿಲ್ ಶರ್ಮಾ ಶೋದಿಂದ ಹೊರ ಹೋಗುವಂತೆ ಸಿಧು ಅವರಿಗೆ ಕಾರ್ಯಕ್ರಮದ ಆಯೋಜಕರು ಹೇಳಿದ್ದು, ಅವರ ಜಾಗಕ್ಕೆ ಅರ್ಚನಾ ಪೂರಣ್ ಸಿಂಗ್ ಅವರನ್ನು ಕರೆತಂದಿದೆ. ಸೂಕ್ಷ ವಿಚಾರದಲ್ಲಿ ಪಾಕಿಸ್ತಾನದ ಪರ ಮಾತಾಡಿದ್ದ ಸಿಧು ಮಾತು ಅವರಿಗೆ ಮುಳುವಾಗಿದೆ.

  English summary
  Sony Tv has sacked Navjot Singh Sidhu from The Kapil Sharma show, after the netizen expressed angry and demanded to him to kicked out from the show for his coments on Pulwama attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X