Don't Miss!
- News
ಬಿಬಿಎಂಪಿಯಲ್ಲಿ 'ಹಳೇ ಕಲ್ಲು– ಹೊಸ ಬಿಲ್ಲು' ಮಾದರಿಯ ಆಡಳಿತವಿದೆ: ಎಎಪಿ
- Finance
137 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ BYJU'Sನ ಆಕಾಶ್ ಇನ್ಸ್ಟಿಟ್ಯೂಟ್ ಎಂಡಿ
- Sports
Ind vs Pak: ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿರುವ 3 ಪಾಕಿಸ್ತಾನದ ಬೌಲರ್ಸ್
- Technology
ಶೀಘ್ರದಲ್ಲೇ ಲಾಂಚ್ ಆಗಲಿದೆ ಜಿಯೋ ಫೋನ್ 5G! ಚೀನಾ ಫೋನ್ಗಳಿಗೆ ಬಿಗ್ ಶಾಕ್!
- Automobiles
ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಬಜಾಜ್ ಸಿಟಿ110ಎಕ್ಸ್ ಬೈಕ್
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಗೋಲ್ಡನ್ ಸ್ಟಾರ್ ಸಾರಥ್ಯದಲ್ಲಿ 'ಇಸ್ಮಾರ್ಟ್ ಜೋಡಿ' ರಿಯಾಲಿಟಿ ಶೋ!
ಟಿವಿ ಚಾನೆಲ್‌ಗಳು ಈಗ ಹೊಸ ಹೊಸ ರಿಯಾಲಿಟಿ ಶೋಗಳನ್ನು ಪರಿಚಯಿಸುತ್ತಿವೆ. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ಹೊಸ ರಿಯಾಲಿಟಿ ಶೋ ಪ್ರಾರಂಭಿಸಲು ಸಜ್ಜಾಗಿದೆ.
ಕಿರುತೆರೆಯಲ್ಲಿ ಮಿಂಚಿ ನಂತರ ಬೆಳ್ಳಿ ಪರದೆ ಮೇಲೆ ಕರುನಾಡಿಗರನ್ನು ರಂಜಿಸಿದ ಗೋಲ್ಡನ್ ಸ್ಟಾರ್ ಗಣೇಶ್ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುವುದು ಹೊಸತೇನಲ್ಲ. ಆದರೆ ಈ ಜೋಡಿ ಹಕ್ಕಿಗಳ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವುದೇ ಹೊಸತು. ಮೊದಲ ಬಾರಿಗೆ ಗಣೇಶ್ ಸ್ಟಾರ್ ಸುವರ್ಣ ವಾಹಿನಿಗೆ ಗ್ರ್ಯಾಂಡ್ ಎಂಟ್ರಿಕೊಡಲು ಮುಂದಾಗಿದ್ದಾರೆ.
ಮಂಗಳೂರಿನಲ್ಲಿ
ಮಸ್ತ್
ಮಜಾ
ಮಾಡುತ್ತಿರುವ
ಸತ್ಯ
ಅಂಡ್
ಟೀಂ!
ಈ ಬಗ್ಗೆ ಸ್ಟಾರ್ ಸುವರ್ಣ ವಾಹಿನಿ ಹೊಸ ಪ್ರೋಮೋವನ್ನು ರಿಲೀಸ್ ಮಾಡಿದ್ದು, ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. ಲವ್, ರೊಮ್ಯಾನ್ಸ್, ಫುಲ್ ಎಂಟರ್‌ಟೈನ್‌ಮೆಂಟ್ ಕೊಡೋದಕ್ಕೆ ಗಣೇಶ್ ಅವರೇ ಈ ಕಾರ್ಯಕ್ರಮವನ್ನ ಹೋಸ್ಟ್ ಮಾಡುತ್ತಿದ್ದಾರೆ.
Ismart ಜೋಡಿ ಪ್ರೋಮೊ!
Ismart ಜೋಡಿ ಶೋ ಬಗ್ಗೆ ಹೇಳಿರುವ ಗಣೇಶ್, ಮೊದಲು ನಿಮ್ಮ ಗಣಪಂಗೆ ಪ್ರೀತಿ ಸಿಕ್ಕಿದ್ದು ಟಿವಿಯಲ್ಲಿ. ನಮಸ್ಕಾರ ಅಂದಾಗ.. ಆಮೇಲೆ ಪ್ರೀತಿ ಮಾಡ್ದಾಗ, ಪ್ರೀತಿ ಕೈ ಕೊಟ್ಟಾಗ, ಪ್ರೀತಿ ಸಿಕ್ಕಾಗ, ಶಿಳ್ಳೆ ಚಪ್ಪಾಳೆ ಹೊಡೆದು ಮೆರೆಸಿ 'ಗೋಲ್ಡನ್ ಸ್ಟಾರ್' ಗಣೇಶ್ ಮಾಡಿದೀರಾ. ಅಂತಹ ಪ್ರೀತಿನ ಮತ್ತೆ ಸೆಲೆಬ್ರೇಟ್ ಮಾಡೋಕೆ ರೋಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೋಡಿ ಮಾಡೋಕೆ ನಿಮ್ಮ ಮುಂದೆ ತರ್ತಿದೀನಿ 'ISMART ಜೋಡಿ' ಎಂದು ಹೇಳಿದ್ದಾರೆ. ಅಲ್ಲದೇ ಇದರಲ್ಲಿ ಲವ್, ರೊಮ್ಯಾನ್ಸ್, ಎಂಟರ್‌ಟೈನ್‌ಮೆಂಟ್‌ಗೆ ಕೊರತೆ ಇರೋದಿಲ್ಲ ಎಂದು ಹೇಳಿ, ಪ್ರೇಕ್ಷಕರಿಗೆ ಕುತೂಹಲವನ್ನು ಹೆಚ್ಚಿಸಿದ್ದಾರೆ.
ನಿರೂಪಕಿ
ಅನುಶ್ರೀಗೆ
ಉಡುಗೊರೆ
ನೀಡಿದ
ಶಿವಣ್ಣ

ಜೋಡಿಗಳ ಜೊತೆಗೆ ಗಣಪ!
ಕಿರುತೆರೆ ಲೋಕಕ್ಕೆ ಮತ್ತೆ ಎಂಟ್ರಿ ಕೊಟ್ಟಿರುವ ಗಣೇಶ್ ಮುದ್ದಾದ ಜೋಡಿಗಳ ಶೋವನ್ನು ನಡೆಸಿಕೊಡಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 'Ismart ಜೋಡಿ' ರಿಯಾಲಿಟಿ ಶೋ ಪ್ರೋಮೋ ರಿಲೀಸ್ ಆಗಿದೆ. ಆದರೆ ಇದರಲ್ಲಿ ಕೇವಲ ಗಣೇಶ್ ಮಾತ್ರ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾದ ಹೆಸರಿನೊಂದಿಗೆ, ಹೊಸ ರಿಯಾಲಿಟಿ ಶೋ ಆರಂಭವಾಗಲಿದ್ದು, ಈ ಶೋ ಗಣೇಶ್ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹತ್ತು ಸೆಲಬ್ರಿಟಿ ಜೋಡಿಗಳು ಭಾಗಿಯಾಗಲಿದ್ದಾರೆ.

ಕಾಮಿಡಿ ಟೈಮ್‌ನಿಂದ ಇಲ್ಲಿಯವರೆಗೆ!
ದೂರದ ಊರಿನಿಂದ ನಟನಾಗಬೇಕು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಬೆಂಗಳೂರಿಗೆ ಬಂದು ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟರು. ಸಣ್ಣ, ಸಣ್ಣ ಪಾತ್ರಗಳನ್ನು ಮಾಡುತ್ತಾ, ಕಿರುತೆರೆಯಲ್ಲಿ ಮಿಂಚಿದ್ದರು. ಕಾಮಿಡಿ ಟೈಮ್ ಗಣೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಖ್ಯಾತರಾಗಿರುವ ಗಣೇಶ್ ಈಗ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಒಂದು ಕಾಲದಲ್ಲಿ ಕಿರುತೆರೆಯಿಂದಲೇ ಹೆಸರು ಮಾಡಿದವರು ಗಣೇಶ್. ಇದೀಗ ಸ್ಟಾರ್ ಸುವರ್ಣವಾಹಿನಿಯಲ್ಲಿ ನಿಮ್ಮ ಮುಂದೆ ಬರಲಿದ್ದಾರೆ.
ಜೊತೆ
ಜೊತೆಯಲಿ
ಸೀರಿಯಲ್
ಹಾಡು
ಮಾಡಿತು
ಮತ್ತೊಂದು
ದಾಖಲೆ!

ಬೆಳ್ಳೆತೆರೆಯಲ್ಲಿ ಮಿಂಚಿದ ಗೋಲ್ಡನ್ ಸ್ಟಾರ್
ಗಣೇಶ್‌ಗೆ ಮುಂಗಾರುಮಳೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ. ನಾಯಕ, ಗಾಯಕ, ನಿರ್ದೇಶಕ ಹಾಗೂ ನಿರೂಪಕ ಹೀಗೆ ಎಲ್ಲಾ ವಿಭಾಗಗಳಲ್ಲೂ ಮಿಂಚುತ್ತಿರುವ ಗಣೇಶ್ ಅವರು ಬೆಳ್ಳಿತೆರೆ ಹಾಗೂ ಕಿರುತರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಸ್ಟಾರ್ ಸುವರ್ಣದ ಜೊತೆಗೆ 'ಇಸ್ಮಾರ್ಟ್ ಜೋಡಿ' ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನತೆಯನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗಲಿದ್ದಾರೆ.